ಮೊಸಳೆ ತುಂಬ ಅಪಾಯಕಾರಿ. ನೀರಿನಲ್ಲಿಯೇ ಇರುವ ಈ ಸರೀಸೃಪ ಆಗಾಗೊಮ್ಮೆ ದಡಕ್ಕೆ ಬಂದು ಬಿಸಿಲಿಗೆ ಮೈಯೊಡ್ಡುತ್ತದೆ ಅಥವಾ ತುಂಬ ಹಸಿವಿದ್ದಾಗ ಬೇಟೆಗಾಗಿ ಬಂದು ಮಲಗುತ್ತದೆ. ಮೊಸಳೆ ನರಭಕ್ಷಕ ಎಂಬುದು ನಮಗೆಲ್ಲ ಗೊತ್ತು. ಸ್ವಲ್ಪ ಎಚ್ಚರ ತಪ್ಪಿದರೂ ಹಿಡಿದು ಎಳೆದು ಹಾಗೇ ಹೊಟ್ಟೆಗೆ ಹಾಕಿಕೊಳ್ಳುತ್ತದೆ. ಮೊಸಳೆಗಳು ಮನುಷ್ಯನನ್ನು ಬೇಟೆಯಾಡಿದ ಫೋಟೋ, ವಿಡಿಯೋವನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ ಎಂದಾದರೂ ಮೊಸಳೆ ಮನುಷ್ಯನನ್ನು ಅಟ್ಟಿಸಿಕೊಂಡು ಬಂದಿದ್ದನ್ನು ನೋಡಿದ್ದೀರಾ?
ಮೊಸಳೆಗಳಿಗೆ ಕಾಲಿದ್ದರೂ ಹೆಚ್ಚಿನ ಸಮಯ ಅವು ತೆವಳಿಯೇ ಸಾಗುತ್ತವೆ. ಕಾಲಿನ ಮೂಲಕ ಓಡುವುದು, ಜಂಪ್ ಮಾಡುವುದು ಅಪರೂಪ. ಅಷ್ಟಕ್ಕೂ ನೀರಿದ್ದಲ್ಲಿಂದ ತುಂಬ ದೂರ ಅವು ಹೋಗುವುದು ಕಡಿಮೆ. ಹೀಗಿರುವಾಗ Gatorland Orlando ಎಂಬ ಫೇಸ್ಬುಕ್ ಪೇಜ್ನಲ್ಲಿ ಶೇರ್ ಆದ ಒಂದು ವಿಡಿಯೋ ಖಂಡಿತ ಅಚ್ಚರಿ ಮೂಡಿಸುತ್ತದೆ.
ಫ್ಲೋರಿಡಾದಲ್ಲಿರುವ Gatorland ವನ್ಯಜೀವಿ ಸಂರಕ್ಷಿತ ತಾಣದಲ್ಲಿ ಸಾಕಷ್ಟು ಮೊಸಳೆಗಳು ಇವೆ. ಅದು ಬಹುಮುಖ್ಯ ಪ್ರವಾಸಿಗರ ತಾಣವೂ ಹೌದು. ಅಲ್ಲಿ ಚಿತ್ರೀಕರಿಸಲಾದ ವಿಡಿಯೋ ಈಗ ವೈರಲ್ ಆಗುತ್ತಿದೆ. ಅದೊಂದು ಬಾವಿಯ ಮಾದರಿಯ ಸ್ಥಳ. ಸುತ್ತಲೂ ಸಿಮೆಂಟ್ ಬೇಲಿಯಿದೆ. ಅಲ್ಲಿ ವ್ಯಕ್ತಿಯೊಬ್ಬ ಓಡುತ್ತಿದ್ದರೆ, ಅವನನ್ನು ಮೊಸಳೆಯೊಂದು ಅಟ್ಟಿಸಿಕೊಂಡು ಹೋಗುತ್ತಿದೆ. ಮೊಸಳೆ ತನ್ನ ಕಾಲುಗಳನ್ನು ಬಳಸಿ ಜಿಗಿಯುತ್ತ, ಓಡುತ್ತಿರುವುದನ್ನು ನೋಡಬಹುದು. ಹೀಗೆ ಮೊಸಳೆಯ ಜತೆ ಫನ್ ಮಾಡಿದ ವ್ಯಕ್ತಿ, ಆ ಅಭಯಾರಣ್ಯದ ಸಿಬ್ಬಂದಿ ಆಗಿದ್ದು, ಸೂಕ್ತ ತರಬೇತಿ ಪಡೆದವರಾಗಿದ್ದಾರೆ.
ವಿಡಿಯೋ ಶೇರ್ ಆದಾಗಿಂದ ಭರ್ಜರಿ ವೀಕ್ಷಣೆ ಕಾಣುತ್ತಿದೆ. 11 ಸಾವಿರಕ್ಕೂ ಅಧಿಕ ಬಾರಿ ಶೇರ್ ಆಗಿದೆ. ವಿಡಿಯೋ ನೋಡಿದ ಅನೇಕರು ಆಶ್ಚರ್ಯವನ್ನು ಹೊರಹಾಕಿದ್ದಾರೆ. ‘ಮೊಸಳೆ ಹೀಗೆ ಜಂಪ್ ಮಾಡುವುದನ್ನಾಗಲೀ, ಓಡುವುದನ್ನಾಗಲೀ ನೋಡೇ ಇಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇಲ್ಲಿದೆ ನೋಡಿ, ನಿಮಗೂ ಅಚ್ಚರಿ ಹುಟ್ಟಿಸುವ ವಿಡಿಯೋ..
ಇದನ್ನೂ ಓದಿ: ನದಿಗೆ ಹಾರಿ ಮೊಸಳೆಯನ್ನು ಬೇಟೆಯಾಡಿದ ಚಿರತೆ; ಮೈ ನವಿರೇಳಿಸುವ ಈ ವಿಡಿಯೋ ಮಿಸ್ ಮಾಡ್ಬೇಡಿ !