ವಾಷಿಂಗ್ಟನ್: ಬಾಹ್ಯ ಸಂಪರ್ಕ ನೀತಿಯನ್ನು ಉಲ್ಲಂಘಿಸಿದಕ್ಕಾಗಿ ಪೋರ್ನ್ ಹಬ್ (Pornhub Ban) ಚಾನೆಲ್ ಅನ್ನು ಯುಟ್ಯೂಬ್ ತನ್ನ ವೇದಿಕೆಯಿಂದ ತೆಗೆದು ಹಾಕಿದೆ. ಬಾಹ್ಯ ಸಂಪರ್ಕ ನೀತಿಯು ಬಳಕೆದಾರರಿಗೆ, ಯುಟ್ಯೂಬ್ ಕಮ್ಯುನಿಟಿ ನಿಯಮ ಉಲ್ಲಂಘನೆ ಮಾಡುವ ಯಾವುದೇ ಕಂಟೆಂಟ್ ಅಂದರೆ, ಅಶ್ಲೀಲತೆ, ಪೋರ್ನಗ್ರಫಿಯಂಥ ಸಂಗತಿಗಳನ್ನು ಪೋಸ್ಟ್ ಮಾಡಲು ಅವಕಾಶವನ್ನು ನೀಡುವುದಿಲ್ಲ.
ನಮ್ಮ ಕಮ್ಯುನಿಟಿ ಗೈಡ್‌ಲೈನ್ಸ್‌ಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಪೋರ್ನ್ ಹಬ್ ಅಫೀಷಿಯಲ್ ಖಾತೆಯನ್ನು ತೆಗೆದು ಹಾಕಿದ್ದೇವೆ. ಎಲ್ಲರಿಗೂ ಸಮಾನವಾಗಿ ನಮ್ಮ ನೀತಿಗಳನ್ನು ಜಾರಿ ಮಾಡುತ್ತೇವೆ. ಈ ಚಾನೆಲ್, ನಿರಂತರವಾಗಿ ನಮ್ಮ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿತ್ತು ಎಂದು ಯುಟ್ಯೂಬ್ ವಕ್ತಾರ ಜಾಕ್ ಮಲೂನ್ ಅವರು ತಿಳಿಸಿದ್ದಾರೆ.
ಯುಟ್ಯೂಬ್‌ನಲ್ಲಿ ಪೋರ್ನ್ ಹಬ್ ಚಾನೆಲ್‌ಗೆ 9 ಲಕ್ಷ ಸಬ್ಸ್‌ಕ್ರೈಬರ್ಸ್ ಇದ್ದರು. ಸೇಫ್-ಫಾರ್-ವರ್ಕ್ ಕಂಟೆಂಟ್ ಅನ್ನು ಮಾತ್ರವೇ ಪ್ರಮೋಟ್ ಮಾಡಲಾಗುತ್ತಿತ್ತು. ಹಾಗೆಯೇ ಯುಟ್ಯೂಬ್‌ನಲ್ಲಿ ಪೋರ್ನ್ ಹಬ್ ಮೂಲಕ ವಿಡಿಯೋ ಪೋಸ್ಟ್ ಮಾಡಲು ವಯೋಮಿತಿ ನಿರ್ಬಂಧ ಕೂಡ ಇತ್ತು. 18 ವರ್ಷ ಮೇಲ್ಪಟ್ಟವರು ಮಾತ್ರವೇ ಈ ವಿಡಿಯೋಗಳನ್ನು ನೋಡಲು ಸಾಧ್ಯವಾಗುತ್ತಿತ್ತು. ಆದರೆ, ಯುಟ್ಯೂಬ್‌ನಲ್ಲಿ ಯಾವುದೇ ರೀತಿಯ ವಯಸ್ಕರ ಕಂಟೆಂಟ್ ಪೋಸ್ಟ್ ಮಾಡಿರುವ ಇಲ್ಲವೇ ಲಿಂಕ್ ಷೇರ್ ಮಾಡಿರುವ ಆಪಾದನೆಯನ್ನು ಪೋರ್ನ್ ಹಬ್ ತಳ್ಳಿ ಹಾಕಿದೆ.
ಪೋರ್ನ್ ಹಬ್ ಅನ್ನು ಯುಟ್ಯೂಬ್ ಮಾತ್ರವೇ ನಿಷೇಧಿಸಿಲ್ಲ. ಕೆಲವು ತಿಂಗಳ ಹಿಂದೆ ಇನ್ಸ್‌ಟಾಗ್ರಾಮ್ ಕೂಡ ಪೋರ್ನ್ ಹಬ್ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಿದೆ. ನಗ್ನ, ಅಡಲ್ಟ್ ಕಂಟೆಂಟ್ ಮತ್ತು ಲೈಂಗಿಕ ವಿಜ್ಞಾಪನೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪೋರ್ನ್ ಹಬ್ ಉಲ್ಲಂಘಿಸಿದೆ ಎಂದು ಮೆಟಾ-ಮಾಲೀಕತ್ವದ ಫೋಟೋ-ಹಂಚಿಕೆ ಅಪ್ಲಿಕೇಶನ್ ಇನ್ಸ್‌ಟಾಗ್ರಾಮ್ ಆರೋಪಿಸಿತ್ತು.
ಇದನ್ನೂ ಓದಿ | Content Creators | ಯುಟ್ಯೂಬ್‌ನಿಂದ 7 ಲಕ್ಷ ಉದ್ಯೋಗ, ದೇಶದ ಜಿಡಿಪಿಗೆ 6,800 ಕೋಟಿ ರೂ. ಕೊಡುಗೆ!