ಬೆಂಗಳೂರು: ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಗೇಮ್‌ನಂತಹ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಅವು ಜನರ ಮೆದುಳಿಗೆ ಮತ್ತು ಕಣ್ಣುಗಳಿಗೆ ಕೆಲಸ ಕೊಡುತ್ತವಾದ್ದರಿಂದ ಅಂತಹ ಪೋಸ್ಟ್‌ಗಳು ವೈರಲ್ ಆಗುತ್ತವೆ ಕೂಡ. ಇದೀಗ ಅಂಥದ್ದೇ ಒಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ. ಒಂದಿಷ್ಟು ಚಿನ್ನಾಭರಣಗಳ ರಾಶಿ ಬಿದ್ದಿದ್ದು, ಅದರಲ್ಲಿ ಒಂಟಿಯಾಗಿರುವ ಒಂದೇ ಒಂದು ಮುತ್ತನ್ನು ನೀವು ಹುಡುಕಬೇಕಿದೆ. ಹಾಗೆ ಹುಡುಕುವುದಕ್ಕೆ ನಿಮಗಿರುವುದು ಕೇವಲ 30 ಸೆಕೆಂಡುಗಳು ಮಾತ್ರ.
ಹೆಣ್ಣು ಮಕ್ಕಳಿಗೆ ಆಭರಣಗಳನ್ನು ಇಟ್ಟುಕೊಳ್ಳುವಾಗ ಉಂಟಾಗುವ ಸಮಸ್ಯೆಯೊಂದರ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಕಿವಿಯ ಓಲೆಗಳನ್ನೆಲ್ಲ ಒಂದೇ ಬಾಕ್ಸಿನಲ್ಲಿ ಹಾಕಿಟ್ಟರೆ ಅವುಗಳನ್ನು ಹುಡುಕುವುದೇ ದೊಡ್ಡ ಸಮಸ್ಯೆಯಾಗಿಬಿಡುತ್ತದೆ. ಒಂದು ಓಲೆ ಸಿಕ್ಕರೆ ಅದರ ಜೋಡಿ ಸಿಗುವುದೇ ಇಲ್ಲ. ಆಮೇಲೆ ಪೂರ್ತಿ ಬಾಕ್ಸ್ ಅನ್ನೇ ಖಾಲಿ ಮಾಡಿ ಮತ್ತೆ ಹೊಸದಾಗಿ ಜೋಡಿಸಿಕೊಂಡು ಓಲೆಯ ಜೋಡಿ ಹುಡುಕಬೇಕಾಗುತ್ತದೆ. ಅಂಥವರಿಗೆಂದೇ ಈ ಆಟ. ಇಲ್ಲಿ ಒಂದಿಷ್ಟು ಆಭರಣಗಳ ಚಿತ್ರವಿದೆ. ಕಿವಿಯ ಓಲೆ, ಸರ, ಬಳೆ, ಉಂಗುರ ಹೀಗೆ ಎಲ್ಲ ರೀತಿ ಆಭರಣಗಳ ಚಿತ್ರ ಇದರಲ್ಲಿದೆ. ಇದರಲ್ಲಿ ಒಂದೇ ಒಂದು ಮುತ್ತು ಮಾತ್ರ ಅಡಗಿ ಕುಳಿತುಕೊಂಡಿದೆ. ಆ ಮುತ್ತನ್ನು ನೀವು ಹುಡುಕಬೇಕು.
ಇದನ್ನೂ ಓದಿ: Viral Video : ಫೇರ್‌ವೆಲ್ ದಿನದಂದು ಸೀರೆಯುಟ್ಟು ಹುಚ್ಚೆಬ್ಬಿಸುವಂತೆ ಕುಣಿದ ಯುವತಿಯರು!
ಈ ಆಟವನ್ನು Chisholm Hunter ಹೆಸರಿನ ಚಿನ್ನಾಭರಣ ಮತ್ತು ವಜ್ರದ ಕಂಪನಿ ತಯಾರಿಸಿದೆ. ಈ ಫೋಟೊವನ್ನು ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, 30 ಸೆಕೆಂಡುಗಳೊಳಗೆ ಮುತ್ತನ್ನು ಹುಡುಕಿ ಎಂದು ಸವಾಲು ಹಾಕಿದೆ. ಒಂದು ವೇಳೆ ನೀವು 30 ಸೆಕೆಂಡುಗಳೊಳಗೆ ಮುತ್ತನ್ನು ಹುಡುಕುವಲ್ಲಿ ಯಶಸ್ವಿ ಆದಲ್ಲಿ ನಿಮಗೆ ʼಹದ್ದಿ ಕಣ್ಣಿದೆʼ ಎಂದರ್ಥ ಎಂದು ಹೇಳಲಾಗಿದೆ. ಮತ್ತೇಕೆ ತಡ? ನೀವು ಇದರಲ್ಲಿನ ಮುತ್ತನ್ನು ಹುಡುಕಿ ನೋಡಿ..
ಈಗಾಗಲೇ ಕೆಲವರಿಗೆ ಮುತ್ತು ಎಲ್ಲಿದೆ ಎಂದು ಗೊತ್ತಾಗಿರಬಹುದು. ಗೊತ್ತಾಗದೇ ಇರುವವರು ಯೋಚಿಸಬೇಕಿಲ್ಲ. ನಿಮಗೆಂದೇ ನಾವೇ ಆ ಮುತ್ತನ್ನು ಹುಡುಕಿದ್ದೇವೆ. ಚಿತ್ರದ ಎಡ ಭಾಗದಲ್ಲಿ ಚಿನ್ನದ ಸರ ಮತ್ತು ಬಳೆಗಳ ನಡುವೆ ಆ ಮುತ್ತು ಬಚ್ಚಿಟ್ಟುಕೊಂಡಿದೆ ನೋಡಿ.
ಈ ಆಟದಲ್ಲಿ ಅನೇಕರು ಮುತ್ತನ್ನು 30 ಸೆಕೆಂಡುಗಳೊಳಗೆ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಅನೇಕರು ಸ್ವಲ್ಪ ತಡವಾದರೂ ಮುತ್ತನ್ನು ಹುಡುಕಿದ್ದಾರೆ. ಕೆಲವರಿಗೆ ಮುತ್ತು ಸಿಕ್ಕೇ ಇಲ್ಲ ಎಂದೂ ಕಮೆಂಟ್ ಮಾಡಿದ್ದಾರೆ.
ಇದೇ ರೀತಿಯ ಹಲವಾರು ಆಟಗಳಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಇತ್ತೀಚೆಗೆ ಗಣಿತದ ಆಟವೊಂದು ಜನರು ತಲೆ ಕೆರೆದುಕೊಳ್ಳುವಂತೆ ಮಾಡಿತ್ತು. ಒಂದು ಜೋಡಿ ಶೂ, ಒಂದು ಗೊಂಬೆ ಮತ್ತು ಒಂದು ಸೀಟಿ ಇತ್ತು. ಅದರಲ್ಲಿ ಪ್ರತಿ ವಸ್ತುವಿನ ಮೌಲ್ಯವನ್ನು ಕಂಡುಹಿಡಿಯುವುದಕ್ಕೆ ಸವಾಲೆಸೆಯಲಾಗಿತ್ತು. ಗಣಿತದಲ್ಲಿ ನೀವು ಎಷ್ಟರ ಮಟ್ಟಿಗೆ ಕೌಶಲ್ಯ ಹೊಂದಿದ್ದೀರಿ ಎನ್ನುವುದನ್ನು ಈ ಮೂಲಕ ನೋಡೋಣ ಎಂದು ಹೇಳಲಾಗಿತ್ತು.