Site icon Vistara News

Jagannath Puri Temple: ಪುರಿ ಜಗನ್ನಾಥ ದೇವಸ್ಥಾನದ 7 ಅಚ್ಚರಿಯ ಸಂಗತಿಗಳಿವು!

Jagannath Puri Temple

ವಿಶ್ವ ಪ್ರಸಿದ್ಧ ದೇವಾಲಯಗಳಲ್ಲಿ ಭಾರತದ (india) ಒಡಿಶಾದ (Odisha) ಪುರಿಯಲ್ಲಿರುವ ಜಗನ್ನಾಥ ಮಂದಿರವೂ (Jagannath Pur Temple) ಒಂದಾಗಿದೆ. ಭಗವಾನ್ ವಿಷ್ಣುವಿನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾಗಿರುವ ಈ ಜಗನ್ನಾಥ ದೇವಾಲಯವು ಲಕ್ಷಾಂತರ ಹಿಂದೂಗಳಿಗೆ ಪ್ರಮುಖ ಯಾತ್ರಾ (tourist place) ಸ್ಥಳವಾಗಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ರಥಯಾತ್ರೆಯ ಉತ್ಸವವನ್ನು ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸುತ್ತಾರೆ.

ಅದ್ಭುತವಾದ ವಾಸ್ತು ಶಿಲ್ಪವನ್ನು ಹೊಂದಿರುವ ಈ ದೇವಾಲಯವು ಅನೇಕ ರಹಸ್ಯಗಳನ್ನು ಹೊಂದಿದೆ. ಜಗನ್ನಾಥ ಪುರಿ ದೇವಸ್ಥಾನದ ಬಗ್ಗೆ ಹೆಚ್ಚಿನವರು ತಿಳಿಯದೇ ಇರುವಂತ ಏಳು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.


1. ನೆರಳು ಬೀಳುವುದಿಲ್ಲ!

ಜಗನ್ನಾಥ ಪುರಿ ದೇವಾಲಯದ ಮೇಲೆ ಯಾವುದೇ ನೆರಳು ಬೀಳುವುದಿಲ್ಲ. ಇದು ನಿಖರವಾದ ವಾಸ್ತುಶಿಲ್ಪದ ಯೋಜನೆಯ ಪರಿಣಾಮವೇ ಅಥವಾ ಜಗನ್ನಾಥನ ಪವಾಡವೇ ಎಂಬುದನ್ನು ಈವರೆಗೆ ಪತ್ತೆ ಹಚ್ಚಲು ಯಾರಿಗೂ ಸಾಧ್ಯವಾಗಿಲ್ಲ. ಈ ದೇವಾಲಯವು ‘ನೆರಳು ರಹಿತ’ ಎಂದು ಹೇಳಲಾಗುತ್ತದೆ.


2. ಗಾಳಿಗೆ ವಿರುದ್ಧವಾಗಿ ಧ್ವಜ ಹಾರುತ್ತದೆ!

ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಗಾಳಿಗೆ ವಿರುದ್ಧವಾಗಿ ಯಾಕೆ ಹಾರುತ್ತದೆ ಎಂಬುದರ ಹಿಂದೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ದೇವಾಲಯದಲ್ಲಿ ಧಾರ್ಮಿಕ ಶಕ್ತಿಯ ಭವ್ಯವಾದ ಅದ್ಭುತವನ್ನು ಪ್ರದರ್ಶಿಸುವ ಮೂಲಕ ಪ್ರವಾಸಿಗರು ಅಚ್ಚರಿ ಪಡುವಂತೆ ಮಾಡುತ್ತದೆ.


3. ಮೇಲ್ಭಾಗದಲ್ಲಿ ಸುದರ್ಶನ ಚಕ್ರ!

ಮೇಲ್ಭಾಗದಲ್ಲಿ ಇರಿಸಲಾಗಿರುವ ಸುದರ್ಶನ ಚಕ್ರವು ಎರಡು ರಹಸ್ಯಗಳನ್ನು ಹೊಂದಿದೆ. ಮೊದಲನೆಯದಾಗಿ ನಿರ್ಮಾಣದ ಸಮಯದ ತಂತ್ರಜ್ಞಾನದ ಸ್ಥಿತಿಯನ್ನು ಗಮನಿಸಿದರೆ ವಾಸ್ತುಶಿಲ್ಪಿಗಳು ಮತ್ತು ನಿರ್ಮಾಣ ಕಾರ್ಮಿಕರು ಅಂತಹ ತೂಕದ ಚಕ್ರವನ್ನು ಹೇಗೆ ಮೇಲಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬುದು. ಇನ್ನೊಂದು ಇದು ಎಲ್ಲಾ ಕೋನಗಳಿಂದಲೂ ಒಂದೇ ರೀತಿ ಹೇಗೆ ಕಾಣುತ್ತದೆ ಎಂಬುದು. ಈ ಸುದರ್ಶನ ಚಕ್ರದ ಪರಿಪೂರ್ಣ ಗಣಿತ ಲೆಕ್ಕಾಚಾರ ಅನೇಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.


4. ಅಡುಗೆಮನೆ ಕುತೂಹಲ

ದೇವಾಲಯದೊಳಗಿರುವ ಆಹಾರವನ್ನು ಒಂದರ ಮೇಲೊಂದರಂತೆ ಜೋಡಿಸಲಾದ ಮಡಕೆಗಳಲ್ಲಿ ಬೇಯಿಸಲಾಗುತ್ತದೆ. ಕುತೂಹಲದ ವಿಷಯವೆಂದರೆ ಮೇಲ್ಭಾಗದಲ್ಲಿರುವ ಮಡಕೆಗಳ ಆಹಾರ ಮೊದಲು ಬೇಯುತ್ತದೆ! ಇದು ಪ್ರವಾಸಿಗರು ಮತ್ತು ಸಂಶೋಧಕರಿಗೆ ಇನ್ನೂ ಸವಾಲಾಗಿದೆ.


5. ಮರದ ದೇವತೆಗಳ ಆಚರಣೆ

ನಬಕಾಲೇಬಾರ ಎಂಬ ಆಚರಣೆಯು ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ಹಿಂದೂ ದೇವತೆಗಳ ಮರದ ಪ್ರತಿಮೆಗಳ ಪುನರ್ ನಿರ್ಮಾಣವನ್ನು ಸಾರುವ ಅತ್ಯಂತ ಮಂಗಳಕರವಾದ ಆಚರಣೆಯಾಗಿದೆ. ಇದು ಆಕರ್ಷಣೆಯ ವಿಷಯವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತದೆ.


6. ಶಾಂತವಾಗುವ ನೀರು!

ಸಂಜೆ ಸಮಯದಲ್ಲಿ ಸಾಗರದ ನೀರು ದೇವಾಲಯ ತಲುಪಿದಾಗ ಶಾಂತವಾಗುತ್ತದೆ. ಇದು ಯಾಕೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ದೇವಾಲಯದೊಳಗಿನ ಶಬ್ದವು ಮಾಂತ್ರಿಕವಾಗಿ ನೀರನ್ನು ಹಿಂದಿರುಗುವಂತೆ ಮಾಡುತ್ತದೆ! ದೇವತೆಗಳು ದೇವಾಲಯದೊಳಗೆ ಶಾಂತಿಯನ್ನು ಬಯಸುತ್ತಾರೆ ಮತ್ತು ಆದ್ದರಿಂದ ಪ್ರಕೃತಿ ಶಾಂತವಾಗುತ್ತದೆ ಎಂದು ಸ್ಥಳೀಯ ಪುರಾಣಗಳು ಹೇಳುತ್ತವೆ.


7. ಹಿಮ್ಮುಖ ಗಾಳಿ

ದೇವಾಲಯದ ಗಾಳಿಯು ಹಗಲಿನಲ್ಲಿ ಭೂಮಿಯಿಂದ ಸಮುದ್ರದತ್ತ ಹೋಗುತ್ತದೆ ಮತ್ತು ರಾತ್ರಿಯಲ್ಲಿ ಹರಿವನ್ನು ಹಿಮ್ಮುಖಗೊಳಿಸುತ್ತದೆ. ಇದು ಇನ್ನೂ ಉತ್ತರಕ್ಕೆ ಸಿಗದ ಪ್ರಶ್ನೆಯಾಗಿದೆ. ಇಲ್ಲಿನ ಪ್ರಕೃತಿ ವಿಸ್ಮಯ ಅನೇಕರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತದೆ.

Exit mobile version