Site icon Vistara News

OM Beach : ಗೋಕರ್ಣದಲ್ಲಿ ಮಿಸ್‌ ಮಾಡದೆ ನೋಡಬೇಕಾದ ಬೀಚ್‌ ಇದು

blue shaded om beach gokarna

ನೀವೇನಾದರೂ ಕರಾವಳಿಯ ಗೋಕರ್ಣ ಕಡೆ ಪ್ರವಾಸ ಹೋಗುವ ಪ್ಲ್ಯಾನ್‌ ಮಾಡುತ್ತಿದ್ದರೆ ಇಲ್ಲಿನ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ಗೋಕರ್ಣಕ್ಕೆ ಹೋದ ಮೇಲೆ ಅಲ್ಲಿನ ಓಂ ಬೀಚ್‌ನಲ್ಲಿ (OM Beach) ಮನಸ್ಸು ಬಿಚ್ಚಿ ಆಟವಾಡದಿರಲು ಸಾಧ್ಯವೇ? ಆ ಓಂ ಬೀಚ್‌ ಕುರಿತಾಗಿ ಒಂದಿಷ್ಟು ಮಾಹಿತಿಯನ್ನು ನಿಮಗಾಗಿ ನಾವಿಲ್ಲಿ ತಂದಿದ್ದೇವೆ.


ಈ ಓಂ ಬೀಚ್‌ ಗೋಕರ್ಣ ಪಟ್ಟಣದಲ್ಲಿಯೇ ಇದೆ. ಓಂ ಚಿಹ್ನೆಯ ಆಕಾರದಲ್ಲಿ ಬೀಚ್‌ ಇರುವುದರಿಂದಾಗಿ ಇದನ್ನು ಓಂ ಬೀಚ್‌ ಎಂದು ಕರೆಯಲಾಗುತ್ತದೆ. ಸಾಕಷ್ಟು ಪ್ರಸಿದ್ಧವಾಗಿರುವ ಈ ಬೀಚ್‌ನಲ್ಲಿ ಸಾಹಸಮಯ ಕ್ರೀಡೆಗಳಿಗೂ ಅವಕಾಶವಿದೆ. ಈ ಬೀಚ್‌ನಲ್ಲಿ ಸುಂದರವಾದ ಸೂರ್ಯಾಸ್ತಮಾನವನ್ನು ನೀವು ನೋಡಬಹುದು. ಬೀಚ್‌ನ ಹತ್ತಿರದಲ್ಲೇ ಸಾಕಷ್ಟು ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು ಇರುವುದರಿಂದ ತಂಗುವುದಕ್ಕೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಇದನ್ನೂ ಓದಿ: Viral News : ಮನೆ ಬಾಡಿಗೆಗೆ ಕೊಡುವುದರೊಂದಿಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಓನರ್‌! ವೈರಲ್‌ ಆಗ್ತಿದೆ ಕಿಮ್ಚಿ ಕಥೆ
ಈ ಬೀಚ್‌ನಲ್ಲಿ ನೀವು ಸರ್ಫಿಂಗ್‌, ವಾಟರ್‌ ಸ್ಕೈಯಿಂಗ್‌ಮ ಪ್ಯಾರಾಸೈಲಿಂಗ್‌, ಬನಾನಾ ಬೋಟ್‌ ರೈಡ್‌ ಸೇರಿ ಅನೇಕ ಜಲಕ್ರೀಡೆಗಳನ್ನು ಆಟಬಹುದು. ಇಲ್ಲಿ ಡಾಲ್ಫಿನ್‌ಗಳನ್ನೂ ನೋಡುವುದಕ್ಕೆ ಅವಕಾಶ ಸಿಗುತ್ತದೆ. ಹಾಗೆಯೇ ಬೀಚ್‌ ಸೈಡ್‌ ಟ್ರೆಕ್ಕಿಂಗ್‌ ಅನ್ನೂ ಮಾಡಬಹುದಾಗಿದೆ.

Om beach banana boat


ಮಳೆಗಾಲದ ಸಮಯದಲ್ಲಿ ಈ ಬೀಚ್‌ಗೆ ಹೋಗುವುದು ಸೂಕ್ತವಲ್ಲ. ಮಳೆ ಹೆಚ್ಚಾದಾಗ ಅಲೆಗಳ ರಭಸವೂ ಹೆಚ್ಚಾಗುವುದರಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿರುತ್ತದೆ. ಈ ಓಂ ಬೀಚ್‌ಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅದು ಅಕ್ಟೋಬರ್‌ನಿಂದ ಮಾರ್ಚ್‌ ತಿಂಗಳು. ಇಲ್ಲಿ ಸೆಕೆಯೂ ಹೆಚ್ಚಿರುತ್ತದೆ.
ಗೋಕರ್ಣಕ್ಕೆ ಎಲ್ಲ ರೀತಿಯಲ್ಲೂ ಸಾರಿಗೆ ಸಂಪರ್ಕ ಸುಲಭವಾಗಿದೆ. ಗೋಕರ್ಣ ನಗರ ಬಸ್‌ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಬಸ್ಸಿನಲ್ಲಿ ನೀವು ಬೀಚ್‌ಗೆ ಹೋಗಬಹುದು. ಇಲ್ಲಿ ಸಾಕಷ್ಟು ಆಟೋರಿಕ್ಷಾಗಳು ಕೂಡ ಇರುವುದರಿಂದ ಸಾರಿಗೆಗೆ ಯಾವುದೇ ತೊಂದರೆಯಿಲ್ಲ.

ಇದನ್ನೂ ಓದಿ: Karnataka Budget 2023 : ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ; ಸಿಎಂ ಇದಕ್ಕೆ ಅಧ್ಯಕ್ಷರು!

ಓಂ ಬೀಚ್‌ಗೆ ಹತ್ತಿರದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇದರ ಸನಿಹದಲ್ಲೇ ಕುಡ್ಲು ಬೀಚ್‌ ಇದೆ. ಹಾಗೆಯೇ ಹಾಫ್‌ ಮೂನ್‌ ಬೀಚ್‌, ಪ್ಯಾರಡೈಸ್‌ ಬೀಚ್‌ಗಳೂ ಇವೆ. ಹಾಗೆಯೇ ಈ ಬೀಚ್‌ ಬಳಿಯಲ್ಲಿ ಅನೇಕ ರೀತಿಯ ಸೀ ಫುಡ್‌ಗಳನ್ನು ನೀವು ತಿನ್ನಬಹುದು. ಇಲ್ಲಿ ನಮಸ್ತೆ ಕೆಫೆ ಹೆಸರಿನ ಕೆಫೆ ಇದ್ದು, ಅಲ್ಲಿ ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದೆ. ಕ್ಯಾಮೆರಾಗಳು ನಿಮ್ಮ ಬಳಿ ಇದ್ದರೆ ಇಲ್ಲಿನ ರಮಣೀಯ ಸೌಂದರ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಕ್ಲಿಕ್ಕಿಸಿಕೊಂಡು ಬರಬಹುದು.

FAQ

ಓಂ ಬೀಚ್ ಯಾವುದಕ್ಕೆ ಪ್ರಸಿದ್ಧವಾಗಿದೆ?

ಇದು ‘ಓಂ’ ಪದವಾಗಿ ಭೌಗೋಳಿಕ ಪ್ರಾತಿನಿಧ್ಯವಾಗಿದೆ. ಬೀಚ್ ಮನೋಲ್ಲಾಸದ ಸೂರ್ಯಾಸ್ತ, ನೀರಿನ ಆಟಗಳು ಮತ್ತು ಶಾಂತ ಸಮುದ್ರದ ನಡಿಗೆಗೆ ಹೆಸರುವಾಸಿಯಾಗಿದೆ.

ಓಂ ಬೀಚ್ ಗೋಕರ್ಣ ಜಿಲ್ಲೆ ಯಾವುದು?

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕರಾವಳಿ ನಗರವಾದ ಗೋಕರ್ಣ.

ಗೋಕರ್ಣದಲ್ಲಿ ಉಳಿಯಲು ಯಾವ ಬೀಚ್ ಉತ್ತಮವಾಗಿದೆ?

ಓಂ ಕಡಲತೀರ ಗೋಕರ್ಣ, ಎಲ್ಲ ವಯಸ್ಕರಿಗೂ ಇಶವಾಗುವ ಹಾಗೂ ಮನಸ್ಸಿಗೆ ಮುದ ನೀಡುವ ಬೀಚ್ ಆಗಿದೆ.

Exit mobile version