ಬೆಂಗಳೂರು: ಚುನಾವಣಾ ಬಾಂಡ್‌ಗಳ (Electoral Bonds) ವಿವರವನ್ನು ಎಸ್‌ಬಿಐ (SBI) ನಿನ್ನೆ ಹೊರಗೆಡಹಿದ ಬಳಿಕ, ಹಲವು ಕಂಪನಿಗಳ ದೇಣಿಗೆ ಸದ್ದು ಮಾಡುತ್ತಿದೆ. ಇವುಗಳಲ್ಲಿ ಬೆಂಗಳೂರು ಮೂಲದ ಕಿರಣ್ ಮಜುಂದಾರ್ ಶಾ (Kiran Mazumdar Shaw) ನೇತೃತ್ವದ ʼಬಯೋಕಾನ್ ಲಿಮಿಟೆಡ್ʼ (Biocon limited) ಕೂಡ ಒಂದಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಕಿರಣ್ ಶಾ ಅವರನ್ನು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದು, ಅದಕ್ಕೆ ಶಾ ಉತ್ತರಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಎಸ್‌ಬಿಐ ನೀಡಿದ ದಾನಿಗಳ ಹಣಕಾಸಿನ ವಿವರದ ಪಟ್ಟಿಯಲ್ಲಿ ಬಯೋಕಾನ್‌ನ ವಿವರಗಳನ್ನು ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಅದರಲ್ಲಿ ಸುಮಾರು 6 ಕೋಟಿ ರೂ.ಗಳಷ್ಟು ಹಣದ ಬಾಂಡ್ ಅನ್ನು ಶಾ ಖರೀದಿಸಿರುವುದು ಗೊತ್ತಾಗಿದೆ. ಅವರು ಇದರೊಂದಿಗೆ “ಕಿರಣ್ ಮಜುಂದಾರ್ ಶಾ ಅವರು ಕರ್ನಾಟಕದ ವಿಧಾನಸಭೆ ಚುನಾವಣೆಗೆ ಮುನ್ನ 5 ಕೋಟಿ ಮೌಲ್ಯದ ಬಾಂಡ್ ಖರೀದಿಸಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು.
.@kiranshaw donate 5 crore a month before Karnataka elections. pic.twitter.com/Z2JiYfHzbx
— S. (@Biryani_) March 14, 2024
ಇದಕ್ಕೆ ಉತ್ತರಿಸಿದ ಕಿರಣ್ ಶಾ, “ಇದು ನಿಜವಲ್ಲ. ಸರಿಯಾಗಿ ಲೆಕ್ಕ ಮಾಡಿ” ಎಂದಿದ್ದಾರೆ. ಇನ್ನೊಬ್ಬರು, “ಒಟ್ಟು 6 ಕೋಟಿ ರೂ. ನೀವು ಯಾರಿಗೆ ನೀಡಿದ್ದೀರಿ ಎಂದು ಕೇಳಬಹುದೇ?” ಎಂದು ಕೇಳಿದ್ದಾರೆ. ಅದಕ್ಕೆ ಶಾ ಅವರು, “ಎಲ್ಲ ಪಾರ್ಟಿಗಳೂ ನಿಧಿ ಬಯಸುತ್ತವೆ” ಎಂದು ಉತ್ತರಿಸಿದ್ದಾರೆ.
ಇನ್ನು ಕೆಲವರು “ನಿಮಗೆ ಯಾರಿಂದಾದರೂ ಒತ್ತಡವಿತ್ತೇ?” “ಈ ದೇಣಿಗೆಗೆ ಪ್ರತಿಯಾಗಿ ನೀವು ಏನು ಪಡೆದಿದ್ದೀರಿ?” ಎಂದೆಲ್ಲ ಟ್ವೀಟ್ ಮಾಡಿದ್ದಾರೆ. ಇವುಗಳಿಗೆ ಶಾ ಉತ್ತರಿಸಿಲ್ಲ. ಇನ್ನೊಬ್ಬರು ತಮಾಷೆಯಾಗಿ “ನನ್ನ ವೀಕೆಂಡ್ ಪಾರ್ಟಿಗೆ ಹಣ ಕೊಡಿ ಮೇಡಂ ಪ್ಲೀಸ್” ಎಂದು ಕಾಲೆಳೆದಿದ್ದಾರೆ.
ಚುನಾವಣಾ ಬಾಂಡ್‌ಗಳ ಸಂಗ್ರಹದ ವಿವಿಧ ವಿವರಗಳು ಹೊರಹೊಮ್ಮುತ್ತಿವೆ. ಬಿಜೆಪಿ ಅತಿ ಹೆಚ್ಚಿನ ದೇಣಿಗೆ ಪಡೆದ ದೊಡ್ಡ ಪಕ್ಷಔಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: Electoral Bonds : IT, ED ಮೂಲಕ ಬೆದರಿಕೆ ಒಡ್ಡಿ ಬಿಜೆಪಿ ದೇಣಿಗೆ ಸಂಗ್ರಹ; ಖರ್ಗೆ ಗಂಭೀರ ಆರೋಪ, ತನಿಖೆಗೆ ಆಗ್ರಹ