ನವದೆಹಲಿ: ವಿದ್ಯಾರ್ಥಿಗಳು ಬಾತ್‌ರೂಮ್‌ನಲ್ಲಿ (Hostel Bathroom) ಹಸ್ತಮೈಥುನ ಮಾಡಿಕೊಳ್ಳಬಾರದು (Ban on Masturbation) ಎಂಬ ಐಐಟಿ ರೂರ್ಕಿ(IIT Roorkee)ಯ ನೋಟಿಸ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಹಸ್ತಮೈಥುನ ಮಾಡಿಕೊಳ್ಳುವ ಐಐಟಿ ರೂರ್ಕಿ ಹಾಸ್ಟೆಲ್ ನಿಮಯಗಳ ಉಲ್ಲಂಘನೆಯಾಗುತ್ತದೆ ಎಂದು ಆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಹಾಗೊಮ್ಮೆ, ಹಸ್ತು ಮೈಥುನ ಮಾಡಿಕೊಳ್ಳುವುದೇ ಆಗಿದ್ದರೆ ವಿದ್ಯಾರ್ಥಿಗಳು ತಮ್ಮ ರೂಮಿನಲ್ಲಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದ್ದು, ಸಖತ್ ವೈರಲ್ ಆಗಿದೆ(Viral News). ಆದರೆ, ವಾಸ್ತವದಲ್ಲಿ ಈ ರೀತಿಯ ನೋಟಿಸ್ ಅನ್ನು ಐಐಟಿ ರೂರ್ಕಿ ಹೊರಡಿಸಿಲ್ಲ. ಅದೊಂದು ಫೇಕ್ ನೋಟಿಸ್ ಆಗಿದೆ(Fact Check).
IIT Roorkee 😂 pic.twitter.com/uKR04iac4e
— Adv Abhishek Gaharwar (@AbhishekGaharwr) September 9, 2023
ಐಐಟಿ ರೂರ್ಕಿಯ ಹಾಸ್ಟೆಲ್‌ನ ‘ರಾಜೇಂದ್ರ ಭವನ’ದ ಲೆಟರ್‌ಹೆಡ್ ಹೊಂದಿರುವ ಫೇಕ್ ನೋಟೀಸ್‌ನಲ್ಲಿ, “ಶವರ್‌ಗಳಲ್ಲಿ ಹಸ್ತಮೈಥುನವು ವಸತಿ ಸಂಹಿತೆಯ ಉಲ್ಲಂಘನೆಯಾಗಿದೆ. ಶವರ್ ಡ್ರೈನ್‌ಗಳನ್ನು ವೀರ್ಯವನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿಲ್ಲ! ಡ್ರೈನ್‌ಗಳಲ್ಲಿ ಅತಿಯಾದ ಪ್ರಮಾಣದ ವೀರ್ಯವು ನಿರ್ವಹಣೆಗಾಗಿ ಸಾವಿರಾರು ಡಾಲರ್‌ಗಳನ್ನು ವೆಚ್ಚ ಮಾಡುತ್ತದೆ ಮತ್ತು ಇದರಿಂದಾಗಿ ಮುಂದಿನ ವರ್ಷ ಹಾಸ್ಟೆಲ್ ಶುಲ್ಕವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ದಯವಿಟ್ಟು ನಿಮ್ಮ ಸ್ವಂತ ಕೋಣೆಯಲ್ಲಿ ಹಸ್ತಮೈಥುನ ಮಾಡಿ. ಯಾವುದೇ ಪ್ರಶ್ನೆಗಳಿದ್ದರೆ ದಯವಿಟ್ಟು ನಿಮ್ಮ ವಾರ್ಡನ್ ಅನ್ನು ನೋಡಿ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು ಎಂದು ಬರೆಯಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಹಿಂದು ಯುವಕನ ಜತೆ ತಿರುಗಾಡುತ್ತಿದ್ದ ಮುಸ್ಲಿಂ ಯುವತಿಯ ಬುರ್ಖಾ ಬಿಚ್ಚಿ ಹಲ್ಲೆ; ಯುವಕನಿಗೂ ಏಟು
ಈ ಕುರಿತು ರಾಜೇಂದ್ರ ಭವನ ಹಾಸ್ಟೆಲ್‌ನ ವಾರ್ಡನ್ ಕಚೇರಿಯನ್ನು ಸಂಪರ್ಕಿಸಿದಾಗ ಈ ನೋಟಿಸ್ ನಕಲಿಯಾಗಿದ್ದು, ವಾರ್ಡನ್ ಆ ರೀತಿಯ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ತಿಳಿಸಿದೆ. ಅಲ್ಲದೇ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಪೋಸ್ಟ್, ಫೇಕ್ ಸುದ್ದಿ ಅಭಿಯಾನದ ಭಾಗವಾಗಿದೆ. ಕೆಲವು ವರ್ಷಗಳಿಂದ ಈ ಫೇಕ್ ನೋಟಿಸ್ ಹರಿದಾಡುತ್ತಿದೆ ಎಂದು ವಾರ್ಡನ್ ಕೂಡ ಹೇಳಿದ್ದಾರೆ. ಅಲ್ಲದೇ ಈ ನಕಲಿ ಸುತ್ತೋಲೆ ಸಂಬಂಧ ಪೊಲೀಸರಿಗೆ ಐಐಟಿ ರೂರ್ಕಿ ಪೊಲೀಸರಿಗೆ ದೂರು ಕೂಡ ನೀಡಿದೆ.
— IIT Roorkee (@iitroorkee) September 11, 2023