Site icon Vistara News

Viral News : ನಾಯಿ ನೋಡಿಕೊಂಡು ಇರೋದಕ್ಕೆ 1 ಕೋಟಿ ರೂ. ಸಂಬಳ!

1 crore salary for dog caring

#image_title

ಲಂಡನ್‌: ಡಾಕ್ಟರ್‌, ಎಂಜಿನಿಯರ್‌ಗಳಿಗೆ ಭಾರೀ ಮೊತ್ತ ಸಂಬಳ ಇರುತ್ತದೆ ಎಂದು ನೀವಂದುಕೊಂಡಿರುತ್ತೀರ. ಆದರೆ ಪ್ರಪಂಚದಲ್ಲಿ ಕೆಲವು ವಿಚಿತ್ರ ಕೆಲಸಗಳಿಗೆ ಕೋಟ್ಯಂತರ ರೂಪಾಯಿ ಸಂಬಳ ಕೊಡುವವರೂ ಇರುತ್ತಾರೆ. ಅದೇ ಸಾಲಿನಲ್ಲಿ ಲಂಡನ್‌ನಲ್ಲಿ ಕೋಟ್ಯಧಿಪತಿಗಳೊಬ್ಬರು ತಮ್ಮ ಮನೆಯ ನಾಯಿ ನೋಡಿಕೊಂಡು ಇರುವವರಿಗೆ ವರ್ಷಕ್ಕೆ ಒಂದು ಕೋಟಿ ರೂಪಾಯಿ ಸಂಬಳ ಕೊಡುವುದಾಗಿ (Viral News) ಹೇಳಿದ್ದಾರೆ!

ಹೌದು. ಇಂಥದ್ದೊಂದು ವಿಶೇಷ ಕೆಲಸದ ಜಾಹೀರಾತನ್ನು ಫೈರ್‌ಫಾಕ್ಸ್‌ ಆಂಡ್‌ ಕೆನ್ಸಿಂಗ್ಟನ್‌ ನೇಮಕಾತಿ ಏಜೆನ್ಸಿಯಿಂದ ಕೊಡಲಾಗಿದೆ. ಕೋಟ್ಯಧಿಪತಿಗಳಿಗೆ ತಮ್ಮ ಮನೆಯ ಎರಡು ನಾಯಿಗಳನ್ನು ನೋಡಿಕೊಳ್ಳುವುದಕ್ಕೆ ಅನುಭವವುಳ್ಳ ವ್ಯಕ್ತಿ ಬೇಕಂತೆ.

ಇದನ್ನೂ ಓದಿ: Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ
ಆಯ್ಕೆಯಾಗುವ ವ್ಯಕ್ತಿ ಲಂಡನ್‌ನಲ್ಲಿರುವ ತಮ್ಮ ಮನೆಯಲ್ಲಿ ನಾಯಿಗಳನ್ನು ನೋಡಿಕೊಂಡಿರಬೇಕು. ಅವುಗಳಿಗೆ ಬೇರೆ ನಾಯಿಗಳೊಂದಿಗೆ ಆಟವಾಡುವುದಕ್ಕೆ ಯಾವ ಸಮಯದಲ್ಲಿ ಕರೆದುಕೊಂಡು ಹೋಗಬೇಕು, ಯಾವ ರೀತಿಯ ಆಹಾರ ಕೊಡಬೇಕು ಎನ್ನುವ ಎಲ್ಲ ನಿರ್ಧಾರ ತೆಗೆದುಕೊಳ್ಳುವಂತಿರಬೇಕು. ಅಷ್ಟೇ ಅಲ್ಲದೆ ನಾಯಿಯ ರಕ್ಷಣೆ ಬಗ್ಗೆ ಸದಾ ಗಮನ ವಹಿಸಬೇಕು. ನಾಯಿಯೊಂದಿಗೆ ಮನೆಯವರು ಪ್ರವಾಸಕ್ಕೆ ಹೊರಟಾಗ ನಾಯಿಯೊಂದಿಗೆ ತಾವೂ ಹೋಗಿ ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವಂತಿರಬೇಕು ಎನ್ನುವ ನಿಯಮಗಳನ್ನು ಹಾಕಲಾಗಿದೆ.

ಮೊದಲಿಗೆ ಈ ಕೆಲಸಕ್ಕೆ 200 ಅರ್ಜಿಗಳು ಬಂದಿದ್ದವಂತೆ. ಆದರೆ ಈ ಬಗ್ಗೆ ಸುದ್ದಿಯಾದ ಮೇಲೆ ಸುಮಾರು 2 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆಯಂತೆ. ಈ ತಿಂಗಳ ಅಂತ್ಯದೊಳಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದೇವೆ ಎಂದು ಜಾಹಿರಾತು ನೀಡಿರುವ ನೇಮಕಾತಿ ಸಂಸ್ಥೆ ಹೇಳಿಕೊಂಡಿದೆ. ಆದರೆ ಈ ರೀತಿ ಯಾರು ಜಾಹೀರಾತು ಕೊಟ್ಟಿದ್ದಾರೆ ಎನ್ನುವ ಬಗ್ಗೆ ಸಂಸ್ಥೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

Exit mobile version