Site icon Vistara News

ಮೊಸಳೆ ಬಾಯಿಯಿಂದ ಸ್ನೇಹಿತನನ್ನು ಹೊರ ತೆಗೆದರಾ ಗೆಳೆಯರು?

crocodile and man

ಸೋಷಿಯಲ್‌ ಮೀಡಿಯಾದಲ್ಲಿ ನಿತ್ಯ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗ್ತಾನೆ ಇರ್ತಾವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳನ್ನು ಹೆಚ್ಚಾಗಿ ಜನರು ನೋಡಲು ಇಷ್ಟಪಡುತ್ತಾರೆ. ಹೀಗಾಗಿ ಪ್ರಾಣಿಗಳ ಸೆಣಸಾಟ ಅಥವಾ ಪ್ರಾಣಿಗಳ ತಮಾಷೆ, ಕ್ಯೂಟ್​ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.

ಇತ್ತೀಚೆಗೊಂದು ವಿಡಿಯೋವೊಂದು ವೈರಲ್‌ ಆಗಿದ್ದು, ನೋಡಲು ಭಯಾನಕವಾಗಿದೆ. ದೈತ್ಯ ಮೊಸಳೆ ಬಾಯಿಯಿಂದ ವ್ಯಕ್ತಿಯೊಬ್ಬನನ್ನ ಆತನ ಸ್ನೇಹಿತರು ಹೊರಗೆ ತೆಗೆಯುತ್ತಿರುವ ದೃಶ್ಯ ಈ ವಿಡಿಯೋದಲ್ಲಿದ್ದು, ಬೆಚ್ಚಿ ಬೀಳಿಸುವಂತಿದೆ.

ವ್ಯಕ್ತಿಯೊಬ್ಬನನ್ನು ದೈತ್ಯ ಮೊಸಳೆಯೊಂದು ನುಂಗಿ ಬಿಟ್ಟಿದೆ. ಈ ವೇಳೆ ಅದೇ ಸ್ಥಳದಲ್ಲಿ ಇದ್ದ ಆತನ ಸ್ನೇಹಿತರು ಆತನನ್ನು ಕಾಪಾಡಿಕೊಳ್ಳಲು ಹೆಣಗಾಡಿದ್ದಾರೆ. ಬಳಿಕ ಮೊಸಳೆಯ ಬಾಯಿ ಮುಂದೆ ಒಬ್ಬ ನಿಂತಿದ್ದರೆ, ಬಾಲದ ಬಳಿ ಮತ್ತೊಬ್ಬ ಇದ್ದಾನೆ. ನಂತರ ಮೊಸಳೆಯ ಬಾಯಿಯ ಬಳಿ ನಿಂತಿದ್ದವ ತನ್ನ ಸ್ನೇಹಿತನನ್ನು ಮೊಸಳೆ ಬಾಯಿಯಿಂದ ಹೊರಗೆ ತರಲು ಯತ್ನಿಸುತ್ತಿರುವುದುನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

ಆದರೆ, ‌ಸೂಕ್ಷ್ಮವಾಗಿ ಗಮನಿಸಿದರೆ ಈ ವಿಡಿಯೋ ನಕಲಿ ಎನ್ನುವುದು ಗೋಚರಿಸುತ್ತದೆ!

ಇದನ್ನು ಓದಿ | ಸೈಕಲ್‌ ಓಡಿಸುತ್ತಿದ್ದ ಗೋರಿಲ್ಲಾ ಕೆಳಗೆ ಬಿದ್ದ ಬಳಿಕ ಮಾಡಿದ್ದೇನು?-ನಗು ತರಿಸುವ ವಿಡಿಯೋ ವೈರಲ್‌

Exit mobile version