ಬೆಂಗಳೂರು: ಆನೆಗಳು ಬುದ್ಧಿವಂತ ಜೀವಿಗಳು ಎಂಬುದು ಎಂದೋ ರುಜುವಾತಾಗಿದೆ. ಪಳಗಿಸಿದರೆ ಇವು ಮನುಷ್ಯ ಹೇಳಿದಂತೆ ಕೇಳುತ್ತವೆ. ತಮ್ಮನ್ನು ಸಾಕುವ ಮಾವುತರ ಜತೆಗೆ ಅಪರೂಪದ ಬಾಂಧವ್ಯ ಇಟ್ಟುಕೊಂಡಿರುತ್ತವೆ. ಇಲ್ಲೊಂದು ತಾಯಿ ಆನೆ ತನ್ನ ಕಂದನನ್ನು ಎಬ್ಬಿಸಿ ಎಬ್ಬಿಸಿ ಸಾಕಾಗಿ ಕೊನೆಗೆ ಮಾವುತನನ್ನು ಕರೆದುಕೊಂಡು ಬರುತ್ತದೆ. ಅವರ ಸಹಾಯದಿಂದ ಮಗು ಏಳುವ ಹಾಗೆ ಮಾಡುತ್ತದೆ. ಈ ವಿಡಿಯೊ ಈಗ ಭಾರಿ ವೈರಲ್ ಆಗುತ್ತಿದೆ.
“Buitengebieden” ಎಂಬ ಟ್ವಿಟರ್ ಖಾತೆ ಈ ಸುಂದರ ವಿಡಿಯೊ ಶೇರ್ ಮಾಡಿದೆ. ಇದುವರೆಗೂ 52 ಲಕ್ಷ ಜನ ವಿಡಿಯೊ ನೋಡಿದ್ದಾರೆ.
ಎದ್ದೇಳದ ತನ್ನ ಮಗುವನ್ನು ಎಬ್ಬಿಸಲು ತಾಯಿ ಆನೆ ಮಾವುತನನ್ನು ಕರೆದುಕೊಂಡು ಬರುತ್ತದೆ. ಆನೆಮರಿ ಮಲಗಿರುವ ಜಾಗಕ್ಕೆ ಬಂದ 3 ಜನ ಮಾವುತರಲ್ಲಿ ಒಬ್ಬ ಮಾವುತ ಆನೆಮರಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಾನೆ. ಹಲವು ಬಾರಿ ಅಲುಗಾಡಿಸಿದರೂ ಏಳದ ಆನೆಮರಿ ಆನಂತರ ಸರಕ್ಕನೆ ಎದ್ದು ತಾಯಿಯತ್ತ ಓಡಿ ಹೋಗುತ್ತದೆ.
31 ಸಾವಿರ ಜನ ಈ ವಿಡಿಯೊಗೆ ರೀಟ್ವಿಟ್ ಮಾಡಿದ್ದಾರೆ. ಯಾರು ತಾನೇ ಇಂತಹ ವಿಡಿಯೊ ಲೈಕ್ ಮಾಡಲು ಸಾಧ್ಯವಿಲ್ಲ ಹೇಳಿ. ಕಮೆಂಟ್ ಮಾಡುವ ಮೂಲಕ ತಾಯಿ ಆನೆಯ ಸಮಯಪ್ರಜ್ಞೆಯನ್ನು ಹೊಗಳಿದ್ದಾರೆ.
ಇದನ್ನೂ ಓದಿ : Viral Video| ಮರಿ ಆನೆಗೆ Z Plus Security ನೀಡಿದ ಪೋಷಕ ಆನೆಗಳು!