Site icon Vistara News

Assault Case : ದಾರಿ ಬಿಡಿ ಎಂದಿದ್ದಕ್ಕೆ ಅಟ್ಟಾಡಿಸಿ ಕಲ್ಲು ಎತ್ತಿಹಾಕಿದ ಭೂಪ!

assault case in tumkuru

ತುಮಕೂರು: ಇಲ್ಲಿನ ಪಾವಗಡ ತಾಲೂಕಿನ ನಾಗಮಲ ಮಡಿಕೆ ತಿಮ್ಮಮ್ಮನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಅಟ್ಟಾಡಿಸಿದ್ದಾನೆ. ಮಾತ್ರ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿರುವ (assault Case) ಘಟನೆ ನಡೆದಿದೆ. ಸುಬ್ಬಯ್ಯ ಎಂಬಾತ ಅಕ್ಕಮ್ಮ ಮೇಲೆ ದಾಳಿ ಹಲ್ಲೆ ಮಾಡಿದ್ದಾನೆ.

ಇವರಿಬ್ಬರ ಹೊಡೆದಾಟ ಬಡಿದಾಟಕ್ಕೆ ಕಾರಣವಾಗಿದ್ದು ರಸ್ತೆ ಬಂದ್‌ ವಿಚಾರ. ಸಾರ್ವಜನಿಕರು ಓಡಾಡುವ ದಾರಿಯಲ್ಲಿ ಸುಬ್ಬಯ್ಯ ಕಲ್ಲು ಹಾಕಿ ಬಂದ್ ಮಾಡಿಬಿಟ್ಟಿದ್ದ. ತಿಮ್ಮಮ್ಮನಹಳ್ಳಿಯಿಂದ ಉಪ್ಪಾರಹಳ್ಳಿಗೆ ಈ ದಾರಿ ಸಂಪರ್ಕ ಕಲ್ಪಿಸುತ್ತೆ.

ಇದೇ ವೇಳೆ ದಾರಿಯಲ್ಲಿ ಬಂದ ಅಕ್ಕಮ್ಮ ದಾರಿ ಬಿಡುವಂತೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ದಾರಿ ಬಿಡದೆ ಸುಬ್ಬಯ್ಯ ರೇಗಿದ್ದಾನೆ. ಇದೆ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಮಾತು ಜಗಳಕ್ಕೆ ತಿರುಗಿ ಅದು ವಿಕೋಪಕ್ಕೆ ಮುಟ್ಟಿದೆ. ಸಿಟ್ಟಿಗೆದ್ದ ಸುಬ್ಬಯ್ಯ, ಜಮೀನಿನಲ್ಲಿ ಇರುವ ಸೈಜುಗಲ್ಲು ಎತ್ತಿ ಹಾಕಲು ಮುಂದಾಗಿದ್ದಾನೆ.

ಕಲ್ಲು ಎಸೆಯುವಾಗ ಅಕ್ಕಮ್ಮ ಅದೃಷ್ಟವಶಾತ್ ಬಚಾವ್ ಆಗಿದ್ದು, ಅಕ್ಕಮ್ಮರ ಸೊಂಟ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಾಳು ಅಕ್ಕಮ್ಮಳನ್ನು ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ತಿರುಮಣಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಇವರಿಬ್ಬರ ಕಿತ್ತಾಟ, ಬಡಿದಾಟ ಅಲ್ಲೆ ಇದ್ದವರ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version