Site icon Vistara News

Viral Video | ಇವರಲ್ಲಿ ನಿಜಕ್ಕೂ ಬಿಲ್‌ ಕೊಟ್ಟಿದ್ದು ಯಾರು?

ಹೋಟೆಲ್‌ನಲ್ಲಿ ಬಿಲ್ ಕೊಡುವ ಸಂದರ್ಭದಲ್ಲಿ ಈ ಯುವಕ ಮತ್ತು ಯುವತಿಯ ನಡುವೆ ನಡೆಯುವ ಒಂದು ತಮಾಷೆಯ ದೃಶ್ಯ ಎಲ್ಲೆಡೆ ವೈರಲ್‌ (Viral Video) ಆಗಿದೆ. ಇವರಿಬ್ಬರಲ್ಲಿ ನಿಜಕ್ಕೂ ಬಿಲ್ ಕೊಟ್ಟಿದ್ದು ಯಾರು ಎಂಬ ಕುತೂಹಲ ಮೂಡಿದೆ.

ಹೋಟೆಲ್‌ನಲ್ಲಿ ಬಿಲ್‌ ಪಾವತಿಸುವ ಸಮಯದಲ್ಲಿ ಒಂದು ಜೋಡಿಯ ನಡುವೆ ನಡೆಯುವ ಸನ್ನಿವೇಶದ ದೃಶ್ಯ ಇದು. ಒಳ್ಳೆಯ ತಿನಿಸು ತಿಂದ ಬಳಿಕ ಬಿಲ್‌ ಕೊಡುವ ಸಂದರ್ಭದಲ್ಲಿ ಈ ಯುವಕ ಹಣವನ್ನು ತೆಗೆದು ವೇಟರ್‌ ಕೈಗೆ ಕೊಡಲು ಮುಂದಾಗುತ್ತಾನೆ. ಆದರೆ, ಯುವತಿ ತಾನೇ ಬಿಲ್‌ ಕೊಡುತ್ತೇನೆ ಎಂದು ಆತನನ್ನು ತಡೆಯುತ್ತಾಳೆ. ತನ್ನ ಪರ್ಸ್‌ನಿಂದ ಹಣವನ್ನು ತೆಗೆದು ವೇಟರ್‌ ಕೈಗೆ ಕೊಟ್ಟು ಬಿಡುತ್ತಾಳೆ. ಅಲ್ಲಿಗೆ ಇದು ಮುಗಿಯಲಿಲ್ಲ. ತಮಾಷೆ ಏನೆಂದರೆ, ಯುವಕನ ಕೈಯಲ್ಲಿದ್ದ ಹಣವನ್ನು ಈ ಯುವತಿ ತನ್ನ ಪರ್ಸಿನೊಳಗೆ ಹಾಕಿಕೊಳ್ಳುತ್ತಾಳೆ!

ಯುವಕನ ಹಣವನ್ನು ತನ್ನ ಪರ್ಸಿಗೆ ಹಾಕಿಕೊಂಡರೂ, ಬಿಲ್‌ ಕೊಟ್ಟಿದ್ದು ಯುವತಿ ಎಂಬುದಂತೂ ಸತ್ಯ! ಈ ಮಜವಾದ ದೃಶ್ಯ ಇಲ್ಲಿದೆ ನೋಡಿ.

ಇದನ್ನೂ ಓದಿ: Viral Video: ಅರಚಿ-ಕಿರುಚಿ, ತಲೆ ಬಡಿದುಕೊಂಡು ಹಣ್ಣು ಮಾರಾಟ ಮಾಡುವ ವ್ಯಾಪಾರಿ; ಯಾಕೆ ಹೀಗೆ?

Exit mobile version