Babar Azam: ಫೋಟೋ ತೆಗೆಯಲು ಬಂದ ಅಭಿಮಾನಿಗಳಿಗೆ ಬೈದು ಓಡಿಸಿದ ಬಾಬರ್ ಅಜಂ; ವಿಡಿಯೊ ವೈರಲ್​ - Vistara News

ವೈರಲ್ ನ್ಯೂಸ್

Babar Azam: ಫೋಟೋ ತೆಗೆಯಲು ಬಂದ ಅಭಿಮಾನಿಗಳಿಗೆ ಬೈದು ಓಡಿಸಿದ ಬಾಬರ್ ಅಜಂ; ವಿಡಿಯೊ ವೈರಲ್​

Babar Azam: ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ 4 ಪಂದ್ಯಗಳ ಟಿ20 ಸರಣಿಯನ್ನಾಡಲು ಲಂಡನ್​ನಲ್ಲಿದೆ. ಈಗಾಗಲೇ ಸರಣಿಯಲ್ಲಿ 2 ಪಂದ್ಯಗಳು ಮಳೆಯಿಂದ ರದ್ದುಗೊಂಡರೆ, ಒಂದು ಪಂದ್ಯವನ್ನು ಇಂಗ್ಲೆಂಡ್​ ಗೆದ್ದಿದೆ. ಅಂತಿಮ ಪಂದ್ಯ ನಾಳೆ(ಮೇ 30) ನಡೆಯಲಿದೆ.

VISTARANEWS.COM


on

Babar Azam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್​: ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟಿ20 ಪಂದ್ಯವನ್ನಾಡಲು(England vs Pakistan) ಹೋಟೆಲ್​ನಿಂದ ತೆರಳುವ ವೇಳೆ ಅಭಿಮಾನಿಗಳು ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದ ವೇಳೆ ತಾಳ್ಮೆ ಕಳೆದುಕೊಂಡು ಭದ್ರತಾ ಸಿಬ್ಬಂದಿಗಳಿಗೆ ಎಲ್ಲರನ್ನೂ ದೂರ ಕಳುಹಿಸುವಂತೆ ಹೇಳಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ 4 ಪಂದ್ಯಗಳ ಟಿ20 ಸರಣಿಯನ್ನಾಡಲು ಲಂಡನ್​ನಲ್ಲಿದೆ. ಈಗಾಗಲೇ ಸರಣಿಯಲ್ಲಿ 2 ಪಂದ್ಯಗಳು ಮಳೆಯಿಂದ ರದ್ದುಗೊಂಡರೆ, ಒಂದು ಪಂದ್ಯವನ್ನು ಇಂಗ್ಲೆಂಡ್​ ಗೆದ್ದಿದೆ. ಅಂತಿಮ ಪಂದ್ಯ ನಾಳೆ(ಮೇ 30) ನಡೆಯಲಿದೆ. ಸರಣಿಯನ್ನು 1-1 ಸಮಬಲಗೊಳಿಸಬೇಕಿದ್ದರೆ ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಇದೇ ಪಂದ್ಯವನ್ನಾಡಲು ತೆರಳುವ ವೇಳೆ ಬಾಬರ್​ ಅವರೊಂದಿಗೆ ಅಭಿಮಾನಿಗಳು ಫೋಟೊ ಮತ್ತು ಆಟೋಗ್ರಾಫ್ ಪಡೆಯಲು ಮುಂದಾಗಿದ್ದಾರೆ. ಇದರಿಂದ ಬಾಬರ್​ಗೆ ಕಿರಿಕಿರಿ ಉಂಟಾಗಿದೆ.

ಅಭಿಮಾನಿಗಳ ದಂಡೇ ಹಿಂಬಾಲಿಸಿ ಬಂದಿದ್ದರಿಂದ ಕೋಪಗೊಂಡ ಬಾಬರ್ ಸ್ವಲ್ಪ ಹೊತ್ತು ನನ್ನನ್ನು ಪ್ರಶಾಂತವಾಗಿರಲು ಬಿಡಿ ಎಂದು ಕೋಪದಿಂದ ನಿಂದಿಸಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಎಲ್ಲರನ್ನೂ ದೂರ ಕಳುಹಿಸುವಂತೆ ಹೇಳಿದ್ದಾರೆ. ಒಂದು ಕ್ಷಣ ಕೋಪಗೊಂಡರೂ ಕೂಡ ಕೊನೆಗೆ ಅಭಿಮಾನಿಗಳೊಂದಿಗೆ ಫೋಟೊ ಕ್ಲಿಕ್ಕಿಸಿದ್ದಾರೆ.

ಇದನ್ನೂ ಓದಿ Babar Azam : ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಪಾಕ್​ ನಾಯಕ ಅಜಮ್​

ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಮತ್ತೆ ಬಾಬರ್​ ಅಜಂ ಅವರನ್ನು ತಂಡದ ನಾಯಕನನ್ನಾಗಿ ಮರು ನೇಮಕ ಮಾಡಲಾಯಿತು.

ಬಾಬರ್​ ನಾಯಕತ್ವದ ಸಾಧನೆ


ಬಾಬರ್ ಅಜಮ್ ಪಾಕಿಸ್ತಾನದ ನಾಯಕನಾಗಿ 133 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 78 ಪಂದ್ಯಗಳು ಗೆದ್ದರೆ, 43 ಪಂದ್ಯಗಳಲ್ಲಿ ಸೋತಿದ್ದಾರೆ. ಒಂದು ಟೈ ಮತ್ತು ನಾಲ್ಕು ಪಂದ್ಯ ಡ್ರಾಗೊಂಡಿದೆ. ಏಕದಿನ ವಿಶ್ವಕಪ್​ ಟೂರ್ನಿ ಹೊರತುಪಡಿಸಿ ಉಳಿದ ಎಲ್ಲ ಸರಣಿಯಲ್ಲೂ ಬಾಬರ್​ ಸಾರಥ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಿತ್ತು.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ಅಮೆರಿಕ ವಿರುದ್ಧ ಜೂನ್​ 6ರಂದು ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿ ಭಾರತ ವಿರುದ್ಧ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಸೆಣಸಾಡಲಿದೆ. ಈ ಪಂದ್ಯಕ್ಕಾಗಿ ಉಭಯ ದೇಶದ ಕ್ರಿಕೆಟ್​ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video : ನೋಯ್ಡಾದಲ್ಲಿ ನಿರ್ಮಾಣವಾಗುತ್ತಿದೆ ಲಕ್ಷುರಿ ಅಪಾರ್ಟ್‌ಮೆಂಟ್‌! ಇದರ ಬೆಲೆ ಅಬ್ಬಬ್ಬಾ!

Viral Video: ಮನೆ ಕಟ್ಟಿ ನೋಡು ಒಂದು ಮದುವೆ ಮಾಡಿ ನೋಡು ಎಂಬ ಮಾತಿನಂತೆ ಜನಸಾಮಾನ್ಯರಿಗೆ ಒಂದು ಮನೆಕಟ್ಟಿ ಅದರ ಇಎಂಐ ಕಟ್ಟುವಾಗ ಜೀವ ಬಾಯಿಗೆ ಬಂದ ಹಾಗೇ ಆಗುತ್ತದೆ. ಇರುವುದಕ್ಕೆ ಒಂದು ಸೂರು ಸಾಕು ಎನ್ನುವ ಕಾಲ ಈಗ ಬದಲಾಗಿದೆ. ನಾನಾ ವಿನ್ಯಾಸವಿರುವ ಮನೆ, ಅಪಾರ್ಟ್‌ಮೆಂಟ್‌ಗಳನ್ನು ತೆಗೆದುಕೊಳ್ಳಬೇಕು ಎಂಬ ಕನಸು ಇರುತ್ತದೆ. ಅಂಥವರು ನೋಯ್ಡಾದಲ್ಲಿ ನಿರ್ಮಾಣವಾಗುತ್ತಿರುವ ಈ ಅಪಾರ್ಟ್‌ಮೆಂಟ್‌ ಅನ್ನು ನೋಡಬಹುದು. ಇದರ ಬೆಲೆ ಕೇಳಿದ್ರೆ ನೀವು ಹೌಹಾರುತ್ತೀರಿ ಜೋಕೆ. ಟೆಕ್ಕಿಯೊಬ್ಬರು ಇದರ ವಿಡಿಯೊ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

VISTARANEWS.COM


on

Viral Video
Koo

ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಒಂದು ಮನೆಯನ್ನು ಕಟ್ಟಿಕೊಳ್ಳುವುದು ಬಹಳ ಕಠಿಣವಾದ ಕೆಲಸವಾಗಿದೆ. ಸಿಮೆಂಟ್, ಮರಳು, ಕಲ್ಲು, ಕಬ್ಬಿಣದ ಬೆಲೆ ಕೇಳಿದರೆ ಜನರಿಗೆ ಮನೆಯೂ ಬೇಡ ಜೀವನವೇ ಬೇಡ ಎಂದೆನಿಸಿ ಬಿಡುತ್ತದೆ. ಹೀಗಿರುವಾಗ ದೆಹಲಿಯ ಎನ್ ಸಿಆರ್ ಇಂಜಿನಿಯರ್ ಒಬ್ಬರು ನೋಯ್ಡಾದಲ್ಲಿ ನಿರ್ಮಿಸುತ್ತಿರುವ ಅಪಾರ್ಟ್ ಮೆಂಟ್ ಬೆಲೆ ಕೇಳಿದರೆ ನೀವು ಶಾಕ್ ಆಗುವುದಂತು ಖಂಡಿತ. ಈ ಬಗ್ಗೆ ಟೆಕ್ಕಿಯೊಬ್ಬರು ವಿಡಿಯೊ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಟೆಕ್ಕಿ ಕಾಶಿಶ್ ಛಿಬ್ಬರ್ ಎನ್ನುವವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ದೆಹಲಿಯ ಎನ್ ಸಿಆರ್ ಇಂಜಿನಿಯರ್ ಒಬ್ಬರು ನೋಯ್ಡಾದಲ್ಲಿ ಅಪಾರ್ಟ್ ಮೆಂಟ್ ಒಂದನ್ನು ನಿರ್ಮಿಸುತ್ತಿದ್ದು, ಇದರಲ್ಲಿ 4BHK ಗೆ 15 ಕೋಟಿ ರೂ ಹಾಗೂ 6BHK 25 ಕೋಟಿ ರೂ ಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಛಿಬ್ಬರ್ ಅವರು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ವಿಡಿಯೊ ಮಾಡುತ್ತಾ ನೋಯ್ಡಾ ಸೆಕ್ಟರ್ 124 ರ ವರ್ಚುವಲ್ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅವರು ಮುಂಬರುವ ದಿನಗಳಲ್ಲಿ ಎಟಿಎಸ್ ನೈಟ್ಸ್ ಬ್ರಿಡ್ಜ್ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್ ಮೆಂಟ್ ಅನ್ನು ಪರಿಶೀಲನೆ ಮಾಡಿದ್ದಾರೆ.

ಅಲ್ಲಿ 4BHK ಅಪಾರ್ಟ್ ಮೆಂಟ್ ಗೆ 15 ಕೋಟಿ ರೂ ಹಾಗೂ 6BHK ಅಪಾರ್ಟ್ ಮೆಂಟ್ ಗೆ 25 ಕೋಟಿ ರೂ ಗೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ಇಂತಹ ದುಬಾರಿ ವೆಚ್ಚದ ಅಪಾರ್ಟ್ ಮೆಂಟ್ ಅನ್ನು ಯಾರು ಖರೀದಿಸುತ್ತಾರೆ? ತಾನು ಎಷ್ಟೇ ಉದ್ಯೋಗ ಮಾಡಿದರೂ, ಎಷ್ಟೇ ವ್ಯಾಪಾರ, ಹೂಡಿಕೆ ಮಾಡಿದರೂ ಇಂತಹ ಅಪಾರ್ಟ್ ಮೆಂಟ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆಯೇ? ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಛಿಬ್ಬರ್ ಅವರು ಕೆಲವು ದಿನಗಳ ಹಿಂದೆ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊಗೆ ಒಟ್ಟು 4.4 ಮಿಲಿಯನ್ ವೀವ್ಸ್ ಹಾಗೂ ಹಲವು ಕಾಮೆಂಟ್ ಗಳು ಬಂದಿದೆ. ಹಾಗೇ ಇದು ಹಿಂದೆ ಟ್ವೀಟರ್ ನಲ್ಲಿಯೂ ಪೋಸ್ಟ್ ಆಗಿದ್ದು, ಅಲ್ಲಿ ಇದಕ್ಕೆ 1 ಮಿಲಿಯನ್ ವೀವ್ಸ್ ಬಂದಿತ್ತು ಎನ್ನಲಾಗಿದೆ.

ಇದನ್ನೂ ಓದಿ:ರೈಲಿನ ಮೇಲಿನ ಬರ್ತ್‌ನಲ್ಲಿದ್ದ ವ್ಯಕ್ತಿ ಉರುಳಿ ಬಿದ್ದು ಕೆಳ ಬರ್ತ್‌ನ ಪ್ರಯಾಣಿಕ ಸಾವು

ಈ ವಿಡಿಯೊ ನೋಡಿದ ಜನರು ಅಪಾರ್ಟ್ ಮೆಂಟ್ ನ ದುಬಾರಿ ಬೆಲೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನೋಯ್ಡಾದ ರಿಯಲ್ ಎಸ್ಟೇಟ್ ಮಧ್ಯಮ ವರ್ಗದ ಭಾರತೀಯರಿಗೆ ತಲುಪುತ್ತಿಲ್ಲ ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದರೆ, ಕೆಲವರು ಇಲ್ಲಿ ಅಪಾರ್ಟ್ ಮೆಂಟ್ ಖರೀದಿಸುವ ಬದಲು ನ್ಯೂಯಾರ್ಕ್, ಸಿಂಗಾಪುರ ನಲ್ಲಿ ಅಪಾರ್ಟ್ ಮೆಂಟ್ ಅಥವಾ ದುಬೈ ನಲ್ಲಿ ವಿಲ್ಲಾ ಖರೀದಿಸಬಹುದು ಎಂದು ಸಲಹೆ ನೀಡಿದ್ದಾರೆ. ಹಾಗೇ ಇನ್ನೊಬ್ಬರು ಸಮಸ್ಯೆಗಳ ಗೂಡಾದ ಇಂತಹ ದುಬಾರಿ ಅಪಾರ್ಟ್ ಮೆಂಟ್ ಖರೀದಿಸುವ ಬದಲು ಇದೇ ಹಣದಲ್ಲಿ ಬೇರೆ ಕಡೆ ಸ್ಥಳ ಖರೀದಿಸಿ ಮನೆ ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Ollie Robinson: 6, 6nb, 4, 6, 4, 6nb, 4, 6nb, 1; ಒಂದೇ ಓವರ್‌ನಲ್ಲಿ 43 ರನ್‌ ಕೊಟ್ಟ ಇಂಗ್ಲೆಂಡ್‌ ಬೌಲರ್; Video ಇದೆ

Ollie Robinson: ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಒಲೀ ರಾಬಿನ್‌ಸನ್‌ ಅವರು ಒಂದೇ ಓವರ್‌ಗೆ 43 ರನ್‌ ಕೊಟ್ಟಿದ್ದಾರೆ. ಸಸೆಕ್ಸ್‌ ಪರವಾಗಿ ಬೌಲಿಂಗ್‌ ಮಾಡುತ್ತಿರುವಾಗ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳು (3 ನೋಬಾಲ್‌ಗಳಿಗೆ ಸಿಕ್ಸರ್)‌, ಮೂರು ಬೌಂಡರಿ ಹಾಗೂ ಒಂದು ಸಿಂಗಲ್‌ ರನ್‌ ಬಿಟ್ಟುಕೊಂಡಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿಯೇ ಜಗತ್ತಿನಲ್ಲಿ ಎರಡನೇ ದುಬಾರಿ ಓವರ್‌ ಎನಿಸಿದೆ.

VISTARANEWS.COM


on

ollie robinson
Koo

ಲಂಡನ್‌: ಎಂತಹದ್ದೇ ಕೆಟ್ಟ ಬೌಲರ್‌ ಆದರೂ, ಎಂತಹ ಕೆಟ್ಟ ಎಸೆತಗಳನ್ನೇ ಎಸೆದರೂ, ಒಬ್ಬ ಬೌಲರ್‌ ಒಂದು ಓವರ್‌ನಲ್ಲಿ ಎಷ್ಟು ರನ್‌ ಬಿಟ್ಟುಕೊಡಲು ಸಾಧ್ಯ? ಆರಕ್ಕೆ ಆರು ಎಸೆತಗಳಿಗೆ ಸಿಕ್ಸರ್‌ ಬಾರಿಸಿದರೂ ಗರಿಷ್ಠ 36 ರನ್‌ ಬಿಟ್ಟುಕೊಡಬಹುದು. ಭಾರತದ ಯುವರಾಜ್‌ ಸಿಂಗ್‌ (Yuvraj Singh) ಸೇರಿ ಜಗತ್ತಿನಲ್ಲಿ ಕೆಲವೇ ಕೆಲವು ಬ್ಯಾಟ್ಸ್‌ಮನ್‌ಗಳು ಮಾತ್ರ ಒಂದೇ ಓವರ್‌ನ ಆರಕ್ಕೆ ಆರೂ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ್ದಾರೆ. ಆದರೆ, ಇಂಗ್ಲೆಂಡ್‌ನ ವೇಗದ ಬೌಲರ್‌ ಒಲೀ ರಾಬಿನ್‌ಸನ್‌ (Ollie Robinson) ಅವರು ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಅನಗತ್ಯ ದಾಖಲೆ ಬರೆದಿದ್ದಾರೆ.

ಹೌದು, ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಒಲೀ ರಾಬಿನ್‌ಸನ್‌ ಅವರು ಒಂದೇ ಓವರ್‌ಗೆ 43 ರನ್‌ ಕೊಟ್ಟಿದ್ದಾರೆ. ಸಸೆಕ್ಸ್‌ ಪರವಾಗಿ ಬೌಲಿಂಗ್‌ ಮಾಡುತ್ತಿರುವಾಗ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳು (3 ನೋಬಾಲ್‌ಗಳಿಗೆ ಸಿಕ್ಸರ್)‌, ಮೂರು ಬೌಂಡರಿ ಹಾಗೂ ಒಂದು ಸಿಂಗಲ್‌ ರನ್‌ ಬಿಟ್ಟುಕೊಂಡಿದ್ದಾರೆ. ಲೀಸೆಸ್ಟರ್‌ಶೈರ್‌ ತಂಡದ ಲೂಯಿಸ್‌ ಕಿಂಬರ್‌ ಅವರು ಐದು ಸಿಕ್ಸರ್‌ ಹಾಗೂ ಮೂರು ಬೌಂಡರಿ ಬಾರಿಸುವ ಮೂಲಕ ವಿಶಿಷ್ಟ ದಾಖಲೆ ಬರೆದಿದ್ದಾರೆ.

ಒಲೀ ರಾಬಿನ್‌ಸನ್‌ ಎಸೆದ ಮೊದಲ ಎಸೆತವನ್ನು ಲೂಯಿಸ್‌ ಕಿಂಬರ್‌ ಸಿಕ್ಸರ್‌ಗೆ ಅಟ್ಟಿದರು. ಎರಡನೇ ಎಸೆತವು ನೋ ಬಾಲ್‌ ಆದರೆ, ಅದಕ್ಕೂ ಸಿಕ್ಸರ್‌ ಬಾರಿಸಿದರು. ನಂತರ ಬೌಂಡರಿ, ಸಿಕ್ಸರ್‌, ಬೌಂಡರಿ, ಸಿಕ್ಸರ್‌ (ನೋ ಬಾಲ್)‌, ಬೌಂಡರಿ, ಸಿಕ್ಸರ್‌ (ನೋ ಬಾಲ್)‌ ಹಾಗೂ ಕೊನೆಯ ಎಸೆತದಲ್ಲಿ ಒಂದು ರನ್‌ ಬಾರಿಸಿದರು. 30 ವರ್ಷದ ರಾಬಿನ್‌ಸನ್‌ ಅವರು ಇಂಗ್ಲೆಂಡ್‌ ಪರವಾಗಿ 20 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಸಾಕಷ್ಟು ಅನುಭವ ಇದ್ದರೂ ಒಂದೇ ಒಂದು ಡಾಟ್‌ ಬಾಲ್‌ ಎಸೆಯಲು ಆಗಲಿಲ್ಲ.

2ನೇ ಅತಿ ದುಬಾರಿ ಓವರ್‌‌

ಒಲೀ ರಾಬಿನ್‌ಸನ್‌ ಅವರು ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಪ್ರಥಮ ದರ್ಜೆ ಇತಿಹಾಸದಲ್ಲಿಯೇ ಎರಡನೇ ಅತಿ ದುಬಾರಿ ಓವರ್‌ ಎಸೆದ ಬೌಲರ್‌ ಎನಿಸಿದರು. 1990ರಲ್ಲಿ ನ್ಯೂಜಿಲ್ಯಾಂಡ್‌ನ ಬರ್ಟ್‌ ವ್ಯಾನ್ಸ್‌ ಅವರು ಶೆಲ್‌ ಟ್ರೋಫಿ ಪಂದ್ಯದಲ್ಲಿ 77 ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಇತಿಹಾಸವಾಗಿದೆ. 1998ರಲ್ಲಿ ಇಂಗ್ಲೆಂಡ್‌ನ ಅಲೆಕ್ಸ್‌ ಟುಡೋರ್‌ ಅವರು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ‌38 ರನ್‌ ಬಿಟ್ಟುಕೊಟ್ಟಿದ್ದು ಇದುವರೆಗಿನ ಎರಡನೇ ದಾಖಲೆ ಆಗಿತ್ತು. ಈಗ ಆ ಅನಗತ್ಯ ದಾಖಲೆಯು ಒಲೀ ರಾಬಿನ್‌ಸನ್‌ ಅವರದ್ದಾಗಿದೆ.

ಇದನ್ನೂ ಓದಿ: WI vs AFG: ಒಂದೇ ಓವರ್​ನಲ್ಲಿ 36 ರನ್​ ಗಳಿಸಿ ಯುವರಾಜ್​ ಸಿಂಗ್​ ದಾಖಲೆ ಸರಿಗಟ್ಟಿದ ನಿಕೋಲಸ್​ ಪೂರನ್​

Continue Reading

ದೇಶ

Serial Bride: ಹಲವು ಜನರನ್ನು ಮದುವೆಯಾಗಿ ವಂಚಿಸಿದ್ದ ಮಹಿಳೆಗೆ ಎಚ್‌ಐವಿ; ಮಾಜಿ ವರಗಳಿಗಾಗಿ ಶೋಧ!

Serial Bride: ಅರೇಂಜ್‌ ಮ್ಯಾರೇಜ್‌ ಹೆಸರಿನಲ್ಲಿ ಮಹಿಳೆಯು ಹಲವರಿಗೆ ವಂಚಿಸಿದ್ದಳು. ತಾನು ಸೇರಿ ಏಳು ಜನರ ಗ್ಯಾಂಗ್‌ ಕಟ್ಟಿದ್ದ ಮಹಿಳೆಯು, ವಯಸ್ಸಾದರೂ ಮದುವೆಯಾಗದವರು, ಕಂಕಣ ಭಾಗ್ಯ ಕೂಡಿ ಬರದವರು, ಹೆಂಡತಿ ತೀರಿಕೊಂಡ ಬಳಿಕ ಒಂಟಿಯಾದವರನ್ನು ಗುರುತಿಸಿ, ಅವರನ್ನು ಮದುವೆಯಾಗುತ್ತಿದ್ದಳು. ಬಳಿಕ ಅವರ ಹಣ, ಚಿನ್ನ ಕದ್ದು ಪರಾರಿಯಾಗುತ್ತಿದ್ದಳು. ಈಗ ಈಕೆ ಜೈಲಿನಲ್ಲಿದ್ದು, ಎಚ್‌ಐವಿ ದೃಢಪಟ್ಟಿದೆ. ಇದು ಈಗ ಪೊಲೀಸರು ಹಾಗೂ ವೈದ್ಯಾಧಿಕಾರಿಗಳಿಗೆ ಹೊಸ ಆತಂಕ ತಂದೊಡ್ಡಿದೆ.

VISTARANEWS.COM


on

Serial Bride
Koo

ಲಖನೌ: ದೇಶದ ಹಲವೆಡೆ ಹತ್ತಾರು ಜನರನ್ನು ನಂಬಿಸಿ, ಅವರನ್ನು ಮದುವೆಯಾಗಿ, ಬಳಿಕ ಅವರ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗುತ್ತಿದ್ದ, ಸೀರಿಯಲ್‌ ಬ್ರೈಡ್‌ (ಸರಣಿ ಮದುಮಗಳು ಅಥವಾ Serial Bride) ಎಂದೇ ಖ್ಯಾತಿಯಾಗಿದ್ದ ಮಹಿಳೆಗೆ ಈಗ ಎಚ್‌ಐವಿ ದೃಢಪಟ್ಟಿರುವುದು ವೈದ್ಯಕೀಯ ವರದಿಗಳಿಂದ ಸಾಬೀತಾಗಿದೆ. ಇದು ಈಗ ಪೊಲೀಸರಿಗೆ ಮತ್ತೊಂದು ಸವಾಲಾಗಿದ್ದು, ಈಕೆಯನ್ನು ಮದುವೆಯಾಗಿದ್ದ ಮಾಜಿ ಪತಿಯರನ್ನು ಹುಡುಕಲು ಉತ್ತರ ಪ್ರದೇಶ (Uttar Pradesh) ಹಾಗೂ ಉತ್ತರಾಖಂಡದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಅರೇಂಜ್‌ ಮ್ಯಾರೇಜ್‌ ಹೆಸರಿನಲ್ಲಿ ಮಹಿಳೆಯು ಹಲವರಿಗೆ ವಂಚಿಸಿದ್ದಳು. ತಾನು ಸೇರಿ ಏಳು ಜನರ ಗ್ಯಾಂಗ್‌ ಕಟ್ಟಿದ್ದ ಮಹಿಳೆಯು, ವಯಸ್ಸಾದರೂ ಮದುವೆಯಾಗದವರು, ಕಂಕಣ ಭಾಗ್ಯ ಕೂಡಿ ಬರದವರು, ಹೆಂಡತಿ ತೀರಿಕೊಂಡ ಬಳಿಕ ಒಂಟಿಯಾದವರನ್ನು ಗುರುತಿಸಿ, ಅವರನ್ನು ಮದುವೆಯಾಗುತ್ತಿದ್ದಳು. ಮದುವೆಯಾದ ಬಳಿಕ ಗ್ಯಾಂಗ್‌ನ ಸದಸ್ಯರನ್ನು ತನ್ನ ಸಂಬಂಧಿಕರು ಎಂದು ನೂತನ ವರಗಳಿಗೆ ಪರಿಚಯ ಮಾಡಿಸುತ್ತಿದ್ದಳು. ಇದಾದ ಬಳಿಕ, ಆ ವ್ಯಕ್ತಿಯ ಬಳಿಯ ನಗದು, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಳು.

World Aids Vaccine Day

ಹೀಗೆ, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಹಲವರಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಹಾಗೂ ಆರು ಆರೋಪಿಗಳನ್ನು ಬಂಧಿಸಿದ್ದರು. ಮಹಿಳೆಯ ಸೇರಿ ಏಳು ಜನರನ್ನು ಮುಜಫ್ಫರ್‌ನಗರ ಜೈಲಿನಲ್ಲಿ ಇರಿಸಲಾಗಿದೆ. ಇತ್ತೀಚೆಗೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ನೀಡಿದ ವರದಿಯಲ್ಲಿ, ಮಹಿಳೆಗೆ ಏಡ್ಸ್‌ ಇರುವುದು ಪತ್ತೆಯಾಗಿದೆ. ಇದು ಈಗ ಭೀಕರ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಿದೆ.

“ಮಹಿಳೆಯು ಹಲವು ಜನರಿಗೆ ವಂಚಿಸಿದ್ದು, ಹತ್ತಾರು ಜನರು ಈಕೆಯ ಜತೆ ದೈಹಿಕ ಸಂಪರ್ಕಕ್ಕೆ ಬಂದಿದ್ದಾರೆ. ಈಗ ಮಹಿಳೆಗೆ ಎಚ್‌ಐವಿ ಇದೆ ಎಂಬುದು ಇತ್ತೀಚಿನ ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ಈಕೆಯ ಜತೆ ಲೈಂಗಿಕ ಸಂಪರ್ಕ ಹೊಂದಿದವರು, ಮದುವೆಯಾದವರನ್ನು ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹುಡುಕಲಾಗುತ್ತಿದೆ” ಎಂದು ಮುಜಫ್ಫರ್‌ನಗರ ಜೈಲು ಎಸ್‌ಪಿ ಸೀತಾರಾಮ್‌ ಶರ್ಮಾ ಅವರು ಸುದ್ದಿಗಾರರರಿಗೆ ಮಾಹಿತಿ ನೀಡಿದ್ದಾರೆ. ಇನ್ನು, ಈಕೆಯನ್ನು ಮದುವೆಯಾದವರು ಕೂಡಲೇ ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳಿ ಎಂಬುದಾಗಿ ವೈದ್ಯಾಧಿಕಾರಿಗಳು ಕರೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Sebi Fines: ವಂಚನೆ ಪ್ರಕರಣ; ಟಿವಿ ನಿರೂಪಕ, ವಿಶ್ಲೇಷಕನಿಗೆ ತಲಾ 1 ಕೋಟಿ ರೂ. ದಂಡ ವಿಧಿಸಿದ ಸೆಬಿ

Continue Reading

ದೇಶ

Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

Narendra Modi: ಸಂಸತ್‌ನಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ಇಬ್ಬರು ಪುಟಾಣಿಗಳೊಂದಿಗೆ ಮೋದಿ ನಲಿದಾಡಿದ್ದಾರೆ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಇಬ್ಬರು ಮೊಮ್ಮಕ್ಕಳು ಸಂಸತ್‌ಗೆ ಆಗಮಿಸಿದ್ದಾರೆ. ಅವರು ನರೇಂದ್ರ ಮೋದಿ ಅವರ ಕಚೇರಿಗೆ ತೆರಳಿದ್ದು, ಇಬ್ಬರೂ ಆಗಮಿಸುತ್ತಲೇ ಮೋದಿ ಅವರು ನಗುತ್ತಲೇ ಅವರನ್ನು ಸ್ವಾಗತಿಸಿದ್ದಾರೆ. ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಕಾಲ ಕಳೆದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

VISTARANEWS.COM


on

Narendra Modi
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಚುನಾವಣೆ ರ‍್ಯಾಲಿ ಇರಲಿ, ರಕ್ಷಾಬಂಧನವೇ ಇರಲಿ, ಎಲ್ಲಿಯೇ ಮಕ್ಕಳನ್ನು ಕಂಡರೂ ಅವರೊಂದಿಗೆ ಮೋದಿ ಬೆರೆಯುತ್ತಾರೆ. ಅವರ ಜತೆ ಒಂದಷ್ಟು ಕಾಲ ಕಳೆಯುತ್ತಾರೆ. ಕಿವಿ ಹಿಂಡಿ ಚೇಷ್ಟೆ ಮಾಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ನರೇಂದ್ರ ಮೋದಿ ಅವರು ಬುಧವಾರ (ಜೂನ್‌ 26) ಸಂಸತ್ತಿನಲ್ಲಿ (Parliament) ಇಬ್ಬರು ಬಾಲಕಿಯರೊಂದಿಗೆ ಕಾಲ ಕಳೆದಿದ್ದಾರೆ. ಸಂಸತ್‌ ಅಧಿವೇಶನ, ಪ್ರತಿಪಕ್ಷಗಳ ಗಲಾಟೆ, ನೂತನ ಸ್ಪೀಕರ್‌ ಆಯ್ಕೆಯ ಭರಾಟೆಯ ಮಧ್ಯೆಯೂ ಮೋದಿ ಅವರು ಇಬ್ಬರು ಪುಟಾಣಿಗಳೊಂದಿಗೆ ಕಾಲ ಕಳೆದಿದ್ದಾರೆ.

ಹೌದು, ಸಂಸತ್‌ನಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ಇಬ್ಬರು ಪುಟಾಣಿಗಳೊಂದಿಗೆ ಮೋದಿ ನಲಿದಾಡಿದ್ದಾರೆ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಇಬ್ಬರು ಮೊಮ್ಮಕ್ಕಳು ಸಂಸತ್‌ಗೆ ಆಗಮಿಸಿದ್ದಾರೆ. ಅವರು ನರೇಂದ್ರ ಮೋದಿ ಅವರ ಕಚೇರಿಗೆ ತೆರಳಿದ್ದು, ಇಬ್ಬರೂ ಆಗಮಿಸುತ್ತಲೇ ಮೋದಿ ಅವರು ನಗುತ್ತಲೇ ಅವರನ್ನು ಸ್ವಾಗತಿಸಿದ್ದಾರೆ. ಇನ್ನು, ಪುಟಾಣಿಗಳೂ ಅಷ್ಟೇ, ಮೋದಿ ಅವರ ಎದುರು ದೇಶಭಕ್ತಿ ಗೀತೆಯನ್ನು ಒಟ್ಟಿಗೆ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಇಬ್ಬರೂ ಒಂದೇ ಬಣ್ಣದ ದಿರಸು ಧರಿಸಿದ್ದು ವಿಶೇಷವಾಗಿತ್ತು. ಇಬ್ಬರು ಪುಟಾಣಿಗಳೊಂದಿಗೆ ಮೋದಿ ಸಮಯ ಕಳೆದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

18ನೇ ಲೋಕಸಭೆಯ ಮೊದಲ ಅಧಿವೇಶನದ ಮೂರನೇ ದಿನವಾದ ಬುಧವಾರ ಹಲವು ಮಹತ್ವದ ಘಟನೆಗಳಿಗೆ ಸಂಸತ್ ಸಾಕ್ಷಿಯಾಯಿತು. ಸ್ಪೀಕರ್‌ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಓಂ ಬಿರ್ಲಾಅವರು ಎರಡನೇ ಬಾರಿ ಲೋಕಸಭೆಯ ಸ್ಪೀಕರ್‌ ಆಗಿ ಚುನಾಯಿತರಾಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಮತ್ತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪರಸ್ಪರ ಹಸ್ತಾಲಾಘವ ಮಾಡಿದ ಅಪರೂಪದ ಕ್ಷಣಗಳಿಗೆ ಇಡೀ ಸದನವೇ ಸಾಕ್ಷಿ ಆಯಿತು.

ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಚುನಾಯಿತರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕರ ರಾಹುಲ್‌ ಗಾಂಧಿ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದರು. ಈ ವೇಳೆ ಪರಸ್ಪರ ಶೇಕ್‌ ಹ್ಯಾಂಡ್‌ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಅವರ ಸೀಟ್‌ವರೆಗೆ ಕರೆದೊಯ್ದರು. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಓಂ ಬಿರ್ಲಾ ಅವರು ಬಹುಮತ ಪಡೆದುಕೊಂಡರು. ಓಂ ಬಿರ್ಲಾ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು. ಬಳಿಕ ಹಲವು ನಾಯಕರು ಅನುಮೋದಿಸಿದರು. ಧ್ವನಿ ಮತದ ಮೂಲಕ ಸದಸ್ಯರು ಮತ ಚಲಾಯಿಸಿದರು. 

ಇದನ್ನೂ ಓದಿ: Parliament Sessions: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸದನ; ಶೇಕ್‌ ಹ್ಯಾಂಡ್‌ ಮಾಡಿದ ಪ್ರಧಾನಿ ಮೋದಿ, ರಾಹುಲ್‌

Continue Reading
Advertisement
IND vs ENG
ಕ್ರೀಡೆ11 mins ago

IND vs ENG: ಹೈವೋಲ್ಟೇಜ್ ಸೆಮಿ ಕಾದಾಟಕ್ಕೆ ಕ್ಷಣಗಣನೆ; ಸೇಡು ತೀರಿಸಲು ರೋಹಿತ್​ ಪಡೆ ಸಜ್ಜು

Parliament Sessions
ದೇಶ24 mins ago

Parliament Sessions: ಸೆಂಗೋಲ್‌ ಮೇಲೆ ಪ್ರತಿಪಕ್ಷಗಳ ಕಣ್ಣು; ಸಂಸತ್‌ನಲ್ಲಿ ಭಾರೀ ಕೋಲಾಹಲ

Bengaluru Metro
Latest25 mins ago

Bengaluru Metro: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

Nitin Gadkari
ಪ್ರಮುಖ ಸುದ್ದಿ29 mins ago

Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್​ ಶುಲ್ಕ ಕಟ್ಟಬೇಡಿ; ನಿತಿನ್​ ಗಡ್ಕರಿ ಸೂಚನೆ

IND vs ENG Semi Final
ಕ್ರೀಡೆ45 mins ago

IND vs ENG Semi Final: ಮೀಸಲು ದಿನ ಇರದ ಭಾರತ-ಇಂಗ್ಲೆಂಡ್​ ಸೆಮಿ ಪಂದ್ಯದ ಮಳೆ ನಿಯಮ ಹೇಗಿದೆ?

Droupadi Murmu
ದೇಶ57 mins ago

Droupadi Murmu: ನೀಟ್‌ ಅಕ್ರಮ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು

Fazalhaq Farooqi
ಕ್ರೀಡೆ58 mins ago

Fazalhaq Farooqi : ವಿಶ್ವ ಕಪ್​ 2024ರಲ್ಲಿ ಹೊಸ ದಾಖಲೆ ಬರೆದ ಆಪ್ಘನ್ ಬೌಲರ್​ ಫಜಲ್ಹಾಕ್​ ಫಾರೂಕಿ

Vande Bharath Train
Latest1 hour ago

Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

Actor Darshan
ಸಿನಿಮಾ1 hour ago

Actor Darshan : ನಟ ದರ್ಶನ್‌ಗಾಗಿ ಊಟ ಬಿಟ್ಟು ಜೈಲಿನ ಹೊರಗೆ ವಿಶೇಷಚೇತನ ಯುವತಿ ಗೋಳಾಟ

cm siddaramaiah price hikes
ಕರ್ನಾಟಕ2 hours ago

CM Siddaramaiah: ₹2000 ಕೊಟ್ಟು ₹4740 ಕಿತ್ತುಕೊಳ್ಳುತ್ತಿರುವ ರಾಜ್ಯ ಸರಕಾರ! ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿರುವುದರ ಲೆಕ್ಕ ಇಲ್ಲಿದೆ ನೋಡಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rains Effected
ಮಳೆ3 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

ಟ್ರೆಂಡಿಂಗ್‌