Site icon Vistara News

Viral Video: ನೂರಾರು ಮೊಸಳೆಗಳ ಮೇಲೇ ಸಾಗುವ ದೋಣಿ! ಮೈ ಝುಂ ಎನ್ನಿಸುವ ವಿಡಿಯೊ

more than 100 crocodiles in river

ಬೆಂಗಳೂರು: ನದಿಯೊಂದರಲ್ಲಿ ದೋಣಿ ವಿಹಾರ ಮಾಡುತ್ತಿದ್ದೀರಿ ಎಂದುಕೊಳ್ಳಿ. ಆಗ ಇದ್ದಕ್ಕಿದ್ದಂತೆ ಒಂದು ಮೊಸಳೆ ನೀರಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತದೆ. ಭಯದಿಂದ ಜೀವವೇ ಹೋದಂತಾಗುತ್ತದೆಯಲ್ಲವೇ? ಆದರೆ ಇಲ್ಲೊಂದು ವಿಡಿಯೊದಲ್ಲಿ ದೋಣಿ ವಿಹಾರ ಮಾಡುವವರು ಒಂದಲ್ಲ, ಎರಡಲ್ಲ, ನೂರಾರು ಮೊಸಳೆಗಳ ಮೇಲೇ ದೋಣಿ ವಿಹಾರ ಮಾಡಿದ್ದಾರೆ. ದಾಳಿ ಮಾಡುವ ಬದಲು ಮೊಸಳೆಗಳು ಹೆದರಿ ಓಡಿ ಹೋಗಿವೆ. ಎಂತವರಿಗೂ ಭಯ ತರಿಸುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ (Viral Video) ಆಗಿದೆ.

ಸಣ್ಣದೊಂದು ನದಿಯಲ್ಲಿ ಮೋಟಾರ್‌ ಚಾಲಿತ ದೋಣಿ ಸಾಗುತ್ತಿದೆ. ಆ ನದಿಯಲ್ಲಿ ನೂರಾರು ಮೊಸಳೆಗಳು ಗುಂಪು ಗುಂಪಾಗಿವೆ. ದೋಣಿ ಮೋಟಾರ್‌ ಸದ್ದು ಮಾಡುತ್ತಾ ಹೋದಂತೆ ಮೊಸಳೆಗಳು ಆ ಸದ್ದಿಗೆ ಹೆದರಿ ನದಿ ದಡ ಹತ್ತುತ್ತವೆ. ದೋಣಿಯಲ್ಲಿರುವ ವ್ಯಕ್ತಿ ಯಾವುದೋ ಭಾಷೆಯಲ್ಲಿ ಏನೋ ಮಾತನಾಡುತ್ತಾ ಅರಾಮವಾಗಿ ಸಾಗುತ್ತದೆ. ಚೂರೂ ಭಯವಿಲ್ಲದೆ ಈ ರೀತಿ ಮೊಸಳೆಗಳ ಮೇಲೇ ದೋಣಿಯನ್ನು ಸಾಗಿಸುವ ವಿಡಿಯೊವನ್ನು ಸೆರೆ ಹಿಡಿಯಲಾಗಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Viral video : ಊರಿನವರ ಎದುರೇ ಯುವಕನ ಕೆನ್ನೆಗೆ ಚಪ್ಪಲಿಯಲ್ಲಿ ಬಾರಿಸಿದ ಯುವತಿ! ಮುಂದೇನಾಯ್ತು?

ಈ ವಿಡಿಯೊವನ್ನು ಸಿಸಿಟಿವಿ ಈಡಿಯಟ್ಸ್‌ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 39 ಸೆಕೆಂಡುಗಳಷ್ಟು ಕಾಲವಿರುವ ಈ ವಿಡಿಯೊದಲ್ಲಿ ನೀವು ನೂರಾರು ಮೊಸಳೆಗಳನ್ನು ನೋಡಬಹುದು. ಈ ವಿಡಿಯೊ ಯಾವ ದೇಶದಲ್ಲಿ, ಯಾವಾಗ ಸೆರೆ ಹಿಡಿದಿರುವುದು ಎನ್ನುವುದರ ಬಗ್ಗೆ ಮಾಹಿತಿಯಿಲ್ಲ. ಈ ಹಿಂದೆ ಕೂಡ ಒಮ್ಮೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್‌ ಆಗಿತ್ತು.


ಸಿಸಿಟಿವಿ ಈಡಿಯಟ್ಸ್‌ ಟ್ವಿಟರ್‌ ಖಾತೆಯವರು ಈ ವಿಡಿಯೊವನ್ನು ಆಗಸ್ಟ್‌ 16ರಂದು ಹಂಚಿಕೊಂಡಿದ್ದಾರೆ. “ಭಯಾನಕ ನದಿಯಲ್ಲಿ ದೋಣಿ ಸಾಗುವುದು” ಎಂದು ವಿಡಿಯೊಗೆ ಕ್ಯಾಪ್ಶನ್‌ ಕೊಡಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಸುಮಾರು 9.9 ಲಕ್ಷ ಮಂದಿಯಿಂದ ವೀಕ್ಷಣೆಗೊಂಡಿದೆ. 11 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. 1200ಕ್ಕೂ ಅಧಿಕ ಮಂದಿ ವಿಡಿಯೊವನ್ನು ತಮ್ಮ ವಾಲ್‌ಗಳಿಗೆ ರಿಟ್ವೀಟ್‌ ಮಾಡಿಕೊಂಡಿದ್ದಾರೆ. ನೂರಾರು ಜನರು ವಿಡಿಯೊ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಇಲ್ಲಿದೆ ನೋಡಿ ಜಗತ್ತಿನ ಅತಿ ಸಂತೋಷದ ನಾಯಿ! ಅಬ್ಬಬ್ಬಾ, ಎಷ್ಟು ಚೆಂದವಿದೆ ಈ ವಿಡಿಯೊಗಳು

“ಅಲ್ಲಿ ಎಷ್ಟು ಮೊಸಳೆಗಳಿವೆ? ಅವುಗಳನ್ನು ಲೆಕ್ಕ ಹಾಕುವ ಧೈರ್ಯ ಯಾರಿಗಾದರೂ ಇದಿಯಾ?”, “ಒಂದು ವೇಳೆ ಆ ನದಿಯೊಳಗೆ ನಾವು ಬಿದ್ದರೆ ನಮ್ಮ ಸ್ಥಿತಿ ಏನಾಗಬಹುದು?”, “ಇದು ಎಲ್ಲಿ ಚಿತ್ರೀಕರಿಸಿರುವ ವಿಡಿಯೊ?”, “ಯಾವ ನದಿಯಲ್ಲಿ ಇಷ್ಟೊಂದು ಮೊಸಳೆಗಳಿರುವುದು?” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.


ಇತ್ತೀಚೆಗೆ ಮೊಸಳೆಯ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್‌ ಆಗಿತ್ತು. ಒಡಿಶಾದಲ್ಲಿ ಮೊಸಳೆಯೊಂದು ನದಿ ದಡದಲ್ಲಿದ್ದ ಮಹಿಳೆಯನ್ನು ಎಳೆದುಕೊಂಡು ಹೋಗಿ ತಿಂದಿದ್ದ ದೃಶ್ಯ ಆ ವಿಡಿಯೊದಲ್ಲಿತ್ತು. ಭಯಾನಕವಾಗಿದ್ದ ಆ ವಿಡಿಯೊವನ್ನು ಕಂಡ ಜನರು ಕಂಗಾಲಾಗಿದ್ದರು.

Exit mobile version