ನವ ದೆಹಲಿ: ಆರು ವರ್ಷದ ಹುಡುಗಿಯೊಬ್ಬಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಬೆಲೆಯೇರಿಕೆ ಬಗ್ಗೆ ಅಳಲು ತೋಡಿಕೊಂಡಿದ್ದಾಳೆ. ʻʻನನ್ನ ಹೆಸರು ಕೀರ್ತಿ ದುಬೆ. ಒಂದನೇ ತರಗತಿಯಲ್ಲಿದ್ದೇನೆ. ಮೋದೀಜಿ, ನೀವು ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. ಬೆಲೆಯೇರಿಕೆಯಿಂದಾಗಿ ಪೆನ್ಸಿಲ್, ಎರೇಸರ್ ಮತ್ತು ಈಗ ಮ್ಯಾಗಿ ಕೂಡ ದುಬಾರಿಯಾಗಿದೆ. ಈಗ ಪೆನ್ಸಿಲ್ ಕೇಳಿದರೆ ಅಮ್ಮ ಹೊಡೆಯುತ್ತಾಳೆ. ನಾನು ಏನು ಮಾಡಲಿ? ಬೇರೆ ಮಕ್ಕಳು ನನ್ನ ಪೆನ್ಸಿಲ್ ಕದಿಯುತ್ತಾರೆʼʼ ಎಂದು ಆಕೆ ಬರೆದಿದ್ದಾಳೆ.
ಉತ್ತರಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮಾವ್ ನಗರದ ಈ ಹುಡುಗಿ ಹಿಂದಿಯಲ್ಲಿ ಬರೆದಿರುವ ಈ ಪತ್ರ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ಪತ್ರದ ಬಗ್ಗೆ ಕಮೆಂಟ್ ಮಾಡಿರುವ ಆಕೆಯ ತಂದೆ ವಿಶಾಲ್ ದುಬೆ ʼʼಇದು ನನ್ನ ಮಗಳ ಮನ್ ಕಿ ಬಾತ್. ಇತ್ತೀಚೆಗೆ ಮಗಳು ಪೆನ್ಸಿಲ್ ಕೇಳಿದಾಗ ಆಕೆಯ ತಾಯಿ ಗದರಿಸಿದ್ದಳು ಹಾಗೂ ಆಕೆಯ ಪೆನ್ಸಿಲ್ ಶಾಲೆಯಲ್ಲಿ ಕಳವಾಗಿತ್ತು.ʼʼ ಎಂದಿದ್ದಾರೆ.
ಇದನ್ನೂ ಓದಿ: GodFather | ಒಂದೇ ಫ್ರೇಂನಲ್ಲಿ ಇಬ್ಬರು ಸೂಪರ್ ಸ್ಟಾರ್‌ಗಳ ಡ್ಯಾನ್ಸ್? ಫೋಟೊ ವೈರಲ್