Site icon Vistara News

Viral Video | 230 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ, 4 ಸಾವು, ಅಪಘಾತಕ್ಕೂ ಮುನ್ನ ಫೇಸ್ಬುಕ್ ಲೈವ್

Accident

ಲಖನೌ: ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಆಗಲಿ, ಜನ ಕ್ಷಿಪ್ರವಾಗಿ ಮಹಾ ನಗರಗಳನ್ನು ತಲುಪಲಿ ಎಂಬ ದೃಷ್ಟಿಯಿಂದ ಎಕ್ಸ್‌ಪ್ರೆಸ್‌ ವೇಗಳನ್ನು ನಿರ್ಮಿಸಲಾಗುತ್ತದೆ. ಆದರೆ, ಕೆಲವೊಬ್ಬರಿಗೆ ಇಂತಹ ಎಕ್ಸ್‌ಪ್ರೆಸ್‌ ವೇಗಳು ಅತಿ ವೇಗವಾಗಿ ಕಾರು ಚಲಾಯಿಸುವ ಸಾಧನಗಳಾಗುತ್ತವೆ. ಆದರೆ, ಇದರಿಂದ ತಮಗೂ ಹಾಗೂ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ಎಂಬುದನ್ನು ಮರೆಯುತ್ತಾರೆ. ಹೀಗೆ, ವೇಗವಾಗಿ ಕಾರು ಚಲಾಯಿಸಿದ ಕಾರಣ ಉತ್ತರ ಪ್ರದೇಶದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಹೀಗೆ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇನಲ್ಲಿ ಅತಿ ವೇಗವಾಗಿ ಚಲಿಸಿದ ಕಾರು ಟ್ರಕ್‌ವೊಂದಕ್ಕೆ ಡಿಕ್ಕಿಯಾಗಿದೆ. ಕಳೆದ ಶುಕ್ರವಾರ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇನ ಸುಲ್ತಾನ್‌ಪುರ ಬಳಿ ಬಿಎಂಡಬ್ಲ್ಯೂ ಕಾರು ಗಂಟೆಗೆ ೨೩೦ ಕಿ.ಮೀ ವೇಗದಲ್ಲಿ ಚಲಿಸಿದೆ. ಹೀಗೆ ಅತಿ ವೇಗವಾಗಿ ಚಲಿಸುವಾಗ ಟ್ರಕ್‌ವೊಂದಕ್ಕೆ ಗುದ್ದಿದೆ. ಕಾರು ವೇಗವಾಗಿ ಚಲಿಸುವಾಗ ಫೇಸ್‌ಬುಕ್‌ನಲ್ಲಿ ಲೈವ್‌ ಬಂದಿದ್ದು, ವಿಡಿಯೊ ಈಗ ವೈರಲ್‌ ಆಗಿದೆ. ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ, ಅತಿಯಾದ ವೇಗವಾಗಿ ಚಲಿಸುತ್ತಿದ್ದ ಕಾರಣವೇ ಟಾಟಾ ಗ್ರೂಪ್‌ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ಅವರಿದ್ದ ಕಾರು ಅಪಘಾತಕ್ಕೀಡಾಗಿ, ಅವರು ಮೃತಪಟ್ಟಿದದ್ದರು.

ಇದನ್ನೂ ಓದಿ | Accident | ಲಾರಿ-ಕಾರು ಅಪಘಾತ: ಕುಡಚಿ ಎಎಸ್‌ಐ ಪತ್ನಿ, ಪುತ್ರಿ ಸಹಿತ ನಾಲ್ವರ ಸಾವು, ಮೂವರಿಗೆ ಗಂಭೀರ ಗಾಯ

Exit mobile version