ಗೋರಿಲ್ಲಾಗಳು ಮನುಷ್ಯರಂತೆ ಎರಡು ಕಾಲುಗಳ ಮೇಲೆ ಓಡಾಡಬಲ್ಲವು. ಮುಂದಿನ ಎರಡು ಕಾಲುಗಳನ್ನು ಕೈಗಳಂತೆ ಬಳಸಿಕೊಳ್ಳಬಲ್ಲವು. ಆದರೆ ಗೋರಿಲ್ಲಾಗಳು ಯಾವಾಗಲಾದರೂ ಸೈಕಲ್ ಹೊಡೆದಿದ್ದನ್ನು ನೋಡಿದ್ದೀರಾ? ಹಾಗೊಮ್ಮೆ ನೋಡಿರದೆ ಇದ್ದರೆ ಇಲ್ಲಿರುವ ವಿಡಿಯೋ ನೋಡಿ. ಗೋರಿಲ್ಲಾವೊಂದು ಹೇಗೆ ಸೈಕಲ್ ರೈಡ್ ಮಾಡುತ್ತದೆ ಮತ್ತು ಅದರಿಂದ ಕೆಳಗೆ ಬಿದ್ದ ತಕ್ಷಣ ಅದೇನು ಮಾಡಿತು?! ಎಂಬುದನ್ನು. ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಡಾ. ಸಾಮ್ರಾಟ್ ಗೌಡ ಎಂಬುವರು ಶೇರ್ ಮಾಡಿಕೊಂಡಿದ್ದಾರೆ.
ದೊಡ್ಡದಾದ ಗೋರಿಲ್ಲಾವೊಂದು ಸೈಕಲ್ ಹೊಡೆಯುತ್ತ ಫುಲ್ ಖುಷಿಯಲ್ಲಿ ಬರುತ್ತದೆ. ಆದರೆ ಕೆಲವೇ ದೂರ ಸಾಗುವಷ್ಟರಲ್ಲಿ ನಿಯಂತ್ರಣ ಕಳೆದುಕೊಂಡು ಬೀಳುತ್ತದೆ. ತಾನು ಬಿದ್ದಿದ್ದಕ್ಕೆ ಬೇಸರ-ಕೋಪಗೊಂಡ ಅದು, ಆ ಸೈಕಲ್‌ನ್ನೇ ಎತ್ತಿ ದೂರ ಬಿಸಾಕುತ್ತದೆ. ಈ ಕ್ಯೂಟ್ ವಿಡಿಯೋ ನೋಡಿದರೆ ನಗು ಬಾರದೆ ಇರದು.
65 ಸಾವಿರಕ್ಕೂ ಅಧಿಕ ವೀವ್ಸ್ ಕಂಡಿರುವ ವಿಡಿಯೋಕ್ಕೆ ನೆಟ್ಟಿಗರು ಫುಲ್ ಫನ್ನಿ ಕಮೆಂಟ್‌ಗಳನ್ನೇ ಹಾಕಿದ್ದಾರೆ. ʼಈ ಸೈಕಲ್ ಒಂದು ಮೂರ್ಖ, ನನ್ನನ್ನೇ ಕೆಡವಲು ಅದಕ್ಕೆಷ್ಟು ಧೈರ್ಯ ಇರಬಹುದುʼ ಎಂಬ ಭಾವ ಚಿಂಪಾಂಜಿಯದ್ದು ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು, ʼಆ ಗೋರಿಲ್ಲಾಕ್ಕೆ ಇನ್ನೂ ಉತ್ತಮವಾದ, ಆರಾಮದಾಯಕವಾದ ಸೈಕಲ್ ಕೊಡೋಣʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಉಸಿರಾಡಲಾಗದೆ ಎಚ್ಚರ ತಪ್ಪಿದ್ದ ನಾಯಿಗೆ ಆತ ಜೀವ ತುಂಬಿದ; ಮನ ಮಿಡಿಯುವ ದೃಶ್ಯ ಇದು