Site icon Vistara News

Viral Video : ಪುಟಾಣಿ ಮಾಡ್ತಿದೆ ಕಾವಾಲಯ್ಯ ಡ್ಯಾನ್ಸ್‌! ಆಹಾ ಎಷ್ಟು ಮುದ್ಮುದ್ದು

girl dance to kaavalaa song

ಬೆಂಗಳೂರು: ರಜನಿಕಾಂತ್‌ ಅವರ ಜೈಲರ್‌ ಸಿನಿಮಾದ ಕಾವಾಲಯ್ಯ ಹಾಡು ದೊಡ್ಡ ಮಟ್ಟದ ಹಿಟ್‌ ಆಗಿದೆ. ಹಾಡಿನಲ್ಲಿ ನಟಿ ತಮನ್ನಾ ಭಾಟಿಯಾ ಹಾಕಿದ ಹೆಜ್ಜೆಗಳು ಎಲ್ಲರನ್ನು ಮೋಡಿ ಮಾಡಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಎಲ್ಲ ಕಡೆಯೂ ಇದೇ ಹಾಡಿಗೆ ಜನರು ಹೆಜ್ಜೆ ಹಾಕಲಾರಂಭಿಸಿದ್ದಾರೆ. ಈ ಹಾಡಿಗೆ ಹೆಜ್ಜೆ ಹಾಕಿದವರ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸದ್ದನ್ನೇ ಮಾಡುತ್ತಿದೆ. ಇದೀಗ ಪುಟಾಣಿ ಬಾಲಕಿಯೊಬ್ಬಳು ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಲೇ ಬಾಲಕಿ ಮಾಡಿರುವ ನೃತ್ಯ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ವೈರಲ್‌ (Viral Video) ಆಗಿದೆ.

@cutiepie_riva ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಂತದ್ದೊಂದು ವಿಡಿಯೊ ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ ಕೆಂಪು ಬಣ್ಣದ ಪ್ಯಾಂಟ್‌ ಜತೆ ಕಪ್ಪು ಬಣ್ಣದ ಕ್ರಾಪ್‌ ಟಾಪ್‌ ತೊಟ್ಟಿರುವ ಪುಟ್ಟ ಹುಡುಗಿ ಜೈಲರ್‌ ಸಿನಿಮಾದ ಕಾವಾಲಯ್ಯ ಹಾಡಿಗೆ ನೃತ್ಯ ಮಾಡುತ್ತಾಳೆ. ತಮನ್ನಾ ಮಾಡಿರುವಂತೆಯೇ ಬಾಲಕಿ ಚೂರೂ ತಪ್ಪದೆ ಎಲ್ಲ ಸ್ಟೆಪ್ಸ್‌ಗಳನ್ನು ಹಾಕುತ್ತಾಳೆ. ಮುಗ್ಧವಾಗಿರುವ ಮಗು ಈ ಹಾಡಿಗೆ ಕುಣಿದಿರುವುದು ನೋಡುವುದಕ್ಕೆ ತುಂಬಾನೇ ಚೆನ್ನಾಗಿ ಮೂಡಿಬಂದಿದೆ.

ಇದನ್ನೂ ಓದಿ: Viral Video: ನೂರಾರು ಮೊಸಳೆಗಳ ಮೇಲೇ ಸಾಗುವ ದೋಣಿ! ಮೈ ಝುಂ ಎನ್ನಿಸುವ ವಿಡಿಯೊ
ಈ ವಿಡಿಯೊವನ್ನು ಜುಲೈ 17ರಂದೇ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 1.1 ಕೋಟಿಗೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 9 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ಆರು ಸಾವಿರದಷ್ಟು ಮಂದಿ ವಿಡಿಯೊಗೆ ಕಾಮೆಂಟ್‌ ಮಾಡಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.


“ಅಬ್ಬಾ ದೇವರೇ… ಈ ಮಗು ಎಷ್ಟು ಮುದ್ದಾಗಿದೆ. ನಿನ್ನ ನೃತ್ಯ ತುಂಬ ಇಷ್ಟವಾಯಿತು ಕಂಡ. ಹೀಗೇ ಮಿಂಚುತ್ತಿರು. ನಿನಗೆ ನನ್ನ ಆಶೀರ್ವಾದಗಳು”, “ಸೂಪರ್‌, ಅದ್ಭುತವಾದ ನೃತ್ಯ”, “ಈ ಹಾಡಿಗೆ ನಾನು ನೋಡಿರುವ ಎಲ್ಲ ನೃತ್ಯಗಳಲ್ಲಿ ಇದೇ ದಿ ಬೆಸ್ಟ್‌”, “ಪುಟಾಣಿಯ ನೃತ್ಯ ನೋಡುವುದೇ ಖುಷಿಯಾಗುತ್ತದೆ”, “ಈ ಮಗು ನಿಜಕ್ಕೂ ಪ್ರತಿಭಾವಂತ ಮಗು. ಮುಂದೆ ಜೀವನದಲ್ಲಿ ದೊಡ್ಡ ಸ್ಟಾರ್‌ ಆಗುವುದು ಗ್ಯಾರಂಟಿ” ಎನ್ನುವಂತಹ ಮೆಚ್ಚುಗೆಯ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.

ಇದನ್ನೂ ಓದಿ: Viral video : ಊರಿನವರ ಎದುರೇ ಯುವಕನ ಕೆನ್ನೆಗೆ ಚಪ್ಪಲಿಯಲ್ಲಿ ಬಾರಿಸಿದ ಯುವತಿ! ಮುಂದೇನಾಯ್ತು?

ಈ ಮಗು ಈಗಾಗಲೇ ಅನೇಕ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ಅದರಲ್ಲಿ ಕೆಲವು ವಿಡಿಯೊಗಳು ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡಿವೆ ಕೂಡ. ಪುಟ್ಟ ಪುಟ್ಟ ಹೆಜ್ಜೆಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಮೋಡಿ ಮಾಡುತ್ತಿರುವ ಈ ಬಾಲಕಿಗೆ ಇನ್‌ಸ್ಟಾಗ್ರಾಂನಲ್ಲಿ ಈಗಾಗಲೇ 1.68 ಲಕ್ಷದಷ್ಟು ಮಂದಿ ಫಾಲೋವರ್ಸ್‌ ಇದ್ದಾರೆ.

Exit mobile version