Site icon Vistara News

Viral News : ಆರ್ಡರ್ ಮಾಡಿದ್ದು 50 ಸಾವಿರ ರೂ. ಕೊಟ್ಟು ಆ್ಯಪಲ್ ವಾಚ್‌, ಬಂದಿದ್ದೇನು?

amazon delivers wrong item

ಬೆಂಗಳೂರು: ಇದು ಆನ್‌ಲೈನ್‌ ಯುಗ. ಏನನ್ನೇ ಖರೀದಿಸಬೇಕೆಂದರೂ ಆನ್‌ಲೈನ್‌ನಲ್ಲೇ ಖರೀದಿ ನಡೆದುಬಿಡುತ್ತದೆ. ಇಷ್ಟದ ವಸ್ತುವನ್ನು ಆರ್ಡರ್‌ ಮಾಡಿದ ಒಂದೇ ದಿನದಲ್ಲಿ ಅದು ನಿಮ್ಮ ಕೈ ಸೇರುವಷ್ಟು ಫಾಸ್ಟ್‌ ಆಗಿದೆ ಕಾಲ. ಆದರೆ ಇಲ್ಲಿ ಮೋಸಗಳೂ ನಡೆಯುವ ಸಾಧ್ಯತೆ ಹೆಚ್ಚಿದೆ. ಅದೇ ರೀತಿಯಲ್ಲಿ 50 ಸಾವಿರ ರೂ.ಗೂ ಹೆಚ್ಚು ಹಣ ಕೊಟ್ಟು ಆ್ಯಪಲ್ ವಾಚ್‌ ಖರೀದಿಸಿದ ಮಹಿಳೆಯೊಬ್ಬರು ಮೋಸ ಹೋದ ಘಟನೆ ಇತ್ತೀಚೆಗೆ ನಡೆದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral News) ಆಗಿದೆ.

ಸನಾಯಾ ಹೆಸರಿನ ಮಹಿಳೆ ಅಮೆಜಾನ್‌ ಶಾಪಿಂಗ್‌ ಆಪ್‌ನಲ್ಲಿ ಆ್ಯಪಲ್ ವಾಚ್‌ ಆರ್ಡರ್‌ ಹಾಕಿದ್ದಾರೆ. 8ನೇ ಸೀರಿಸ್‌ನ ವಾಚ್‌ ಅನ್ನು 50,900 ರೂ.ಗೆ ಜುಲೈ 8ರಂದು ಆರ್ಡರ್‌ ಹಾಕಿದ್ದಾರೆ. ಹೇಳಿದಂತೆ ಒಂದೇ ದಿನದಲ್ಲಿ ಅವರ ಆರ್ಡರ್‌ ಅವರ ಬಳಿ ಬಂದು ಸೇರಿದೆ. ಆದರೆ ಅದನ್ನು ತೆರೆದು ನೋಡಿದಾಗ ಅವರಿಗೆ ಆಪಲ್‌ ವಾಚ್‌ ಬದಲಾಗಿ ನಕಲಿ ಫಿಟ್‌ಲೈಫ್‌ ವಾಚ್‌ ಕಂಡುಬಂದಿದೆ.

ಇದನ್ನೂ ಓದಿ: Viral Video: ‘ಧರ್ಮ ಮನೆಯಲ್ಲಿರಲಿ’; ಮುಸ್ಲಿಂ ಟೋಪಿ ಹಾಕಿ ಡ್ಯೂಟಿ ಮಾಡುತ್ತಿದ್ದ ಬಿಎಂಟಿಸಿ ಕಂಡಕ್ಟರ್‌ಗೆ ಮಹಿಳೆ ಕ್ಲಾಸ್
ಈ ವಿಚಾರದಲ್ಲಿ ಅವರು ಅಮೆಜಾನ್‌ ಸಹಾಯ ಕೇಂದ್ರಕ್ಕೆ ಕರೆ ಮಾಡಿ ವಿಚಾರಿಸಿದ್ದಾರೆ ಕೂಡ. ಆದರೆ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲವಂತೆ. ಈ ಬಗ್ಗೆ ಸನಾಯಾ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ದಯವಿಟ್ಟು ನನಗೆ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿಕೊಡಿ” ಎಂದು ಕೇಳಿದ್ದಾರೆ.


ಸನಾಯಾ ಅವರ ಈ ಟ್ವೀಟ್‌ ಭಾರೀ ವೈರಲ್‌ ಆಗಿದೆ. ಲಕ್ಷಂತರ ಮಂದಿ ಟ್ವೀಟ್‌ ನೋಡಿದ್ದು, ಸಾವಿರಾರು ಮಂದಿ ಲೈಕ್‌ ಕೂಡ ಮಾಡಿದ್ದಾರೆ. ನೂರಾರು ಮಂದಿ ತಮಗೆ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಆದ ಮೋಸಗಳ ಬಗ್ಗೆ ಅನುಭವವನ್ನೂ ಹಂಚಿಕೊಂಡಿದ್ದಾರೆ. ಈ ಟ್ವೀಟ್‌ ಅಮೆಜಾನ್‌ ಗಮನಕ್ಕೂ ಬಂದಿದ್ದು, ಅದು ಕೂಡ ಟ್ವೀಟ್‌ಗೆ ಪ್ರತಿಕ್ರಿಯಿಸಿದೆ. “ನಮ್ಮಿಂದ ತಪ್ಪಾಗಿದ್ದಕ್ಕೆ ಕ್ಷಮಿಸಿ. ಈ ಬಗ್ಗೆ ಸೂಕ್ತ ಮಾಹಿತಿಗಳನ್ನು ನಮಗೆ ಸಂದೇಶದ ರೂಪದಲ್ಲಿ ಕಳುಹಿಸಿ. ನಾವು ನಿಮಗೆ ಸಮಸ್ಯೆ ಬಗೆಹರಿಸಿಕೊಡುತ್ತೇವೆ” ಎಂದು ಹೇಳಿದೆ.

Exit mobile version