Site icon Vistara News

Ganesha Festival : ಹಿಂದು ಮಹಾಸಭಾ ಗಣೇಶೋತ್ಸವದಲ್ಲಿ ತುಂಡು ಬಟ್ಟೆ ತೊಟ್ಟು ಯುವತಿ ಪ್ರಚೋದಕ ಡ್ಯಾನ್ಸ್‌!

Ptovocative dance at Ganesha festival

ಕೊಪ್ಪಳ: ಹಿಂದು ಮಹಾಸಭಾ (Koppala Hindu Mahasabha) ಆಯೋಜಿಸಿರುವ ಕೊಪ್ಪಳ ಗಣೇಶೋತ್ಸವದಲ್ಲಿ (Koppala Ganeshothsava) ಯುವತಿಯೊಬ್ಬಳು ತುಂಡು ಬಟ್ಟೆ ತೊಟ್ಟು ಡ್ಯಾನ್ಸ್‌ (Young lady dance in Half dress) ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಸಂಸ್ಕೃತಿ ಬಗ್ಗೆ ಮಾತನಾಡುವವರು ತುಂಡು ಬಟ್ಟೆ ಡ್ಯಾನ್ಸ್‌ಗೆ (Obscene dance) ಹೇಗೆ ಅನುಮತಿ ಕೊಟ್ಟರು (Ganesha festival) ಎಂಬ ಜನ ಪ್ರಶ್ನೆ ಮಾಡುತ್ತಿದ್ದಾರೆ.

ಕೊಪ್ಪಳದ ಕಾವ್ಯಾನಂದ ಪಾರ್ಕಿನಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಉತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಮನೋರಂಜನೆ ಕಾರ್ಯಕ್ರಮ (Entertainment Programme) ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಯುವತಿಯೊಬ್ಬಳು ತುಂಡು ಬಟ್ಟೆ ತೊಟ್ಟು ಹಿಂದಿ ಹಾಡಿಗೆ ಪ್ರಚೋದಕವಾಗಿ ಕುಣಿದಿದ್ದಳು (Provocative dance). ಸಂಸ್ಕೃತಿಯ ಬಗ್ಗೆ ಮಾತನಾಡುವವರು ತುಂಡು ಬಟ್ಟೆಯ ಡ್ಯಾನ್ಸ್ ಆಯೋಜನೆ ಮಾಡಿದ್ದು ಎಷ್ಟು ಸರಿ, ಇದಕ್ಕೆಲ್ಲ ಗಣೇಶನ ವೇದಿಕೆಯೇ ಬೇಕಾಗಿತ್ತಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸ್ ಆಯೋಜನೆ ಕುರಿತು ಅಸಮಾಧಾನ ವ್ಯಕ್ತವಾಗಿದೆ.

ಯುವತಿಯ ತಪ್ಪಿಲ್ಲ, ಆಯೋಜಕರದೇ ತಪ್ಪು

ಡ್ಯಾನ್ಸ್‌ ಮಾಡಿದ ಯುವತಿಯ ತಪ್ಪಿಲ್ಲ, ಈ ರೀತಿಯ ನೃತ್ಯಗಳು ಈಗ ಎಲ್ಲ ಕಡೆ ಸಾಮಾನ್ಯವಾಗಿದೆ. ಮಕ್ಕಳು ಇವುಗಳನ್ನು ಪ್ರದರ್ಶಿಸುತ್ತಾರೆ. ಆದರೆ, ಇದನ್ನು ಗಣೇಶೋತ್ಸವದ ವೇದಿಕೆಯಲ್ಲಿ ನಡೆಸಲು ಆಯೋಜಕರು ಹೇಗೆ ಪರ್ಮಿಷನ್‌ ಕೊಟ್ಟರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಆಯೋಜಕರಿಗೆ ಯಾವ ರೀತಿಯ ನೃತ್ಯ ಎನ್ನುವ ಬಗ್ಗೆ ಆರಂಭದಲ್ಲಿ ಮಾಹಿತಿ ಇರುವುದಿಲ್ಲ, ನೃತ್ಯ ಮಾಡುವವರು ವೇದಿಕೆ, ಸಮಯ, ಸಂದರ್ಭ ನೋಡಿಕೊಂಡು ತಮ್ಮ ಕಲೆಯನ್ನು ಪ್ರದರ್ಶನ ಮಾಡಬೇಕು ಎಂಬ ವಾದವನ್ನೂ ಮಂಡಿಸಿದ್ದಾರೆ. ಇದೇ ವೇಳೆ ಕೆಲವರು ಇಂಥದ್ದೆಲ್ಲ ನಡೀತದೆ, ಇದರಲ್ಲಿ ತಲೆ ಹೋಗುವಂತದ್ದು ಏನೂ ಇಲ್ಲ. ನಮ್ಮ ಮಕ್ಕಳೇ ಅಲ್ಲವೇ ಡ್ಯಾನ್ಸ್‌ ಮಾಡಿದ್ದು ಎಂದು ಸಮಾಧಾನ ಹೇಳಿದ್ದಾರೆ. ಒಟ್ಟಿನಲ್ಲಿ ಗಣೇಶನ ವೇದಿಕೆಯ ಮುಂದಿನ ಪ್ರಚೋದಕ ಡ್ಯಾನ್ಸ್‌ ಸುದ್ದಿ ಮಾಡಿದೆ.

ಇದನ್ನೂ ಓದಿ: Communal Harmony : ದರ್ಗಾದಲ್ಲೇ ಗಣಪತಿ ಪ್ರತಿಷ್ಠಾಪನೆ; ಘಂಟೆ ಬಡಿದು ಜೈ ಗಣೇಶ ಎಂದ ಮುಸ್ಲಿಮರು, ಎಂಥಾ ಸೌಹಾರ್ದ!

ಹಗರಿಬೊಮ್ಮನಹಳ್ಳಿಯಲ್ಲಿ ಡಿಜೆ ಸದ್ದಿಗೆ ಹಾರಿ ಹೋಯಿತು ಯುವಕನ ಪ್ರಾಣ

ಇದು ಕೊಪ್ಪಳದ ಕಥೆಯಾದರೆ ಅತ್ತ ವಿಜಯನಗರ ಜಿಲ್ಲೆ ಹಗರಿಬೊಮ್ಮನ ಹಳ್ಳಿ ಪಟ್ಟಣದ ಭೋವಿ ಕಾಲನಿಯಲ್ಲಿ ಗಣೇಶೋತ್ಸವದ ಶೋಭಾಯಾತ್ರೆ ಸಂದರ್ಭದಲ್ಲಿ ಡಿ.ಜೆ. ಸೌಂಡ್‌ಗೆ ಯುವಕನ ಪ್ರಾಣವೇ ಹಾರಿ ಹೋಗಿದೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬೋವಿ ಕಾಲೊನಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಡಿಜೆಗೆ ಡ್ಯಾನ್ಸ್‌ ಮಾಡುತ್ತಿದ್ದ ಜಮೀರ್ ಪಿಂಜಾರ( 22) ಎಂಬ ಯುವಕ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ಅತಿಯಾಗಿ ಮದ್ಯ ಸೇವನೆ ಮಾಡಿದ್ದ ಎನ್ನಲಾಗಿದೆ. BSNL ಕಚೇರಿ ಬಳಿ ಮೆರವಣಿಗೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಯುವಕರು ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಮಾರ್ಗಮದ್ಯದಲ್ಲಿ ಮೃತಪಟ್ಟಿದ್ದಾನೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತ ಹೊಸಪೇಟೆಯಲ್ಲಿ ಗಣೇಶೋತ್ಸವದ ವೇಳೆ ಯುವಕರ ರಣೋತ್ಸಾಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಡಿಜೆ ಸೌಂಡ್ ಗೆ ಕುಣಿದು ಕುಪ್ಪಳಿಸಿದ ಯುವಕರನ್ನು ನಿಯಂತ್ರಿಸಲು ಸ್ವತಃ ವಿಜಯನಗರ ಎಸ್ಪಿ ಶ್ರೀ ಹರಿಬಾಬು ಬಿಎಲ್, ಡಿವೈಎಸ್ಪಿ ಮಂಜುನಾಥ್ ತಳವಾರ್, ಹೊಸಪೇಟೆ ಸಿಪಿಐ ಬಾಲನಗೌಡ ಅವರೇ ಕಣಕ್ಕೆ ಇಳಿಬೇಕಾಯಿತು. ಎಸ್ಪಿ ಶ್ರೀಹರಿಬಾಬು ಬಿಎಲ್ ಸ್ವತಃ ತಾವೇ ಯುವಕರನ್ನು ಹೊರದಬ್ಬಿದ ದೃಶ್ಯಗಳು ವೈರಲ್‌ ಆಗಿವೆ.

Exit mobile version