ಆಡು ಮುಟ್ಟದ ಸೊಪ್ಪಿಲ್ಲ ಹಾಗೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗದ ವಿಷಯಗಳೇ ಇಲ್ಲ ಎಂದರೂ ತಪ್ಪಾಗಲಾರದು. ಇಲ್ಲಿ ಅತ್ಯಂತ ಗಂಭೀರ ವಿಚಾರದಿಂದ ಹಿಡಿದು ತುಂಬ ಫನ್ನಿಯಾದ ವಿಚಾರದವರೆಗೆ ಎಲ್ಲವೂ ಇರುತ್ತವೆ. ಅದರಲ್ಲಿ ಕೆಲವು ವಿಶೇಷ ಎನ್ನಿಸುವ ವಿಡಿಯೋಗಳು, ಫೋಟೋಗಳು ಅತಿ ಹೆಚ್ಚು ವೈರಲ್ ಆಗುತ್ತವೆ. ಅದರಲ್ಲೊಂದು ಈ ತಾಯಿ-ಮಗನ ವಿಡಿಯೋ.
ಮಹಿಳೆಯೊಬ್ಬರು ತನ್ನ ಪುಟ್ಟ ಮಗನಿಗೆ ಈಜು ಕಲಿಸಲು ಪ್ರಯತ್ನಿಸುವ ವಿಡಿಯೋ ಇದು. ತಾಯಿ ಮತ್ತು ಮಗು ಇಬ್ಬರೂ ಈಜುಡಿಗೆಯಲ್ಲಿ ನಿಂತಿದ್ದಾರೆ. ಮಹಿಳೆ ಸ್ವಿಮ್ಮಿಂಗ್ ಪೂಲ್‌ನ ಮೆಟ್ಟಿಲಿನ ಅಂಚಿನಲ್ಲಿ ನಿಂತು ಮಗನಿಗೆ, ಈಜುಕೊಳಕ್ಕೆ ಧುಮುಕುವುದು ಹೇಗೆಂದು ಮಾರ್ಗದರ್ಶನ ಮಾಡುತ್ತಿದ್ದರು. ಹಾಗೇ ತೋರಿಸುತ್ತ ಮೆಟ್ಟಿಲ ಅಂಚಿಗೆ ಬಂದರು. ಹಾಗೇ ಬಂದಿದ್ದೇ ಮೆಟ್ಟಿಲ ಕೆಳಗೆ ಜಾರುತ್ತ ಬಂದು ಕೊಳಕ್ಕೆ ಬಿದ್ದಿದ್ದಾರೆ. ಈ ವಿಡಿಯೋ ನೋಡಲು ಸಿಕ್ಕಾಪಟೆ ಫನ್ನಿಯಾಗಿದೆ. ವಿಡಿಯೋ ಮಾಡುತ್ತಿದ್ದವರು ದೊಡ್ಡದಾಗಿ ನಕ್ಕಿದ್ದಾರೆ. ಹಳ್ಳಕ್ಕೆ ಬಿದ್ದ ಮಹಿಳೆಯೂ ನಕ್ಕಿದ್ದಾರೆ. ಹಾಗೇ, ವಿಡಿಯೋವನ್ನು Viral Hog ಎಂಬ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್ ಮಾಡಲಾಗಿದೆ.
ಆದರೆ ಇದನ್ನು ನೋಡಿದ ನೆಟ್ಟಿಗರು ನಗುವ ಜತೆ ಕನಿಕರವನ್ನೂ ವ್ಯಕ್ತಪಡಿಸಿದ್ದಾರೆ. ʼಅದೃಷ್ಟಕ್ಕೆ ಮಹಿಳೆ ನೀರಿಗೆ ಬಿದ್ದರು. ಅವರು ಮೆಟ್ಟಿಲ ಮೇಲೇ ಉರುಳಿ ಬಿದ್ದಿದ್ದರೆ ಗಾಯವಾಗುತ್ತಿತ್ತುʼ ಎಂದು ಹೇಳಿದ್ದಾರೆ. ʼಮಹಿಳೆಗೆ ಏನೂ ಆಗಲಿಲ್ಲ ಹೀಗಾಗಿ ನಗಬಹುದು. ಒಮ್ಮೆ ಅವರ ಕಾಲು ಪಾದ ಉಳುಕಿದ್ದರೆ ಕಷ್ಟವಾಗುತ್ತಿತ್ತುʼ ಎಂದೂ ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಭಯ ಹುಟ್ಟಿಸುವ ಮದುವೆ; ಹೂವಲ್ಲ, ಹಾವಿನ ಹಾರ ಹಾಕಿಕೊಂಡ ವಧು-ವರ