ನವ ದೆಹಲಿ: ದೇನೆ ವಾಲಾ ಜಬ್ಬೀ ದೇತಾ ಹೈ ಚಪ್ಪಡ್ ಪಾಡ್ ಕೇ ದೇತಾ ಹೈ ಅಂತ ಹಿಂದಿಯಲ್ಲಿ ಒಂದ್ ಮಾತಿದೆ. ಅಂದರೆ, ಒಮ್ಮೆ ಲಕ್ ಕುದುರಿದರೆ ಏನಾದರೂ ಬೇಕಾದರೂ ಆಗಬಹುದು. ಈ ಮಾತು ಕೆನಡಾದ ಈ ವ್ಯಕ್ತಿಯ ಜೀವನದಲ್ಲಿ ನಿಜವಾಗಿದೆ! ಕೇವಲ 13 ತಿಂಗಳಲ್ಲೇ 1 ಮಿಲಿಯನ್ ಡಾಲರ್(ಅಂದಾಜು 8.19 ಕೋಟಿ ರೂ.) ಮೊತ್ತದ ಎರಡು ಲಾಟರಿಗಳು ಹೊಡೆದಿವೆ!. ಈ ಲಕ್ಕಿ ಮ್ಯಾನ್ (Lucky Man) ಹೆಸರು- ಅಂಟೊಯಿನಿ ಬೈಯಿನಿ. ಬೈಯಿನಿ ಅವರು ಸೆಪ್ಟೆಂಬರ್ 23ರಂದು 1 ಮಿಲಿಯನ್ ಡಾಲರ್ ಲಾಟರಿ ಗೆದ್ದಿದ್ದಾರೆಂದು ಒಂಟಾರಿಯೊ ಲಾಟರಿ ಮತ್ತು ಗೇಮಿಂಗ್ ಕಾರ್ಪೊರೇಷನ್(ಒಎಲ್‌ಜಿ) ತಿಳಿಸಿದೆ.
70 ವರ್ಷದ ಅಂಟೊಯಿನಿ ಬೈಯಿನಿ ಅವರು ಒಂಟಾರಿಯೊದ ಮಿಲ್ಟನ್‌ನವರು. ಮಿಲ್ಟನ್‌ನ ಮುಖ್ಯ ಬೀದಿಯಲ್ಲಿ ಕನ್ವೀನಿಅನ್ಸ್ ಸ್ಟೋರ್‌ನಿಂದ ಬೈಯಿನಿ ಅವರು ತಮ್ಮ ಮಗಳ ಮೂಲಕ ಲಾಟರಿ ಖರೀದಿಸಿದ್ದರು. ಒಎಲ್‌ಜಿ ಪ್ರಕಾರ, 2009ರಿಂದ ಒಂಟಾರಿಯೊದಲ್ಲಿ 7.3 ಶತಕೋಟಿ ಡಾಲರ್‌ನಷ್ಟು ಲಾಟರಿಯನ್ನು ಜನರು ಗೆದ್ದಿದ್ದಾರೆ.
ಸೆಪ್ಟೆಂಬರ್ 23ರಂದು ಒಂದು ಮಿಲಿಯನ್ ಡಾಲರ್ ಲಾಟರಿ ಗೆದ್ದಿರಿುವ ಬೈಯಿನಿ ಅವರು ಕಳೆದ 2021ರ ಆಗಸ್ಟ್‌ನಲ್ಲೂ ಲೊಟ್ಟೊ ಮ್ಯಾಕ್ಸ್ ಲಾಟರಿ ಗೆದ್ದಿದ್ದರು. ಬೈಯಿನಿ ಎರಡನೇ ಬಾರಿಗೆ ಗೆದ್ದಿದ್ದನ್ನು ಅವರಿಗೇ ಸ್ವತಃ ನಂಬಲು ಸಾಧ್ಯವಾಗಲಿಲ್ಲಂತೆ! “ಮೊದಲ ಬಾರಿ ಲಾಟರಿ ಗೆದ್ದಿದ್ದಕ್ಕಿಂತ ಇದು ಹೆಚ್ಚು ಆಶ್ಚರ್ಯ ಉಂಟು ಮಾಡಿತು. ನನ್ನ ಹೆಂಡತಿಗೆ ಈ ವಿಷಯ ತಿಳಿಸಿದೆ. ಅವಳು ಫುಲ್ ಖುಷಿಯಾದಳು” ಎಂದು ಬೈಯಿನಿ ತಿಳಿಸಿದ್ದಾರೆ.
ಇದನ್ನೂ ಓದಿ | ಕೇರಳ ಆಟೋ ಚಾಲಕನಿಗೆ ಲಾಟರಿಯಲ್ಲಿ ಒಲಿದ 25 ಕೋಟಿ ರೂ.; ಹಣದ ಹಿಂದೆಯೇ ಬಂದ ಸಾಲುಸಾಲು ಸಮಸ್ಯೆಗಳು !