ವಿಧಾನ ಪರಿಷತ್: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಚರ್ಚೆಗಳು ಕಾವೇರುತ್ತಿವೆ. ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಬಗ್ಗೆ ಗಹನವಾದ ಚರ್ಚೆಗಳು ನಡೆದಿವೆ. ಈ ವೇಳೆ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಕಳೆದ ಒಂದು ವರ್ಷದಿಂದ ಆಗಿರುವ ಹೂಡಿಕೆಗಳ ಒಪ್ಪಂದ ಎಷ್ಟು? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಹೂಡಿಕೆ ಪರ್ಸೆಂಟೇಜ್ ಕೇವಲ ಶೇ. 16.66 ಮಾತ್ರ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಎಂ.ಬಿ. ಪಾಟೀಲ್, ಒಪ್ಪಂದದ ಪ್ರಕಾರ 74 ಸಾವಿರ ಕೋಟಿ ಹೂಡಿಕೆ 70 ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಉತ್ತರಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ನಾನು ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ ಹೂಡಿಕೆ ಪರ್ಸೆಂಟೇಜ್ ಕೇವಲ ಶೇ. 16.66 ಮಾತ್ರ ಎಂದು ಉತ್ತರ ಬಂದಿದೆ. ಅಲ್ಲದೆ, ಇದರ ಕಾರ್ಯಾರಂಭವನ್ನು ಮುಂದೆ ಆರಂಭ ಮಾಡಲಾಗುವುದು ಎಂದು ಹೇಳುವ ಮೂಲಕ ಭವಿಷ್ಯ ರೂಪದಲ್ಲಿ ಎಂಬ ಉತ್ತರವನ್ನು ಕೊಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: Ranveer Singh: ನೀಲಿ ಚಿತ್ರತಾರೆ ಜತೆಗಿನ ರಣವೀರ್ ಸಿಂಗ್ ಜಾಹೀರಾತಿಗೆ ವಿರೋಧ ಏಕೆ? ವಿಡಿಯೊ ನೋಡಿ!
ಇದಲ್ಲದೆ, ಬೆಂಗಳೂರು ಹೊರತುಪಡಿಸಿ ಬೇರೆ ಕಡೆ ಎಲ್ಲಿ ಹೂಡಿಕೆ ಆಗಿದೆ ಎಂಬ ನನ್ನ ಪ್ರಶ್ನೆಗೆ ಸ್ಟ್ರಾಟರ್ಜಿಕ್ ಸಮಿತಿ ಮಾಡಲಾಗಿದೆ ಅಂತ ಮಾತ್ರ ಹೇಳಿದ್ದಾರೆ. ನಾನು ಪ್ರಸ್ತುತ ಎಷ್ಟು ಉದ್ಯೋಗ ಸೃಷ್ಟಿ ಆಗಿದೆ ಅಂತ ಕೇಳಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಹೇಳಿದರು.
ಬೆಂಗಳೂರು ಆಚೆಗೆ 217 ಯೋಜನೆ: ಸಚಿವ ಎಂಬಿ ಪಾಟೀಲ್
ಇದಕ್ಕೆ ಸಚಿವ ಎಂ.ಬಿ ಪಾಟೀಲ್ ಉತ್ತರ ನೀಡಿ, ಒಟ್ಟಾರೆಯಾಗಿ 12 ಬಂಡವಾಳ ಹೂಡಿಕೆ ಒಪ್ಪಂದ ಆಗಿದೆ. ಬೃಹತ್ ಕೈಗಾರಿಕೆಯಲ್ಲಿ ತನ್ನದೇ ಆದ ನಿಯಮ ಇದೆ. ಒಪ್ಪಂದದ ಪ್ರಕಾರ 74 ಸಾವಿರ ಕೋಟಿ ರೂಪಾಯಿ ಹೂಡಿಕೆ ಆಗುತ್ತಿದ್ದು, ಇದರಿಂದ 70 ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ. ಬಿಯಾಂಡ್ ಬೆಂಗಳೂರು (ಬೆಂಗಳೂರು ಆಚೆಗೆ) 217 ಯೋಜನೆ ಇದೆ. ಈ ಯೋಜನೆಗಳು ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಬರಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಇದನ್ನೂ ಓದಿ: Karnataka Budget Session 2024: ನೀರು ಕೊಡಿ ಎಂದರೆ ನೀರಿನ ದರ ಏರಿಸಿಲ್ಲ ಎಂದ ಡಿಕೆಶಿ! ಕೊನೆಗೆ ಸಮಸ್ಯೆ ಬಗೆಹರಿಯಿತಾ?
ಅಲ್ಲದೆ, ಇನ್ವೆಸ್ಟ್ ಕರ್ನಾಟಕ ಮರು ಯೋಜನೆ ಮಾಡಲಾಗಿದೆ. ಅಧ್ಯಕ್ಷನಾಗಿ ನಾನಿದ್ದೇನೆ. ಇತರೆ ಪ್ರಮುಖ ಸಂಸ್ಥೆ ಮುಖ್ಯಸ್ಥರು ಉಪಾಧ್ಯಕ್ಷರು ಹಾಗೂ ಸದಸ್ಯರಾಗಿರುತ್ತಾರೆ. ಸ್ಟ್ರಾಟರ್ಜಿಕ್ ಇನ್ವೆಸ್ಟ್ ಕಮಿಟಿ ಅಂದರೆ ಏರೋಸ್ಪೇಸ್ ಎಲ್ಲವೂ ಬರಲಿದೆ. ಇದರಿಂದಾಗಿ ಸಾವಿರಾರು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಉತ್ತರ ನೀಡಿದರು.