ವೈರಲ್ ನ್ಯೂಸ್
Viral Video : ಫೇರ್‌ವೆಲ್ ದಿನದಂದು ಸೀರೆಯುಟ್ಟು ಹುಚ್ಚೆಬ್ಬಿಸುವಂತೆ ಕುಣಿದ ಯುವತಿಯರು!
ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ತಮ್ಮ ಫೇರ್‌ವೆಲ್ ದಿನದಂದು ವೇದಿಕೆ ಮೇಲೆ ಕುಣಿದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ (Viral Video) ಆಗಿದೆ.
ಫೇರ್‌ವೆಲ್ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೂ ಕನಸಿರುತ್ತದೆ. ನಮ್ಮ ಅಂತಿಮ ವರ್ಷದ ಫೇರ್‌ವೆಲ್ ದಿನ ಹಾಗೆ ಮಾಡಬೇಕು, ಹೀಗೆ ಕುಣಿಯಬೇಕು ಎಂದು ವರ್ಷಗಳ ಕಾಲ ಕನಸು ಕಾಣುವವರೂ ಇದ್ದಾರೆ. ಅದೇ ರೀತಿ ಫೇರ್‌ವೆಲ್ ಬಗ್ಗೆ ಕನಸು ಕಂಡ ವಿದ್ಯಾರ್ಥಿಯನಿಯರಿಬ್ಬರು ತಮ್ಮ ಫೇರ್‌ವೆಲ್ ದಿನ ಸೀರೆಯಿಟ್ಟು ಕುಣಿದು ತಮ್ಮ ಆಸೆಯನ್ನು ನೆರವೇರಿಸಿಕೊಂಡಿದ್ದಾರೆ. ಅವರ ಜಬರ್ದಸ್ತ್ ಡ್ಯಾನ್ಸ್‌ನ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ವಿಡಿಯೊ ನೆಟ್ಟಿಗರಿಂದ ಭಾರೀ ಪ್ರಶಂಸೆ ಪಡೆದುಕೊಳ್ಳುತ್ತಿದೆ.
ಯೂಟ್ಯೂಬ್‌ನಲ್ಲಿ ʼದಿ ರ‍್ಯಾಂಡಮ್ ಗರ್ಲ್ʼ ಹೆಸರಿನ ಚಾನೆಲ್‌ನಲ್ಲಿ ಇಂಥದ್ದೊಂದು ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೊಗೆ “ಫೇರ್‌ವೆಲ್ ಡ್ಯಾನ್ಸ್ 2023” ಎನ್ನುವ ಕ್ಯಾಪ್ಶನ್ ಕೊಡಲಾಗಿದೆ. ಹಾಗೆಯೇ ಅದರ ಡಿಸ್ಕ್ರಿಪ್ಶನ್‌ನಲ್ಲಿ “ಕೊನೆಗೂ ಈ ವಿಡಿಯೊ ಹೊರಬಿದ್ದಿದೆ. ಇದಕ್ಕಾಗಿ ನಾವು ವರ್ಷಗಳ ಕಾಲ ಕನಸು ಕಂಡಿದ್ದೆವು. ನಾವು ಎಂದುಕೊಂಡಿದ್ದಕ್ಕಿಂತ ಚೆನ್ನಾಗಿಯೇ ಡ್ಯಾನ್ಸ್ ಮೂಡಿಬಂದಿದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು” ಎಂದು ಬರೆಯಲಾಗಿದೆ.
ಇದನ್ನೂ ಓದಿ: Viral News : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ; ಅಬ್ಬಾ! ಎಷ್ಟೊಂದು ವರ್ಷ ಬದುಕಿದ್ದರು!
ವಿಡಿಯೊದಲ್ಲಿ ನೃತ್ಯ ಕಲಾವಿದೆಯರಾದ ಅದಿತಿ ಮತ್ತು ರಿತಿಕಾ ನೃತ್ಯ ಮಾಡಿದ್ದಾರೆ. ಚಂದದ ಸೀರೆಯನ್ನುಟ್ಟ ಇಬ್ಬರು ಫ್ರೀ ಹೇರ್ ಬಿಟ್ಟುಕೊಂಡು ಬಾಲಿವುಡ್‌ನ ಮ್ಯಾಶ್‌ಪ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ದೇಸಿ ಗರ್ಲ್ ಹಾಡಿನಿಂದ ಆರಂಭಿಸಿ, ಸನ್‌ಗ್ಲಾಸ್ ಹಾಕಿಕೊಂಡು ಕಾಲಾ ಚಸ್ಮಾ ಎಂದು ಕುಣಿದು ನಂತರ ಚಮ್ಮಕ್ ಚಲ್ಲೋ, ಗೋರಿ ಗೋರಿ, ಕುಕ್ಕಡ್ ಸೇರಿ ಅನೇಕ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಕೊನೆಯಲ್ಲಿ ತಾರೆ ಗಿನ್ ಗಿನ್ ಹಾಡಿಗೆ ನೃತ್ಯ ಮಾಡುವ ಮೂಲಕ ನೃತ್ಯವನ್ನು ಮುಗಿಸಿದ್ದಾರೆ.
ಈ ನೃತ್ಯ ಮಾಡುವಾಗ ಇಬ್ಬರೂ ಯುವತಿಯರು ಒಂದೇ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಒಬ್ಬರಿಗೊಬ್ಬರು ಸಾಥ್ ಕೊಟ್ಟುಕೊಳ್ಳುತ್ತಾ, ಹಾಡಿಗೆ ತಕ್ಕಂತೆ ಮುಖ ಭಾವವನ್ನೂ ಕೊಟ್ಟಿದ್ದಾರೆ. ಅದಷ್ಟೇ ಅಲ್ಲದೆ ಅಪ್ಪಟ ಭಾರತೀಯ ನಾರಿಯರಂತೆ ಸೀರೆಯನ್ನುಟ್ಟು, ಸೀರೆ ಜಾರಬಹುದು ಎನ್ನುವ ಭಯವಿಲ್ಲದೆ ಭರ್ಜರಿ ಸ್ಟೆಪ್‌ಗಳನ್ನು ಹಾಕಿದ್ದಾರೆ. ಈ ಎಲ್ಲವೂ ನೋಡುಗರಿಗೆ ಸಾಕಷ್ಟು ಇಷ್ಟವಾಗಿದೆ.
ಇದನ್ನೂ ಓದಿ: Self Harming :ಖಾಸಗಿ ವಿಡಿಯೊ ವೈರಲ್; ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ
ಈ ವಿಡಿಯೊವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಮೇ 12ರಂದು ಹಂಚಿಕೊಳ್ಳಲಾಗಿದ. ಅಂದಿನಿಂದ ಇಂದಿನವರೆಗೆ ವಿಡಿಯೊ 4.8 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಹತ್ತು ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹಾಗೆಯೇ ಹಲವಾರು ಮಂದಿ ವಿಡಿಯೊ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಮೆಂಟ್‌ಗಳ ಮೂಲಕ ವ್ಯಕ್ತಪಡಿಸಿದ್ದಾರೆ. “ಅದ್ಭುತವಾದ ಹಾಡುಗಳನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಹಾಗೆಯೇ ಅಷ್ಟೇ ಚೆನ್ನಾಗಿ ಅದಕ್ಕೆ ನೃತ್ಯವನ್ನೂ ಮಾಡಿದ್ದೀರಿ”, “ನಿಮ್ಮಿಬ್ಬರ ಕಾಂಬಿನೇಷನ್ ತುಂಬಾನೇ ಚೆನ್ನಾಗಿದೆ”, “ಈ ವಿಡಿಯೊ ನೋಡುವುದಕ್ಕೆ ಬಹಳ ಸಂತಸವಾಯಿತು”, “ಇಂತಹ ವಿಡಿಯೊಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದುಕೊಳ್ಳಬೇಕು” ಎಂದು ಜನರು ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾರಂಭಿಸಿದ್ದಾರೆ. ಹಾಗೆಯೇ ಅನೇಕರು ವಿಡಿಯೊಗೆ “ವಾವ್”, “ಸೂಪರ್” ಎನ್ನುವಂತಹ ಕಾಮೆಂಟ್‌ಗಳನ್ನೂ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕ್ರೀಡೆ
Racial Abuse : ಮನ ಕಲಕುವ ವಿಡಿಯೊ; ಜಿಮ್ನಾಸ್ಟಿಕ್ಸ್‌ನಲ್ಲಿ ಗೆದ್ದ ಬಾಲಕಿಗೆ ಕಪ್ಪು ಬಣ್ಣದವಳೆಂದು ಪದಕ ನೀಡದ ಆಯೋಜಕರು!
ಜಿಮ್ನಾಸ್ಟಿಕ್ಸ್ ಐರ್ಲೆಂಡ್ ನಲ್ಲಿ ಪದಕ ಪ್ರದಾನ ಸಮಾರಂಭದ ವೇಳೆ ವರ್ಣಭೇದ ನೀತಿ (Racial Abuse) ಅನುಸರಿಲಾಗಿತ್ತು. ವಿಷಯದ ಇದೀಗ ವಿವಾದಕ್ಕೆ ಒಳಗಾಗಿದೆ.
ನವ ದೆಹಲಿ: ವರ್ಣ ಭೇದದ ನೀತಿಯ ವಿರುದ್ಧ ಹಲವು ಮಹನೀಯರು ಹೋರಾಟ ಮಾಡಿದ ಹೊರತಾಗಿಯೂ ಆ ಮನಸ್ಥಿತಿಯನ್ನು ಬುಡಸಮೇತ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಆಗಾಗ ಇಂಥ ಘೋರ ಕೃತ್ಯಗಳು ವರದಿಯಾಗುತ್ತದೆ. ಬಿಳಿಯೇ ಶ್ರೇಷ್ಠ ಎಂಬ ಮನಸ್ಥಿತಿ ಹೊಂದಿರುವ ಮಂದಿ ಕಪ್ಪು ಬಣ್ಣದವರಿಗೆ ಅಗೌರವ ತೋರುವುದನ್ನು (Racial Abuse) ಮುಂದುವರಿಸಿದ್ದಾರೆ. ಇಂಥದ್ದೇ ಒಂದು ಘಟನೆ ಜಿಮ್ನಾಸ್ಟಿಕ್ಸ್ನಲ್ಲೂ ನಡೆದಿದೆ. ಜಿಮ್ನಾಸ್ಟಿಕ್ಸ್‌ನಲ್ಲಿ ಗೆದ್ದ ಎಲ್ಲರಿಗೂ ಪದಕದ ಹಾರ ಹಾಕಿದರೂ, ಕಪ್ಪು ಬಣ್ಣದ ಪುಟಾಣಿ ಹುಡುಗಿಗೆ ಹಾರ ಹಾಕದೇ ತಾರತಮ್ಯ ಮಾಡಲಾಗಿದೆ. ಒಂದು ವರ್ಷದ ಹಿಂದೆ ನಡೆದ ಘಟನೆ ಇದೀಗ ವಿವಾದಕ್ಕೆ ಒಳಗಾಗಿದ್ದು ಐರ್ಲೆಂಡ್ನ ಜಿಮ್ನಾಸ್ಟಿಕ್ಸ್ ಸಂಸ್ಥೆ ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿ ಕ್ಷಮೆ ಕೋರಿದೆ.
Welcome to Ireland where people get away with racism! This little black girl broke my heart. Don’t skip this post without leaving a million heart for her. Make her famous… pic.twitter.com/YYMIP1IALZ
— Mohamad Safa (@mhdksafa) September 22, 2023
ಜಿಮ್ನಾಸ್ಟಿಕ್ಸ್ ಐರ್ಲೆಂಡ್ ನಲ್ಲಿ ಪದಕ ಪ್ರದಾನ ಸಮಾರಂಭದ ವೇಳೆ ಘಟನೆ ನಡೆದಿದೆ. ಕರಿ ಬಣ್ಣದ ಬಾಲೆಯನ್ನು ಕಡೆಗಣಿಸಿದ ವಿಡಿಯೋ ವೈರಲ್ ಆದ ನಂತರ ವರ್ಣಭೇದ ನೀತಿ ವಿವಾದಕ್ಕೆ ಸಿಲುಕಿದೆ. ಬಿಳಿ ಬಣ್ಣದ ಪ್ರಶಸ್ತಿ ಪ್ರಧಾನ ಮಾಡಿದ ಮಹಿಳೆ ಕಪ್ಪು ಬಣ್ಣದ ಬಾಲಕಿಯೊಬ್ಬಳನ್ನು ಬಿಟ್ಟು ಮಿಕ್ಕವರೆಲ್ಲರಿಗೂ ಹಾರ ಹಾಕಿದ್ದಳು.
ಈ ವೀಡಿಯೊವನ್ನು ಮೂಲತಃ ಕಳೆದ ವರ್ಷ ಮಾರ್ಚ್ನಲ್ಲಿ ಚಿತ್ರೀಕರಿಸಲಾಗಿದೆ. ವಿಡಿಯೊದಲ್ಲಿ ತಮ್ಮ ಪ್ರಶಸ್ತಿಗಳಿಗಾಗಿ ಕಾಯುತ್ತಿರುವ ಯುವ ಜಿಮ್ನಾಸ್ಟ್ ಗಳ ಸಾಲನ್ನು ತೋರಿಸಲಾಗಿದೆ. ಅವರೆಲ್ಲರೂ ತಮ್ಮ ತಮ್ಮ ಪ್ರಶಸ್ತಿ ಸ್ವೀಕರಿಸಿದರೂ, ಕಪ್ಪು ಹುಡುಗಿಯನ್ನು ಸ್ಪಷ್ಟವಾಗಿ ಕಡೆಗಣಿಸಲಾಗಿತ್ತು.
ಇದನ್ನೂ ಓದಿ : KL Rahul : ಶತಕ ಸಿಡಿಸಿ ಟೀಕಾಕಾರರ ಬಾಯ್ಮುಚ್ಚಿಸಿದ ಕೆ. ಎಲ್ ರಾಹುಲ್
ಕಳೆದ ವರ್ಷವೇ ಈ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ಕ್ರೀಡಾ ಸಂಸ್ಥೆ ಹೇಳಿಕೊಂಡಿದೆ. ಆದರೆ, ಬಾಲಕಿಯ ಕುಟುಂಬವು ಕ್ಷಮೆಯಾಚನೆಯನ್ನು ಸ್ವೀಕರಿಸಿಲ್ಲ ಎಂದು ಬಾಲಕಿಯ ತಾಯಿ ಹೇಳಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಈ ಘಟನೆಯ ನಮ್ಮ ಕುಟುಂಬವು ತುಂಬಾ ಅಸಮಾಧಾನಗೊಂಡಿದೆ ಎಂದು ತಾಯಿ ಹೇಳಿದ್ದಾರೆ. ತಮ್ಮ ಮಗಳು ಕಪ್ಪು ವರ್ಣೀಯಳಾಗಿದ್ದರಿಂದ ಅವಳನ್ನು ನಿರ್ಲಕ್ಷಿಸಲಾಗಿದೆ ಎಂದು ಕುಟುಂಬ ಆರೋಪಿಸಿದೆ.
ಪ್ರಶಸ್ತಿಗಳನ್ನು ನೀಡಿದ ಮಹಿಳೆ ಬಿಳಿ ಬಣ್ಣದ ಮಕ್ಕಳಿಗೆ ಮಾತ್ರ ಪದಕ ನೀಡಿ ಹೊರಟುಹೋದರು ಎಂದು ಅನೇಕರು ಗಮನಸೆಳೆದಿದ್ದಾರೆ. ಆದರೆ, ಆ ಮಹಿಳೆಯ ಸದಸ್ಯತ್ವವನ್ನು ನವೀಕರಿಸಲಾಗಿಲ್ಲ. ಹೀಗಾಗಿ ಅವರು ಐರ್ಲೆಂಡ್ ಜಿಮ್ನಾಸ್ಟಿಕ್ಸ್ ಸಂಸ್ಥೆಯೊಂದಿಗೆ ಇಲ್ಲ ಎಂದು ಹೇಳಲಾಗಿದೆ.
ಸಿಮೋನ್ ಬೈಲ್ಸ್ ಪ್ರತಿಕ್ರಿಯೆ
I would love to see @Simone_Biles reach out to this girl if she’s able.
— 🇮🇪Brandon🇺🇸 (@cubbieXbrando) September 22, 2023
ವೀಡಿಯೊ ಹೊರಬಂದ ನಂತರ ಅಮೆರಿಕದ ಜಿಮ್ನಾಸ್ಟಿಕ್ಸ್ ತಾರೆ ಸಿಮೋನ್ ಬೈಲ್ಸ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಇದೊಂದು ನೀಚ ಕೃತ್ಯ ಎಂದಿದ್ದಾರೆ. ಈ ವೀಡಿಯೊ ಪ್ರಸಾರವಾಗುತ್ತಿದ್ದಂತೆ ಆಕೆಯ ಪೋಷಕರನ್ನು ಸಂಪರ್ಕಿಸಿದೆ. ಅವರ ಬೇಸರ ನೋಡಿ ನನ್ನ ಹೃದಯ ಒಡೆದುಹೋಯಿತು ಎಂದು ಸಿಮೋನ್ ಎಕ್ಸ್ ನಲ್ಲಿ ಬರೆದಿದ್ದಾರೆ. ಯಾವುದೇ ಕ್ರೀಡೆಯಲ್ಲಿ ಅಥವಾ ಯಾವುದೇ ವರ್ಣಭೇದ ನೀತಿಗೆ ಅವಕಾಶವಿಲ್ಲ” ಎಂದು ಸಿಮೋನ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಕ್ಷಮೆಯಾಚಿಸಿದ ಜಿಮ್ನಾಸ್ಟಿಕ್ಸ್ ಐರ್ಲೆಂಡ್
ಈ ವಿಡಿಯೋ ವೈರಲ್ ಆದ ಬಳಿಕ ಐರ್ಲೆಂಡ್ ಜಿಮ್ನಾಸ್ಟಿಕ್ಸ್ ಕ್ಷಮೆಯಾಚಿಸಿದೆ. “ಮಾರ್ಚ್ 2022 ರಲ್ಲಿ ಜಿಮ್ನಾಸ್ಟ್ಆರ್ಟ್ ಈವೆಂಟ್ನಲ್ಲಿ ನಡೆದ ಘಟನೆಯಿಂದ ಉಂಟಾದ ಅಸಮಾಧಾನಕ್ಕಾಗಿ ಜಿಮ್ನಾಸ್ಟಿಕ್ಸ್ ಐರ್ಲೆಂಡ್್ ಮಂಡಳಿ ಮತ್ತು ಸಿಬ್ಬಂದಿಯ ಪರವಾಗಿ ನಾವು ಬಾಲಕಿ ಮತ್ತು ಅವರ ಕುಟುಂಬಕ್ಕೆ ಮುಕ್ತವಾಗಿ ಕ್ಷಮೆಯಾಚಿಸಲು ಬಯಸುತ್ತೇವೆ” ಎಂದು ಜಿಮ್ನಾಸ್ಟಿಕ್ಸ್ ಐರ್ಲೆಂಡ್ ಹೇಳಿಕೆಯಲ್ಲಿ ತಿಳಿಸಿದೆ. “ಆ ದಿನ ಆ ಘಟನೆ ಸಂಭವಿಸಬಾರದಿತ್ತು ಮತ್ತು ಅದಕ್ಕಾಗಿ ನಾವು ತುಂಬಾ ವಿಷಾದಿಸುತ್ತೇವೆ. ಎಂದು ಹೇಳಿದೆ.
ಆಟೋಮೊಬೈಲ್
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
ಮೊಬೈಲ್ ಕೊಡದ ಕೋಪಕ್ಕೆ 11 ವರ್ಷದ ಅಕ್ಕ ಹಾಗೂ 10 ವರ್ಷದ ತಮ್ಮ ಅಮ್ಮನ ಕಾರಿನಲ್ಲಿಯೇ (Viral News) ಮನೆ ಬಿಟ್ಟು ಹೋಗಿದ್ದರು.
ವಾಷಿಂಗ್ಟನ್: ಹೆತ್ತವರ ವಾಹನವನ್ನು ರಸ್ತೆಯಲ್ಲಿ ಓಡಿಸಿ ಪೊಲೀಸರಿಗೆ ಸಿಕ್ಕಿ ಬೀಳುವ ಹಲವಾರು ಪ್ರಕರಣಗಳು ನಡೆಯುತ್ತಿರುತ್ತವೆ. ಬಹುತೇಕ ಪ್ರಕರಣಗಳು ಹದಿ ಹರೆಯದ ಮಕ್ಕಳ ಶೋಕಿಗೆ ನಡೆದಿರುತ್ತವೆ. ಆದರೆ, ಈ ಘಟನೆಯಲ್ಲಿ ಮಕ್ಕಳು ಅಮ್ಮನ ಮೇಲಿನ ಕೋಪಕ್ಕೆ ಅವರ ಕಾರನ್ನೇ ಎತ್ತಿಕೊಂಡು 300 ಕಿಲೋ ಮೀಟರ್ ದೂರ ಸಾಗಿದ ಮೇಲೆ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. 11 ವರ್ಷದ ಅಕ್ಕ ಹಾಗೂ 10 ವರ್ಷದ ತಮ್ಮನನ್ನು ಪೊಲೀಸರು ಅಡ್ಡಗಟ್ಟಿ ಹಿಡಿದು ಅವರ ಪೋಷಕರ ಮೇಲೆ ಕೇಸ್ ಜಡಿದು ಮನೆಗೆ ವಾಪಸ್ ಕಳುಹಿಸಿದ್ದಾರೆ ಎಂಬುದಾಗಿ (Viral News) ವರದಿಯಾಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ. ಅಮೆರಿಕದಲ್ಲಿ.
ಅಮೆರಿಕದ ಉತ್ತರ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಅಸಮಾಧಾನಗೊಂಡ ಇಬ್ಬರು ಮಕ್ಕಳು ತಮ್ಮ ತಾಯಿಯ ಕಾರನ್ನು ತೆಗೆದುಕೊಂಡು ಗಂಟೆಗಳ ಕಾಲ ಓಡಿಸಲು ನಿರ್ಧರಿಸಿದ್ದರು. ಮನೆಯಲ್ಲಿ ಗಲಾಟೆ ಮಾಡಿಕೊಂಡ ಮಕ್ಕಳು ಮನೆ ತೊರೆಯಲು ನಿರ್ಧರಿಸಿದ್ದರು.
ಉತ್ತರ ಫ್ಲೋರಿಡಾದ ಪೊಲೀಸರು ಗುರುವಾರ ಮುಂಜಾನೆ 3: 50 ರ ಸುಮಾರಿಗೆ ಅಲಚುವಾದಲ್ಲಿ ಮಕ್ಕಳಿಬ್ಬರು ವಾಹನ ಚಾಲನೆ ಮಾಡುತ್ತಿರುವುದನ್ನು ಗಮನಿಸಿ ಅವರನ್ನು ಬೆನ್ನಟ್ಟಿದ್ದಾರೆ. 10 ವರ್ಷದ ಬಾಲಕ ಮತ್ತು ಅವನ 11 ವರ್ಷದ ಸಹೋದರಿಯನ್ನು ತಡೆದಿದ್ದಾರೆ. ಅದಕ್ಕಿಂತ ಮೊದಲು ಮಕ್ಕಳ ತಾಯಿ ಪೊಲೀಸರಿ ಅವರಿಬ್ಬರೂ ಪರಾರಿಯಾಗಿರುವ ದೂರು ನೀಡಿದ್ದರು. 10 ವರ್ಷದ ಬಾಲಕ ಕಾರನ್ನು ಓಡಿಸಿದ್ದರೆ ಆತನ ಸಹೋದರೆ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದಳು ಎಂದು ಪೊಲೀಸರ ತಿಳಿಸಿದ್ದಾರೆ.
ಮೊಬೈಲ್ ಕೊಡದಕ್ಕೆ ಕೋಪ
ಇಬ್ಬರೂ ಮಕ್ಕಳು ಅತಿಯಾದ ಮೊಬೈಲ್ ಗೀಳಿಗೆ ಬಿದಿದ್ದರು. ಹೀಗಾಗಿ ತಾಯಿ ಹೊರಗೆ ಹೋಗುವಾಗ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಕೊಂಡು ಹೋಗಿದ್ದರು. ಇದಕ್ಕೆ ಕೋಪಗೊಂಡ ಅಕ್ಕ , ತಮ್ಮ ಅಮ್ಮನ ಕಾರನ್ನೇ ಎತ್ತಿಕೊಂಡು ಮನೆ ಬಿಟ್ಟು ಹೋಗಿದ್ದಾರೆ.
ಮಕ್ಕಳನ್ನು ಹಿಡಿದ ಪೊಲೀಸರು ಅವರನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಈ ವೇಳೆ ಪೋಷಕರಿಗೆ ಪೊಲೀಸರು ಬುದ್ಧಿ ಹೇಳಿದ್ದಾರೆ. ಇವೆಲ್ಲದರ ನಡುವೆ ತಾಯಿ ಮಕ್ಕಳ ಮೇಲೆಯೂ ಕಾರು ಕಳ್ಳತನದ ದೂರು ದಾಖಲಿಸಿದ್ದರು. ಪೊಲೀಸರು ಮಧ್ಯಸ್ಥಿಕೆಯಲ್ಲಿ ಎಲ್ಲ ದೂರುಗಳನ್ನು ತೆಗೆದುಹಾಕಲಾಗಿದೆ.
ಇದನ್ನೂ ಓದಿ : Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
ಅಜಾಗರೂಕ ಚಾಲನೆಯ ಕೇಸನ್ನೂ ಮಕ್ಕಳ ಮೇಲೆ ಹಾಕಿಲ್ಲ. ತಾಯಿ ಎಲ್ಲ ದೂರುಗಳನ್ನು ವಾಪಸ್ ಪಡೆದರೂ ಅಜಾಗರೂಕ ಚಾಲನೆಯ ಕೇಸ್ ಮಕ್ಕಳ ಮೇಲೆ ಹಾಕಿದ್ದರು. ಆದರೆ ಅಲ್ಲಿನ ನ್ಯಾಯಾಲಯ ಮಕ್ಕಳ ಮೇಲಿನ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಿಲ್ಲ. ಹೀಗಾಗಿ ಪೊಲೀಸರೂ ಆ ಕೇಸನ್ನೂ ಕೈಬಿಟ್ಟಿದ್ದಾರೆ.
ಭಾರತದಲ್ಲಿ ಪೋಷಕರಿಗೆ ಜೈಲು ಶಿಕ್ಷೆ
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವ ಪ್ರಕರಣಗಳು ಭಾರತದಲ್ಲಿ ಸಾಮಾನ್ಯವಾಗಿದೆ. ಅಪ್ರಾಪ್ತ ವಯಸ್ಕರು ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ಅಥವಾ ಸವಾರಿ ಮಾಡಿ ಸಿಕ್ಕಿಬಿದ್ದಾಗ, ಅವರನ್ನು ಬಂಧಿಸಿ ನಂತರ ಬಾಲಾಪರಾಧಿ ನ್ಯಾಯಾಲಯಗಳಿಗೆ ಕಳುಹಿಸಲಾಗುತ್ತದೆ. ಬಾಲಾಪರಾಧಿ ಕಸ್ಟಡಿಯಲ್ಲಿದ್ದಾಗ ಆಪ್ತ ಸಲಹೆಗಳನ್ನು ಪಡೆಯುತ್ತಾರೆ. ಆದರೆ ಅವರಿಗೆ ವಾಹನ ಓಡಿಸಲು ಬಿಟ್ಟ ಪೋಷಕರನ್ನು ಕಠಿಣ ಜೈಲು ಶಿಕ್ಷೆಗಳಿಗೆ ಒಳಪಡಿಸಲಾಗುತ್ತದೆ.
ಅಪರಾಧಗಳಲ್ಲಿ ಪದೇ ಪದೇ ತೊಡಗುವ ಅಪ್ರಾಪ್ತ ವಯಸ್ಕರು ದೀರ್ಘಾವಧಿಯ ಸೆರೆವಾಸ ಸೇರಿದಂತೆ ಹೆಚ್ಚು ಕಠಿಣ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ನ್ಯಾಯಾಲಯವು ಪೋಷಕರಿಗೆ ನಿರ್ದಿಷ್ಟ ಶಿಕ್ಷೆಗಳನ್ನು ನಿರ್ಧರಿಸುತ್ತದೆ. ಔಪಚಾರಿಕ ಮತ್ತು ಕಾನೂನುಬದ್ಧ ಪರವಾನಗಿ ಪಡೆಯುವವರೆಗೆ ತಮ್ಮ ಮಕ್ಕಳು ವಾಹನಗಳನ್ನು ಓಡಿಸುವುದಿಲ್ಲ ಎಂದು ಬುದ್ಧಿ ಹೇಳಲಾಗುತ್ತದೆ.
ಕರ್ನಾಟಕ
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
Bengaluru Police : ಬೆಂಗಳೂರು ಬಂದ್ ಹಿನ್ನೆಲೆ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ಬೆಳಗಿನ ತಿಂಡಿ ಪ್ಯಾಕೆಟ್‌ನಲ್ಲಿ ಇಲಿಯೊಂದು ಪತ್ತೆಯಾಗಿದೆ.
ಬೆಂಗಳೂರು: ಬೆಂಗಳೂರು ಬಂದ್ (Bengaluru Bandh) ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಹೀಗಾಗಿ ಬೆಳ್ಳಂ ಬೆಳಗ್ಗೆ ಪೊಲೀಸರು ಕೆಲಸಕ್ಕೆ ಹಾಜರಾಗಿದ್ದರು. ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರಿಗೆ ಪ್ಯಾಕೇಟ್ ಮೂಲಕ ತಿಂಡಿಯನ್ನು ವಿತರಿಸಲಾಗಿತ್ತು. ಆದರೆ ಕೊಟ್ಟ ತಿಂಡಿ ಪ್ಯಾಕೆಟ್‌ನಲ್ಲಿ ಇಲಿಯೊಂದು (Rat Food) ಪತ್ತೆಯಾಗಿದೆ.
ಯಶವಂತಪುರ ವ್ಯಾಪ್ತಿಯಲ್ಲಿ ಸಿಬ್ಬಂದಿಗೆ ಕೊಟ್ಟ ತಿಂಡಿಯಲ್ಲಿ ಇಲಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಕಮಿಷನರ್ ಎಂ.ಎನ್ ಅನುಚೇತ್ ಅಸಮಾಧಾನ ಹೊರಹಾಕಿದ್ದಾರೆ. ಜತೆಗೆ ಊಟ ಸಪ್ಲೈ ಮಾಡಿದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಊಟದಲ್ಲಿ ಇಲಿ ಕೊಟ್ಟ ಹಿನ್ನೆಲೆ ಹೋಟೆಲ್ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಸೂಚಿಸಿದ್ದಾರೆ. ಜತೆಗೆ ಯಶವಂತಪುರ ಸಂಚಾರ ಮತ್ತು ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: Assault Case : ಯುವತಿ ಸ್ನಾನ ಮಾಡುವಾಗ ವಿಡಿಯೊ ಮಾಡಿದ ಕಿರಾತಕ!
ಈ ಸಂಬಂಧ ಅನುಚೇತ್ ವಿಚಾರಣೆ ನಡೆಸಿದಾಗ, ಯಶವಂತಪುರದಲ್ಲಿರುವ ಅಶೋಕ್ ಟಿಫಿನ್ ಸೆಂಟರ್‌ನಲ್ಲಿ ಒಟ್ಟು 180 ಜನಕ್ಕೆ ತಿಂಡಿಯನ್ನು ಸಿದ್ದಪಡಿಸಿಲಾಗಿತ್ತು. ಬೆಳಗ್ಗೆ 7-30ಕ್ಕೆ ತಿಂಡಿಯನ್ನು ವಿತರಿಸಲಾಗಿದೆ. ಈ ವೇಳೆ ಸಿಬ್ಬಂದಿಯೊಬ್ಬರು ಪ್ಯಾಕೆಟ್ ತೆರೆದಾಗ ಇಲಿ ಪತ್ತೆಯಾಗಿದೆ. ಕೂಡಲೇ ತಮ್ಮ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ತಿಂಡಿ ತಿನ್ನದಂತೆ ಇತರೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹೀಗಾಗಿ ಯಾವ ಸಿಬ್ಬಂದಿ ತಿಂಡಿ ಸೇವಿಸಿಲ್ಲ. ಇದರಿಂದ ಆಗಬಹುದಾದ ಅನುಹಾತವೊಂದು ತಪ್ಪಿದೆ ಎಂದು ಮಾಹಿತಿ ನೀಡಿದ್ದಾರೆ.
ಮೂರು ಹೊತ್ತಿನ ಊಟಕ್ಕೆ ಸರ್ಕಾರ 200 ರೂ. ಕೊಡುತ್ತದೆ. ಗುಣಮಟ್ಟದ ಊಟ ಯಾಕಾಗಿ ಕೊಟ್ಟಿಲ್ಲ ಎಂದು ಅಧಿಕಾರಿಗಳ ಮೇಲೆ ಅನುಚೇತ್ ಗರಂ ಆದರು. ಸದ್ಯ ಕಳಪೆ ತಿಂಡಿ ಕೊಟ್ಟಿರುವ ಹೋಟೆಲ್ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಆದೇಶಿಸಿದ್ದಾರೆ. ಹಗಲಿರುಳು ಕಷ್ಟಪಡುವ ಸಿಬ್ಬಂದಿಗೆ ಒಂದು ಹೊತ್ತಿಗೆ ಗುಣಮಟ್ಟದ ಆಹಾರ ಕೊಡದೆ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕ್ರಿಕೆಟ್
Kapil Dev Kidnap: ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕಿಡ್ನಾಪ್; ವಿಡಿಯೊ ವೈರಲ್
ಕಪಿಲ್ ದೇವ್ ಅವರ ಅಪಹರಣದ(Kapil Dev Kidnap) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(viral video) ಆಗುತ್ತಿದ್ದು, ಅವರ ಅಭಿಮಾನಿಗಳು ಆತಂಕ ಪಡುವಂತಾಗಿದೆ.
ಮುಂಬಯಿ: ಭಾರತ ಕ್ರಿಕೆಟ್ ತಂಡಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಅವರ ಅಪಹರಣದ(Kapil Dev Kidnap) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(viral video) ಆಗುತ್ತಿದ್ದು, ಅವರ ಅಭಿಮಾನಿಗಳು ಆತಂಕ ಪಡುವಂತಾಗಿದೆ. ಕಪಿಲ್ ದೇವ್(Kapil Dev) ಅವರನ್ನು ಕಿಡ್ನಾಪ್ ಮಾಡುತ್ತಿರುವ ವಿಡಿಯೊವನ್ನು ಮಾಜಿ ಆಟಗಾರ ಗೌತಮ್ ಗಂಭಿರ್(Gautam Gambhir) ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಇಬ್ಬರು ಕಪಿಲ್ ದೇವ್ ಅವರ ಕೈಗಳನ್ನು ದಾರದಿಂದ ಹಿಂಭಾಗಕ್ಕೆ ಕಟ್ಟಿದ್ದು, ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿ ಕಟ್ಟಡವೊಂದರ ಒಳಗಡೆಗೆ ಎಳೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವೇಳೆ ಕಪಿಲ್ ಸಹಾಯಕ್ಕಾಗಿ ಹಿಂತಿರುಗಿ ನೋಡುವ ದೃಶ್ಯವನ್ನೂ ಕಾಣಬಹುದಾಗಿದೆ.
ಗೌತಮ್ ಗಂಭೀರ್ ಅವರು ಈ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಆತಂಕ ಹೊರಹಾಕಿದ್ದಾರೆ. “ಇದು ಕಪಿಲ್ ಪಾಜಿ ಅಲ್ಲ ಎಂದು ಭಾವಿಸುವೆ, ಅವರು ಚೆನ್ನಾಗಿದ್ದಾರೆ ಎಂದುಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಅಸಲಿಗೆ ಈ ವಿಡಿಯೊ ಹಿಂದಿರುವ ಕಾರಣ ಬೇರೆಯೇ ಇದೆ. ಇದೊಂದು ಜಾಹಿರಾತಿಗಾಗಿ ಚಿತ್ರಿಸಿದ ದೃಶ್ಯವೊಂದರ ತುಣಕಾಗಿದೆ.
ಆತಂಕಪಡಬೇಕಿಲ್ಲ
ಈ ಅಪಹರಣ ದೃಶ್ಯವನ್ನು ಜಾಹೀರಾತು ಉದ್ದೇಶಕ್ಕಾಗಿ ತೆಗೆದಿದ್ದು ಪ್ರಚಾರದ ಗಿಮಿಕ್ಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿರುವ ಸಾಧ್ಯತೆ ಇದೆ. ಕಪಿಲ್ ಅಪಹರಣ ಕುರಿತು ಭಾರಿ ಪ್ರಚಾರ ಪಡೆಯಲು ಈ ರೀತಿ ಮಾಡಿರುವ ಸಾಧ್ಯತೆ ಹೆಚ್ಚು.
ವಿಶ್ವಕಪ್ ಗೆಲ್ಲಲು ಅದೃಷ್ಟ ಕೈಹಿಡಿಯಬೇಕು
ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದೆ. ಭಾರತದ ವಿಶ್ವಕಪ್ ಭವಿಷ್ಯವನ್ನು ಕಪಿಲ್ ಅವರು ನುಡಿದಿದ್ದು ಎಲ್ಲವೂ ಅದೃಷ್ಟವನ್ನು ಅವಲಂಭಿಸಿದ್ದರಿಂದ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ವೆಂದು ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಒಂದು ವೇಳೆ ನಮ್ಮ ತಂಡ ಅಗ್ರ ನಾಲ್ಕರೊಳಗಿನ ಹಂತಕ್ಕೆ ಬಂದರೆ ಮತ್ತೆ ಎಲ್ಲವೂ ಅದೃಷ್ಟದ ಬಲದಿಂದ ನಡೆಯುತ್ತದೆ. ಅಗ್ರ ನಾಲ್ಕರೊಳಗಿನ ಹಂತಕ್ಕೆ ಬರುವುದು ಅತ್ಯಂತ ಪ್ರಮುಖವಾಗಿದೆ. ಭಾರತ ತಂಡ ಪ್ರಶಸ್ತಿ ಗೆಲ್ಲಲು ಸಿದ್ಧವಾಗಿದೆ. ಏಷ್ಯಾ ಕಪ್‌ನಲ್ಲಿ ತೋರಿದ ಅದ್ಭುತ ನಿರ್ವಹಣೆ ಇಲ್ಲಿಯೂ ಮುಂದುವರಿದರೆ ಕಪ್ಗೆಲ್ಲುವ ಸಾಧ್ಯತೆ ಇದೆ. ಜತೆಗೆ ಅದೃಷ್ಟವೂ ಕೈ ಹಿಡಿಯಬೇಕು” ಎಂದಿದ್ದರು.
ಇದನ್ನೂ ಓದಿ Viral News : ಕಿರುತೆರೆ ನಟಿ ಕಿರಿಕ್; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್!
10 ತಾಣಗಳಲ್ಲಿ ಪಂದ್ಯವಾಳಿ
ವಿಶ್ವಕಪ್ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.
-
Live News21 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ12 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ4 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema15 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ15 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್11 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ12 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್15 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ