ವೈರಲ್ ನ್ಯೂಸ್
Viral News : ನಾಯಿ ನೋಡಿಕೊಂಡು ಇರೋದಕ್ಕೆ 1 ಕೋಟಿ ರೂ. ಸಂಬಳ!
ನಾಯಿ ನೋಡಿಕೊಂಡು ಇರುವವರಿಗೆ ಒಂದು ಕೋಟಿ ರೂ. ಕೊಡುವುದಾಗಿ ಕೋಟ್ಯಧಿಪತಿಯೊಬ್ಬರು ಜಾಹೀರಾತು ನೀಡಿದ್ದಾರೆ. ಅದು ಎಲ್ಲೆಡೆ ವೈರಲ್ (Viral News) ಆಗಿದೆ.
ಲಂಡನ್: ಡಾಕ್ಟರ್, ಎಂಜಿನಿಯರ್‌ಗಳಿಗೆ ಭಾರೀ ಮೊತ್ತ ಸಂಬಳ ಇರುತ್ತದೆ ಎಂದು ನೀವಂದುಕೊಂಡಿರುತ್ತೀರ. ಆದರೆ ಪ್ರಪಂಚದಲ್ಲಿ ಕೆಲವು ವಿಚಿತ್ರ ಕೆಲಸಗಳಿಗೆ ಕೋಟ್ಯಂತರ ರೂಪಾಯಿ ಸಂಬಳ ಕೊಡುವವರೂ ಇರುತ್ತಾರೆ. ಅದೇ ಸಾಲಿನಲ್ಲಿ ಲಂಡನ್‌ನಲ್ಲಿ ಕೋಟ್ಯಧಿಪತಿಗಳೊಬ್ಬರು ತಮ್ಮ ಮನೆಯ ನಾಯಿ ನೋಡಿಕೊಂಡು ಇರುವವರಿಗೆ ವರ್ಷಕ್ಕೆ ಒಂದು ಕೋಟಿ ರೂಪಾಯಿ ಸಂಬಳ ಕೊಡುವುದಾಗಿ (Viral News) ಹೇಳಿದ್ದಾರೆ!
ಹೌದು. ಇಂಥದ್ದೊಂದು ವಿಶೇಷ ಕೆಲಸದ ಜಾಹೀರಾತನ್ನು ಫೈರ್‌ಫಾಕ್ಸ್ ಆಂಡ್ ಕೆನ್ಸಿಂಗ್ಟನ್ ನೇಮಕಾತಿ ಏಜೆನ್ಸಿಯಿಂದ ಕೊಡಲಾಗಿದೆ. ಕೋಟ್ಯಧಿಪತಿಗಳಿಗೆ ತಮ್ಮ ಮನೆಯ ಎರಡು ನಾಯಿಗಳನ್ನು ನೋಡಿಕೊಳ್ಳುವುದಕ್ಕೆ ಅನುಭವವುಳ್ಳ ವ್ಯಕ್ತಿ ಬೇಕಂತೆ.
ಇದನ್ನೂ ಓದಿ: Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ
ಆಯ್ಕೆಯಾಗುವ ವ್ಯಕ್ತಿ ಲಂಡನ್‌ನಲ್ಲಿರುವ ತಮ್ಮ ಮನೆಯಲ್ಲಿ ನಾಯಿಗಳನ್ನು ನೋಡಿಕೊಂಡಿರಬೇಕು. ಅವುಗಳಿಗೆ ಬೇರೆ ನಾಯಿಗಳೊಂದಿಗೆ ಆಟವಾಡುವುದಕ್ಕೆ ಯಾವ ಸಮಯದಲ್ಲಿ ಕರೆದುಕೊಂಡು ಹೋಗಬೇಕು, ಯಾವ ರೀತಿಯ ಆಹಾರ ಕೊಡಬೇಕು ಎನ್ನುವ ಎಲ್ಲ ನಿರ್ಧಾರ ತೆಗೆದುಕೊಳ್ಳುವಂತಿರಬೇಕು. ಅಷ್ಟೇ ಅಲ್ಲದೆ ನಾಯಿಯ ರಕ್ಷಣೆ ಬಗ್ಗೆ ಸದಾ ಗಮನ ವಹಿಸಬೇಕು. ನಾಯಿಯೊಂದಿಗೆ ಮನೆಯವರು ಪ್ರವಾಸಕ್ಕೆ ಹೊರಟಾಗ ನಾಯಿಯೊಂದಿಗೆ ತಾವೂ ಹೋಗಿ ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವಂತಿರಬೇಕು ಎನ್ನುವ ನಿಯಮಗಳನ್ನು ಹಾಕಲಾಗಿದೆ.
ಮೊದಲಿಗೆ ಈ ಕೆಲಸಕ್ಕೆ 200 ಅರ್ಜಿಗಳು ಬಂದಿದ್ದವಂತೆ. ಆದರೆ ಈ ಬಗ್ಗೆ ಸುದ್ದಿಯಾದ ಮೇಲೆ ಸುಮಾರು 2 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆಯಂತೆ. ಈ ತಿಂಗಳ ಅಂತ್ಯದೊಳಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದೇವೆ ಎಂದು ಜಾಹಿರಾತು ನೀಡಿರುವ ನೇಮಕಾತಿ ಸಂಸ್ಥೆ ಹೇಳಿಕೊಂಡಿದೆ. ಆದರೆ ಈ ರೀತಿ ಯಾರು ಜಾಹೀರಾತು ಕೊಟ್ಟಿದ್ದಾರೆ ಎನ್ನುವ ಬಗ್ಗೆ ಸಂಸ್ಥೆ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಕರ್ನಾಟಕ
Cauvery Dispute: ಕಾವೇರಿ ಕಿಚ್ಚು; ಸತ್ತ ಇಲಿಯನ್ನು ಬಾಯಿ ಬಳಿ ಇಟ್ಟು ಪ್ರತಿಭಟನೆ ನಡೆಸಿದ ರೈತರು
Cauvery Water Dispute: ಕಾವೇರಿ ನದಿ ನೀರು ಹಂಚಿಕೆ (Cauvery Water Dispute) ಗಲಾಟೆ ಹೆಚ್ಚಾಗುತ್ತಿದೆ. ಈ ಮಧ್ಯೆ ತಮಿಳುನಾಡಿನ ರೈತರು ಕೈಯಲ್ಲಿ ಸತ್ತ ಇಲಿಯನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ(Cauvery Dispute) ಗಲಾಟೆ ದಿನ ಕಳೆದಂತೆ ಕಾವೇರುತ್ತಿದೆ. ಈ ವಿಚಾರ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಒಡಕು ಮೂಡುವಂತೆ ಮಾಡಿದೆ. ಇತ್ತ ಕರ್ನಾಟಕದ ರೈತರು ನೀರು ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೆ ಅತ್ತ ತಮಿಳುನಾಡಿನ ಕೃಷಿಕರು ಸತ್ತ ಇಲಿಯನ್ನು ತಮ್ಮ ಬಾಯಿಯ ಬಳಿ ಇಟ್ಟುಕೊಂಡು ವಿಚಿತ್ರ ರೀತಿಯಲ್ಲಿ ಹೋರಾಟಕ್ಕೆ ಇಳಿದಿದ್ದಾರೆ.
ತಮಿಳಿನಾಡಿನ ತಿರುಚಿರಪಳ್ಳಿಯಲ್ಲಿ ರೈತರು ಈ ರೀತಿಯ ವಿಚಿತ್ರ ಪ್ರತಿಭಟನೆಗೆ ಇಳಿದು ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಾವೇರಿ ನೀರು ಒದಗಿಸಬೇಕೆಂದು ಕರ್ನಾಟಕ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಕರ್ನಾಟಕವು ಕಾವೇರಿ ನೀರನ್ನು ತಡೆಹಿಡಿಯುವುದನ್ನು ಮುಂದುವರಿಸಿದರೆ, ಭತ್ತದ ಕೃಷಿಗೆ ನೀರಿನ ಕೊರತೆ ಕಾಡಲಿದೆ. ಇದರಿಂದ ರೈತರು ಬದುಕುಳಿಯಲು ಇಲಿ ಮಾಂಸವನ್ನು ಸೇವಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎನ್ನುವುದನ್ನು ಸಂಕೇತಿಸುವಂತೆ ಇಲಿಯ ಮೃತದೇಹವನ್ನು ಕೈಯಲ್ಲಿಟ್ಟು ಪ್ರತಿಭಟನೆ ನಡೆಸಲಾಗಿದೆ.
#WATCH | A group of Tamil Nadu farmers in Tiruchirappalli holding dead rats in their mouths protest against the Karnataka government and demand the release of Cauvery water to the state from Karnataka pic.twitter.com/CwQyVelyjF
— ANI (@ANI) September 26, 2023
ಇದೇ ಮೊದಲ ಸಲ ಅಲ್ಲ
ವಿಶೇಷವೆಂದರೆ ರೈತರು ಈ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಇದು ಮೊದಲ ಸಲವೇನಲ್ಲ. 2017ರಲ್ಲಿ 65 ವರ್ಷದ ಚಿನ್ನಗೊಡಂಗಿ ಪಳನಿಸ್ವಾಮಿ ಎನ್ನುವ ರೈತರೊಬ್ಬರು ಜೀವಂತ ಇಲಿಯೊಂದನ್ನು ಹಲ್ಲಿನ ನಡುವೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು. ಆ ಮೂಲಕ ತಮಿಳುನಾಡಿನ ರೈತರ ಸಮಸ್ಯೆಯನ್ನು ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದರು.
“ಪರಿಸ್ಥಿತಿ ಸುಧಾರಿಸದಿದ್ದರೆ ನಾವು ಇಲಿಗಳನ್ನು ಸೇವಿಸ ಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಸಂದೇಶವನ್ನು ನಾನು ನನ್ನ ಸಹವರ್ತಿಗಳೊಂದಿಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದೆ” ಎಂದು ಚಿನ್ನಗೊಡಂಗಿ ಪಳನಿಸ್ವಾಮಿ ತಿಳಿಸಿದ್ದರು.
ಅದಕ್ಕೂ ಮೊದಲು 2016ರಲ್ಲಿ, ತಮಿಳುನಾಡಿನ ತಿರುಚ್ಚಿಯಲ್ಲಿ ಸುಮಾರು 30 ರೈತರ ಗುಂಪು ಸತ್ತ ಇಲಿಗಳನ್ನು ಬಾಯಿ ಬಳಿ ಹಿಡಿದುಕೊಂಡು ಪ್ರತಿಭಟನೆ ನಡೆಸಿತ್ತು. ನೀರಿನ ಬಿಕ್ಕಟ್ಟು ಭತ್ತದ ಕೃಷಿಯ ಮೇಲೆ ತೀವ್ರ ಪರಿಣಾಮ ಬೀರಿದೆ ಮತ್ತು ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತವಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಆರ್ಥಿಕ ಸಂಕಷ್ಟದ ಪರಿಣಾಮವಾಗಿ ಇಲಿ ಮಾಂಸವನ್ನೂ ರೈತರು ಸೇವಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂಬುದನ್ನು ಆ ಗುಂಪು ವಿವರಿಸಿತ್ತು.
ಇದನ್ನೂ ಓದಿ: Cauvery Dispute : 3000 ಕ್ಯೂಸೆಕ್ ನೀರು ಬಿಡುಗಡೆ ಆದೇಶವನ್ನೂ ಪಾಲಿಸುತ್ತಾ ಸರ್ಕಾರ?; ಸಿಎಂ ಹೇಳಿದ್ದೇನು?
ರಾಜ್ಯಕ್ಕೆ ಹೊಡೆತ
ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee) ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಇನ್ನೊಂದು ಹೊಡೆತ ಬಿದ್ದಿದೆ. ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ. ಸೆಪ್ಟೆಂಬರ್ 13ರಂದು ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳವರೆಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು. ಸೆ. 18ರಂದು ನಡೆದ ಪ್ರಾಧಿಕಾರದ ಸಭೆ ಅದನ್ನು ಅನುಮೋದಿಸಿತ್ತು. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಈ ಆದೇಶವನ್ನು ಎತ್ತಿ ಹಿಡಿಯಲಾಗಿತ್ತು. ಇದೀಗ ಮಂಗಳವಾರ (ಸೆ. 26) ನಡೆದ ಸಭೆಯಲ್ಲಿ ಕರ್ನಾಟಕದ ಮಂಡಿಸಿದ ವಾದವನ್ನು ಪರಿಗಣಿಸಿದ ಸಮಿತಿ ನೀರೇ ಬಿಡುವುದಿಲ್ಲ ಎಂಬ ಮನವಿಯನ್ನು ಒಪ್ಪಲಿಲ್ಲ. ಐದು ಸಾವಿರ ಕ್ಯೂಸೆಕ್ ಬದಲಿಗೆ ಮೂರು ಸಾವಿರ ಕ್ಯೂಸೆಕ್‌ಗೆ ಇಳಿಸಿ ಎಂದು ಸೂಚನೆ ನೀಡಿದೆ.
ಬಾಲಿವುಡ್
Shah Rukh Khan: ಕೇವಲ ಸ್ಮಾರ್ಟ್ ಫೋನ್ ಬಳಸಿ ʻಜವಾನ್ʼ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್; ಶಾರುಖ್ ಫಿದಾ!
Shah Rukh Khan: ಕಡಿಮೆ ಬಜೆಟ್‌ನಲ್ಲಿ ಕೇವಲ ಸ್ಮಾರ್ಟ್‌ಫೋನ್ ಬಳಸಿ ‘ಜವಾನ್’ ದೃಶ್ಯಗಳನ್ನು ಮರುಸೃಷ್ಟಿಸಿರುವ ವಿಡಿಯೊ ಕಂಡು ಶಾರುಖ್ ಫಿದಾ ಆಗಿದ್ದಾರೆ. ಯೂಟ್ಯೂಬರ್‌ನ ಕ್ರಿಯೇಟಿವಿಟಿ ಕಂಡು ಶಾರುಖ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್ (Shah Rukh Khan) ಅವರು ತಮ್ಮ ಇತ್ತೀಚಿನ ಬ್ಲಾಕ್‌ಬಸ್ಟರ್ ‘ಜವಾನ್’ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಸಿನಿಮಾ ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಫ್ಯಾನ್ಸ್ ಬೆಂಬಲಕ್ಕಾಗಿ ಕೃತಜ್ಞತೆಯ ಸಂಕೇತವಾಗಿ ಶಾರುಖ್ ಆಗಾಗ ಟ್ವಿಟರ್‌ನಲ್ಲಿ ಸೇಷನ್ ಏರ್ಪಡಿಸಿ ಮಾತನಾಡುತ್ತಿದ್ದಾರೆ.
ಇತ್ತೀಚಿನ ಪೋಸ್ಟ್‌ನಲ್ಲಿ ಶಾರುಖ್ ಖಾನ್ ಅವರು ಯೂಟ್ಯೂಬರ್, ಜರ್ಮಾಟಿಕ್ಸ್ (zarmatics) ರಚಿಸಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಕೇವಲ ಸ್ಮಾರ್ಟ್‌ಫೋನ್ ಬಳಸಿ ‘ಜವಾನ್’ ದೃಶ್ಯಗಳನ್ನು ಮರುಸೃಷ್ಟಿಸಿರುವ ವಿಡಿಯೊ ಕಂಡು ಶಾರುಖ್ ಫಿದಾ ಆಗಿದ್ದಾರೆ. ಯೂಟ್ಯೂಬರ್‌ನ ಕ್ರಿಯೇಟಿವಿಟಿ ಕಂಡು ಶಾರುಖ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
This is outstanding!!! Good job…. Very masssy!!! Thank u for the effort. Love u https://t.co/MuPreGvi1x
— Shah Rukh Khan (@iamsrk) September 26, 2023
ಯೂಟ್ಯೂಬರ್ ಜವಾನ್ ಸಿನಿಮಾದ ದೃಶ್ಯವೊಂದನ್ನು ಮರುಸೃಷ್ಟಿ ಮಾಡಿರುವ ಬಗ್ಗೆ ಶಾರುಖ್ ಇದೀಗ ʻʻತುಂಬಾ ಮಾಸ್ ಆಗಿದೆ, ಅದ್ಭುತʼʼ ಎಂದು ಹೊಗಳಿದ್ದಾರೆ. ಶಾರುಖ್ ಖಾನ್ ಅವರ ‘ಜವಾನ್’ ಸೆಪ್ಟೆಂಬರ್ 7ರಂದು ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮಾಡುತ್ತಿದೆ. ಈಗಾಗಲೇ 1000 ಕೋಟಿ ರೂ. ಗಡಿ ದಾಟತಿದೆ. ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಮತ್ತು ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
2023 ಬಾದ್‌ಷಾ ವರ್ಷ
ಈ ಬಾರಿ ಶಾರುಖ್ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ʼಡಂಕಿʼ ಸಿನಿಮಾವನ್ನು ಫ್ಯಾನ್ಸ್‌ಗೆ ಗಿಫ್ಟ್ ಆಗಿ ನೀಡಲಿದ್ದಾರೆ. ʼಡಂಕಿʼ ಚಿತ್ರಕ್ಕೆ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬೆಂಬಲ ನೀಡಿವೆ. ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಮತ್ತು ತಾಪ್ಸಿಯ ಹೊರತಾಗಿ ಬೊಮನ್ ಇರಾನಿ ಕೂಡ ನಟಿಸಲಿದ್ದಾರೆ.
ಇದನ್ನೂ ಓದಿ: Jawan box office collection: 9 ತಿಂಗಳಲ್ಲೇ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್; ʻಜವಾನ್ʼ ಹೊಸ ದಾಖಲೆ!
ʼಬಾಲಿವುಡ್ ಹಂಗಾಮಾ’ ವರದಿ ಮಾಡಿರುವ ಪ್ರಕಾರ ಶೂಟಿಂಗ್ ಮುಗಿಯುವುದಕ್ಕೂ ಮುನ್ನವೇ ‘ಡಂಕಿ’ (Dunki Movie) ಚಿತ್ರದ ಒಟಿಟಿ (Dunki OTT) ಹಕ್ಕುಗಳು ಸೇಲ್ ಆಗಿವೆ. ಅದು ಕೂಡ ಬರೋಬ್ಬರಿ 155 ಕೋಟಿ ರೂ. ಎಂದು ಹೇಳಲಾಗುತ್ತಿದೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.ಕ್ಲಾಸ್ ಸಿನಿಮಾಗಳನ್ನು ಮಾಡಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ. ‘ಮುನ್ನಾಭಾಯ್ ಎಂಬಿಬಿಎಸ್’, ‘3 ಈಡಿಯಟ್ಸ್’, ‘ಪಿಕೆ’, ‘ಸಂಜು’ ಚಿತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜತೆ ರಾಜ್‌ಕುಮಾರ್ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.
ವೈರಲ್ ನ್ಯೂಸ್
Viral video: 101 ಕೋಟಿ ರೂ. ಮೌಲ್ಯದ ಷೇರು ಹೊಂದಿರುವ ಈ ವ್ಯಕ್ತಿ ಹೇಗೆ ಜೀವನ ಸಾಗಿಸುತ್ತಿದ್ದಾರೆ ನೋಡಿ!
ಮನೆಯ ಮುಂದೆ ಅರೆಬೆತ್ತಲೆಯಾಗಿ ವಾಕಿಂಗ್ ಮಾಡುತ್ತಿರುವ ಇವರು ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋ ಎಕ್ಸ್ (ಟ್ವಿಟರ್)ನಲ್ಲಿ ಇದುವರೆಗೆ ಸುಮಾರು 4 ಲಕ್ಷ ವೀಕ್ಷಣೆ ಹಾಗೂ ನೂರಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.
ಹೊಸದಿಲ್ಲಿ: ಒಂದು ದೊಡ್ಡ ಚಡ್ಡಿ ಧರಿಸಿ, ಮೇಲುಮೈಯಲ್ಲಿ ಇನ್ಯಾವ ದಿರಸನ್ನೂ ಧರಿಸದೆ ಅತ್ಯಂತ ಸರಳವಾಗಿ ನಗುತ್ತಿರುವ ಈ ಹಿರಿಯ ನಾಗರಿಕರ ಆಸ್ತಿ ಮೌಲ್ಯ ಎಷ್ಟು ಎಂದು ತಿಳಿದರೆ ನೀವು ನಿಜಕ್ಕೂ ಬೆಚ್ಚಿ ಬೀಳಬಹುದು. ಹೌದು, ಇವರೇ ಹೇಳಿಕೊಳ್ಳುವಂತೆ, ಇವರ ಬಳಿ 101 ಕೋಟಿ ರೂ. ಮೌಲ್ಯದ ಷೇರುಗಳಿವೆ!
ವಿಡಿಯೋದಲ್ಲಿ ತೋರಿಸಿರುವಂತೆ ಇವರು ತಮ್ಮ ಮನೆಯ ಮುಂದೆ ನಿಂತಿದ್ದಾರೆ. ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರುವ ಇವರ ಮನೆ ಹಳೆಯದು, ಗ್ರಾಮೀಣ ಶೈಲಿಯದ್ದು ಮತ್ತು ಸರಳವಾಗಿದೆ. ಅದರ ಮುಂದೆ ಅರೆಬೆತ್ತಲೆಯಾಗಿ ವಾಕಿಂಗ್ ಮಾಡುತ್ತಿರುವ ಇವರು ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋ ಎಕ್ಸ್ (ಟ್ವಿಟರ್)ನಲ್ಲಿ ಇದುವರೆಗೆ ಸುಮಾರು 4 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೂರಾರು ಕಾಮೆಂಟ್‌ಗಳಿಗೆ ಕಾರಣವಾಗಿದೆ.
ಈ ಹಿರಿಯ ನಾಗರಿಕರು ಹೇಳಿಕೊಳ್ಳುವಂತೆ ಅವರು ಎಲ್&ಟಿ, ಅಲ್ಟ್ರಾಟೆಕ್ ಮತ್ತು ಕರ್ಣಾಟಕ ಬ್ಯಾಂಕ್ ಷೇರುಗಳನ್ನು ಹೊಂದಿದ್ದಾರೆ. ಇಷ್ಟು ಶ್ರೀಮಂತಿಕೆಯ ನಡುವೆಯೂ ಅವರು ಸರಳ ನಡವಳಿಕೆ ಹಾಗೂ ಸರಳ ಜೀವನ ಹೊಂದಿದ್ದಾರೆ ಎಂಬುದು ನೆಟ್ಟಿಗರ ಆಕರ್ಷಣೆಗೆ ಕಾರಣವಾಗಿದೆ.
As they say, in Investing you have to be lucky once
— Rajiv Mehta (@rajivmehta19) September 26, 2023
He is holding shares worth
₹80 crores L&T
₹21 crores worth of Ultrtech cement shares
₹1 crore worth of Karnataka bank shares.
Still leading a simple life#Investing
@connectgurmeet pic.twitter.com/AxP6OsM4Hq
ಸರಳ ಜೀವನ:
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಜೀವ್ ಮೆಹ್ತಾ, “ಅವರು ಹೇಳಿದಂತೆ, ಹೂಡಿಕೆ ಮಾಡುವಾಗ, ನೀವು ಒಮ್ಮೆ ಅದೃಷ್ಟಶಾಲಿಯಾಗಿರಬೇಕು. ಅವರು 80 ಕೋಟಿ ರೂಪಾಯಿ ಮೌಲ್ಯದ ಎಲ್&ಟಿ ಷೇರು, 21 ಕೋಟಿ ರೂಪಾಯಿ ಮೌಲ್ಯದ ಅಲ್ಟರ್‌ಟೆಕ್ ಸಿಮೆಂಟ್ ಷೇರು, 1 ಕೋಟಿ ರೂಪಾಯಿ ಮೌಲ್ಯದ ಕರ್ಣಾಟಕ ಬ್ಯಾಂಕ್ ಷೇರುಗಳನ್ನು ಹೊಂದಿದ್ದಾರೆ. ಈಗಲೂ ಸರಳ ಜೀವನ ನಡೆಸುತ್ತಿದ್ದಾರೆʼʼ ಎಂದು ಬರೆದಿದ್ದಾರೆ.
ಈ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಕ್ಯಾಪಿಟಲ್ ಮೈಂಡ್‌ನ ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ ಅವರು, ʼʼ27,000 ಎಲ್&ಟಿ ಷೇರುಗಳ ಒಟ್ಟು ಮೌಲ್ಯ ಸುಮಾರು 8 ಕೋಟಿ ರೂ.ಗಳಾಗಿದ್ದರೆ, ಅಲ್ಟ್ರಾಟೆಕ್ ಷೇರುಗಳು ಸುಮಾರು 3.2 ಕೋಟಿ ರೂ. ಮತ್ತು ಕರ್ಣಾಟಕ ಬ್ಯಾಂಕ್ ಷೇರು ಮೌಲ್ಯ ಸುಮಾರು 10 ಲಕ್ಷ ರೂ. ಇದು ಸರಿಯಾದ ಮೊತ್ತವಾಗಿದೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ದೊರೆಯಲಿ” ಎಂದು ಬರೆದಿದ್ದಾರೆ.
ವರ್ಷಕ್ಕೆ 6 ಲಕ್ಷ ರೂ. ಲಾಭಾಂಶ:
ಕಮೆಂಟ್ ಮಾಡಿರುವ ಇನ್ನೊಬ್ಬರು, ಈ 3.5 ಕೋಟಿ ಷೇರುಗಳಿಂದ ಅವರು ಪ್ರತಿವರ್ಷ 6 ಲಕ್ಷ ರೂಪಾಯಿ ಲಾಭಾಂಶವನ್ನು ಗಳಿಸುತ್ತಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಇಷ್ಟು ಹಣವಿದ್ದರೂ ಅದನ್ನು ಸರಿಯಾಗಿ ಬಳಸದಿದ್ದರೆ ನಿಷ್ಪ್ರಯೋಜಕ ಎಂದು ವಾದಿಸಿದ್ದಾರೆ. “ಹಣವು ಇಂಧನದಂತೆ. ಟ್ಯಾಂಕ್‌ನಲ್ಲಿ ಬಹಳಷ್ಟು ಇದ್ದರೂ ಬಳಸದಿದ್ದರೆ ಏನು ಪ್ರಯೋಜನ? ಸರಳತೆ ಒಂದು ಉತ್ತಮ ವಿಷಯ. ಆದರೆ ನಿಮ್ಮ ಹಣವನ್ನು ಖರ್ಚು ಮಾಡಲು ಸಾಧ್ಯವಾಗದಿರುವುದು ಬೇರೆ. ಅವರು ಸಾಕಷ್ಟು ಹೊಂದಿರುವಾಗಲೂ ಖರ್ಚು ಮಾಡುವ ಅವಕಾಶ ಬಳಸಿಕೊಳ್ಳದಿರುವುದು ತುಂಬಾ ಕಷ್ಟಕರ” ಎಂದಿದ್ದಾರೆ.
ಇನ್ನು ಕೆಲವರು ಇದರಲ್ಲಿ ಒನ್‌ವೆಸ್ಟ್‌ಮೆಂಟ್‌ನ ಪಾಠವನ್ನು ಕಂಡಿದ್ದಾರೆ. ವಿಕೆಜೆ ಇನ್ವೆಸ್ಟ್‌ಮೆಂಟ್‌ನ ಸಿಇಒ ವಿನೋದ್ ಝವೇರಿ ಎಂಬವರು, “ಸರಿಯಾದ ಸಮಯದಲ್ಲಿ ಲಾಭವನ್ನು ಕಾಯ್ದಿರಿಸುವುದನ್ನು ಇದರಿಂದ ಕಲಿಯಬೇಕು. ಸಿಂಧಿಯಾ ಶಿಪ್ಪಿಂಗ್, ಯುನಿಟೆಕ್ ಮತ್ತು ಇನ್ನೂ ಅನೇಕ ಷೇರುಗಳು ಜಂಕ್ ಆಗಿ ಮಾರ್ಪಟ್ಟಿರುವ ಅಥವಾ ಎಲ್ಲಿಯೂ ಕಾಣದಿರುವುದರಿಂದ ಹತಾಶರಾದ ಅನೇಕರ ಬಗ್ಗೆ ನಾನು ತಿಳಿದಿದ್ದೇನೆ. ಇದರ ಅರ್ಥವೇನೆಂದರೆ ಸರಿಯಾದ ಸಮಯದಲ್ಲಿ ಷೇರು ಖರೀದಿಸುವುದು” ಎಂದಿದ್ದಾರೆ.
ಅಬ್ಬಾ! ಎಂಥ ಸರಳತೆ!:
ಮತ್ತೊಬ್ಬ ಟ್ವಿಟರ್ ಬಳಕೆದಾರರು, ಆತಂಕದ ಸಮಯದಲ್ಲಿ (ಪ್ಯಾನಿಕ್) ತಮ್ಮ ಷೇರುಗಳನ್ನು ಮಾರಾಟ ಮಾಡದೆ ಉಳಿದುಕೊಂಡಿದ್ದಕ್ಕಾಗಿ ಈ ಇವರನ್ನು ಶ್ಲಾಘಿಸಿದ್ದಾರೆ. “ಇದನ್ನೇ ಸರಳತೆಯ ಶಕ್ತಿ ಎಂದು ಕರೆಯಬಹುದು. ಗಾಬರಿಯ ಸಮಯದಲ್ಲಿ ಪ್ಯಾನಿಕ್ ಮಾರಾಟದಿಂದ ದೂರವಿರುವುದು ಅಗತ್ಯ. ಹೂಡಿಕೆಯ ಹಲವು ಅಂಶಗಳು ಸಂಪತ್ತಿನ ಸೃಷ್ಟಿಯ ಮಾದರಿಯನ್ನು ಬದಲಾಯಿಸಬಹುದು” ಎಂದಿದ್ದಾರೆ.
ಇವರು ಎಲ್ಲಿಯವರು, ಅವರ ಹೆಸರೇನು ಎಂಬುದು ತಿಳಿದುಬಂದಿಲ್ಲ. ಕೊಂಕಣಿ ಹಾಗೂ ಕನ್ನಡದಲ್ಲಿ ಅವರು ಮಾತನಾಡುತ್ತಿರುವುದರಿಂದ, ಗೋವಾ ಅಥವಾ ಉತ್ತರ ಕನ್ನಡದವರು ಇರಬಹುದು ಎಂದು ತರ್ಕಿಸಲಾಗಿದೆ.
ಇದನ್ನೂ ಓದಿ: Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
ದೇಶ
Push Up Challenge: ಚಲಿಸುವ ಮೆಟ್ರೋದಲ್ಲೇ ಪುಶ್‌ಅಪ್ ಮಾಡಿದ ಅಂಕಲ್; ನಿಬ್ಬೆರಗಾದ ಯುವಕರು!
Push Up Challenge: ಮುಂಬೈ ಮೆಟ್ರೋ ರೈಲೊಂದರಲ್ಲಿ ಮಧ್ಯ ವಯಸ್ಕರೊಬ್ಬರು ಪುಶ್ ಅಪ್(pushup)ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬೈ: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲುಗಳು (metro train) ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿವೆ. ದೆಹಲಿ ಮೆಟ್ರೋದಲ್ಲಿ ಇತ್ತೀಚೆಗೆ ಯುವ ಜೋಡಿ ಅಶ್ಲೀಲವಾಗಿ ವರ್ತಿಸುವ ಮೂಲಕ ಸುದ್ದಿಯಾಗಿತ್ತು. ಇದೀಗ ವೈರಲ್ ಆಗಿರುವ ವಿಡಿಯೊ ಒಂದರಲ್ಲಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಪುಶ್ ಅಪ್ (Pushup)ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ವಯಸ್ಸು ಯಾವುದಾದರೇನು ಫಿಟ್ ಆಗಿರುವುದು ಮುಖ್ಯ ಎಂಬ ಪಾಠವನ್ನು ಅವರು ಈ ಮೂಲಕ ತಿಳಿಸಿ ಕೊಟ್ಟಿದ್ದಾರೆ.
ವಿಡಿಯೊ ವೈರಲ್
ಈ ವಿಡಿಯೊವನ್ನು ಕಂಟೆಂಟ್ ಕ್ರಿಯೇಟರ್ ಭರತ್ ರಗತಿ ತಮ್ಮ ಖಾತೆಯಯಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಮೆಟ್ರೋ ರೈಲೊಂದರ ಒಳಗೆ ಪ್ರಯಾಣಿಕರು ನೋಡುತ್ತಿದ್ದಂತೆ ಮೊದಲು ರಗತಿ ವಿವಿಧ ರೀತಿಯ ಪುಶ್ ಅಪ್ ಪ್ರಕಾರಗಳನ್ನು ಪ್ರದರ್ಶಿಸಿದರು. ಬಳಿಕ ಅಲ್ಲೇ ನಿಂತಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬರ ಬಳಿ ಪ್ರಯತ್ನಿಸಲು ಹೇಳಿದರು. ಮೊದಲು ಅವರು ನಿರಾಕರಿಸಿದರು. ಬಳಿಕ ಪುಶ್ ಅಪ್ ಮಾಡುತ್ತ ತಮ್ಮ ಸಾಮರ್ಥ್ಯ ಪ್ರದರ್ಶಿಸತೊಡಗಿದರು. ಅವರ ಈ ಸಾಹಸವನ್ನು ಉಳಿದ ಪ್ರಯಾಣಿಕರು ನಿಬ್ಬೆರಗಾಗಿ ನೋಡುತ್ತಿದ್ದರು.
ಸ್ಟ್ರಾಂಗೆಸ್ಟ್ ಅಂಕಲ್
ಸ್ಟ್ರಾಂಗೆಸ್ಟ್ ಅಂಕಲ್ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈಗಾಗಲೇ ಈ ವಿಡಿಯೊವನ್ನು 3 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ʼಅಂಕಲ್ʼನ ಫಿಟ್ನೆಸ್‌ಗೆ ಅನೇಕರು ಫಿದಾ ಆಗಿದ್ದಾರೆ.
ತರಹೇವಾರಿ ಕಮೆಂಟ್
ಅನೇಕರು ಈ ವಿಡಿಯೊ ನೋಡಿ ತಮ್ಮ ಕಣ್ಣನ್ನು ತಾವೇ ನಂಬಲಾರದ ಸ್ಥಿತಿ ತಲುಪಿದ್ದಾರೆ. ಬಳಿ ಷರ್ಟ್, ಕಪ್ಪು ಪ್ಯಾಂಟ್ ಧರಿಸಿ ಇನ್‌ಶರ್ಟ್ ಮಾಡಿಕೊಂಡಿದ್ದ ಆ ವ್ಯಕ್ತಿ ಈ ರೀತಿ ಎಲ್ಲರನ್ನೂ ಬೆರಗುಗೊಳಿಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದನ್ನೇ ಅನೇಕರು ಕಮೆಂಟ್ ಮೂಲಕ ತಿಳಿಸಿದ್ದಾರೆ. ʼʼಇವರು ಖಂಡಿತವಾಗಿ ಸೈನಿಕರಾಗಿದ್ದಿರಬೇಕುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಈ ಅಂಕಲ್ ರೀತಿ ತಾಳ್ಮೆಯಿಂದ, ಪ್ರಬುದ್ಧರಾಗಿ, ಸರಳವಾಗಿ ಇರುವುದನ್ನು ಕಲಿಯಬೇಕುʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ʼʼಆರಂಭದಲ್ಲಿ ಅವರು ಸ್ವಲ್ಪ ತಯಾರಿ ನಡೆಸಿಕೊಂಡು ಬಳಿಕ ಸರಾಗವಾಗಿ ಪುಶ್ ಅಪ್ ತೆಗೆದರುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼಈ ಅಂಕಲ್ ಯುವ ಜನತೆಗೆ ಸ್ಫೂರ್ತಿʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ʼʼಕವರ್ ನೋಡಿ ಪುಸ್ತಕವನ್ನು ನಿರ್ಧರಿಸಬೇಡಿ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆʼʼ ಎಂದು ಕಮೆಂಟ್ ಮಾಡಿದ್ದಾರೆ ಇನ್ನೊಬ್ಬರು. ಅನೇಕರು ಬೆಂಕಿ ಮತ್ತು ಹೃದಯದ ಎಮೋಜಿ ಕಳುಹಿಸುವ ಮೂಲಕ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: Viral News: ತುಂಬಿ ಹರಿವ ಹಳ್ಳದಲ್ಲಿ ಶಾಲಾ ಬಸ್ ಚಲಾಯಿಸಿ ಮಕ್ಕಳ ಜೀವದ ಜೊತೆಗೆ ಚಾಲಕನ ಚೆಲ್ಲಾಟ!
ಸದ್ಯ ಈ ಪುಶ್ ಅಪ್ ಚಾಲೆಂಜ್ ಮೊದಲೇ ಪ್ಲಾನ್ ಆಗಿತ್ತಾ ಅಥವಾ ಆಕಸ್ಮಿಕವಾಗಿ ಜರುಗಿದ್ದೇ ಎನ್ನುವುದು ಸ್ಪಷ್ಟವಾಗಿಲ್ಲ. ಅದೇನೇ ಇರಲಿ ಒಟ್ಟಿನಲ್ಲಿ ಅಂಕಲ್ ಪುಶ್ ಅಪ್ ಚಾಲೆಂಜ್ ಸ್ವೀಕರಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಹಲವರ ಮನಸ್ಸು ಬದಲಾಯಿಸಿದ್ದಂತೂ ಸುಳ್ಳಲ್ಲ.
-
ದೇಶ15 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ23 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ15 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ16 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್22 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ23 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್19 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್