Site icon Vistara News

Viral Video : ಫೇರ್‌ವೆಲ್‌ ದಿನದಂದು ಸೀರೆಯುಟ್ಟು ಹುಚ್ಚೆಬ್ಬಿಸುವಂತೆ ಕುಣಿದ ಯುವತಿಯರು!

farewell dance

ಫೇರ್‌ವೆಲ್‌ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೂ ಕನಸಿರುತ್ತದೆ. ನಮ್ಮ ಅಂತಿಮ ವರ್ಷದ ಫೇರ್‌ವೆಲ್‌ ದಿನ ಹಾಗೆ ಮಾಡಬೇಕು, ಹೀಗೆ ಕುಣಿಯಬೇಕು ಎಂದು ವರ್ಷಗಳ ಕಾಲ ಕನಸು ಕಾಣುವವರೂ ಇದ್ದಾರೆ. ಅದೇ ರೀತಿ ಫೇರ್‌ವೆಲ್‌ ಬಗ್ಗೆ ಕನಸು ಕಂಡ ವಿದ್ಯಾರ್ಥಿಯನಿಯರಿಬ್ಬರು ತಮ್ಮ ಫೇರ್‌ವೆಲ್‌ ದಿನ ಸೀರೆಯಿಟ್ಟು ಕುಣಿದು ತಮ್ಮ ಆಸೆಯನ್ನು ನೆರವೇರಿಸಿಕೊಂಡಿದ್ದಾರೆ. ಅವರ ಜಬರ್ದಸ್ತ್‌ ಡ್ಯಾನ್ಸ್‌ನ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ವಿಡಿಯೊ ನೆಟ್ಟಿಗರಿಂದ ಭಾರೀ ಪ್ರಶಂಸೆ ಪಡೆದುಕೊಳ್ಳುತ್ತಿದೆ.

ಯೂಟ್ಯೂಬ್‌ನಲ್ಲಿ ʼದಿ ರ‍್ಯಾಂಡಮ್‌ ಗರ್ಲ್‌ʼ ಹೆಸರಿನ ಚಾನೆಲ್‌ನಲ್ಲಿ ಇಂಥದ್ದೊಂದು ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೊಗೆ “ಫೇರ್‌ವೆಲ್‌ ಡ್ಯಾನ್ಸ್‌ 2023” ಎನ್ನುವ ಕ್ಯಾಪ್ಶನ್‌ ಕೊಡಲಾಗಿದೆ. ಹಾಗೆಯೇ ಅದರ ಡಿಸ್ಕ್ರಿಪ್ಶನ್‌ನಲ್ಲಿ “ಕೊನೆಗೂ ಈ ವಿಡಿಯೊ ಹೊರಬಿದ್ದಿದೆ. ಇದಕ್ಕಾಗಿ ನಾವು ವರ್ಷಗಳ ಕಾಲ ಕನಸು ಕಂಡಿದ್ದೆವು. ನಾವು ಎಂದುಕೊಂಡಿದ್ದಕ್ಕಿಂತ ಚೆನ್ನಾಗಿಯೇ ಡ್ಯಾನ್ಸ್‌ ಮೂಡಿಬಂದಿದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು” ಎಂದು ಬರೆಯಲಾಗಿದೆ.

ಇದನ್ನೂ ಓದಿ: Viral News : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ; ಅಬ್ಬಾ! ಎಷ್ಟೊಂದು ವರ್ಷ ಬದುಕಿದ್ದರು!
ವಿಡಿಯೊದಲ್ಲಿ ನೃತ್ಯ ಕಲಾವಿದೆಯರಾದ ಅದಿತಿ ಮತ್ತು ರಿತಿಕಾ ನೃತ್ಯ ಮಾಡಿದ್ದಾರೆ. ಚಂದದ ಸೀರೆಯನ್ನುಟ್ಟ ಇಬ್ಬರು ಫ್ರೀ ಹೇರ್‌ ಬಿಟ್ಟುಕೊಂಡು ಬಾಲಿವುಡ್‌ನ ಮ್ಯಾಶ್‌ಪ್‌ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ದೇಸಿ ಗರ್ಲ್‌ ಹಾಡಿನಿಂದ ಆರಂಭಿಸಿ, ಸನ್‌ಗ್ಲಾಸ್‌ ಹಾಕಿಕೊಂಡು ಕಾಲಾ ಚಸ್ಮಾ ಎಂದು ಕುಣಿದು ನಂತರ ಚಮ್ಮಕ್‌ ಚಲ್ಲೋ, ಗೋರಿ ಗೋರಿ, ಕುಕ್ಕಡ್‌ ಸೇರಿ ಅನೇಕ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಕೊನೆಯಲ್ಲಿ ತಾರೆ ಗಿನ್‌ ಗಿನ್‌ ಹಾಡಿಗೆ ನೃತ್ಯ ಮಾಡುವ ಮೂಲಕ ನೃತ್ಯವನ್ನು ಮುಗಿಸಿದ್ದಾರೆ.


ಈ ನೃತ್ಯ ಮಾಡುವಾಗ ಇಬ್ಬರೂ ಯುವತಿಯರು ಒಂದೇ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಒಬ್ಬರಿಗೊಬ್ಬರು ಸಾಥ್‌ ಕೊಟ್ಟುಕೊಳ್ಳುತ್ತಾ, ಹಾಡಿಗೆ ತಕ್ಕಂತೆ ಮುಖ ಭಾವವನ್ನೂ ಕೊಟ್ಟಿದ್ದಾರೆ. ಅದಷ್ಟೇ ಅಲ್ಲದೆ ಅಪ್ಪಟ ಭಾರತೀಯ ನಾರಿಯರಂತೆ ಸೀರೆಯನ್ನುಟ್ಟು, ಸೀರೆ ಜಾರಬಹುದು ಎನ್ನುವ ಭಯವಿಲ್ಲದೆ ಭರ್ಜರಿ ಸ್ಟೆಪ್‌ಗಳನ್ನು ಹಾಕಿದ್ದಾರೆ. ಈ ಎಲ್ಲವೂ ನೋಡುಗರಿಗೆ ಸಾಕಷ್ಟು ಇಷ್ಟವಾಗಿದೆ.

ಇದನ್ನೂ ಓದಿ: Self Harming :ಖಾಸಗಿ ವಿಡಿಯೊ ವೈರಲ್‌; ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ
ಈ ವಿಡಿಯೊವನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಮೇ 12ರಂದು ಹಂಚಿಕೊಳ್ಳಲಾಗಿದ. ಅಂದಿನಿಂದ ಇಂದಿನವರೆಗೆ ವಿಡಿಯೊ 4.8 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಹತ್ತು ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಹಲವಾರು ಮಂದಿ ವಿಡಿಯೊ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಮೆಂಟ್‌ಗಳ ಮೂಲಕ ವ್ಯಕ್ತಪಡಿಸಿದ್ದಾರೆ. “ಅದ್ಭುತವಾದ ಹಾಡುಗಳನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಹಾಗೆಯೇ ಅಷ್ಟೇ ಚೆನ್ನಾಗಿ ಅದಕ್ಕೆ ನೃತ್ಯವನ್ನೂ ಮಾಡಿದ್ದೀರಿ”, “ನಿಮ್ಮಿಬ್ಬರ ಕಾಂಬಿನೇಷನ್‌ ತುಂಬಾನೇ ಚೆನ್ನಾಗಿದೆ”, “ಈ ವಿಡಿಯೊ ನೋಡುವುದಕ್ಕೆ ಬಹಳ ಸಂತಸವಾಯಿತು”, “ಇಂತಹ ವಿಡಿಯೊಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದುಕೊಳ್ಳಬೇಕು” ಎಂದು ಜನರು ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾರಂಭಿಸಿದ್ದಾರೆ. ಹಾಗೆಯೇ ಅನೇಕರು ವಿಡಿಯೊಗೆ “ವಾವ್‌”, “ಸೂಪರ್‌” ಎನ್ನುವಂತಹ ಕಾಮೆಂಟ್‌ಗಳನ್ನೂ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Exit mobile version