Site icon Vistara News

Babar Azam: ಫೋಟೋ ತೆಗೆಯಲು ಬಂದ ಅಭಿಮಾನಿಗಳಿಗೆ ಬೈದು ಓಡಿಸಿದ ಬಾಬರ್ ಅಜಂ; ವಿಡಿಯೊ ವೈರಲ್​

Babar Azam

Babar Azam: Babar Azam Scolds Swarming Fans, Then Wins Hearts With Brilliant Gesture

ಲಂಡನ್​: ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟಿ20 ಪಂದ್ಯವನ್ನಾಡಲು(England vs Pakistan) ಹೋಟೆಲ್​ನಿಂದ ತೆರಳುವ ವೇಳೆ ಅಭಿಮಾನಿಗಳು ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದ ವೇಳೆ ತಾಳ್ಮೆ ಕಳೆದುಕೊಂಡು ಭದ್ರತಾ ಸಿಬ್ಬಂದಿಗಳಿಗೆ ಎಲ್ಲರನ್ನೂ ದೂರ ಕಳುಹಿಸುವಂತೆ ಹೇಳಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ 4 ಪಂದ್ಯಗಳ ಟಿ20 ಸರಣಿಯನ್ನಾಡಲು ಲಂಡನ್​ನಲ್ಲಿದೆ. ಈಗಾಗಲೇ ಸರಣಿಯಲ್ಲಿ 2 ಪಂದ್ಯಗಳು ಮಳೆಯಿಂದ ರದ್ದುಗೊಂಡರೆ, ಒಂದು ಪಂದ್ಯವನ್ನು ಇಂಗ್ಲೆಂಡ್​ ಗೆದ್ದಿದೆ. ಅಂತಿಮ ಪಂದ್ಯ ನಾಳೆ(ಮೇ 30) ನಡೆಯಲಿದೆ. ಸರಣಿಯನ್ನು 1-1 ಸಮಬಲಗೊಳಿಸಬೇಕಿದ್ದರೆ ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಇದೇ ಪಂದ್ಯವನ್ನಾಡಲು ತೆರಳುವ ವೇಳೆ ಬಾಬರ್​ ಅವರೊಂದಿಗೆ ಅಭಿಮಾನಿಗಳು ಫೋಟೊ ಮತ್ತು ಆಟೋಗ್ರಾಫ್ ಪಡೆಯಲು ಮುಂದಾಗಿದ್ದಾರೆ. ಇದರಿಂದ ಬಾಬರ್​ಗೆ ಕಿರಿಕಿರಿ ಉಂಟಾಗಿದೆ.

ಅಭಿಮಾನಿಗಳ ದಂಡೇ ಹಿಂಬಾಲಿಸಿ ಬಂದಿದ್ದರಿಂದ ಕೋಪಗೊಂಡ ಬಾಬರ್ ಸ್ವಲ್ಪ ಹೊತ್ತು ನನ್ನನ್ನು ಪ್ರಶಾಂತವಾಗಿರಲು ಬಿಡಿ ಎಂದು ಕೋಪದಿಂದ ನಿಂದಿಸಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಎಲ್ಲರನ್ನೂ ದೂರ ಕಳುಹಿಸುವಂತೆ ಹೇಳಿದ್ದಾರೆ. ಒಂದು ಕ್ಷಣ ಕೋಪಗೊಂಡರೂ ಕೂಡ ಕೊನೆಗೆ ಅಭಿಮಾನಿಗಳೊಂದಿಗೆ ಫೋಟೊ ಕ್ಲಿಕ್ಕಿಸಿದ್ದಾರೆ.

ಇದನ್ನೂ ಓದಿ Babar Azam : ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಪಾಕ್​ ನಾಯಕ ಅಜಮ್​

ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಮತ್ತೆ ಬಾಬರ್​ ಅಜಂ ಅವರನ್ನು ತಂಡದ ನಾಯಕನನ್ನಾಗಿ ಮರು ನೇಮಕ ಮಾಡಲಾಯಿತು.

ಬಾಬರ್​ ನಾಯಕತ್ವದ ಸಾಧನೆ


ಬಾಬರ್ ಅಜಮ್ ಪಾಕಿಸ್ತಾನದ ನಾಯಕನಾಗಿ 133 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 78 ಪಂದ್ಯಗಳು ಗೆದ್ದರೆ, 43 ಪಂದ್ಯಗಳಲ್ಲಿ ಸೋತಿದ್ದಾರೆ. ಒಂದು ಟೈ ಮತ್ತು ನಾಲ್ಕು ಪಂದ್ಯ ಡ್ರಾಗೊಂಡಿದೆ. ಏಕದಿನ ವಿಶ್ವಕಪ್​ ಟೂರ್ನಿ ಹೊರತುಪಡಿಸಿ ಉಳಿದ ಎಲ್ಲ ಸರಣಿಯಲ್ಲೂ ಬಾಬರ್​ ಸಾರಥ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಿತ್ತು.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ಅಮೆರಿಕ ವಿರುದ್ಧ ಜೂನ್​ 6ರಂದು ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿ ಭಾರತ ವಿರುದ್ಧ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಸೆಣಸಾಡಲಿದೆ. ಈ ಪಂದ್ಯಕ್ಕಾಗಿ ಉಭಯ ದೇಶದ ಕ್ರಿಕೆಟ್​ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

Exit mobile version