ತಿರುವನಂತಪುರಂ: ಎಲ್ಲ ಸರಿಯಿದ್ದರೂ ಸಾಧನೆ ಎನ್ನುವುದು ಹಲವರಿಗೆ ಸಾಧ್ಯವಾಗದ ಮಾತು. ಕೈಗೆಳೆರೆಡು ನೆಟ್ಟಗಿದ್ದರೂ ಏನೂ ಮಾಡಲಾಗದೆ ಕುಳಿತುಬಿಡುತ್ತೇವೆ. ಆದರೆ ಕೇರಳದ ಅಖಿಲಾ ಹಾಗಲ್ಲ. ತನ್ನ ಐದನೇ ವಯಸ್ಸಿನಲ್ಲೇ ಅಪಘಾತದಿಂದಾಗಿ ಬಲಗೈ ಕಳೆದುಕೊಂಡರೂ ಛಲ ಬಿಡದ ಅಖಿಲಾ (Inspiring Story) ಇದೀಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಕಾಟನ್ ಹಿಲ್ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಕೆ.ಬುಹಾರಿ ಅವರ ಮಗಳಾಗಿದ್ದ ಅಖಿಲಾ 2000ನೇ ಇಸವಿಯಲ್ಲೇ ಅಪಘಾತಕ್ಕೆ ಒಳಗಾಗಿ ತಮ್ಮ ಬಲಗೈ ಕಳೆದುಕೊಂಡರು. ಅದಾದ ಮೇಲೆ ಜರ್ಮನಿಯ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಆಕೆಯ ಕೈ ಜೋಡಿಸಲು ಸಾಧ್ಯವಾಗಲೇ ಇಲ್ಲ. ಬಲಗೈ ಕಳೆದುಕೊಂಡ ಅಖಿಲಾ ಎಡಗೈನಲ್ಲೇ ಎಲ್ಲ ಕೆಲಸಗಳನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಂಡಳು.
ಇದನ್ನೂ ಓದಿ: Viral Photo : ನಾಯಿಗಳ ಗ್ರೂಪ್ ಫೋಟೋ! ಇದು ಮತ್ತಾರಿಂದಲೂ ಸಾಧ್ಯವಾಗದ ಕೆಲಸ
ಶಿಕ್ಷಣದಲ್ಲೂ ಒಂದು ಕೈ ಮುಂದೇ ಇದ್ದ ಅಖಿಲಾ ಐಐಟಿ ಮದ್ರಾಸ್‌ನಿಂದ ಎಂಎ ಪದವಿ ಪಡೆದುಕೊಂಡಳು. ನಂತರ ಸಂಪೂರ್ಣವಾಗಿ ಯುಪಿಎಸ್‌ಸಿ ತಯಾರಿಗೆ ಸಿದ್ಧವಾದಳು. ಹಗಲು ರಾತ್ರಿ ಎನ್ನದೆ ಅಭ್ಯಾಸ ಮಾಡಲಾರಂಭಿಸಿದಳು. ಶ್ರಮ ಪಟ್ಟ ಪ್ರತಿಫಲ ಎನ್ನುವಂತೆ ಆಕೆ ಇದೀಗ ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.
ಈ ಯುಪಿಎಸ್‌ಸಿ ಪರೀಕ್ಷೆ ಎನ್ನುವುದು ಅಖಿಲಾಳ ಪಾಲಿಗೆ ಸುಲಭದ ಕೆಲಸವೇನಾಗಿರಲಿಲ್ಲ. ಮೂರ್ನಾಲ್ಕು ತಾಸುಗಳ ಕಾಲ ಕುಳಿತುಕೊಂಡು ಪರೀಕ್ಷೆ ಬರೆಯುವಾಗ ಪೂರ್ತಿ ದೇಹವೇ ನೋವಾಗುತ್ತಂತೆ. ಒಂದೇ ಕೈನಲ್ಲಿ ಪ್ರತಿಯೊಂದನ್ನು ನಿರ್ವಹಿಸುವಾಗ ಸಾಕಷ್ಟು ಕಷ್ಟಗಳಾಗುತ್ತಿತ್ತಂತೆ. ಆದರೆ ಅದೆಲ್ಲ ನೋವುಗಳ ಮುಂದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆನ್ನುವ ಗುರಿ ಇದ್ದಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ ಅಖಿಲಾ.