ಮೊಸಳೆ ಜಂಪ್​ ಮಾಡಿ, ಓಡೋದನ್ನು ಎಂದಾದರೂ ನೋಡಿದ್ದೀರಾ? ಅಚ್ಚರಿ ಹುಟ್ಟಿಸುವ ವಿಡಿಯೋ ಇಲ್ಲಿದೆ ! - Vistara News

ವೈರಲ್ ನ್ಯೂಸ್

ಮೊಸಳೆ ಜಂಪ್​ ಮಾಡಿ, ಓಡೋದನ್ನು ಎಂದಾದರೂ ನೋಡಿದ್ದೀರಾ? ಅಚ್ಚರಿ ಹುಟ್ಟಿಸುವ ವಿಡಿಯೋ ಇಲ್ಲಿದೆ !

ಮೊಸಳೆಗಳಿಗೆ ಕಾಲಿದ್ದರೂ ಅವರು ತೆವಳುವುದೇ ಹೆಚ್ಚು. ಆದರೆ ಈ ವಿಡಿಯೋದಲ್ಲಿ ಮೊಸಳೆ, ಮನುಷ್ಯನ್ನು ಹಿಡಿಯಬೇಕು ಎಂದು ಫುಲ್ ಜಂಪ್​ ಮಾಡುತ್ತ ಓಡುವುದನ್ನು ಕಾಣಬಹುದು.

VISTARANEWS.COM


on

Viral Video
ಮೊಸಳೆಯ ಜಂಪ್​​
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊಸಳೆ ತುಂಬ ಅಪಾಯಕಾರಿ. ನೀರಿನಲ್ಲಿಯೇ ಇರುವ ಈ ಸರೀಸೃಪ ಆಗಾಗೊಮ್ಮೆ ದಡಕ್ಕೆ ಬಂದು ಬಿಸಿಲಿಗೆ ಮೈಯೊಡ್ಡುತ್ತದೆ ಅಥವಾ ತುಂಬ ಹಸಿವಿದ್ದಾಗ ಬೇಟೆಗಾಗಿ ಬಂದು ಮಲಗುತ್ತದೆ. ಮೊಸಳೆ ನರಭಕ್ಷಕ ಎಂಬುದು ನಮಗೆಲ್ಲ ಗೊತ್ತು. ಸ್ವಲ್ಪ ಎಚ್ಚರ ತಪ್ಪಿದರೂ ಹಿಡಿದು ಎಳೆದು ಹಾಗೇ ಹೊಟ್ಟೆಗೆ ಹಾಕಿಕೊಳ್ಳುತ್ತದೆ. ಮೊಸಳೆಗಳು ಮನುಷ್ಯನನ್ನು ಬೇಟೆಯಾಡಿದ ಫೋಟೋ, ವಿಡಿಯೋವನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ ಎಂದಾದರೂ ಮೊಸಳೆ ಮನುಷ್ಯನನ್ನು ಅಟ್ಟಿಸಿಕೊಂಡು ಬಂದಿದ್ದನ್ನು ನೋಡಿದ್ದೀರಾ?

ಮೊಸಳೆಗಳಿಗೆ ಕಾಲಿದ್ದರೂ ಹೆಚ್ಚಿನ ಸಮಯ ಅವು ತೆವಳಿಯೇ ಸಾಗುತ್ತವೆ. ಕಾಲಿನ ಮೂಲಕ ಓಡುವುದು, ಜಂಪ್​ ಮಾಡುವುದು ಅಪರೂಪ. ಅಷ್ಟಕ್ಕೂ ನೀರಿದ್ದಲ್ಲಿಂದ ತುಂಬ ದೂರ ಅವು ಹೋಗುವುದು ಕಡಿಮೆ. ಹೀಗಿರುವಾಗ Gatorland Orlando ಎಂಬ ಫೇಸ್​​ಬುಕ್​​ ಪೇಜ್​​ನಲ್ಲಿ ಶೇರ್​ ಆದ ಒಂದು ವಿಡಿಯೋ ಖಂಡಿತ ಅಚ್ಚರಿ ಮೂಡಿಸುತ್ತದೆ.

ಫ್ಲೋರಿಡಾದಲ್ಲಿರುವ Gatorland ವನ್ಯಜೀವಿ ಸಂರಕ್ಷಿತ ತಾಣದಲ್ಲಿ ಸಾಕಷ್ಟು ಮೊಸಳೆಗಳು ಇವೆ. ಅದು ಬಹುಮುಖ್ಯ ಪ್ರವಾಸಿಗರ ತಾಣವೂ ಹೌದು. ಅಲ್ಲಿ ಚಿತ್ರೀಕರಿಸಲಾದ ವಿಡಿಯೋ ಈಗ ವೈರಲ್ ಆಗುತ್ತಿದೆ. ಅದೊಂದು ಬಾವಿಯ ಮಾದರಿಯ ಸ್ಥಳ. ಸುತ್ತಲೂ ಸಿಮೆಂಟ್ ಬೇಲಿಯಿದೆ. ಅಲ್ಲಿ ವ್ಯಕ್ತಿಯೊಬ್ಬ ಓಡುತ್ತಿದ್ದರೆ, ಅವನನ್ನು ಮೊಸಳೆಯೊಂದು ಅಟ್ಟಿಸಿಕೊಂಡು ಹೋಗುತ್ತಿದೆ. ಮೊಸಳೆ ತನ್ನ ಕಾಲುಗಳನ್ನು ಬಳಸಿ ಜಿಗಿಯುತ್ತ, ಓಡುತ್ತಿರುವುದನ್ನು ನೋಡಬಹುದು. ಹೀಗೆ ಮೊಸಳೆಯ ಜತೆ ಫನ್​ ಮಾಡಿದ ವ್ಯಕ್ತಿ, ಆ ಅಭಯಾರಣ್ಯದ ಸಿಬ್ಬಂದಿ ಆಗಿದ್ದು, ಸೂಕ್ತ ತರಬೇತಿ ಪಡೆದವರಾಗಿದ್ದಾರೆ.

ವಿಡಿಯೋ ಶೇರ್ ಆದಾಗಿಂದ ಭರ್ಜರಿ ವೀಕ್ಷಣೆ ಕಾಣುತ್ತಿದೆ. 11 ಸಾವಿರಕ್ಕೂ ಅಧಿಕ ಬಾರಿ ಶೇರ್ ಆಗಿದೆ. ವಿಡಿಯೋ ನೋಡಿದ ಅನೇಕರು ಆಶ್ಚರ್ಯವನ್ನು ಹೊರಹಾಕಿದ್ದಾರೆ. ‘ಮೊಸಳೆ ಹೀಗೆ ಜಂಪ್​ ಮಾಡುವುದನ್ನಾಗಲೀ, ಓಡುವುದನ್ನಾಗಲೀ ನೋಡೇ ಇಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇಲ್ಲಿದೆ ನೋಡಿ, ನಿಮಗೂ ಅಚ್ಚರಿ ಹುಟ್ಟಿಸುವ ವಿಡಿಯೋ..

ಇದನ್ನೂ ಓದಿ: ನದಿಗೆ ಹಾರಿ ಮೊಸಳೆಯನ್ನು ಬೇಟೆಯಾಡಿದ ಚಿರತೆ; ಮೈ ನವಿರೇಳಿಸುವ ಈ ವಿಡಿಯೋ ಮಿಸ್ ಮಾಡ್ಬೇಡಿ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Manu Bhaker : ಮದುವೆಯಾಗ್ತೀರಾ ಹೇಗೆ? ನೀರಜ್​ ಚೋಪ್ರಾ- ಮನು ಭಾಕರ್​ ಭೇಟಿಯ ವಿಡಿಯೊ ವೈರಲ್ ಮಾಡಿದ ನೆಟ್ಟಿಗರು

Manu Bhaker :

VISTARANEWS.COM


on

Manu Bhaker
Koo

ನವದೆಹಲಿ: ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಮತ್ತು ಶೂಟರ್ ಮನು ಭಾಕರ್ (Manu Bhaker) ಕಾರ್ಯಕ್ರಮವೊಂದರಲ್ಲಿ ಗುಟ್ಟಾಗಿ ಮಾತನಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಭಾರತದ ಕ್ರೀಡಾ ಕ್ಷೇತ್ರ ನವ ತಾರೆಗಳಾಗಿರುವ ಅವರಿಬ್ಬರೂ ಪರಸ್ಪರ ಸ್ನೇಹದ ಬಲೆಯಲ್ಲಿ ಬಿದ್ದಿದ್ದಾರೆ ಎಂಬುದಾಗಿ ಅಭಿಮಾನಿಗಳ ಅನುಮಾನ. ಅವರಿಬ್ಬರೂ ಮಾತನಾಡುತ್ತಿರುವ ವಿಡಿಯೊವನ್ನು ವೈರಲ್ ಮಾಡಿರುವ ನೆಟ್ಟಿಗರು ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ಇಬ್ಬರೂ ಮಾತನಾಡುವಾರ ಪರಸ್ಪರ ದೃಷ್ಟಿ ನೆಡದ ಕಾರಣ ಇವರೊಳಗೇನೋ ನಡಿತಾ ಇದೆ ಎಂಬುದಾಗಿ ನೆಟ್ಟಿಗರು ಅಂದಾಜಿಸಿದ್ದಾರೆ.

ಪ್ಯಾರಿಸ್ ಕ್ರೀಡಾಕೂಟದಲ್ಲಿ ಜಾವೆಲಿನ್​ ಎಸೆತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ನೀರಜ್ ಇತಿಹಾಸ ನಿರ್ಮಿಸಿದ್ದರು. ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನ ಗೆದ್ದ ಕಾರಣ ಬೆಳ್ಳಿಯ ಪದಕ ಪಡೆಯಬೇಕಾಯಿತು. ಆದಾಗ್ಯೂ ಸತತ ಎರಡು ಒಲಿಂಪಿಕ್ಸ್​ಗಳಲ್ಲಿ ಪದಕ ಗೆದ್ದ ಅವರ ಸಾಧನೆ ಅಮೋಘ. ಇನ್ನು ಮನು ಭಾಕರ್ ಭಾರತಕ್ಕಾಗಿ ಒಲಿಂಪಿಕ್ಸ್​​​ನ ಒಂದೇ ಆವೃತ್ತಿಯಲ್ಲಿ ಎರಡು ಕಂಚಿನ ಪದಕಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಕೂಟ ಕ್ರೀಡಾ ಕ್ಷೇತ್ರದ ತಾರೆಯಾಗಿ ಮಿಂಚಿದ್ದಾರೆ. ಅವರು ಭಾರತ ಪಾಲಿಗೆ ಭರವಸೆಯ ಶೂಟರ್ ಎನಿಸಿಕೊಂಡಿದ್ದಾರೆ.

ನೀರಜ್​ ಹಾಗೂ ಮನು ಹರಿಯಾಣದ ಮೂಲದವರು. ಇಬ್ಬರೂ ಕ್ರೀಡೆಯ ಪ್ರೇರಕ ಕುಟುಂಬಕ್ಕೆ ಸೇರಿದವರು. ಹೀಗಾಗಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಮಾತನಾಡಿದ್ದು ಅಭಿಮಾನಿಗಳಲ್ಲಿ ನೂರು ಪ್ರಶ್ನೆಗಳನ್ನು ಸೃಷ್ಟಿಸಿತು. ಅವರು ಡೇಟಿಂಗ್ ಮಾಡುತ್ತಿರಬಹುದು ಎಂದು ಹಲವರು ಅಂದಾಜಿಸಿದ್ದಾರೆ. ಅವರಿಬ್ಬರು ಸಂಬಂಧದಲ್ಲಿಲ್ಲ ಎಂದು ತಿಳಿದಿದ್ದರೂ ಅನೇಕ ನಿಷ್ಠಾವಂತ ಅಭಿಮಾನಿಗಳು ಅವರು ದಂಪತಿಗಳಾಗಬೇಕೆಂದು ಆಶಿಸಿದರು. ಇಬ್ಬರೂ ಮಾತನಾಡುವ ವೀಡಿಯೊದ ಬಗ್ಗೆ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಸಿಕ್ಕಿದ ಕೋಟಿಗಟ್ಟಲೆ ಬಹುಮಾನಗಳ ವಿವರ ಇಲ್ಲಿದೆ

ಪರಸ್ಪರ ಮಖ ನೋಡಿಕೊಳ್ಳದ ಅಥ್ಲೀಟ್​ಗಳು

ಭಾರತೀಯ ಈ ನವ ಕ್ರೀಡಾ ತಾರೆಯರು ಪರಸ್ಪರ ಮಾತನಾಡುತ್ತಿರುವಾಗ ಮುಖ ನೋಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಇದು ಪ್ರೀತಿಯಲ್ಲಿ ಮಾತ್ರ ಸಾಧ್ಯ ಎಂಬ ರೀತಿಯಲ್ಲಿ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ವಿರುದ್ಧ ಲಿಂಗದವರೊಂದಿಗೆ ಸಂವಹನ ನಡೆಸುವಾಗ ಇಂತಹ ನಾಚಿಕೆ ಭಾರತದಲ್ಲಿ ಸಾಮಾನ್ಯ ಎಂದು ಕೆಲವರು ವಾದಿಸಿದಿರೆ ಇತರರು ಕ್ರೀಡಾಪಟುಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚೋಪ್ರಾ ಸಭ್ಯ ಹಾಗೂ ನಾಚಿಕೆ ಸ್ವಭಾವದವರು. ಅವರು ಜಾಗತಿಕ ಮಟ್ಟದಲ್ಲಿ ತಮ್ಮ ವಿಶ್ವಾಸ ತೋರಿಸಿದ್ದಾರೆ. ಇಲ್ಲೆಲ್ಲ ಅಗತ್ಯವೇ ಇಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಇದೇ ರೀತಿ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರು ನೀರಜ್ ಅವರ ಕೈ ಹಿಡಿದುಕೊಂಡು ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾಕರ್ ಅವರ ತಾಯಿ ನೀರಜ್ ಅವರನ್ನು ತಮ್ಮ ಮಗಳಿಗೆ ಸಂಭಾವ್ಯ ಜೋಡಿಯಾಗಿ ನಿರ್ಣಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅನೇಕ ಬಳಕೆದಾರರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

Continue Reading

Latest

Viral News : ಪತ್ನಿಯ ಮರ್ಮಾಂಗದೊಳಗೆ ಲಟ್ಟಣಿಗೆ ತುರುಕಿ ಭೀಕರವಾಗಿ ಕೊಂದ ಪತಿ

Viral News: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಖಾಸಗಿ ಭಾಗಕ್ಕೆ ಚಪಾತಿ ಮಾಡುವ ಲಟ್ಟಣಿಗೆ ತೂರಿಸಿ ಥಳಿಸಿ ಕೊಂದಿದ್ದಾನೆ. ಆರೋಪಿ ಪತಿ ತನ್ನ ಸಹೋದರರೊಂದಿಗೆ ಸೇರಿ ಪತ್ನಿಯ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಮಹಿಳೆಯ ಗುಪ್ತಾಂಗದೊಳಗೆ ಲಟ್ಟಣಿಗೆ ತೂರಿಸಿದ್ದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಭೀಕರ ಕೃತ್ಯ ನಾಗರಿಕ ಸಮಾಜವನ್ನು ತಲ್ಲಣಿಸುವಂತಿದೆ.

VISTARANEWS.COM


on

Viral News
Koo


ಪತಿ ಪತ್ನಿಯ ಮೇಲೆ ದೌರ್ಜನ್ಯ ಎಸಗುವಂತಹ ಘಟನೆಗಳೂ ವರದಿಯಾಗುತ್ತಲೇ ಇರುತ್ತವೆ. ಕುಡಿದ ಮತ್ತಿನಲ್ಲಿ, ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ ನೀಡುವ ಪತಿಮಹಾಶಯರು ಅನೇಕರಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಬಹಳ ಕ್ರೂರವಾಗಿ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News)ಆಗಿ ಜನರನ್ನು ಬೆಚ್ಚಿಬೀಳಿಸಿದೆ.

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಗುಪ್ತಾಂಗದೊಳಗೆ ಚಪಾತಿ ಮಾಡುವ ಲಟ್ಟಣಿಗೆ ತೂರಿಸಿ ಥಳಿಸಿ ಕೊಂದಿದ್ದಾನೆ. ಆರೋಪಿ ಪತಿ ತನ್ನ ಸಹೋದರರೊಂದಿಗೆ ಸೇರಿ ಪತ್ನಿಯ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಮಹಿಳೆಯ ಖಾಸಗಿ ಭಾಗಗಳ ಒಳಗೆ ಚಪಾತಿ ಮಾಡುವ ಲಟ್ಟಣಿಗೆ ತೂರಿಸಿದ್ದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಹಲ್ಲೆಯಿಂದಾಗಿ ಆಕೆಯ ದೇಹದಾದ್ಯಂತ ಅನೇಕ ಗಾಯಗಳ ಗುರುತುಗಳು ಸಹ ಇದ್ದವು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಲಟ್ಟಣಿಗೆ ಮಹಿಳೆಯ ಕರುಳಿನವರೆಗೂ ತಲುಪಿ ಹಾನಿಗೊಳಿಸಿದ್ದರಿಂದ ಆಕೆ ಸಾವನಪ್ಪಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ.

ಆರೋಪಿ ಪತಿಯನ್ನು ಸುರ್ಜೀತ್ ಎಂದು ಗುರುತಿಸಲಾಗಿದ್ದು, ಸೋಮವಾರ (ಆಗಸ್ಟ್ 5)ರಂದು ರಾತ್ರಿ ತನ್ನ 28 ವರ್ಷದ ಪತ್ನಿ ರೇಷ್ಮಾ ಅವರೊಂದಿಗೆ ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಮೊದಲು ರೇಷ್ಮಾಳನ್ನು ಕಟ್ಟಿಹಾಕಿ ತನ್ನ ಸಹೋದರರೊಂದಿಗೆ ಮನೆಯಲ್ಲಿ ಥಳಿಸಿದ್ದಾನೆ. ಇದರಿಂದ ಆಕೆ ಸಾವನಪ್ಪಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಆತನ ಘೋರ ಕೃತ್ಯ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ತನ್ನ ಹೆಂಡತಿಯ ಖಾಸಗಿ ಭಾಗಗಳಿಗೆ ಲಟ್ಟಣಿಗೆ ಹಾಕಿ ಚಿತ್ರಹಿಂಸೆ ನೀಡಿ ಅವಳನ್ನು ಕಚ್ಚಿ ಮತ್ತು ಬೆಲ್ಟ್‌ನಿಂದ ಹೊಡೆದು ಕೊಂದಿದ್ದಾನೆ ಎಂಬುದು ತಿಳಿದು ಬಂದಿದೆ.

ವರದಿ ಪ್ರಕಾರ, ಆರೋಪಿ ಸುರ್ಜೀತ್ 10 ವರ್ಷಗಳ ಹಿಂದೆ ಸಂತ್ರಸ್ತೆ ರೇಷ್ಮಾಳನ್ನು ಮದುವೆಯಾಗಿದ್ದ. ಅವರು ಆಗಾಗ ಜಗಳವಾಡುತ್ತಿದ್ದರು. ಆದರೆ, ಸೋಮವಾರ (ಆಗಸ್ಟ್ 5) ರಾತ್ರಿ, ಸುರ್ಜೀತ್ ಕುಡಿದ ಅಮಲಿನಲ್ಲಿ ಮನೆಗೆ ಬಂದು ತನ್ನ ಪತ್ನಿ ರೇಷ್ಮಾಳೊಂದಿಗೆ ಜಗಳವಾಡಿ, ನಂತರ ಆಕೆಯನ್ನು ಥಳಿಸಿ ಚಿತ್ರಹಿಂಸೆ ನೀಡುವ ಮೂಲಕ ಇಂತಹ ಘೋರ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಆತನ ಕ್ರೌರ್ಯವನ್ನು ಕಂಡು ಜನರು ಹಾಗೂ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ:  ಕಂಠ ಪೂರ್ತಿ ಕುಡಿದ ಪಿಯು ಹುಡುಗನ ಕಾರು ಚಾಲನೆ; ಜೀವ ಕಳೆದುಕೊಂಡ ಅಮಾಯಕ
ಸುರ್ಜೀತ್ ಹಾಗೂ ಆತನ ಇಬ್ಬರು ಸಹೋದರರು ಸಹ ತನ್ನ ಸಹೋದರಿಯನ್ನು ಥಳಿಸಿ ಚಿತ್ರಹಿಂಸೆ ನೀಡುವಲ್ಲಿ ಭಾಗಿಯಾಗಿದ್ದಾರೆ ಎಂದು ರೇಷ್ಮಾ ಸಹೋದರ ಅವಧೇಶ್ ಆರೋಪಿಸಿದ್ದಾರೆ. ರೇಷ್ಮಾ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Continue Reading

ದೇಶ

Viral Video: ಪ್ಯಾರಿಸ್‌ ಒಲಿಂಪಿಕ್‌ ಸಮಾರೋಪ ಸಮಾರಂಭದಲ್ಲಿ ನಟನಿಗೆ ಕಿಸ್ಸಿಂಗ್-‌ ವಿಡಿಯೋ ವೈರಲ್‌

Viral Video: ಮಹಿಳೆಯ ಕೃತ್ಯದ ದೃಶ್ಯಾವಳಿಗಳು ವೈರಲ್ ಆಗಿದ್ದು, ಅಭಿಮಾನಿಗಳು ಈ ಬಗ್ಗೆ ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಅಭಿಮಾನಿಗಳಿಗೆ ಶುಭಾಶಯ ಕೋರಲು ಪ್ರಾರಂಭಿಸುತ್ತಿದ್ದಂತೆ, ಅವರಲ್ಲಿ ಒಬ್ಬರು ಅವರನ್ನು ಹಿಡಿದು ಕೆನ್ನೆಗೆ ಮುತ್ತಿಟ್ಟರು. ವೀಡಿಯೊ ಆನ್‌ಲೈನ್‌ನಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಅನೇಕರು ಇದನ್ನು ಅನುಚಿತ ವರ್ತನೆ ಎಂದು ಕರೆದಿದ್ದಾರೆ.

VISTARANEWS.COM


on

Viral Video
Koo

ಪ್ಯಾರಿಸ್‌: ಪ್ಯಾರಿಸ್ ಒಲಿಂಪಿಕ್ಸ್​​ 2024ರ (Paris Olympics 2024) ಸ್ಪರ್ಧೆಗಳು ಭಾನುವಾರ ಸಂಜೆ ಅದ್ದೂರಿ ತೆರೆ ಕಂಡಿದೆ. ಈ ವೇಳೆ ಭಾಗಿಯಾಗಿದ್ದ ನಟ ಟಾಮ್‌ ಕ್ರೂಸ್‌(Tom Cruise)ನನ್ನು ಅಲ್ಲೇ ಇದ್ದ ಮಹಿಳೆಯೊಬ್ಬರು ಕಿಸ್‌ ಮಾಡಿರುವ ಘಟನೆ ನಡೆಯಿತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌(Viral Video) ಆಗುತ್ತಿದೆ.

ಮಹಿಳೆಯ ಕೃತ್ಯದ ದೃಶ್ಯಾವಳಿಗಳು ವೈರಲ್ ಆಗಿದ್ದು, ಅಭಿಮಾನಿಗಳು ಈ ಬಗ್ಗೆ ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಅಭಿಮಾನಿಗಳಿಗೆ ಶುಭಾಶಯ ಕೋರಲು ಪ್ರಾರಂಭಿಸುತ್ತಿದ್ದಂತೆ, ಅವರಲ್ಲಿ ಒಬ್ಬರು ಅವರನ್ನು ಹಿಡಿದು ಕೆನ್ನೆಗೆ ಮುತ್ತಿಟ್ಟರು. ವೀಡಿಯೊ ಆನ್‌ಲೈನ್‌ನಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಅನೇಕರು ಇದನ್ನು ಅನುಚಿತ ವರ್ತನೆ ಎಂದು ಕರೆದಿದ್ದಾರೆ.

2024ರ ಒಲಿಂಪಿಕ್‌ ಕ್ರೀಡಾಕೂಟ(2024 Olympics)ದ ಉದ್ಘಾಟನಾ ಸಮಾರಂಭದಲ್ಲಿ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರಾನ್(Emmanuel Macron) ತಮ್ಮ ಕ್ರೀಡಾ ಸಚಿವೆಗೆ ತುಂಬಿದ ಸಭೆಯಲ್ಲಿ ಚುಂಬಿಸಿರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. 2024ರ ಒಲಿಂಪಿಕ್‌ ಕ್ರೀಡಾಕೂಟ(2024 Olympics)ದ ಉದ್ಘಾಟನಾ ಸಮಾರಂಭದಲ್ಲಿ ಮ್ಯಾಕ್ರಾನ್‌, ಕ್ರೀಡಾ ಸಚಿವೆ ಅಮೆಲಿ ಔಡಿಯಾ-ಕ್ಯಾಸ್ಟೆರಾ(Amélie Oudéa-Castéra) ಅವರಿಗೆ ಚುಂಬಿಸಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು.

ವಿಡಿಯೋದಲ್ಲಿ ಅಮೆಲಿ, ಒಂದು ಕೈಯಲ್ಲಿ ಮ್ಯಾಕ್ರಾನ್‌ ಅವರನ್ನು ಬಳಸಿ, ಅವರ ಕತ್ತಿಗೆ ಮುತ್ತಿಕ್ಕಿದ್ದಾರೆ. ಈ ಸಂದರ್ಭದಲ್ಲಿ ಫ್ರಾನ್ಸ್‌ ಪ್ರಧಾನಿ ಗ್ಯಾಬ್ರಿಯಲ್‌ ಅಟ್ಟಲ್‌ ಕೂಡ ಉಪಸ್ಥಿತರಿದ್ದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಎಕ್ಸ್‌ನಲ್ಲಿ 4 ಮಿಲಿಯನ್ ವೀಕ್ಷಣೆಗಳನ್ನು ಪಡೆದಿವೆ. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

ಇದು ಕೇವಲ ಅಭಿನಂದಿಸುವ ವಿಧಾನ ಅಷ್ಟೇ ಎಂದು ಒಬ್ಬ ನೆಟ್ಟಿಗರ ಕಮೆಂಟ್‌ ಮಾಡಿದ್ದಾರೆ. ಈ ರೀತಿಯಾಗಿ ನಾನು ನನ್ನ ಪ್ರೇಯಸಿಗೆ ಕಿಸ್‌ ಮಾಡುತ್ತೇನೆ..ಇದು ಅತ್ಯಂತ ಮುಜುಗರಕ್ಕೀಡು ಮಾಡುವಂತಹ ಘಟನೆ ಎಂದು ಮತ್ತೊರ್ವ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಮ್ಯಾಕ್ರನ್‌ ಪತ್ನಿ ಈ ಘಟನೆಗೆ ಹೇಗೆ ರಿಯಾಕ್ಟ್‌ ಮಾಡಬಹುದೆಂಬ ಮೀಮ್ಸ್‌ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಕೋತಿಗಳ ಮುಂದೆ ಮಂಗಾಟ ಮಾಡುವ ಮುನ್ನ ಈ ವೈರಲ್‌ ವಿಡಿಯೋ ನೋಡಿ

Continue Reading

Latest

Viral Video: ಕಂಠ ಪೂರ್ತಿ ಕುಡಿದ ಪಿಯು ಹುಡುಗನ ಕಾರು ಚಾಲನೆ; ಜೀವ ಕಳೆದುಕೊಂಡ ಅಮಾಯಕ

Viral Video: ಹೈದರಾಬಾದ್‌ನ ಜೀಡಿಮೆಟ್ಲಾ ಪ್ರದೇಶದಲ್ಲಿ ವೇಗವಾಗಿ ಬಂದ ಕಾರು ವಾಚ್‌ಮ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನಪ್ಪಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗೋಪಿ ಎನ್ನುವವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಗಾಳಿಯಲ್ಲಿ ಹಾರಿ ಹೋಗಿ ಕೆಳಗೆ ಬಿದ್ದಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇದರ ವಿಡಿಯೊ ಇಲ್ಲಿದೆ.

VISTARANEWS.COM


on

Viral Video
Koo


ಹೈದರಾಬಾದ್ : ಅತಿ ವೇಗ ಅಪಘಾತಕ್ಕೆ ಕಾರಣ ಎಂದು ತಿಳಿದರೂ ವಾಹನ ಚಲಾಯಿಸುವವರು ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸಿ ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುವ ಜೊತೆಗೆ ಇತರರ ಪ್ರಾಣಕ್ಕೂ ಆಪತ್ತು ತರುತ್ತಾರೆ. ಇದೀಗ ಅಂತಹದೊಂದು ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಹೈದರಾಬಾದ್‍ನ ಜೀಡಿಮೆಟ್ಲಾ ಪ್ರದೇಶದಲ್ಲಿ ವೇಗವಾಗಿ ಬಂದ ಕಾರು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನಪ್ಪಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಗೋಪಿ (38) ಎಂಬುವವರು ಈ ಅಪಘಾತದಲ್ಲಿ ಸಾವನಪ್ಪಿದ ವ್ಯಕ್ತಿ. ಇವರು ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜೀಡಿಮೆಟ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಗಜುಲಾ ರಾಮರಾಮ್‍ನಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಗಾಳಿಯಲ್ಲಿ ಹಾರಿ ಹೋಗಿ ಕೆಳಗೆ ಬಿದ್ದಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಮದ್ಯದ ಅಮಲಿನಲ್ಲಿ ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಮನೀಶ್ ಗೌಡ ಎಂಬ 20 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿ ತನ್ನ ಇತರ ಐವರು ಗೆಳೆಯರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಇಂತಹ ಭೀಕರ ಕೃತ್ಯ ಎಸಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಅಪಘಾತದ ನಂತರ ಆರೋಪಿ ಮತ್ತು ಇತರ ಐವರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದವರು ಆರೋಪಿ ಮನೀಶ್ ಗೌಡ್‌ನನ್ನು ಹಿಡಿದು ಜೀಡಿಮೆಟ್ಲಾ ಪೊಲೀಸರ ವಶಕ್ಕೆ ನೀಡಿದ್ದಾರೆ. ಆದರೆ ಆತನ ಐವರು ಸ್ನೇಹಿತರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಟಿಕೆಟ್ ಇಲ್ಲದೆ ಎಸಿ ಬೋಗಿಯಲ್ಲಿ ಪ್ರಯಾಣಿಸಿದ ಪೊಲೀಸರು; ಟಿಕೆಟ್‌ ಪರಿಶೀಲಕರಿಗೇ ಧಮಕಿ!

ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಕಾರನ್ನು ಚಾಲಕ ನಿರ್ಲಕ್ಷ್ಯದ ರೀತಿಯಲ್ಲಿ ಓಡಿಸಿ ವಾಚ್‍ಮ್ಯಾನ್‌ಗೆ ಡಿಕ್ಕಿ ಹೊಡೆದಿದ್ದಾನೆ. ಹಾಗೆಯೇ ವಿಡಿಯೊದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಅಪಘಾತವನ್ನು ತಪ್ಪಿಸಲು ಪ್ರಯತ್ನಿಸುತ್ತಿರುವುದನ್ನು ಸಹ ಕಾಣಬಹುದು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

Continue Reading
Advertisement
Emmanuel Macron
ಕ್ರೀಡೆ3 hours ago

 Emmanuel Macron : ಒಲಿಂಪಿಕ್ಸ್​ಗೆ ಆತಿಥ್ಯ ವಹಿಸುವ ಭಾರತದ ಉತ್ಸಾಹಕ್ಕೆ ಬೆಂಬಲ ನೀಡಿದ ಫ್ರಾನ್ಸ್​ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರೋನ್

Paris Olympics 2024
ಪ್ರಮುಖ ಸುದ್ದಿ3 hours ago

Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ

Broadcasting Services Bill
ಪ್ರಮುಖ ಸುದ್ದಿ4 hours ago

Broadcasting Services Bill : ಸಾರ್ವಜನಿಕರ ಆಕ್ಷೇಪ; ಪ್ರಸಾರ ಸೇವೆಗಳ ಕರಡು ಬಿಲ್​ ವಾಪಸ್​ ಪಡೆದ ಕೇಂದ್ರ ಸರ್ಕಾರ

ಪ್ರಮುಖ ಸುದ್ದಿ5 hours ago

Train Accident : ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ ಎರಡು ಬೋಗಿ

Pralhad Joshi
ದೇಶ5 hours ago

Pralhad Joshi: ಪ್ರತಿ ಜಿಲ್ಲೆಗೊಂದು ‘ಮಾದರಿ ಸೌರ ಗ್ರಾಮ’ ಅನುಷ್ಠಾನಕ್ಕೆ ಕ್ರಮ; ಪ್ರಲ್ಹಾದ್‌ ಜೋಶಿ

CM Siddaramaiah
ಕರ್ನಾಟಕ5 hours ago

CM Siddaramaiah: 6000ಕ್ಕೂ ಹೆಚ್ಚು ಗ್ರಂಥಾಲಯ ಮೇಲ್ಚಿಚಾರಕರು ಕನಿಷ್ಠ ವೇತನ ವ್ಯಾಪ್ತಿಗೆ; ಸಿದ್ದರಾಮಯ್ಯ ಮಹತ್ವದ ಘೋಷಣೆ

Independence day speech in Kannada
ದೇಶ5 hours ago

Independence day speech in Kannada: ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧ ಭಾಷಣ!

S Jaishankar's Maldives visit
ಪ್ರಮುಖ ಸುದ್ದಿ5 hours ago

S Jaishankar’s Maldives visit : ಚೀನಾ ವಿರುದ್ಧ ಭಾರತಕ್ಕೆ ರಾಜತಾಂತ್ರಿಕ ಗೆಲುವು, 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್​​

Manu Bhaker
ಕ್ರೀಡೆ6 hours ago

Manu Bhaker : ಮದುವೆಯಾಗ್ತೀರಾ ಹೇಗೆ? ನೀರಜ್​ ಚೋಪ್ರಾ- ಮನು ಭಾಕರ್​ ಭೇಟಿಯ ವಿಡಿಯೊ ವೈರಲ್ ಮಾಡಿದ ನೆಟ್ಟಿಗರು

Namma Metro
ನೋಟಿಸ್ ಬೋರ್ಡ್6 hours ago

Namma Metro: ಹಸಿರು ಮಾರ್ಗದಲ್ಲಿ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌