Site icon Vistara News

Summer Tour: ಕಾಶ್ಮೀರ ಪ್ರವಾಸ ಮಾಡಲೊಂದು ಚಾನ್ಸ್! ಐ ಆರ್ ಸಿ ಟಿ ಸಿಯಿಂದ ವಿಶೇಷ ಪ್ಯಾಕೇಜ್

Summer Tour

ಧರೆಯ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಕಾಶ್ಮೀರಕ್ಕೆ (kashmir) ಪ್ರವಾಸ (tour) ಹೊರಡಲು ಈಗ ಸೂಕ್ತ ಸಮಯ. ಬೇಸಿಗೆಯ ಬಿಸಿಲಿನಿಂದ (Summer Tour) ಕಂಗೆಟ್ಟ ಜನರು ತಂಪಾದ ಪ್ರದೇಶದಲ್ಲಿ ಹೋಗಿ ಕೆಲ ಕಾಲ ಇದ್ದು ಬರಬೇಕು ಎಂದು ಬಯಸಿದರೆ ಐಆರ್ ಟಿಸಿ (IRTC) ವತಿಯಿಂದ ಟೂರ್ ಪ್ಯಾಕೇಜ್ ಘೋಷಣೆಯಾಗಿದೆ. ಆಸಕ್ತರು ಬ್ಯಾಗ್ ಪ್ಯಾಕ್ ,ಮಾಡಿ ಹೊರಡಲು ಸಿದ್ಧತೆ ನಡೆಸಬಹುದು.

ಇತ್ತೀಚೆಗೆ ಕಾಶ್ಮೀರದಲ್ಲಿ ಸಂಭವಿಸಿದ ಹಿಮಪಾತವು ಕಣಿವೆ ಪ್ರದೇಶಕ್ಕೆ ಸಂಪೂರ್ಣವಾಗಿ ಬಿಳಿ ಬಣ್ಣ ಎರಕ ಹೊಯ್ದಂತೆ ಮಾಡಿದೆ. ಇದು ಪ್ರವಾಸೋದ್ಯಮ ಕ್ಷೇತ್ರದ ಉತ್ಸಾಹವನ್ನು ಪುನರುಜ್ಜೀವನಗೊಳಿಸಿದೆ. ಈಗಾಗಲೇ ಅನೇಕ ಪ್ರವಾಸಿಗರು ಕಾಶ್ಮೀರಕ್ಕೆ ಹೊರಡುವ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಮೋಡಿ ಮಾಡುವ ಭೂದೃಶ್ಯಗಳನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರ ಆಗಮನಕ್ಕೆ ಕಾಶ್ಮೀರವೂ ಕಾಯುವಂತಿದೆ.

ಪ್ರವಾಸಿಗರ ಉತ್ಸಾಹವನ್ನು ಹೆಚ್ಚಿಸಲು ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)ವು ‘ಕಾಶ್ಮೀರ್ ಹೆವೆನ್ ಆನ್ ಅರ್ಥ್ ಎಕ್ಸ್ ಮುಂಬೈ’ ಎಂಬ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಹೊರತಂದಿದೆ.


ಇದನ್ನೂ ಓದಿ: Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

ಈ ಪ್ಯಾಕೇಜ್ ಕಾಶ್ಮೀರದ ರಮಣೀಯ ಸೌಂದರ್ಯವನ್ನು ಅನ್ವೇಷಿಸಲು ಬಯಸುವವರಿಗೆ ಹೇಳಿ ಮಾಡಲ್ಪಟ್ಟಿದೆ. ಐದು ರಾತ್ರಿ ಮತ್ತು ಆರು- ದಿನಗಳ ಸಮಗ್ರ ಪ್ಯಾಕೇಜ್ ನಲ್ಲಿ ಶ್ರೀನಗರ, ದೂದ್ ಪೆಟ್ರಿ, ಗುಲ್ಮಾರ್ಗ್, ಪಹಲ್ಗಾಮ್ ಮೊದಲಾದ ಪ್ರಸಿದ್ಧ ಸ್ಥಳಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್ ನಲ್ಲಿ ವಿಮಾನ ಟಿಕೆಟ್‌ಗಳು, ಹೊಟೇಲ್ ವಸತಿ, ಊಟ ಮತ್ತು ಪ್ರಯಾಣ ವಿಮೆಯನ್ನು ಒಳಗೊಂಡಿದೆ. ಪ್ರಯಾಣಿಕರ ಸಂಖ್ಯೆ ಮತ್ತು ಅವರೊಂದಿಗೆ ಬರುವ ಮಕ್ಕಳ ವಯಸ್ಸನ್ನು ಪರಿಗಣಿಸಿ ವಿಭಿನ್ನ ಪ್ರಯಾಣದ ಅನುಭವಕ್ಕೆ ಸರಿಹೊಂದಿಸಲು ಬೆಲೆಗಳನ್ನು ನಿಗದಿಪಡಿಸಲಾಗಿದೆ.


ಪ್ರವಾಸದ ದಿನ

ಮೇ ತಿಂಗಳಲ್ಲಿ 11, 15, 18, 25 ಜೂನ್ ತಿಂಗಳಲ್ಲಿ 1, 9, 15, 23, 26ರಂದು ಪ್ರವಾಸ ಹೊರಡುವ ಯೋಜನೆ ರೂಪಿಸಿಕೊಳ್ಳಬಹುದು. ಹೊಟೇಲ್ ವಾಸ್ತವ್ಯ ನಾಲ್ಕು ರಾತ್ರಿ ಶ್ರೀನಗರದಲ್ಲಿ ಮತ್ತು ಒಂದು ರಾತ್ರಿ ಪಹಲ್ಗಾಮ್ ನಲ್ಲಿ.

ದರ ಇಂತಿದೆ

ಒಬ್ಬರಿಗೆ 63,400 ರೂ., ಇಬ್ಬರಿಗೆ ಪ್ಯಾಕೇಜ್ ನಡಿಯಲ್ಲಿ ತಲಾ 54,100, ಮೂವರಿಗೆ ತಲಾ 50,700, 5 ರಿಂದ 11 ವರ್ಷದ ಒಳಗಿನ ಪ್ರತಿ ಮಕ್ಕಳಿಗೆ 48,400 ರೂ. ನಿಗದಿಪಡಿಸಲಾಗಿದೆ.

ಪ್ರವಾಸಿ ತಾಣಗಳು

ಟೂರ್ ಪ್ಯಾಕೇಜ್ ನಲ್ಲಿ ಶ್ರೀನಗರ, ದೂದ್ ಪೆಟ್ರಿ, ಗುಲ್ಮಾರ್ಗ್, ಪಹಲ್ಗಾಮ್ ಸುಪ್ರಸಿದ್ದ ತಾಣಗಳಿಗೆ ಭೇಟಿ ನೀಡಲಾಗುತ್ತದೆ. ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಪಹಲ್ಗಾಮ್ , ಬೇತಾಬ್ ವಾಲಿ, ಅರು ವಾಲಿ ಮತ್ತು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮೊದಲ ದಿನ ಭೇಟಿ ನೀಡಲಾಗುತ್ತದೆ. ಎರಡನೇ ದಿನ ದಾಲ್ ಸರೋವರದ ದಡದಲ್ಲಿರುವ ಹಾಜ್ರತ್ ಬಾಲ್ ಶ್ರೀನಿ ಗೆ ಭೇಟಿ ನೀಡಲಾಗುತ್ತದೆ. ಮೂರನೇ ದಿನ ಅವಂತೀಪುರ್, ಮೊಘಲ್ ಗಾರ್ಡನ್, ಶಂಕರಾಚಾರ್ಯ ಟೆಂಪಲ್, ಶಿಖರ ರೈಡ್ ಅನ್ನು ಒಳಗೊಂಡಿರುತ್ತದೆ. ನಾಲ್ಕನೇ ದಿನ ದೂದ್ ಪೆಟ್ರಿಯಲ್ಲಿ , ಐದನೇ ದಿನ ಗುಲ್ಮಾರ್ಗ್ ನಲ್ಲಿ ಕಳೆಯಲಾಗುತ್ತದೆ. ಆರನೇ ದಿನ ವಿಮಾನದಲ್ಲಿ ಮುಂಬಯಿ ತಲುಪುವುದರೊಂದಿಗೆ ಪ್ರವಾಸ ಕೊನೆಗೊಳ್ಳುತ್ತದೆ.

Exit mobile version