Site icon Vistara News

Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

Dream Of Retired Couple

ಬದುಕಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸುಗಳಿರುತ್ತವೆ. ಅದರಲ್ಲೂ ಕೆಲವರು ತಮ್ಮ ಕನಸು (dream) ನನಸು ಮಾಡಿಕೊಳ್ಳಲು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಅಂಥವರಲ್ಲಿ ಒಬ್ಬರಾಗಿದ್ದಾರೆ ಅಮೆರಿಕನ್ (American)-ಇಟಾಲಿಯನ್ ನ (Italian) ಈ ದಂಪತಿ (Dream Of Retired Couple). ಇವರು ತಮ್ಮ ಕನಸನ್ನು ಸಾಕಾರಗೊಳಿಸಲು ತಮ್ಮದು ಎಂದೆನಿಸಿಕೊಂಡಿದ್ದ, ತಾವು ಜೀವಮಾನದಲ್ಲಿ ಗಳಿಸಿದ್ದ ಎಲ್ಲವನ್ನೂ ಮಾರಾಟ ಮಾಡಿದ್ದಾರೆ.

ಕಳೆದ ಎರಡು ವಾರಗಳಿಂದ ಗ್ರೇಸ್ ಮತ್ತು ಜೆರ್ರಿ ಗ್ರೇಡಿ ಯಾವುದೇ ಸೂಟ್‌ಕೇಸ್‌ ಭಾರ ಎತ್ತಿಕೊಳ್ಳದೇ ವಾಸ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಈಗ ತಮ್ಮ ಜೀವಮಾನದ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿ ನಡೆಯುತ್ತಿದ್ದಾರೆ.

70ರ ಹರೆಯದಲ್ಲಿರುವ ಈ ದಂಪತಿ ಶೀಘ್ರದಲ್ಲೇ ಪ್ರಪಂಚದಾದ್ಯಂತ (world tour) ನಿರಂತರ ಮೂರೂವರೆ ವರ್ಷಗಳ ವಿಹಾರಕ್ಕೆ (cruise) ತೆರಳಲಿದ್ದಾರೆ. ಈ ವಿಹಾರ ನಡೆಸಲಿರುವ ಸುಮಾರು 800 ಪ್ರಯಾಣಿಕರಲ್ಲಿ ಇವರೂ ಸೇರಿದ್ದಾರೆ.

ಇವರ ಈ ವಿಹಾರವು ಮೇ 30ರಂದು ಪ್ರಾರಂಭವಾಗಲಿದೆ. ಎಲ್ಲಾ ಏಳು ಖಂಡಗಳಾದ್ಯಂತ 147 ದೇಶಗಳಲ್ಲಿ 425 ಬಂದರುಗಳಿಗೆ ಈ ಸಂದರ್ಭದಲ್ಲಿ ಇವರು ಭೇಟಿ ನೀಡಲಿದ್ದಾರೆ. ಈ ಪ್ರವಾಸದ ವೇಳೆ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ವಸಂತ ಮತ್ತು ಬೇಸಿಗೆಯ ಋತುವಾಗಿರುವುದು ಖಾತ್ರಿ ಪಡಿಸಲಾಗಿದೆ. ಈ ವಿಹಾರದಲ್ಲಿ ವಿಲ್ಲಾ ವೈ ಒಡಿಸ್ಸಿ ಎಂಬ ಎರಡು ವಸತಿ ಹಡಗುಗಳು ಮಾತ್ರ ಬಳಕೆಯಾಗಲಿದೆ.


ವಿಹಾರಕ್ಕಾಗಿ ಎಲ್ಲವನ್ನೂ ಮಾರಾಟ ಮಾಡಿದ ದಂಪತಿ

ಗ್ರೇಡಿ ದಂಪತಿ ಎರಡು ವರ್ಷಗಳ ಹಿಂದೆ ಗ್ರೇಸ್‌ನ ತಾಯ್ನಾಡು ಸಿಸಿಲಿಗೆ ತೆರಳಿ, ಅಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತಮ್ಮ ಮನೆಯನ್ನು ಮಾರಾಟ ಮಾಡಿದ ಅನಂತರ ಅವರು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಪ್ರವಾಸಕ್ಕೆ ಧನಸಹಾಯಕ್ಕಾಗಿ ತಮ್ಮ ಇತರ ಅಮೂಲ್ಯವಾದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.

ಸಾಹಸಕ್ಕೆ ಹೊಸದಲ್ಲ

ನಾವು ನಮ್ಮ ಹೆಚ್ಚಿನ ವಸ್ತುಗಳನ್ನು ಸ್ನೇಹಿತರಿಗೆ ಮಾರಾಟ ಮಾಡಿದ್ದೇವೆ ಎಂದು ಹೇಳುವ ಗ್ರೇಸ್ ದಂಪತಿಗೆ ಸಾಹಸವೇನು ಹೊಸತಲ್ಲ. ಕನಿಷ್ಠ ವಸ್ತುಗಳ ಬಳಕೆಯನ್ನು ಅಭ್ಯಾಸ ಮಾಡಿಕೊಂಡಿರುವ ಇವರು ಪ್ರತಿದಿನ ಒಂದೇ ಬಟ್ಟೆಯನ್ನು ಧರಿಸುತ್ತಾರೆ. ರಾತ್ರಿ ತೊಳೆದು ಹಾಕುತ್ತಾರೆ. ಹೀಗಾಗಿ ವಾರ್ಡ್ ರೋಬ್ ನ ಅಗತ್ಯ ನಮಗಿಲ್ಲ ಎನ್ನುತ್ತಾರೆ ಗ್ರೇಸ್.

ಭೂಮಿಯಲ್ಲಿ ವಾಸಿಸುವುದಕ್ಕಿಂತ ಇದು ಹೆಚ್ಚು ದುಬಾರಿಯಲ್ಲ ಎನ್ನುವ ಇವರು ವಿಲ್ಲಾ ವೈ ಒಡಿಸ್ಸಿಯಲ್ಲಿ ಒಂದು ವಸತಿ ಕೋಣೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ವರ್ಷಕ್ಕೆ ಸರಿಸುಮಾರು 36.22 ಲಕ್ಷ ರೂಪಾಯಿಗಳು.
ಕ್ರೂಸ್ ದರ ಕೈಗೆಟುಕುವಂತಿದೆ. ವಾರ್ಷಿಕ ಬಾಡಿಗೆ, ಬಾಲ್ಕನಿಯೊಂದಿಗೆ ಹೊರಗಿನ ಕ್ಯಾಬಿನ್ ನಲ್ಲಿ ವರ್ಷಕ್ಕೆ ಸುಮಾರು 60.57 ಲಕ್ಷ ರೂ. ವೆಚ್ಚವಾಗಲಿದೆ.


ಕ್ರೂಸ್ ವಿಶೇಷ ಏನು?

ವಿಲ್ಲಾ ವೈ ಒಡಿಸ್ಸಿಯನ್ನು 1993ರಲ್ಲಿ ನಿರ್ಮಿಸಲಾಯಿತು. ಸಂಪೂರ್ಣವಾಗಿ 12 ಮಿಲಿಯನ್ ಡಾಲರ್ ನಲ್ಲಿ ದುರಸ್ತಿ ಕಾರ್ಯಗಳನ್ನು ನಡೆಸಲಾಗಿದೆ. ವಿಲ್ಲಾ ವೈ ಒಡಿಸ್ಸಿಯಲ್ಲಿ ಪ್ರಯಾಣಿಕರು ಒಳಾಂಗಣ ಕ್ಯಾಬಿನ್‌ಗೆ ಪ್ರತಿ ವ್ಯಕ್ತಿಗೆ ದಿನಕ್ಕೆ 7,421.79 ರೂ., ಹೊರಾಂಗಣ ಕ್ಯಾಬಿನ್‌ಗಳಿಗೆ 9,923.52 ರೂ. ಮತ್ತು ಬಾಲ್ಕನಿಯಲ್ಲಿರುವವರಿಗೆ 16,594.79 ರೂ. ಪಾವತಿಸಬೇಕಾಗುತ್ತದೆ.

ಅತಿಥಿಗಳಿಗೆ ರಾತ್ರಿಯ ಊಟದಲ್ಲಿ ಅನಿಯಮಿತ ಆಹಾರ, ತಂಪು ಪಾನೀಯ ಮತ್ತು ಆಲ್ಕೊಹಾಲ್ ಲಭ್ಯವಿರುತ್ತದೆ. ಉಚಿತ ವೈಫೈ ಮತ್ತು ಔಷಧ ಮತ್ತು ಇತರ ಕಾರ್ಯವಿಧಾನ ಹೊರತುಪಡಿಸಿ ನಿರಂತರ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗುತ್ತದೆ.

24/7 ಕೊಠಡಿ ಸೇವೆ, ವಾರಕ್ಕೊಮ್ಮೆ ಕೊಠಡಿ ಸ್ವಚ್ಛತೆ ಮತ್ತು ಎರಡು ವಾರಕ್ಕೊಮ್ಮೆ ಲಾಂಡ್ರಿ ಸೇವೆ ಎಲ್ಲವನ್ನೂ ಕ್ರೂಸ್ ನ ದರದಲ್ಲಿ ಸೇರಿಸಲಾಗಿದೆ.

ಪ್ರತ್ಯೇಕ ಪ್ರವಾಸ, ವಿಮಾನಯಾನಕ್ಕೆ ಹೋಲಿಸಿದರೆ ಇದು ಅಗ್ಗವಾಗಿದೆ ಎನ್ನುತ್ತಾರೆ ಗ್ರೇಸ್.

ಬಹು ದಿನಗಳ ಕನಸು

ಗ್ರೇಸ್ ದಂಪತಿ ಮೂರು ವರ್ಷಗಳ ಲೈಫ್ ಅಟ್ ಸೀ ಕ್ರೂಸಸ್ ಟ್ರಿಪ್‌ಗೆ ಸೇರಲು ನಿರ್ಧರಿಸಿದ್ದರು. ಆದರೆ ನವೆಂಬರ್ 2023 ರಲ್ಲಿ ಅದನ್ನು ಅನಿರೀಕ್ಷಿತವಾಗಿ ರದ್ದುಗೊಳಿಸಲಾಯಿತು. ಮರುಪಾವತಿಯನ್ನು ಕೋರಿ ಸಾಕಷ್ಟು ಮಂದಿ ಪ್ರವಾಸವನ್ನು ಕೈಬಿಟ್ಟರು. ನಾವು ಅಲೆಮಾರಿಗಳು, ಸಾಕಷ್ಟು ಪ್ರಯಾಣಿಸಿದ್ದೇವೆ. ನಾನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ ಎನ್ನುತ್ತಾರೆ ಗ್ರೇಸ್.

ಇದನ್ನೂ ಓದಿ: Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಕ್ರೂಸ್ ಗೆ ಹಣ ಪಾವತಿ ಮಾಡಲು ಆಯ್ಕೆಗಳಿವೆ. 16 ವಿಭಾಗಗಳು ಪಾವತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಪ್ರಯಾಣಿಕರು ಮುಂಗಡ ಠೇವಣಿ ಮತ್ತು ಪ್ರತಿ ವಿಭಾಗಕ್ಕೆ 30 ದಿನಗಳ ಮೊದಲು ಉಳಿದ ಹಣವನ್ನು ಪಾವತಿಸಬೇಕಾಗುತ್ತದೆ. ಯಾವುದೇ ಹಂತದಲ್ಲಿ ಹಡಗನ್ನು ತೊರೆಯಲು ಬಯಸಿದರೆ ಸಂಪೂರ್ಣ ಮರುಪಾವತಿಗಾಗಿ ಅವರು ಹೊಸ ವಿಭಾಗಕ್ಕಿಂತ ಕನಿಷ್ಠ ಆರು ತಿಂಗಳ ಮೊದಲು ಸೂಚನೆಯನ್ನು ನೀಡಬೇಕಾಗುತ್ತದೆ ಎಂದು ಗ್ರೇಸ್ ತಿಳಿಸಿದ್ದಾರೆ.

Exit mobile version