ಬೆಂಗಳೂರು: ಬೆಂಗಳೂರಿನಲ್ಲಿ ಹಿಂದೊಮ್ಮೆ (Bengaluru News) ಮುತ್ತುರಾಯ ನಗರದ ಸಪ್ತಗಿರಿ ಲೇಔಟ್ ಹಾಗೂ ಯುನಿಟಿ ಬಿಲ್ಡಿಂಗ್‌ನ ಸಿಲ್ವರ್ ಜೂಬ್ಲಿ ಬ್ಲಾಕ್ ಮಿಷನ್ ರೋಡ್‌ನಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ (Animal Assault) ಕೊಂದಿದ್ದರು. ಇದೀಗ ದೇವರ ಸ್ವರೂಪದಂತೆ ಕಾಣುವ ಹಸುವಿನ ಮೇಲೆ ಕಾರು ಹತ್ತಿಸಿ ನಿರ್ದಯಿಯೊಬ್ಬ ಕ್ರೌರ್ಯ ಮೆರೆದಿದ್ದಾನೆ.
ಕಲಿಯುಗದ ರಾಕ್ಷಸನೊಬ್ಬ ಮೂಕ ಪ್ರಾಣಿಯ ಮೇಲೆ ದರ್ಪ ತೋರಿದ್ದಾನೆ. ಕಾರಲ್ಲಿ ಬಂದ ಹಂತಕ ಕರುವಿಗೆ ಡಿಕ್ಕಿ ಹೊಡೆದು ನಂತರ ಕಾರು ಹತ್ತಿಸಿದ್ದಾನೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಘಟನೆ ನಡೆದಿದೆ. ಕರು ಚಕ್ರದಡಿ ಸಿಲುಕಿ ಕೂಗುತ್ತಿದ್ದರೂ ಕರುಣೆ ತೋರದ ಪಾಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಮರಣ ವೇದನೆಯಿಂದ ನರಳಾಡಿದ ಕರುವಿನ ಹೊಟ್ಟೆಹಾಗೂ ಕಾಲಿನ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ವಾರದ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪಾಪಿಯ ಕ್ರೌರ್ಯವು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಈ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೂಕಜೀವಿಗಳ ಮೇಲೆ ಇಂತಹ ಕ್ರೌರ್ಯ ತೋರಿಸುವುದು ಸರಿಯಲ್ಲ ಎಂದಿದ್ದಾರೆ. ಪ್ರಾಣಿಗಳ ಮೇಲೆ ದರ್ಪ ತೋರುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Love Failure: ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯ್ತೀನಿ ಎಂದಳು ಇನ್ಸ್ಟಾಗ್ರಾಮ್ ಚೆಲುವೆ
ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ನಿರ್ದಯಿ
ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru News ) ಅಮಾನವೀಯ ಘಟನೆಗೆ ಸಾಕ್ಷಿ ಆಗಿತ್ತು.
ನಿರ್ದಯಿಯೊಬ್ಬ ಮನೆ ಮುಂದೆ ಮಲಗಿದ್ದ ನಾಯಿ ಮೇಲೆ ಕಾರು ಚಲಾಯಿಸಿಕೊಂಡು ಹೋಗಿದ್ದ. ಉದ್ದೇಶ ಪೂರ್ವಕವಾಗಿಯೇ ನಾಯಿ ಮೇಲೆ ಕಾರು ಚಾಲನೆ ಮಾಡಲಾಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು
ಕಾರು ಬರುವುದು ಅರಿವಿಗೆ ಬರುತ್ತಿದ್ದಂತೆ ಬೀದಿಯಲ್ಲಿ ಮಲಗಿದ್ದ ಶ್ವಾನ ಜಾಗ ಬಿಡಲು ಮುಂದಾಗಿತ್ತು. ಆದರೆ ನಾಯಿ ಏಳುವುದು ಕಾಣುತ್ತಿದ್ದಂತೆ ಕಾರಿನ ವೇಗ ಹೆಚ್ಚಿಸಿದ ದುಷ್ಕರ್ಮಿ ನಾಯಿ ಮೇಲೆ ಹರಿಸಿಕೊಂಡು ಹೋಗಿದ್ದ. ಕಾರಿಗೆ ಸಿಕ್ಕು ಒದ್ದಾಡಿದ ನಾಯಿ ಕ್ಷಣ ಮಾತ್ರದಲ್ಲಿಯೇ ಪ್ರಾಣ ಬಿಟ್ಟಿತ್ತು.
ಮುತ್ತುರಾಯ ನಗರದ ಸಪ್ತಗಿರಿ ಲೇಔಟ್ ಜನವರಿ 7ರಂದು ಬೆಳಗ್ಗೆ 11.10ರ ವೇಳೆಗೆ ಈ ದುರ್ಘಟನೆ ಸಂಭವಿಸಿತ್ತು. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿ ಸುಬ್ರಹ್ಮಣ್ಯ ಎಂಬುವವರ ಹೆಸರಲ್ಲಿ ರಿಜಿಸ್ಟರ್ ಆಗಿರುವ KA 05 MP 5836 ಸಂಖ್ಯೆಯ ಮಾರುತಿ ಸ್ವಿಫ್ಟ್ ಕಾರು ಎಂದು ತಿಳಿದು ಬಂದಿತ್ತು.
ಇತ್ತ ಈ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೂಕಜೀವಿಗಳ ಮೇಲೆ ಇಂತಹ ಕ್ರೌರ್ಯ ತೋರಿಸುವುದು ಸರಿಯಲ್ಲ ಎಂದಿದ್ದರು.
ಬೆಂಗಳೂರು: ಮಲಗಿದ್ದ ಬೀದಿ ನಾಯಿಯ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru News) ಯುನಿಟಿ ಬಿಲ್ಡಿಂಗ್‌ನ ಸಿಲ್ವರ್ ಜೂಬ್ಲಿ ಬ್ಲಾಕ್ ಮಿಷನ್ ರೋಡ್ ಬಳಿ ನಡೆದಿತ್ತು.
ಕಳೆದ ಜ. 25ರಂದು ಅಮಾನವೀಯ ಘಟನೆ ನಡೆದಿದ್ದು, ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾರ್ಕಿಂಗ್ ಜಾಗದಲ್ಲಿ ನಾಲ್ಕೈದು ಶ್ವಾನಗಳು ಒಂದೆಡೆ ಇದ್ದರೆ, ಇನ್ನೊಂದು ಶ್ವಾನವು ಮಲಗಿತ್ತು. ಪಾರ್ಕಿಂಗ್‌ನಿಂದ ಕಾರು ತೆಗೆದ ಚಾಲಕ ಏಕಾಏಕಿ ಮಲಗಿದ್ದ ಶ್ವಾನದ ಸಮೀಪ ಬಂದಿದ್ದಾನೆ. ಕಾರಿನ ಶಬ್ಧಕ್ಕೆ ಎದ್ದೇಳಲು ಮುಂದಾಗುವಷ್ಟರಲ್ಲಿ ನಾಯಿ ಮೇಲೆ ಕಾರನ್ನು ಹಾಯಿಸಿದ್ದಾನೆ.
ನಾಯಿ ಮೇಲೆ ಕಾರಿನ ಮುಂದಿನ ಟಯರ್ ಹರಿದ ಪರಿಣಾಮ ನರಳಾಡಿ ನರಳಾಡಿ ಸಾವನ್ನಪ್ಪಿತ್ತು. ಸದ್ಯ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಚಾಲಕನ ಅರಿವಿಗೆ ಬಾರದೆ ಸಂಭವಿಸಿದ ಘಟನೆಯಾ ಅಥವಾ ಬೇಕಂತಲೇ ಮಲಗಿದ್ದ ನಾಯಿ ಮೇಲೆ ಕಾರನ್ನು ಹತ್ತಿಸಿದ್ದನ್ನಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ