ಗುಜರಾತ್: ಕರಾವಳಿ ನಗರವಾದ ಪೋರ್ ಬಂದರ್ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮಸ್ಥಳವಾಗಿದೆ. ಇತಿಹಾಸದ ಹಿನ್ನೆಲೆಯಿರುವ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇದು ಗುಜರಾತ್ ರಾಜ್ಯದಲ್ಲಿದೆ. ರಜಾ ದಿನಗಳಲ್ಲಿ ಗುಜರಾತ್ ಗೆ ಪ್ರಯಾಣ ಮಾಡಬೇಕು ಎಂದು ಬಯಸುವವರು ಒಮ್ಮೆ ಪೋರ್ ಬಂದರಿಗೆ (Porbandar Tour) ಭೇಟಿ ನೀಡಿ. ಇಲ್ಲಿನ ಅದ್ಭುತ ಸ್ಥಳಗಳನ್ನು ಆನಂದಿಸಿ.
ಕೀರ್ತಿ ಮಂದಿರ
ಇದು ರಾಷ್ಟ್ರಪಿತ ಮಹಾತ್ಮಗಾಂಧಿಯವರ ನೆನಪಿಗಾಗಿ ನಿರ್ಮಿಸಿದ ಸ್ಮಾರಕವಾಗಿದೆ. ಇದು ಪೋರ್ ಬಂದರಿನಲ್ಲಿದೆ. ಇದು ಪೋರ್ ಬಂದರಿನ ಮೊದಲ ಹೆಗ್ಗುರುತಾಗಿದೆ. ಗಾಂಧೀಜಿಯವರ ಸೋದರಳಿಯನಿಂದ ನಿರ್ಮಿಸಲ್ಪಟ್ಟ ಈ ಸ್ಮಾರಕದಲ್ಲಿ ಗಾಂಧಿಯವರ ಅಸಾಧಾರಣ ಜೀವನವನ್ನು ವಿವರಿಸುವ ವಸ್ತು ಸಂಗ್ರಹಾಲಯ, ದೇವಾಲಯ, ಉದ್ಯಾನಗಳನ್ನು ಹೊಂದಿದೆ.
ಪೋರ್ ಬಂದರ್ ಬೀಚ್
ವಿಶ್ರಾಂತಿ ಪಡೆಯಲು ಬಯಸುವವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಇಲ್ಲಿ ಚಿನ್ನದಂತೆ ಹೊಳೆಯುವ ಮರಳುಗಳು, ಸೌಮ್ಯವಾದ ಅಲೆಗಳು ಮತ್ತು ಕಣ್ಮನ ಸೆಳೆಯುವ ಸೂರ್ಯೋದಯವನ್ನು ಇಲ್ಲಿ ಆನಂದಿಸಬಹುದು. ಇಲ್ಲಿ ನಡೆದಾಡುವ ಮೂಲಕ ತಾಜಾ ಗಾಳಿಯನ್ನು ಉಸಿರಾಡಬಹುದು. ಹಾಗೇ ಇಲ್ಲಿ ಮೀನುಗಾರರು, ಒಂಟೆಗಳು ಸುತ್ತಾಡುತ್ತಿರುತ್ತದೆ. ಡೌನ್ ಚೌಪಟ್ಟಿರಸ್ತೆಯ ಮಾದರಿ ಖಾದ್ಯಗಳಾದ ಮೆಥಿ ಗೋಟಾ ಬಜ್ಜಿಗಳನ್ನು ಬಣ್ಣ ಬಣ್ಣದ ಬಲ್ಪ್ ಗಳಿಂದ ಅಲಂಕರಿಸಿದ ಸ್ಟಾಲ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಸುದಾಮ ಮಂದಿರ
ಪೋರ್ ಬಂದರಿನ ಸಿಟಿ ಸೆಂಟರ್ ನಲ್ಲಿ ಕಂಡುಬರುವ ಈ ಪುರಾತನ ದೇವಾಲಯದಲ್ಲಿ ಹಿಂದೂ ದೇವರಾದ ಕೃಷ್ಣನ ಜೊತೆ ಆತನ ಬಾಲ್ಯದ ಸ್ನೇಹಿತ ಸುದಾಮನನ್ನು ಪೂಜಿಸಲಾಗುತ್ತದೆ. ಹಾಗೇ ಇಲ್ಲಿ ಕೃಷ್ಣ ಆತನ ಪತ್ನಿ ರುಕ್ಮಿಣಿ , ಸ್ನೇಹಿತ ಸುದಾಮ ಮತ್ತು ಸಹೋದರ ಬಲರಾಮನನ್ನು ಗೌರವಿಸಲಾಗುತ್ತದೆ. ಗುರುಕುಲದಲ್ಲಿ ಕೃಷ್ಣ –ಸುದಾಮರು ಒಟ್ಟಿಗೆ ಕಳೆದ ಸಮಯವನ್ನು ಚಿತ್ರಿಸುವ ಭಿತ್ತಿ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಯಲಾಗಿದೆ.
ಪೋರ್ ಬಂದರ್ ಚೌಪಟ್ಟಿ
ರೋಮಾಂಚಕವಾದ ಚೌಪಟ್ಟಿ ಬೀಚ್ ನಲ್ಲಿ ವಾಯು ವಿಹಾರ ಮಾಡುವಾಗ ಸ್ಥಳೀಯ ಖಾದ್ಯಗಳ ರುಚಿ ಮತ್ತು ಹಬ್ಬದ ಸಂಭ್ರಮವನ್ನು ನೀವು ಆನಂದಿಸದೆ ಇರಲಾಗುವುದಿಲ್ಲ. ದೀಪಗಳಿಂದ ಅಲಂಕಾರಗೊಂಡ ಮಳಿಗೆಗಳಲ್ಲಿ ಧೋಕ್ಲಾಗಳು, ಖಾಂಡ್ವಿಗಳು ಮತ್ತು ಹುರಿದ ಮಸಾಲೆಯುಕ್ತ ತಿಂಡಿಗಳಂತಹ ಪ್ರಮುಖ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಚೌಪಟ್ಟಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ವಿಶೇಷವಾಗಿ ಇಲ್ಲಿ ಗಾಳಿಪಟವನ್ನು ಹಾರಿಸುವ ಉತ್ಸವ ನಡೆಯುತ್ತದೆ.
ತಾರಾ ಮಂದಿರ ತಾರಾಲಯ
1972ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ಈ ತಾರಾಲಯವನ್ನು ಉದ್ಘಾಟಿಸಿದರು. ಇಲ್ಲಿ ಖಗೋಳಶಾಸ್ತ್ರ, ಪ್ರದರ್ಶನದ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಲಾಗುತ್ತದೆ. ಇಲ್ಲಿ ಗ್ರಹಣದಿಂದ ನಕ್ಷತ್ರ ಪುಂಜಗಳವರೆಗೆ ಕಾಸ್ಮಿಕ್ ವಿದ್ಯಮಾನಗಳನ್ನು ವಿವರಿಸುವ ಪ್ರದರ್ಶನಗಳನ್ನು ಡಿಜಿಟಲ್ ಆಗಿ ಪ್ರದರ್ಶಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಭಾರತ್ ಮಂದಿರ
19ನೇ ಶತಮಾನದ ಈ ದೇವಾಲಯವು ಭಾರತವನ್ನು ಗೌರವಿಸುತ್ತದೆ. ಪುರಾಣಗಳಲ್ಲಿ ಭಗವಾನ್ ರಾಮನ ಸದ್ಗುಣಗಳನ್ನು ಕಂಡು ಹಿಂದೂಗಳು ರಾಮನನ್ನು ಆದರ್ಶವಾಗಿ ಕಾಣುತ್ತಾರೆ. ಹಾಗಾಗಿ ಈ ದೇವಾಲಯದಲ್ಲಿ ರಾಮಾಯಣದ ದೃಶ್ಯಗಳನ್ನು ಕೆತ್ತಲಾಗಿದೆ. ಇಲ್ಲಿ ಸ್ವರ್ಣ ಲೇಪಿತ ಗುಮ್ಮಟಗಳು, ಲ್ಯಾಟಿಸ್ಡ್ ಗೋಡೆಗಳು ಮತ್ತು ಸ್ತಂಭದ ಮಂಟಪ ಸಭಾಂಗಣಗಳು ದೂರ ದೂರದಿಂದ ಭಕ್ತರನ್ನು ಆಕರ್ಷಿಸುತ್ತದೆ.
ನೆಹರು ತಾರಾಲಯ
ಖಗೋಳಶಾಸ್ತ್ರದ ಬಗ್ಗೆ ಮನೋರಂಜನೆಯನ್ನು ನೀಡುವಂತಹ ಪೋರ್ ಬಂದರ್ ನ ಈ ತಾರಾಲಯ ನಕ್ಷತ್ರಾಕಾರದಲ್ಲಿದೆ. ಇಲ್ಲಿ ಭೂಮಿಯ ಆಚೆಗಿನ ರಹಸ್ಯಗಳನ್ನು ಅನ್ವೇಷಿಸುವ ಹೈಟೆಕ್ ಪ್ರದರ್ಶನಗಳನ್ನು ನೀಡುತ್ತದೆ. ಆಧುನಿಕ ಗ್ಯಾಜೆಟ್ರಿಯೊಂದಿಗೆ ಸುಸಜ್ಜಿತವಾದ 40 ಅಡಿಗಳ ಅರ್ಧಗೋಳದ ಥಿಯೇಟರ್ ಒಳಗೆ ಡಿಜಿಟೈಸ್ಡ್ ಆಕಾಶದಲ್ಲಿ ಶೂಟಿಂಗ್ ಸ್ಟಾರ್ ಗಳು ಪ್ರಜ್ವಲಿಸುತ್ತಿರುವುದನ್ನು ಇಲ್ಲಿ ನೋಡಬಹುದು.
ಪೋರ್ ಬಂದರ್ ಪಕ್ಷಿಧಾಮ
ಅಪರೂಪದ ಜಲವಾಸಿಗಳನ್ನೊಳಗೊಂಡ ಈ ಅಭಯಾರಣ್ಯಕ್ಕೆ ಪ್ರಕೃತಿ ಪ್ರೇಮಿಗಳು ಭೇಟಿ ನೀಡಬಹುದು. ಪೋರ್ ಬಂದರ್ ನಿಂದ ಕೇವಲ 2ಕಿಮೀ ದೂರದಲ್ಲಿರುವ ಇದು ಮ್ಯಾಂಗ್ರೋವ್ ಗಳನ್ನು ರಕ್ಷಣೆ ನೀಡುತ್ತದೆ ಮತ್ತು ವರ್ಷದಲ್ಲಿ ಸುಮಾರು 200 ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುತ್ತದೆ. ಇಲ್ಲಿ ಸುಂದರವಾದ ಭೂದೃಶ್ಯಗಳು ಮತ್ತು ತಾಜಾ ಗಾಳಿಯು ನಿಮಗೆ ಹೆಚ್ಚು ಸಂತೋಷವನ್ನು ನೀಡುತ್ತದೆ.