Site icon Vistara News

Viral Video: ಅಬ್ಬಾ.. ಎಂಥಾ ಭೀಕರ ದೃಶ್ಯ! ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿ ಒದ್ದಾಡಿ ಸಾವು

ಹೈದರಾಬಾದ್‌: ಭಾರೀ ಮಳೆಯಲ್ಲಿ ಕರೆಂಟ್‌ ಶಾಕ್‌(Electric Shock) ಹೊಡೆದು 40ವರ್ಷದ ಹಣ್ಣು-ತರಕಾರಿ ವ್ಯಾಪಾರಿಯೊಬ್ಬ ನೋಡ ನೋಡ್ತಿದ್ದಂತೆ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಫಕ್ರು ಎಂದು ಗುರುತಿಸಲಾಗಿದ್ದು, ನೀರು ತುಂಬಿದ್ದ ರಸ್ತೆ ದಾಟಿ ಬಂದು ವಿದ್ಯುತ್‌ ಕಂಬವನ್ನು ಮುಟ್ಟಿದ ಕೂಡಲೇ ಅವರಿಗೆ ಶಾಕ್‌ ಹೊಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌ (Viral Video) ಆಗುತ್ತಿದೆ.

ತೆಲಂಗಾಣದ ಬಹುದ್ದೂರ್‌ಪುರದಲ್ಲಿ ಈ ಘಟನೆ ನಡೆದಿದ್ದು, ಆರಂಭದಲ್ಲಿ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಕಂಡು ಆತ ಕುಡಿದು ಬಿದ್ದಿರುವುದೆಂದು ಭಾವಿಸಿದ ಜನ ನಿರ್ಲಕ್ಷ್ಯ ಮಾಡಿ ಹೋಗಿದ್ದರು. ಬಳಿಕ ಆತನನ್ನು ಗಮನಿಸಿದ ಪೊಲೀಸರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆತನ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಫಕ್ರು ಜಲಾವೃತಗೊಂಡಿದ್ದ ರಸ್ತೆ ದಾಟಿ ಬಂದು ಅಲ್ಲೇ ಇದ್ದ ವಿದ್ಯುತ್‌ ಕಂಬವನ್ನು ಮುಟ್ಟುತ್ತಾನೆ ಆಗ ಇದ್ದಕ್ಕಿದ್ದಂತೆ ಆತ ಕುಸಿದು ಬಿದ್ದು ನೆಲದಲ್ಲಿ ಒದ್ದಾಡೋಕೆ ಶುರು ಮಾಡುವುದನ್ನು ವೈರಲಾಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಬಹದ್ದೂರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಯಿ ಹಾಗೂ ಮಗು ವಿದ್ಯುತ್ ಶಾಕ್‌ ತಗುಲಿ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ನಗರದ ಹೋಪ್ ಫಾರ್ಮ್‌ ಬಳಿ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತಾಯಿ – ಮಗು ತುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿತ್ತು .ಘಟನೆಯಲ್ಲಿ 23 ವರ್ಷ ವಯಸ್ಸಿನ ತಾಯಿ ಹಾಗೂ 9 ತಿಂಗಳ ಹೆಣ್ಣು ಮಗು ದುರ್ಮರಣ ಅಪ್ಪಿದೆ ಎಂದು ತಿಳಿದು ಬಂದಿದೆ. ಮೃತರನ್ನು ಸೌಂದರ್ಯಾಂದ್ ಹಾಗೂ ಆಕೆಯ ಮಗು ಸುವಿಕ್ಷಾ ಎಂದು ಗುರ್ತಿಸಲಾಗಿದೆ. ತಮಿಳುನಾಡಿನಿಂದ ಬೆಂಗಳೂರು ನಗರಕ್ಕೆ ತಾಯಿ – ಮಗು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:

ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಕೂಡಲೇ ತಾಯಿ ಹಾಗೂ ಮಗು ಕೆಳಗೆ ಬಿದ್ದ ಒದ್ದಾಟ ನಡೆಸಿದರು. ಇಬ್ಬರಿಗೂ ಸಾಕಷ್ಟು ಸುಟ್ಟ ಗಾಯಗಳಾಗಿದ್ದವು. ತಾಯಿ ಹಾಗೂ ಮಗುವಿನ ಜೊತೆಗೆ ಇದ್ದ ಪತಿ ಸಂತೋಷ್ ಕುಮಾರ್ ಅವರು ತಮ್ಮ ಪತ್ನಿ ಹಾಗೂ ಮಗುವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಅವರ ಪ್ರಯತ್ನಗಳೆಲ್ಲವೂ ವಿಫಲವಾದವು. ಸಂತೋಷ್ ಕುಮಾರ್ ಅವರ ಕಣ್ಣೆದುರಲ್ಲೇ ಪತ್ನಿ ಹಾಗೂ ಮಗು ಸಾವನ್ನಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು.

Exit mobile version