Site icon Vistara News

Khajjiar Tour: ಖಜ್ಜಿಯಾರ್! ಇದು ಹಿಮಾಲಯದ ತಪ್ಪಲಿನಲ್ಲಿರುವ ಮಿನಿ ಸ್ವಿಟ್ಜರ್ಲೆಂಡ್!

Khajjiar Tour

ಈ ಗಿರಿಧಾಮವು ಹಸಿರು ಹುಲ್ಲುಗಾವಲುಗಳು, ದಟ್ಟವಾದ ಪೈನ್ ಕಾಡುಗಳು ಮತ್ತು ಶಾಂತವಾದ ಸರೋವರದಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಏಕಾಂಗಿಯಾಗಿ ಪ್ರಕೃತಿಯ ಮಡಿಲಲ್ಲಿ ಅನ್ವೇಷಿಸಲು ಬಯಸುವ ಪ್ರವಾಸ ಪ್ರಿಯರಿಗೆ ಇದು ಆಯ್ಕೆ ಮಾಡಿಕೊಳ್ಳಬಹುದಾದ ಸೂಕ್ತವಾದ ತಾಣವಾಗಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಖಜ್ಜಿಯಾರ್ (Khajjiar Tour) ಹಿಮಾಚಲ ಪ್ರದೇಶದಲ್ಲಿರುವ (himachal pradesh  hill station) ಅತ್ಯಾಕರ್ಷಕ ಗಿರಿಧಾಮವಾಗಿದೆ. ಇದನ್ನು ಸಾಮಾನ್ಯವಾಗಿ “ಮಿನಿ ಸ್ವಿಟ್ಜರ್ಲೆಂಡ್ ಆಫ್ ಇಂಡಿಯಾ” (Mini Switzerland of India) ಎಂದು ಕರೆಯಲಾಗುತ್ತದೆ. ನೆಮ್ಮದಿ ಮತ್ತು ಸಾಹಸವನ್ನು ಬಯಸುವ ಪ್ರವಾಸಿಗಳಿಗೆ ಇದು ಸೂಕ್ತ ತಾಣವಾಗಿದೆ.

ಖಜ್ಜಿಯಾರ್‌ಗೆ ಒಂಟಿಯಾಗಿ ಪ್ರವಾಸ ಮಾಡಬೇಕು ಎಂದು ಬಯಸುವವರು ಮೊದಲು ಸರಿಯಾದ ಸಿದ್ಧತೆ, ಸ್ಥಳದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಇದರಿಂದ ಪ್ರವಾಸವನ್ನು ಸುರಕ್ಷಿತವಾಗಿ ಮತ್ತು ಹೆಚ್ಚು ಆನಂದದಾಯಕವಾಗಿ ಕಳೆಯಬಹುದು.

Khajjiar Tour


ಸರಿಯಾದ ಯೋಜನೆ ಹಾಕಿಕೊಳ್ಳಿ

ಖಜ್ಜಿಯಾರ್‌ಗೆ ಪ್ರವಾಸ ಹೊರಡುವ ಮೊದಲು ಪ್ರವಾಸವನ್ನು ಹೆಚ್ಚು ಆನಂದದಾಯಕವಾಗಿಸಲು ತಯಾರಿಯನ್ನು ಮುಂಚಿತವಾಗಿಯೇ ಮಾಡಿಕೊಳ್ಳಬೇಕು. ಅದರಲ್ಲಿ ಮುಖ್ಯವಾಗಿ ಋತುವಿನ ಆಯ್ಕೆ. ಖಜ್ಜಿಯಾರ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಿಗೆಕಾಲ ಅಥವಾ ಸೆಪ್ಟೆಂಬರ್ ಮತ್ತು ನವೆಂಬರ್ ನಡುವಿನ ಶರತ್ಕಾಲದ ಆರಂಭ ಹೆಚ್ಚು ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಇಲ್ಲಿ ಹೆಚ್ಚು ಬಿಸಿಯಾಗಿರುವುದಿಲ್ಲ ಅಥವಾ ತಂಪಾಗಿರುವುದಿಲ್ಲ ಆದರೆ ಸ್ಪಷ್ಟವಾದ ಆಕಾಶದ ಜೊತೆಗೆ ಆರಾಮದಾಯಕವಾದ ತಾಪಮಾನ ಸುಂದರ ಪ್ರವಾಸದ ಅನುಭವವನ್ನು ಕೊಡುತ್ತದೆ.

ವಸತಿ ವ್ಯವಸ್ಥೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಲ್ಲಿ ಸಾಕಷ್ಟು ಹೊಟೇಲ್ , ರೆಸಾರ್ಟ್‌ ಅಥವಾ ಹೋಮ್ ಸ್ಟೇಗಳಿವೆ. ಕೆಲವು ಕಾರಣಗಳಿಗಾಗಿ ಏಕಾಂಗಿ ಪ್ರಯಾಣಿಕರು ಹೋಮ್‌ಸ್ಟೇಗಳನ್ನೇ ಇಷ್ಟಪಡುತ್ತಾರೆ. ಪೀಕ್ ಸೀಸನ್‌ಗಳಲ್ಲಿ ಈ ಸ್ಥಳದಲ್ಲಿ ವಾಸ್ತವ್ಯವನ್ನು ಆನಂದಿಸಲು ಬಯಸಿದರೆ ಸಾಕಷ್ಟು ಮುಂಚಿತವಾಗಿ ಬುಕ್ ಮಾಡಲು ಮರೆಯದಿರಿ.

ಸಾರಿಗೆ ವಿಧಾನ ಆಯ್ಕೆ ಮೊದಲೇ ಮಾಡಿಕೊಳ್ಳಿ. ಖಜ್ಜಿಯಾರ್‌ನಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿರುವ ಡಾಲ್‌ಹೌಸಿಯು ಅತ್ಯಂತ ಹತ್ತಿರದ ಮಹತ್ವದ ನಗರವಾಗಿದೆ. ಟ್ಯಾಕ್ಸಿ ಅಥವಾ ಸ್ಥಳೀಯ ಬಸ್ಸು ಮೂಲಕ ಡಾಲ್ ಹೌಸಿಯಿಂದ ಖಜ್ಜಿಯಾರ್‌ಗೆ ತಲುಪಬಹುದು. ಏಕಾಂಗಿಯಾಗಿ ಖಜ್ಜಿಯಾರ್ ಗೆ ಪ್ರಯಾಣಿಸುತ್ತಿದ್ದರೆ, ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿರುತ್ತವೆ. ಇದು ಸುತ್ತಮುತ್ತಲಿನ ಇತರ ಆಸಕ್ತಿದಾಯಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಸುಲಭಗೊಳಿಸುತ್ತದೆ.

Khajjiar Tour


ವಿವಿಧ ಚಟುವಟಿಕೆಯನ್ನು ಆನಂದಿಸಿ

ಖಜ್ಜಿಯಾರ್ ಅದ್ಭುತವಾದ ಪ್ರಶಾಂತತೆಯನ್ನು ಹೊಂದಿದ್ದು, ಇಲ್ಲಿ ಏಕಾಂಗಿ ಪ್ರವಾಸ ಮಾಡುವವರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ಹಸಿರು ಹುಲ್ಲುಗಾವಲು ಮತ್ತು ದೇವದಾರು ಮರಗಳ ನಡುವೆ ನೆಲೆಗೊಂಡಿರುವ ಖಜ್ಜಿಯಾರ್ ಸರೋವರಕ್ಕೆ ಭೇಟಿ ನೀಡುವ ಮೂಲಕ ಇಲ್ಲಿ ಪ್ರಯಾಣವನ್ನು ಪ್ರಾರಂಭಿಸಬಹುದು. ಸರೋವರದ ಸುತ್ತಲೂ ಕಾಲ್ನಡಿಗೆಯಲ್ಲಿ ಅಥವಾ ಅದರ ದಡದಲ್ಲಿ ಪ್ಯಾಡಲ್ ಬೋಟ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಇಲ್ಲಿ ಮಾಡಬಹುದಾದ ಕೆಲವು ಚಟುವಟಿಕೆಗಳು ಅಥವಾ ಸುಮ್ಮನೆ ಕುಳಿತು ಪ್ರಶಾಂತತೆಯನ್ನು ಆನಂದಿಸಬಹುದು.

ಐತಿಹಾಸಿಕ ಖಜ್ಜಿಯಾರ್ ನಾಗ್ ದೇವಾಲಯದಲ್ಲಿ ಹಾವಿಗೆ ಪೂಜೆ ಸಲ್ಲಿಸಲಾಗುತ್ತದೆ. ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರೆ ಇದು ಸೂಕ್ತ ಪ್ರವಾಸ ಸ್ಥಳವಾಗಿದೆ. ಪ್ರಕೃತಿ ಪ್ರಿಯರು ಕಲಾಟಾಪ್ ವನ್ಯಜೀವಿ ಅಭಯಾರಣ್ಯದಲ್ಲಿ ಪಾದಯಾತ್ರೆಯನ್ನು ನಡೆಸಬಹುದು. ಹಿಮಾಲಯನ್ ಕಪ್ಪು ಕರಡಿಗಳು ಮತ್ತು ಹಲವಾರು ಪಕ್ಷಿಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿ ಮತ್ತು ಸಸ್ಯಗಳನ್ನು ಇಲ್ಲಿ ಕಾಣಬಹುದು. ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸುವವರು ನೆಮ್ಮದಿಯನ್ನು ಹುಡುಕುತ್ತಿದ್ದರೆ ಇಲ್ಲಿ ಅದನ್ನು ಪಡೆಯಬಹುದು.

ಖಜ್ಜಿಯಾರ್‌ನಲ್ಲಿ ಸಾಹಸವನ್ನು ಹುಡುಕುವವರಿಗೆ ಇಲ್ಲಿ ಝೋರ್ಬಿಂಗ್ ಮತ್ತು ಪ್ಯಾರಾಗ್ಲೈಡಿಂಗ್‌ಗೆ ಅವಕಾಶಗಳಿವೆ. ಸುತ್ತಲಿನ ಕಣಿವೆಗಳು ಮತ್ತು ಬೆಟ್ಟಗಳ ನಡುವೆ ರೋಮಾಂಚಕ ಅನುಭವವನ್ನು ಪಡೆಯಬಹುದು.

Khajjiar Tour


ಸುರಕ್ಷತೆಯ ಕಡೆ ಗಮನವಿರಲಿ

ಏಕಾಂಗಿ ಪ್ರಯಾಣಿಕರು ಖಜ್ಜಿಯಾರ್‌ಗೆ ಭೇಟಿ ನೀಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಏಕಾಂಗಿಯಾಗಿ ಹೊರಗೆ ಹೋಗುವವರು, ಹಿಂತಿರುಗುವ ಬಗ್ಗೆ ವಸತಿ ಒದಗಿಸುವವರು ಅಥವಾ ನಂಬಲರ್ಹ ವ್ಯಕ್ತಿಗೆ ತಿಳಿಸಿ ಹೋಗಬೇಕು.

ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಡ್ರೆಸ್ಸಿಂಗ್ ಮಾಡುವಂತಹ ಸ್ಥಳೀಯ ಪದ್ಧತಿ ಮತ್ತು ಸಂಪ್ರದಾಯಗಳನ್ನು ಗಮನಿಸಿ. ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ಸ್ಥಳೀಯ ಅಧಿಕಾರಿಗಳು ಅಥವಾ ದೇಶದ ರಾಯಭಾರ ಕಚೇರಿ/ದೂತಾವಾಸ ಕಚೇರಿಗಳು ಸೇರಿದಂತೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೆನಪಿಡಿ. ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.ನೀರು, ಅಗತ್ಯವಿರುವ ಔಷಧಗಳು ಜೊತೆಯಲ್ಲಿ ಇರಲಿ.

ಇದನ್ನೂ ಓದಿ: Varanasi Tour: ವಾರಣಾಸಿಗೆ ಹೋದಾಗ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

Khajjiar Tour


ಸ್ಥಳೀಯ ಸಂಸ್ಕೃತಿಯನ್ನು ಆನಂದಿಸಿ

ಹಿಮಾಚಲ ಪ್ರದೇಶದ ಸ್ಥಳೀಯ ಆಹಾರ ಮತ್ತು ಅದರ ಸರಳತೆ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹೀಗಾಗಿ ಇಲ್ಲಿನ ವಿವಿಧ ಭಕ್ಷ್ಯಗಳನ್ನು ಪ್ರಯತ್ನಿಸಿ. ಸ್ಥಳೀಯರೊಂದಿಗೆ ಸಂವಹನ ನಡೆಸಿ ಅವರ ಜೀವನ, ಪದ್ಧತಿಗಳು ಮತ್ತು ಜಾನಪದದ ಬಗ್ಗೆ ತಿಳಿದುಕೊಳ್ಳಿ. ಇದು ಖಜ್ಜಿಯಾರ್‌ಗೆ ಸಂಬಂಧಿಸಿದ ಒಳನೋಟಗಳನ್ನು ನೀಡುತ್ತದೆ. ಕೈಯಿಂದ ಮಾಡಿದ ಉಣ್ಣೆಬಟ್ಟೆಗಳು, ಕರಕುಶಲ ವಸ್ತುಗಳು ಅಥವಾ ಸ್ಮಾರಕಗಳ ಸ್ಥಳೀಯ ಮಾರುಕಟ್ಟೆಗಳು ಇಲ್ಲಿ ಸಾಕಷ್ಟು ನೆನಪುಗಳನ್ನು ಕಟ್ಟಿಕೊಡುತ್ತದೆ.

Exit mobile version