Site icon Vistara News

Budget Session : ನಮ್ಮ ಗ್ಯಾರಂಟಿ ಕದ್ದು ಮೋದಿ ಗ್ಯಾರಂಟಿ ಅಂತಿದಾರೆ; ಸಿದ್ದರಾಮಯ್ಯ ಆರೋಪ

Budget session Siddaramaiah Modi guarantee

ಬೆಂಗಳೂರು: ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿಗಳನ್ನು (Congress Guarantees) ಕದ್ದು ಮೋದಿ ಗ್ಯಾರಂಟಿ (Modi Guarantee) ಎಂದು ಪ್ರಚಾರ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramiah) ಆರೋಪಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ (Budget Session) ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳಲ್ಲಿ (Central Government Schemes) ರಾಜ್ಯದ ಪಾಲೇ ಅಧಿಕವಿರುತ್ತದೆ ಎಂದು ಲೆಕ್ಕ ನೀಡಿದರು.

ನಾಡಿನ ಜನರಿಗೆ ಮಾಡಿರುವ ಅನ್ಯಾಯವನ್ನು ಸಮರ್ಥನೆ ಮಾಡುವ ಬಿಜೆಪಿ ನಾಯಕರಿಗೆ ಮೋದಿ ಮುಂದೆ ನಾಡಿನ ಹಕ್ಕನ್ನು, ನಾಡಿನ ಜನರ ಪಾಲನ್ನು ಕೇಳುವ ತಾಕತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ಷೇಪಿಸಿದರು.

ರಾಜ್ಯದ ಸ್ವಂತ ತೆರಿಗೆ ಶೇ 78% ಇದ್ದರೆ 22% ಕೇಂದ್ರ ಸರ್ಕಾರದಿಂದ ಬರುತ್ತದೆ. ಅದೇ ಗುಜರಾತಿಗೆ 75% ಸ್ವಂತ ತೆರಿಗೆ ಯಿಂದ ಬಂದರೆ 17% ಕೇಂದ್ರದಿಂದ ಹಾಗೂ ಸಹಾಯಧನ ಸೇರಿ 25% ಕೇಂದ್ರದಿಂದ ಹೋಗುತ್ತಿದೆ. ಉತ್ತರ ಪ್ರದೇಶಕ್ಕೆ 48% ಸ್ವಂತ ತೆರಿಗೆ ಇದ್ದರೆ 32% ಹಾಗೂ 20% ಸೇರಿ ಒಟ್ಟು 52% ಕೇಂದ್ರದಿಂದ ಹೋಗುತ್ತಿದೆ. ಆದರೆ ನಮಗೆ ಮಾತ್ರ ಕೇವಲ ಕೇವಲ ಕೇವಲ ಶೇ. 22% ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮಿಂದ ಪಡೆದ ಹಣ ನ್ಯಾಯಯುತವಾಗಿ ವಾಪಸ್‌ ಕೊಡುವುದಿಲ್ಲ

ದೇಶದಲ್ಲಿ ಸ್ವಂತ ತೆರಿಗೆ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ, ಸೇತುವೆ, ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಕೇಂದ್ರದಿಂದ ಪಾಲು ಬರುತ್ತದೆ. ರೈಲ್ವೇಗೆ ಜಮೀನು ಕೊಟ್ಟು ಯೋಜನಾ ವೆಚ್ಚದಲ್ಲಿ ಶೇ. 50ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ. ರೈಲ್ವೆ ಇಂದ ಬಂದ ಆದಾಯವನ್ನು ಅವರೇ ಇಟ್ಟುಕೊಳ್ಳುತ್ತಾರೆ. ಟೋಲ್ ಸಂಗ್ರಹದಿಂದ ಬರುವ ಆದಾಯವನ್ನೂ ನಮ್ಮ ನಾಡಿನ ಜನರಿಗೆ ವಾಪಾಸ್ ಕೊಡುವುದಿಲ್ಲ ಎಂದು ರಾಜ್ಯಗಳಿಗೆ ತೆರಿಗೆಯಲ್ಲಿ ಆಗುತ್ತಿರುವ ಅನ್ಯಾಯದ ಪಟ್ಟಿಯನ್ನೇ ಸಿದ್ದರಾಮಯ್ಯ ನೀಡಿದರು.

ಕೇಂದ್ರ ಪುರಸ್ಕೃತ ಯೋಜನೆಗಳಲ್ಲೂ ರಾಜ್ಯದ ಪಾಲೇ ಅಧಿಕ

ಕೇಂದ್ರ ಸರ್ಕಾರದ ಬಜೆಟ್ ಗಾತ್ರ 45 ಲಕ್ಷ ಕೋಟಿ ರೂ.ಗಳಿದ್ದರೂ ನಮಗೆ 50257 ಕೋಟಿ ರೂ.ಗಳನ್ನು ಮಾತ್ರ ಕೊಟ್ಟಿದ್ದಾರೆ. ಅದರಲ್ಲಿ 13 ಸಾವಿರ ಕೋಟಿ ಕೇಂದ್ರ ಪುರಸ್ಕೃತ ಯೋಜನೆಗಳೂ ಸೇರಿವೆ ಎಂದರು.
ಅದರಲ್ಲಿಯೂ ಕೇಂದ್ರದ ಪಾಲು ಕಡಿಮೆ ಇದ್ದು, ನಮ್ಮ ಪಾಲು ಹೆಚ್ಚಿದೆ ಎಂದರು. 2013 ಮಾರ್ಚ್ ವರೆಗೆ 2067 ಕಿಮೀ ರಸ್ತೆಗಳಾಗಿವೆ. ಬೇರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚಾಗಿದ್ದು, ಇಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.

ಸರ್ವಶಿಕ್ಷಣ ಅಭಿಯಾನದಡಿ 702 ಕೋಟಿ ರೂ. ಕೇಂದ್ರ ಸರ್ಕಾರ ಕೊಟ್ಟರೆ ನಮ್ಮ.ಪಾಲು 472 ಕೋಟಿ ರೂ. ಕರ್ನಾಟಕ ಸರ್ಕಾರ ಹೆಚ್ಚುವರಿಯಾಗಿ 1528 ಕೋಟಿ ರೂ.ಗಳನ್ನು ನೀಡಿದೆ. ಮಧ್ಯಾಹ್ನದ ಬಿಸಿಯೂಟದಡಿ 594 ಕೋಟಿ ಕೇಂದ್ರ ಕೊಟ್ಟರೆ ರಾಜ್ಯ ಸರ್ಕಾರ 346 ಕೋಟಿ ರೂ. ನೀಡಿ ಹೆಚ್ಚುವರಿಯಾಗಿ 967 ಕೋಟಿ ರೂ.ಗಳನ್ನು ನೀಡಿದೆ. ಆಯುಷ್ಮಾ ನ್ ಭಾರತ್ ಯೋಜನೆಯಡಿ 187 ಕೋಟಿ ರೂ.ಗಳನ್ನು ಕೇಂದ್ರ ನೀಡಿದ್ದರೆ 124 ಕೋಟಿ ರೂ ಜೊತೆಗೆ 624 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಿದೆ.

ಇದನ್ನೂ ಓದಿ : Budget Session : ಹೆಡಗೇವಾರ್‌ ಸ್ವಾತಂತ್ರ್ಯಕ್ಕೆ ಹೋರಾಡಿದ್ರಾ? ಗೋಲ್ವಲ್ಕರ್‌ ಭಾಗವಹಿಸಿದ್ರಾ; ಸಿಎಂ ಪ್ರಶ್ನೆ

ಕೇಂದ್ರದವರು ನಮ್ಮ ಗ್ಯಾರಂಟಿ ಕದ್ದಿದ್ದಾರೆ ಎಂದ ಸಿದ್ದರಾಮಯ್ಯ

ಸಾಮಾಜಿಕ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರ 525 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರ 350 ಕೋಟಿ ನೀಡಿದೆ ಅದರ ಜೊತೆಗೆ 8569 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಕೊಟ್ಟಿದೆ. ಒಟ್ಟಾರೆಯಾಗಿ 13005 ಕೋಟಿ ರೂ.ಗಳು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬರುತ್ತದೆ ಅಷ್ಟೇ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಪಿಎಂ ಕೃಷಿ ಸಿಂಚಯಿ ಯೋಜನೆಯಡಿ 57% ಕೇಂದ್ರ ಸರ್ಕಾರ ಹಾಗೂ 33% ರಾಜ್ಯ ಸರ್ಕಾರ ನೀಡುತ್ತದೆ ಅದರ ಜೊತೆ ಶೇ. 35ರಷ್ಟು ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ನೀಡುತ್ತದೆ. ಪಿಎಂ ಆವಾಸ್ ಯೋಜನೆಯಡಿ 5-6 ಲಕ್ಷ ರೂ. ರಾಜ್ಯ ಸರ್ಕಾರ ನೀಡಿದರೆ, ಕೇಂದ್ರ 1.50.ಲಕ್ಷ ರೂ. ನೀಡುತ್ತದೆ. ಅದರ ಜೊತೆಗೆ 1.38 ಲಕ್ಷ ಜಿಎಸ್‌ಟಿ ಸೇರಿ ಒಂದು ಮನೆಗೆ ಕೇಂದ್ರ ಸರ್ಕಾರ ನೀಡುವುದು ಕೇವಲ 12 ಸಾವಿರ ರೂ ಮಾತ್ರ ಎಂದರು. ಇದರಲ್ಲಿ ನಮ್ಮ ಹೆಸರಿಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಸಿಎಂ ಮೋದಿ ಗ್ಯಾರಂಟಿ ಎಂದು ನಮ್ಮ ಗ್ಯಾರಂಟಿ ಕದ್ದಿದ್ದಾರೆ ಎಂದರು.

Exit mobile version