ಬೆಂಗಳೂರು: ಏನಿಲ್ಲ.. ಏನಿಲ್ಲ.. (Enilla.. Enilla!) ಕರಿಮಣಿ ಮಾಲೀಕ ನೀನಲ್ಲ.. ಈ ಹಾಡು ಎಷ್ಟು ಕ್ರೇಜ್ ಸೃಷ್ಟಿ ಮಾಡಿದೆ. ಈ ಹಾಡನ್ನು ಅದರಲ್ಲೂ ಮುಖ್ಯವಾಗಿ ʻಏನಿಲ್ಲ.. ಏನಿಲ್ಲʼ ಎಂಬ ವಾಕ್ಯವನ್ನು ಬಳಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಗೇಲಿ ಮಾಡಲಾಗಿದೆ. ವೈರಲ್ ಹಾಡಿನ ರಿಮಿಕ್ಸ್ (Remix Song) ಈಗ ಭಾರಿ ಗಮನ ಸೆಳೆದಿದೆ. ಇದನ್ನು ಬಿಜೆಪಿ ತನ್ನ ವಾಟ್ಸ್ ಆಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದೆ.
ವಿಧಾನಸಭಾ ಚುನಾವಣೆ ವೇಳೆ ಗ್ಯಾರಂಟಿಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿಗಳ ಬಗ್ಗೆ ಆಡಿದ ಮಾತುಗಳನ್ನು ವಿಡಿಯೊದಲ್ಲಿ ತೋರಿಸಿ, ‘ಸುಳ್ಳು ರಾಮಯ್ಯ’ ಎಂದು ಬಿಂಬಿಸಲಾಗಿದೆ. ಸಿದ್ದರಾಮಯ್ಯ ಅವರು ಕರೆಂಟ್ ಫ್ರೀ, ಬಸ್ ಫ್ರೀ, ಹತ್ತು ಕೆಜಿ ಅಕ್ಕಿ ಫ್ರೀ ಎಂದು ಹೇಳಿರುವ ಮಾತುಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದ್ದು, ಇದೆಲ್ಲ ಸುಳ್ಳು ಎಂಬಂತೆ ಏನಿಲ್ಲ ಏನಿಲ್ಲ ಹಾಡನ್ನು ಜೋಡಿಸಲಾಗಿದೆ.
ರೈತರು ಬೇಡಿಕೆಗೂ ನೋ ನೋ, ಮುಸ್ಲಿಮರಿಗೆ ಎಸ್ಸೆಸ್ಸು ಎನ್ನುತ್ತಿರುವ ಸಿದ್ದರಾಮಯ್ಯ
“ರೈತರು ಸಾಕಷ್ಟು ಕಷ್ಟದಲ್ಲಿದ್ದೇವೆ. ಆದಷ್ಟು ಬೇಗ ಪರಿಹಾರದ ಹಣ ಬಿಡುಗಡೆ ಮಾಡಿ’ ಎಂದು ರೈತನೊಬ್ಬ ಮನವಿ ಮಾಡುವಂತೆ ತೋರಿಸಲಾಗಿದೆ. ಮುಸ್ಲಿಮರು ಅನುದಾನ ಕೊಡಿ ಎಂದು ಕೇಳಿದರೂ ಸಿದ್ದರಾಮಯ್ಯ ನೋ ನೋ ಎಂದಿದ್ದಾರೆ. ಇದಕ್ಕೆ ಬೆಳಗಾವಿ ಅಧಿವೇಶನದಲ್ಲಿ ‘ನಾನೇನು ಪ್ರಿಂಟಿಂಗ್ ಮೆಷಿನ್ ಇಟ್ಟಿದಿನಾ?” ಎಂಬ ಮಾತನ್ನು ಜೋಡಿಸಲಾಗಿದೆ. ಹಾಗೆಯೇ, ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಬಿಡುಗಡೆ ಮಾಡಿದ್ದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದ್ದು, ಹಿಗ್ಗಾಮುಗ್ಗಾ ಟೀಕಿಸಲಾಗಿದೆ.
Enilla.. Enilla! : ಸುಳ್ಳುರಾಮಯ್ಯ ಎಂದ ಬಿಜೆಪಿ
ಸಿದ್ದರಾಮಯ್ಯ ಅವರು ಚುನಾವಣೆ ಪ್ರಚಾರದ ವೇಳೆ ಬಡವರಿಗೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಹೇಳುವ ವಿಡಿಯೋವನ್ನು ಹಾಕಿ ಬಳಿಕ ಉಪೇಂದ್ರ ಅವರ ವಿಡಿಯೊ ಹಾಕಿ, ʻಬರಿ ಓಳು.. ಬರಿ ಓಳುʼ ಎಂದು ಹಾಡು ಹಾಕಲಾಗಿದೆ.
Enilla.. Enilla! : ಸಿದ್ದರಾಮಯ್ಯ ಕರಿಮಣಿ ಮಾಲೀಕ ಆಗುವುದು ಇದು ಮೊದಲೇನಲ್ಲ !
ಅಂದ ಹಾಗೆ ಈ ಕರಿಮಣಿ ಮಾಲೀಕ ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ಟ್ರೋಲ್ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಒಂದು ವೇಳೆ ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ಸಿದ್ದರಾಮಯ್ಯನವರ ಸ್ಥಿತಿ ಹೀಗಾಗಲಿದೆ ಎಂದು ʻಕರಿಮಣಿ ಮಾಲೀಕʼ ಹಾಡು ಹಾಕಿ ಒಂದು ಡ್ಯಾನ್ಸ್ ಎಡಿಟ್ ಮಾಡಲಾಗಿದೆ. ಇದು ಸಿದ್ದರಾಮಯ್ಯ ಅವರು ತಮ್ಮ ಗೆಳೆಯರ ಜತೆ ಸೇರಿ ಸೋಮನ ಕುಣಿತಕ್ಕೆ ಕುಣಿಯುವ ಹಾಡಾಗಿದೆ.