ಕೊಟ್ಟಾಯಂ, ಕೇರಳ: ಗೂಗಲ್ ಮ್ಯಾಪ್ಸ್ (Google maps) ಬಳಸಿ ಪ್ರಯಾಣಿಸುತ್ತಿದ್ದ ಪ್ರವಾಸಿ (tourists) ತಂಡವೊಂದು ಕೇರಳದಲ್ಲಿ (Kerala) ಸೀದಾ ಹೋಗಿ ನದಿನೀರಿಗೆ (River) ಇಳಿದಿದೆ. ಕಾರು ಮುಳುಗಿದೆ; ಆದರೆ ಪ್ರಯಾಣಿಕರು ಹೇಗೋ ಪಾರಾಗಿದ್ದಾರೆ.
ಹೈದರಾಬಾದ್‌ನ ಪ್ರವಾಸಿ ತಂಡವೊಂದು ದಕ್ಷಿಣ ಕೇರಳ ಜಿಲ್ಲೆಯ ಕುರುಪ್ಪಂಥಾರ ಬಳಿ ನ್ಯಾವಿಗೇಟ್ ಮಾಡಲು ಗೂಗಲ್ ಮ್ಯಾಪ್‌ಗಳನ್ನು ಬಳಸುತ್ತಿತ್ತು. ಗೂಗಲ್ ಮ್ಯಾಪ್ ಅವರನ್ನು ನೀರಿನಿಂದ ತುಂಬಿಕೊಂಡಿದ್ದ ಹೊಳೆಯೊಳಗೆ ಕರೆದುಕೊಂಡು ಹೋಯಿತು. ಕಾರಿನಲ್ಲಿ ಮಹಿಳೆ ಸೇರಿದಂತೆ ನಾಲ್ವರ ಗುಂಪು ಆಲಪ್ಪುಳ ಕಡೆಗೆ ಹೋಗುತ್ತಿತ್ತು. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.
ಅವರು ಪ್ರಯಾಣಿಸುತ್ತಿದ್ದ ರಸ್ತೆಯ ಪಕ್ಕ ಹೊಳೆಯಿದ್ದು, ಭಾರೀ ಮಳೆಯಿಂದಾಗಿ ರಸ್ತೆ ಕೂಡ ತುಂಬಿ ಹರಿಯುತ್ತಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿಲ್ಲದ ಕಾರಣ, ಅವರು ಗೂಗಲ್ ಮ್ಯಾಪ್ ಬಳಸಿ ನ್ಯಾವಿಗೇಟ್ ಮಾಡುತ್ತಿದ್ದರು. ಅದು ಅವರನ್ನು ನೇರವಾಗಿ ನೀರಿನೊಳಗೇ ಕೊಂಡೊಯ್ದಿತ್ತು!
ಹತ್ತಿರದ ಪೊಲೀಸ್ ಗಸ್ತು ಘಟಕ ಮತ್ತು ಸ್ಥಳೀಯ ನಿವಾಸಿಗಳ ರಕ್ಷಣಾ ಪ್ರಯತ್ನಗಳಿಂದ ನಾಲ್ವರು ಅಪಾಯವಿಲ್ಲದೆ ಪಾರಾಗುವಲ್ಲಿ ಯಶಸ್ವಿಯಾದರು. ಆದರೆ ಅವರ ವಾಹನ ನೀರಿನಲ್ಲಿ ಮುಳುಗಿದೆ. “ವಾಹನವನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಕಡುತುರುತಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇರಳದಲ್ಲಿ ಇಂತಹ ಘಟನೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಇಬ್ಬರು ಯುವ ವೈದ್ಯರು ಹೀಗೇ ಒಂದು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರು Google map ನಿರ್ದೇಶನಗಳನ್ನು ಅನುಸರಿಸಿ ಕಾರು ಓಡಿಸಿ ನದಿಗೆ ಬಿದ್ದಿದ್ದರು. ಈ ಘಟನೆಯ ನಂತರ, ಕೇರಳ ಪೊಲೀಸರು ಮಳೆಗಾಲದಲ್ಲಿ ಈ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಎಚ್ಚರಿಕೆಯ ಮಾರ್ಗಸೂಚಿಗಳನ್ನು ನೀಡಿದ್ದರು.
ಬೆಂಗಳೂರಿಗರಿಗೆ ಗುಡ್ ನ್ಯೂಸ್; ಶೀಘ್ರವೇ ಬರಲಿದೆ ಹೊಸ ನ್ಯಾವಿಗೇಟಿಂಗ್ ಆ್ಯಪ್
ಬೆಂಗಳೂರು: ಹೊಸತನ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಎಂದಿಗೂ ಹಿಂದೆಬಿದ್ದಿಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರು ದೇಶದ ನಾನಾ ಭಾಗಗಳ ಜನರನ್ನು ಕೈಬೀಸಿ ಕರೆಯುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಬೆಂಗಳೂರು ಈಗ ಮತ್ತೊಂದು ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಹೌದು, ರಾಜ್ಯ ರಾಜಧಾನಿಯಲ್ಲಿ ಶೀಘ್ರವೇ ಪ್ರಯಾಣಿಕರ (Commuters) ಅನುಕೂಲಕ್ಕಾಗಿ ಹೊಸ ನ್ಯಾವಿಗೇಟಿಂಗ್ ಆ್ಯಪ್ (Navigating App) ಬರಲಿದೆ. ಬೆಂಗಳೂರಿನಲ್ಲಿ ಸಂಚರಿಸುವರಿಗೆ ಇದು ಉತ್ತಮ ‘ಮಾರ್ಗ’ದರ್ಶನ ನೀಡಲಿದೆ.
ಬೆಂಗಳೂರಿನಲ್ಲಿ ಸಂಚರಿಸುವವರಿಗೆ ಅನುಕೂಲವಾಗಲಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿ ಎಂಬ ದೃಷ್ಟಿಯಿಂದ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯು ಮ್ಯಾಪ್‌ಪ್ಲಸ್ ಮ್ಯಾಪ್‌ಮೈಇಂಡಿಯಾ (Mappls MapmyIndia) ಎಂಬ ಕಂಪನಿಯ ಜತೆ ಒಡಂಡಿಕೆ (MoU) ಮಾಡಿಕೊಂಡಿದೆ. ಈಗಾಗಲೇ ಮ್ಯಾಪ್‌ಪ್ಲಸ್ ಮ್ಯಾಪ್‌ಮೈಇಂಡಿಯಾ ಕಂಪನಿಯು ಆ್ಯಪ್ ಅಭಿವೃದ್ಧಿಪಡಿಸಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.
ಹೊಸ ಆ್ಯಪ್‌ನಿಂದ ಏನೆಲ್ಲ ಅನುಕೂಲ?
ಹೊಸ ಆ್ಯಪ್‌ನಿಂದ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಕಡಿಮೆ ಟ್ರಾಫಿಕ್ ಇರುವ ರಸ್ತೆಗಳನ್ನು ಸೂಚಿಸುವುದು, ರಿಯಲ್ ಟೈಮ್ ಆಗಿ ನ್ಯಾವಿಗೇಟ್ ಮಾಡುವುದು, ಯಾವ ರಸ್ತೆಗಳು ಕ್ಲೋಸ್ ಆಗಿವೆ, ಯಾವ ಕಡೆ ಹೋದರೆ ಉತ್ತಮ ರಸ್ತೆ ಇದೆ, ಯಾವ ಮಾರ್ಗಗಳು ಇಕ್ಕಟ್ಟವಾಗಿವೆ ಎಂಬುದು ಸೇರಿ ಪ್ರಯಾಣಿಕರಿಗೆ ಹಲವು ಮಾಹಿತಿ ನೀಡಲಿದೆ. ಇದು ಗೂಗಲ್ ಮ್ಯಾಪ್‌ಗೆ ಪರ್ಯಾಯವಾಗಿ ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿ ಎಂಬುದಾಗಿ ತಿಳಿದುಬಂದಿದೆ.
“ಹೊಸ ಆ್ಯಪ್‌ನಿಂದ ಪ್ರಯಾಣಿಕರಿಗೆ ಮಾತ್ರವಲ್ಲ ಟ್ರಾಫಿಕ್ ಪೊಲೀಸರಿಗೆ ಇದು ಅನುಕೂಲವಾಗಲಿದೆ. ಎಲ್ಲೆಲ್ಲಿ ಟ್ರಾಫಿಕ್ ಇದೆ ಎಂಬುದನ್ನು ಆ್ಯಪ್ ಮೂಲಕವೇ ಪತ್ತೆಹಚ್ಚಿ, ಆ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ. ರೋಡ್‌ಬ್ಲಾಕ್‌ಗಳು, ಗುಂಡಿಗಳು, ದುರಸ್ತಿ ಕೆಲಸ ನಡೆಯುತ್ತಿರುವ ರಸ್ತೆಗಳ ಕುರಿತು ಕೂಡ ಮಾಹಿತಿ ನೀಡಲಿದೆ” ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Google: 10 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾ ಡಿಲೀಟ್ ಮಾಡಿ Sorry ಎಂದ ಗೂಗಲ್; ಮುಂದೇನು?