ಬೆಂಗಳೂರು: ಪ್ರತಿದಿನ ದಿನ ಒತ್ತಡದ ಬದುಕು, ಕೆಲಸದಲ್ಲಿ ಮುಳುಗಿರುವ ಜನರು ವಾರಾಂತ್ಯದ (Nagarjuna Sagar)ವೇಳೆ ತಮ್ಮ ಕುಟುಂಬದ ಜೊತೆ ಮೋಜು ಮಸ್ತಿ ಮಾಡಲು ಬಯಸುತ್ತಾರೆ. ಅದಕ್ಕಾಗಿ ಟೂರ್, ಹೋಟೆಲ್ ಮುಂತಾದಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಅಂತವರು ವಾರಾಂತ್ಯದ ವೇಳೆಗೆ ಆಂಧ್ರಪ್ರದೇಶದಲ್ಲಿರುವ ನಾಗಾರ್ಜುನಸಾಗರದ ಈ ಸ್ಥಳಗಳಿಗೆ ಭೇಟಿ ನೀಡಿ. ನಾಗಾರ್ಜುನಸಾಗರ ಗದ್ದಲಗಳಿಂದ ಮುಕ್ತವಾದ ಪ್ರದೇಶವಾಗಿದೆ. ಇಲ್ಲಿ ಪ್ರಶಾಂತವಾದ ವಾತಾವರಣ ಹಾಗೂ ಅನೇಕ ಆಕರ್ಷಕ ಸ್ಥಳಗಳನ್ನು ಹೊಂದಿವೆ. ವಾರಾಂತ್ಯದ ಪ್ರವಾಸಕ್ಕೆ ಇದು ಸೂಕ್ತವಾದ ಸ್ಥಳ. ಪ್ರಕೃತಿ ಪ್ರೇಮಿಗಳಿಗೆ, ಇತಿಹಾಸಗಾರರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಹಾಗಾಗಿ ನಾಗಾರ್ಜುನಸಾಗರಕ್ಕೆ ಬಂದಾಗ ಇಲ್ಲಿನ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ.
ನಾಗಾರ್ಜುನಸಾಗರ ಅಣೆಕಟ್ಟು
ಇದು ವಿಶ್ವದ ಅತಿದೊಡ್ಡ ಕಲ್ಲಿನ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದನ್ನು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇಲ್ಲಿ ಅದ್ಭುತವಾದ ಪರಿಸರವಿದೆ. ಪ್ರವಾಸಿಗರು ಇಲ್ಲಿ ಖುಷಿಯಾಗಿ ವಾಕಿಂಗ್ ಮಾಡಬಹುದು. ಹಾಗೇ ಜಲಾಶಯದ ಮೇಲಿನ ಪ್ರಶಾಂತವಾದ ನೀರಿನಲ್ಲಿ ದೋಣಿ ವಿಹಾರ ಮಾಡುತ್ತಾ ಸುತ್ತಲಿನ ಬೆಟ್ಟ ಹಾಗೂ ಕಾಡುಗಳ ನೋಟವನ್ನು ಸವಿಯಬಹುದಾಗಿದೆ.
ಎತ್ತಿಪೋತಲ ಜಲಪಾತ
ನಲ್ಲಮಲ ಬೆಟ್ಟದ ಹಸಿರಿನ ನಡುವೆ ನೆಲೆಸಿರುವ ಎತ್ತಿಪೋತಲ ಜಲಪಾತ ಪ್ರಕೃತಿ ಪ್ರಿಯರಿಗೆ ಇಷ್ಟವಾದ ಸ್ಥಳವಾಗಿದೆ. ಇಲ್ಲಿನ ಹಸಿರಾದ ಪರಿಸರದ ನಡುವೆ 70 ಅಡಿ ಎತ್ತರದಿಂದ ಧುಮುಕುವ ಜಲಪಾತ ಅದ್ಭುತ ನೋಟವನ್ನು ನೀಡುತ್ತದೆ. ಜಲಪಾತದ ಕೆಳಗಿರುವ ನೀರಿನಲ್ಲಿ ಪ್ರವಾಸಿಗರು ಸ್ನಾನ ಮಾಡಬಹುದಾಗಿದೆ. ಇಲ್ಲಿ ದಟ್ಟವಾದ ಕಾಡಿನ ನಡುವೆ ಚಾರಣ ಮಾಡಬಹುದು. ಇಲ್ಲಿ ಅನೇಕ ರೀತಿಯ ಪ್ರಾಣಿಗಳು ಮತ್ತು ಸಸ್ಯಗಳು ಕಂಡುಬರುತ್ತವೆ.
ನಾಗಾರ್ಜುನಕೊಂಡ ದ್ವೀಪ
ಇಲ್ಲಿ ಕ್ರಿ.ಪೂ 3ನೇ ಶತಮಾನಕ್ಕೆ ಸೇರಿದ ಪ್ರಾಚೀನ ಬೌದ್ಧ ಅವಶೇಷಗಳನ್ನು ಅನ್ವೇಷಿಸಬಹುದಂತೆ. 3 ನೇ ಶತಮಾನದಲ್ಲಿ ಈ ದ್ವೀಪ ಬೌದ್ಧ ಧರ್ಮ ಮತ್ತು ಸಂಸ್ಕೃತಿಯನ್ನು ಕಲಿಯುವ ವಿದ್ಯೆ ಕೇಂದ್ರವಾಗಿತ್ತಂತೆ. ಹಾಗಾಗಿ ನಾವು ಇಲ್ಲಿ ಮಠಗಳು, ಸ್ತೂಪಗಳು ಮತ್ತು ಶಿಲ್ಪಗಳು ಇತ್ಯಾದಿಗಳ ಅವಶೇಷಗಳನ್ನು ಕಾಣಬಹುದಂತೆ. ಇದಲ್ಲದೇ ಇಲ್ಲಿಗೆ ಹೋಗಲು ದೋಣಿ ಸವಾರಿಯನ್ನು ಮಾಡಬೇಕಾಗುತ್ತದೆಯಂತೆ. ಇದು ಬಹಳ ಸಾಹಸಮಯವಾಗಿದೆಯಂತೆ.
ಶ್ರೀಶೈಲಂ ವನ್ಯಜೀವಿ ಅಭಯಾರಣ್ಯ
ನಾಗಾರ್ಜುನ ಸಾಗರದಲ್ಲಿರುವ ಶ್ರೀಶೈಲಂ ವನ್ಯಜೀವಿ ಅಭಯಾರಣ್ಯ ಪ್ರಕೃತಿ ಹಾಗೂ ವನ್ಯಜೀವಿ ಪ್ರಿಯರಿಗೆ ಉತ್ತಮವಾದ ಸ್ಥಳವಾಗಿದೆ. ಇದು ನಲ್ಲಮಲ ಬೆಟ್ಟಗಳ ಭೂಪ್ರದೇಶದಲ್ಲಿ ಹರಡಿದೆ. ಇಲ್ಲಿ ಅನೇಕ ರೀತಿಯ ಪಕ್ಷಿಗಳು, ಹುಲಿಗಳು, ಚಿರತೆಗಳು ಮತ್ತು ಕರಡಿಯಂತಹ ಅನೇಕ ವಿಭಿನ್ನ ಪ್ರಾಣಿ ಪ್ರಭೇದಗಳು ಕಂಡುಬರುತ್ತದೆಯಂತೆ. ಹಾಗೇ ಇಲ್ಲಿ ವನ್ಯಜೀವಿಗಳನ್ನು ನೋಡಲು ಸಫಾರಿ ನಡಿಗೆಗಳನ್ನು ಆಯೋಜಿಸಲಾಗಿದೆಯಂತೆ.
ನಾಗಾರ್ಜುನಸಾಗರ ವನ್ಯಜೀವಿ ಅಭಯಾರಣ್ಯ
ಇದು ಪ್ರಕೃತಿ ಹಾಗೂ ವನ್ಯಜೀವಿ ಪ್ರಿಯರಿಗೆ ಖುಷಿ ನೀಡುವ ಮತ್ತೊಂದು ಅದ್ಭುತವಾದ ಸ್ಥಳವಾಗಿದೆ. ಇಲ್ಲಿ ವಿವಿಧ ಸಸ್ಯ ಮತ್ತು ಪ್ರಾಣಿಗಳು ಕಂಡುಬರುತ್ತವೆಯಂತೆ. ಈ ಅಭಯಾರಣ್ಯ ಪೂರ್ವ ಘಟ್ಟಗಳ ಒರಟು ಭೂಪ್ರದೇಶದಲ್ಲಿ ಇದೆ. ಇಲ್ಲಿ ಹುಲಿಗಳು, ಚಿರತೆಗಳು, ಭಾರತೀಯ ಕಾಡೆಮ್ಮೆ ಮುಂತಾದ ಹಲವಾರು ಪ್ರಾಣಿಗಳ ಜೊತೆಗೆ ಸಸ್ಯಗಳನ್ನು ನೊಡಬಹುದಂತೆ. ಅಲ್ಲದೇ ಇಲ್ಲಿ ಸಂದರ್ಶಕರಿಗೆ ಸಫಾರಿ ನಡಿಗೆ ಅಥವಾ ಪಕ್ಷಿ ವೀಕ್ಷಣೆಯ ಮೂಲಕ ಈ ಪ್ರದೇಶವನ್ನು ಅನ್ವೇಷಣೆ ಮಾಡಲು ಅವಕಾಶವಿದೆಯಂತೆ.
ಇದನ್ನೂ ಓದಿ: Delhi Tour: ದೆಹಲಿಗೆ ಪ್ರವಾಸಕ್ಕೆ ಹೋದಾಗ ಮಿಸ್ ಮಾಡದೇ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ!
ಒಟ್ಟಾರೆ ನಾಗಾರ್ಜುನಸಾಗರ ವನ್ಯಜೀವಿ ಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಹಾಗಾಗಿ ವಾರಾಂತ್ಯದಲ್ಲಿ ಇಲ್ಲಿಗೆ ಬರುವುದನ್ನು ಮರೆಯಬೇಡಿ.