Site icon Vistara News

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Kanyakumari Tour

ದಕ್ಷಿಣ ಭಾರತದಲ್ಲಿ (South India) ನೀವು ಪ್ರವಾಸ (tour) ಮಾಡುವ ಯೋಜನೆ ರೂಪಿಸುತ್ತಿದ್ದರೆ ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿ (Kanyakumari Tour) ನಿಮ್ಮ ಆದ್ಯತೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಲಿ. ತಮಿಳುನಾಡಿನ (tamilnadu) ಕರಾವಳಿಯಲ್ಲಿರುವ ಈ ರತ್ನವು ಭೌಗೋಳಿಕ ಅದ್ಭುತ ಮಾತ್ರವಲ್ಲದೆ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಸಂಗಮವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಧ್ಯಾನದ ಕಾರಣಕ್ಕಾಗಿ ಕನ್ಯಾಕುಮಾರಿ ಈಗ ಸುದ್ದಿಯ ಕೇಂದ್ರವಾಗಿದೆ.

ಕನ್ಯಾಕುಮಾರಿಯಲ್ಲಿ ನೀವು ಮಿಸ್ ಮಾಡಿಕೊಳ್ಳಲೇಬಾರದ ಪ್ರಮುಖ 10 ಸಂಗತಿಗಳಿವೆ. ಇವೆಲ್ಲ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇರಲಿ.

ತ್ರಿವೇಣಿ ಸಂಗಮ

ಕನ್ಯಾಕುಮಾರಿಯು ತನ್ನ ವಿಶಿಷ್ಟ ಭೌಗೋಳಿಕ ಸ್ಥಾನಕ್ಕೆ ಹೆಸರುವಾಸಿಯಾಗಿದೆ. ಅಲ್ಲಿ ಸಮುದ್ರದ ಮೇಲೆ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ವೀಕ್ಷಿಸಬಹುದು. ಅರಬ್ಬೀ ಸಮುದ್ರ, ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಸಂಗಮವಾಗಿರುವ ತ್ರಿವೇಣಿ ಸಂಗಮವು ನಯನ ಮನೋಹರ ದೃಶ್ಯವನ್ನು ಒದಗಿಸುತ್ತದೆ.

ವಿವೇಕಾನಂದ ಕಲ್ಲಿನ ಸ್ಮಾರಕ

ಕರಾವಳಿಯ ಕಲ್ಲಿನ ದ್ವೀಪದಲ್ಲಿ ನೆಲೆಗೊಂಡಿರುವ ಈ ಸ್ಮಾರಕವನ್ನು ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸಲಾಗಿದೆ. ಸಣ್ಣ ದೋಣಿ ಸವಾರಿಯ ಮೂಲಕ ಅದನ್ನು ತಲುಪಿ ಮತ್ತು ವಿಹಂಗಮ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಇಲ್ಲಿ ನೆನಪಿಸಿಕೊಳ್ಳಿ.

ತಿರುವಳ್ಳುವರ್ ಪ್ರತಿಮೆ

ವಿವೇಕಾನಂದ ಬಂಡೆಯ ಪಕ್ಕದಲ್ಲಿರುವ ಈ 133 ಅಡಿ ಎತ್ತರದ ತಮಿಳು ಕವಿ-ಸಂತ ತಿರುವಳ್ಳುವರ್ ಪ್ರತಿಮೆ ಕಲೆ ಮತ್ತು ವಾಸ್ತುಶಿಲ್ಪದ ಅದ್ಭುತವಾಗಿದೆ. ಇಲ್ಲಿಗೆ ಭೇಟಿ ನೀಡಲು ತಪ್ಪಿಸದಿರಿ.

ಸುಂದರ ಕಡಲತೀರ

ಕನ್ಯಾಕುಮಾರಿ ಕಡಲತೀರವು ಬಹು-ಬಣ್ಣದ ಮರಳು ಮತ್ತು ಕಲ್ಲಿನ ತೀರವನ್ನು ಹೊಂದಿದೆ. ಪ್ರಶಾಂತವಾದ ವಾತಾವರಣದಲ್ಲಿ ಸುತ್ತಾಡಲು ಬಯಸುವವರು ಸಂಗುತುರೈ ಬೀಚ್, ಸೋತವಿಲೈ ಬೀಚ್ ನಲ್ಲಿ ಕೆಲಕಾಲ ಕಳೆಯಬಹುದು.


ಪದ್ಮನಾಭಪುರಂ ಅರಮನೆ

ಕನ್ಯಾಕುಮಾರಿಯಿಂದ ಸ್ವಲ್ಪ ದೂರದಲ್ಲಿ 16ನೇ ಶತಮಾನದ ಈ ಅರಮನೆಯು ಸಾಂಪ್ರದಾಯಿಕ ಕೇರಳ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ ಮತ್ತು ದಕ್ಷಿಣ ಭಾರತದ ಪ್ರವಾಸದ ವೇಳೆ ತಪ್ಪಿಸಿಕೊಳ್ಳಲೇ ಬಾರದ ಅತ್ಯಂತ ಸುಂದರ ತಾಣವಾಗಿದೆ.

ತನುಮಲಯನ್ ದೇವಾಲಯ

ಸ್ಥಾನುಮಲಯನ್ ಕೋವಿಲ್ ಎಂದೂ ಕರೆಯಲ್ಪಡುವ ಈ ದೇವಾಲಯದ ವಾಸ್ತುಶಿಲ್ಪದ ಅದ್ಭುತವು ಅದರ ಅಂದವಾದ ಕೆತ್ತನೆಗಳು ಮತ್ತು ವಿಶಿಷ್ಟವಾದ ಸಂಗೀತ ಸ್ತಂಭಗಳಿಗೆ ಗಮನಾರ್ಹವಾಗಿ. ಇದು ದಕ್ಷಿಣ ಭಾರತದಲ್ಲಿನ ಸಾಂಸ್ಕೃತಿಕ ಪ್ರವಾಸದಲ್ಲಿ ಪ್ರಮುಖ ಅಂಶವಾಗಿದೆ.

ಗಾಂಧಿ ಸ್ಮಾರಕ

ಮಹಾತ್ಮಾ ಗಾಂಧಿಯವರ ಚಿತಾಭಸ್ಮವನ್ನು ಮುಳುಗಿಸುವ ಮೊದಲು ಇರಿಸಲಾಗಿದ್ದ ಸ್ಥಳದಲ್ಲಿ ನಿರ್ಮಿಸಲಾದ ಈ ಸ್ಮಾರಕವು ಭಾರತದ ಶ್ರೀಮಂತ ಇತಿಹಾಸದಲ್ಲಿ ಆಸಕ್ತಿ ಹೊಂದಿರುವವರಿಗೆ ಅತ್ಯಂತ ಸುಂದರ, ಶಾಂತವಾದ ತಾಣವಾಗಿದೆ.


ಕನ್ಯಾಕುಮಾರಿ ವ್ಯಾಕ್ಸ್ ಮ್ಯೂಸಿಯಂ

ವಿನೋದ ಮತ್ತು ಶೈಕ್ಷಣಿಕ ಅನುಭವ ಪಡೆಯಲು ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ. ಇಲ್ಲಿ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳು ಆಕರ್ಷಣೀಯವಾಗಿದೆ.

ಇದನ್ನೂ ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಮರುಂತುವಜ್ ಮಲೈ

ಕನ್ಯಾಕುಮಾರಿಯ ಸಮೀಪದಲ್ಲಿರುವ ಈ ಸಣ್ಣ ಗುಡ್ಡಗಾಡು ಪ್ರದೇಶವು ಪುರಾಣದ ಮಹತ್ವವನ್ನು ಹೊಂದಿದೆ. ರಮಣೀಯ ನೋಟವನ್ನು ಒದಗಿಸಿಯುವ ಇದು ದಕ್ಷಿಣ ಭಾರತ ಪ್ರವಾಸದಲ್ಲಿರುವ ಸಾಹಸ ಪ್ರಿಯರ ಪಟ್ಟಿಗೆ ಪರಿಪೂರ್ಣ ಸೇರ್ಪಡೆಯಾಗಿದೆ.

ಸ್ಥಳೀಯ ಖಾದ್ಯ ಸವಿಯಿರಿ

ಕೋತು ಪರೋಟಾ, ಬಾಳೆಹಣ್ಣು ಚಿಪ್ಸ್ ಮತ್ತು ಸಮುದ್ರಾಹಾರ ಭಕ್ಷ್ಯಗಳಂತಹ ಸ್ಥಳೀಯ ಭಕ್ಷ್ಯಗಳನ್ನು ಇಲ್ಲಿ ಸವಿಯಬಹುದು.

Exit mobile version