ವೈರಲ್ ನ್ಯೂಸ್
Inspiring Story : ಬಲಗೈ ಇಲ್ಲದಿದ್ದರೂ ಎಡಗೈನಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್ ಆದ ಅಖಿಲಾ!
ಬಲಗೈ ಇಲ್ಲದಿದ್ದರೂ ಎಡಗೈನಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದ ಅಖಿಲಾ ಅದರಲ್ಲಿ ತೇರ್ಗೆಡೆಯಾಗಿದ್ದಾರೆ. ಇದು ಅನೇಕರಿಗೆ (Inspiring Story) ಸ್ಫೂರ್ತಿಯಾಗಿದೆ.
ತಿರುವನಂತಪುರಂ: ಎಲ್ಲ ಸರಿಯಿದ್ದರೂ ಸಾಧನೆ ಎನ್ನುವುದು ಹಲವರಿಗೆ ಸಾಧ್ಯವಾಗದ ಮಾತು. ಕೈಗೆಳೆರೆಡು ನೆಟ್ಟಗಿದ್ದರೂ ಏನೂ ಮಾಡಲಾಗದೆ ಕುಳಿತುಬಿಡುತ್ತೇವೆ. ಆದರೆ ಕೇರಳದ ಅಖಿಲಾ ಹಾಗಲ್ಲ. ತನ್ನ ಐದನೇ ವಯಸ್ಸಿನಲ್ಲೇ ಅಪಘಾತದಿಂದಾಗಿ ಬಲಗೈ ಕಳೆದುಕೊಂಡರೂ ಛಲ ಬಿಡದ ಅಖಿಲಾ (Inspiring Story) ಇದೀಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಕಾಟನ್ ಹಿಲ್ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಕೆ.ಬುಹಾರಿ ಅವರ ಮಗಳಾಗಿದ್ದ ಅಖಿಲಾ 2000ನೇ ಇಸವಿಯಲ್ಲೇ ಅಪಘಾತಕ್ಕೆ ಒಳಗಾಗಿ ತಮ್ಮ ಬಲಗೈ ಕಳೆದುಕೊಂಡರು. ಅದಾದ ಮೇಲೆ ಜರ್ಮನಿಯ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಆಕೆಯ ಕೈ ಜೋಡಿಸಲು ಸಾಧ್ಯವಾಗಲೇ ಇಲ್ಲ. ಬಲಗೈ ಕಳೆದುಕೊಂಡ ಅಖಿಲಾ ಎಡಗೈನಲ್ಲೇ ಎಲ್ಲ ಕೆಲಸಗಳನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಂಡಳು.
ಇದನ್ನೂ ಓದಿ: Viral Photo : ನಾಯಿಗಳ ಗ್ರೂಪ್ ಫೋಟೋ! ಇದು ಮತ್ತಾರಿಂದಲೂ ಸಾಧ್ಯವಾಗದ ಕೆಲಸ
ಶಿಕ್ಷಣದಲ್ಲೂ ಒಂದು ಕೈ ಮುಂದೇ ಇದ್ದ ಅಖಿಲಾ ಐಐಟಿ ಮದ್ರಾಸ್‌ನಿಂದ ಎಂಎ ಪದವಿ ಪಡೆದುಕೊಂಡಳು. ನಂತರ ಸಂಪೂರ್ಣವಾಗಿ ಯುಪಿಎಸ್‌ಸಿ ತಯಾರಿಗೆ ಸಿದ್ಧವಾದಳು. ಹಗಲು ರಾತ್ರಿ ಎನ್ನದೆ ಅಭ್ಯಾಸ ಮಾಡಲಾರಂಭಿಸಿದಳು. ಶ್ರಮ ಪಟ್ಟ ಪ್ರತಿಫಲ ಎನ್ನುವಂತೆ ಆಕೆ ಇದೀಗ ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.
ಈ ಯುಪಿಎಸ್‌ಸಿ ಪರೀಕ್ಷೆ ಎನ್ನುವುದು ಅಖಿಲಾಳ ಪಾಲಿಗೆ ಸುಲಭದ ಕೆಲಸವೇನಾಗಿರಲಿಲ್ಲ. ಮೂರ್ನಾಲ್ಕು ತಾಸುಗಳ ಕಾಲ ಕುಳಿತುಕೊಂಡು ಪರೀಕ್ಷೆ ಬರೆಯುವಾಗ ಪೂರ್ತಿ ದೇಹವೇ ನೋವಾಗುತ್ತಂತೆ. ಒಂದೇ ಕೈನಲ್ಲಿ ಪ್ರತಿಯೊಂದನ್ನು ನಿರ್ವಹಿಸುವಾಗ ಸಾಕಷ್ಟು ಕಷ್ಟಗಳಾಗುತ್ತಿತ್ತಂತೆ. ಆದರೆ ಅದೆಲ್ಲ ನೋವುಗಳ ಮುಂದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆನ್ನುವ ಗುರಿ ಇದ್ದಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ ಅಖಿಲಾ.
ಕ್ರಿಕೆಟ್
WTC Final 2023: ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಆಡು; ಔಟಾದ ಬಳಿಕ ಊಟದ ಜತೆ ಬೈಗುಳ ತಿಂದ ಕೊಹ್ಲಿ
ವಿರಾಟ್ ಕೊಹ್ಲಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಔಟಾದ ತಕ್ಷಣ ಡಗೌಟ್ನಲ್ಲಿ ಆಹಾರ ಸೇವಿಸಿದ ಕಾರಣಕ್ಕೆ ಟ್ರೋಲ್ ಆಗಿದ್ದಾರೆ.
ಲಂಡನ್: ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಆದರೆ ಅವರು ಔಟ್ ಆಗಿರುವ ವಿಚಾರವನ್ನು ಹೊರತುಪಡಿಸಿ ಬೇರೆಯೇ ಕಾರಣಕ್ಕೆ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ದಿನದಾಟದ ವೇಳೆ ವಿರಾಟ್ ಅವರು 14 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಪೆವಿಲಿಯನ್‌ಗೆ ತೆರಳಿದ ವಿರಾಟ್ ಕೊಹ್ಲಿ ಯಾವುದೇ ಚಿಂತೆ ಇಲ್ಲದವರಂತೆ ಇಶಾನ್ ಕಿಶನ್ ಮತ್ತು ಗಿಲ್ ಜತೆ ಹರಾಟೆ ಹೊಡೆಯುತ್ತಾ ಆಹಾರ ಸೇವಿಸಿದ್ದಾರೆ. ಇದರ ಫೋಟೊ ಮತ್ತು ವಿಡಿಯೊ ಎಲ್ಲಡೆ ವೈರಲ್ ಆಗಿದೆ.
ಕೊಹ್ಲಿಯ ಈ ವರ್ತನೆ ಕಂಡ ಅನೇಕ ಟೀಮ್ ಇಂಡಿಯಾದ ಅಭಿಮಾನಿಗಳು ಮತ್ತು ಕೆಲವು ಕ್ರಿಕೆಟ್ ಪಂಡಿತರು ಟೀಕೆ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರನ್ನು ತೀಕ್ಷ್ಣ ಮಾತುಗಳಿಂದ ಟ್ರೋಲ್ ಮಾಡಿದ್ದಾರೆ. ಐಪಿಎಲ್ನಲ್ಲಿ ಪಂದ್ಯ ಸೋತಾಗ ಕಣ್ಣೀರು ಸುರಿಸುವ ನೀವು ಭಾರತ ತಂಡಕ್ಕೆ ಆಡುವಾಗ ಮಾತ್ರ ಈ ರೀತಿ ಮಾಡುತ್ತೀರಿ ಇದರ ಅರ್ಥ ನೀವು ಹಣಕ್ಕಾಗಿ ಆಡುತ್ತೀರಿ, ದೇಶಕಾಕ್ಕಾಗಿ ಅಲ್ಲ ಎಂದು ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ WTC Final 2023: ಇನಿಂಗ್ಸ್ ಹಿನ್ನಡೆ ಭಯದಲ್ಲಿ ಟೀಮ್ ಇಂಡಿಯಾ
Seriousness of Virat Kohli for IPL vs India#INDvAUS pic.twitter.com/4CKM9LK80K
— Ctrl C Ctrl Memes (@Ctrlmemes_) June 8, 2023
ತಂಡ ಸಂಕಷ್ಟದಲ್ಲಿದ್ದರೂ ನೀವು ಈ ರೀತಿ ಆನಂದದಲ್ಲಿರುವುದನ್ನು ಕಾಣುವಾಗ ಭಾರತ ತಂಡಕ್ಕಿಂತ ನಿಮಗೆ ಐಪಿಎಲ್ ಟೂರ್ನಿಯೇ ಹೆಚ್ಚಾದಂತೆ ಕಾಣುತ್ತಿದೆ ಎಂದು ಮತ್ತೊಬ್ಬ ನೆಟ್ಟಿಗ ಟ್ರೋಲ್ ಮಾಡಿದ್ದಾರೆ. ಇನ್ನಿ ಕೆಲವರು ಅರೇ ನೀವು ತಿನ್ನುತ್ತಿರುವ ಆಹಾರ ಯಾವುದು? ಎಂದು ಪ್ರಶ್ನೆ ಮಾಡುವ ಮೂಲಕ ಕೊಹ್ಲಿಯ ಕಾಲೆಳೆದಿದ್ದಾರೆ.
Never compare great Sachin Tendulkar with money makers like Virat Kohli#INDvAUS pic.twitter.com/ML58p3jdxc
— Ctrl C Ctrl Memes (@Ctrlmemes_) June 8, 2023
ಎಷ್ಟ್ರೇ ಸಾಧನೆ ಮಾಡಿದ್ದರೂ ಹಣಕ್ಕೆ ಆಸೆಪಡುವ ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡೂಲ್ಕರ್ ಜತೆ ಯಾವತ್ತೂ ಹೋಲಿ ಮಾಡಬೇಡಿ ಎಂದು ನೆಟ್ಟಿಗೊರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಕೊಹ್ಲಿಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಲವು ಕಾರಣಕ್ಕೆ ಟ್ರೋಲ್ ಆಗುತ್ತಿದೆ.
ಕರ್ನಾಟಕ
Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
liquor price: ರಾಜ್ಯ ಸರ್ಕಾರ ಮದ್ಯದ ಮೇಲಿನ ಸುಂಕವನ್ನು ಏರಿಕೆ ಮಾಡುತ್ತಲೇ ಇದೆ. ಇದು ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಈ ಕಾರಣದಿಂದಾಗಿ ಮದ್ಯದ ಮೇಲಿನ ಸುಂಕವನ್ನು ಇಳಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕುಡುಕರ ಸಂಘವು ಪತ್ರ ಬರೆದು ಮನವಿ ಮಾಡಿದೆ!
ಬೆಂಗಳೂರು: ಅನೇಕ ಬಜೆಟ್ ಮಂಡನೆ ಸಂದರ್ಭದಲ್ಲಿ ಮದ್ಯ ಪ್ರಿಯರಿಗೆ ಆಯಾ ಸರ್ಕಾರಗಳು ಶಾಕ್ ಕೊಡುತ್ತಲೇ ಬರುತ್ತಿವೆ. ಮದ್ಯದ ದರದ ಮೇಲೆ ಅಬಕಾರಿ ಸುಂಕವನ್ನು ಹೇರುತ್ತಿವೆ. ಈಗ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸವಾಲಿದೆ. ಅದಕ್ಕೆ ಹಣ ಹೊಂದಾಣಿಕೆಯನ್ನು ಮಾಡಬೇಕಿದೆ. ಇದು ಈಗ ಮದ್ಯ ಪ್ರಿಯರಲ್ಲಿ ತಲ್ಲಣವನ್ನು ಹುಟ್ಟಿಸಿದೆ. ಈ ಕಾರಣಕ್ಕೆ ಅವರೆಲ್ಲರೂ “ಎಣ್ಣೆಯ ವಿಷ್ಯ, ಬೇಡವೋ ಶಿಷ್ಯ” ಎಂಬ ಹಾಡನ್ನು ಹಾಡಬೇಕಾಗುತ್ತದೆ ಎಂದು ಆತಂಕದಲ್ಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಮದ್ಯ ಪ್ರೇಮಿಗಳ/ಕುಡುಕರ ಸಂಘವು, ಈಗಾಗಲೇ ಮದ್ಯದ ಸುಂಕವನ್ನು ಹೆಚ್ಚಳ ಮಾಡಿದ್ದು, ಅದನ್ನು ಇಳಿಸಿ ಎಂದು ಮನವಿ ಮಾಡಿದ್ದಾರೆ. ಈ ಪತ್ರ ಈಗ ವೈರಲ್ (Viral News) ಆಗಿದೆ.
ಇದಲ್ಲದೆ, ಅಬಕಾರಿ ಸಚಿವರು, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರದ ಪ್ರತಿಯನ್ನು ಲಗತ್ತಿಸಿದ್ದು, ದಯಮಾಡಿ ಅಬಕಾರಿ ಸುಂಕವನ್ನು ಇಳಿಸಿ ಸಂಕಷ್ಟದಲ್ಲಿರುವ ಮದ್ಯ ಪ್ರಿಯರ ರಕ್ಷಣೆಗೆ ದಾವಿಸಿ ಎಂದು ಮೊರೆ ಇಟ್ಟಿದ್ದಾರೆ!
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ಮನವಿ ಪತ್ರದಲ್ಲೇನಿದೆ?
ಮಾನ್ಯ ಮುಖ್ಯಮಂತ್ರಿ ಮತ್ತು ಮದ್ಯ ಪ್ರಿಯರ ಇಲಾಖೆ ಅಂದರೆ ಅಬಕಾರಿ ಇಲಾಖೆಯ ಸಚಿವರಲ್ಲಿ ವಿನಂತಿಸುವುದೇನೆಂದರೆ, ರಾಜ್ಯದಲ್ಲಿ ಜಾತಿ, ಧರ್ಮ, ಬಡವ ,ಬಲ್ಲಿದ, ರಾಜಕಾರಣಿ, ಡಾಕ್ಟರ್, ಪತ್ರಕರ್ತ, ಸರ್ಕಾರಿ ನೌಕರರು, ವಕೀಲರು ಎಂಬ ತಾರತಮ್ಯ ಇಲ್ಲದೆ ಮದ್ಯ ಸೇವನೆಯನ್ನು ಮಾಡುತ್ತಾರೆ. ಎಲ್ಲ ವರ್ಗದವರು ಮದ್ಯ ಸೇವನೆಯನ್ನು ಮಾಡುತ್ತಿದ್ದು, ಇದು ಆಹಾರ ಸಂಸ್ಕೃತಿಯ ಭಾಗವಾಗಿದೆ. ಮದುವೆ, ಹಬ್ಬ ಹರಿದಿನಗಳಲ್ಲಿ ಆರಾಧನೆ ಪದ್ಧತಿಯಲ್ಲಿ, ಸಂತೋಷ ಕೂಟದಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ. ಸುರಪಾನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ.
ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇಷ್ಟೆಲ್ಲ ಆದಾಯ ಬರುತ್ತಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬ ದುಃಖಕರ ವಿಷಯ. ಈಗಾಗಲೇ ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡಿದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.
ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಏನೆಂದರೆ, ಒಬ್ಬ ಬಿಪಿಎಲ್ ಕಾರ್ಡ್ ಹೊಂದಿದವನ ಆದಾಯ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಮದ್ಯ ಪ್ರೇಮಿ ದಿನಗೂಲಿ ನೌಕರ ದಿನವೂ ಸರಾಸರಿ 180 ಎಂ.ಎಲ್. ಕುಡಿದರೂ ಅವನಿಗೆ ದಿನಕ್ಕೆ 200 ರಿಂದ 250 ರೂಪಾಯಿಯಷ್ಟು ಮದ್ಯಕ್ಕೆ ಖರ್ಚು ತಗಲುತ್ತದೆ. ಅಂದರೆ, ತಿಂಗಳಿಗೆ 7500 ರೂಪಾಯಿ ಬೇಕಾಗುತ್ತದೆ. ವಾರ್ಷಿಕ 90,000 ರೂಪಾಯಿ ಒಬ್ಬ ಮದ್ಯ ಪ್ರೇಮಿ ಕುಡುಕನಿಗೆ ಬೇಕಾಗುತ್ತದೆ.
ಇದನ್ನೂ ಓದಿ: Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಇದರಿಂದ ಮದ್ಯಮ ವರ್ಗ ಮತ್ತು ಬಡವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಆದ್ದರಿಂದ ಮದ್ಯದ ಮೇಲಿನ ಸುಂಕದ ದರ ಹೆಚ್ಚಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಸ್ಥಳೀಯ ಬ್ರಾಂಡ್‌ನ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಹಾಗೂ ಬಿಯರ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು ಎಂದು ಎಲ್ಲ ಮದ್ಯ ಪ್ರಿಯ ಬ್ರದರ್ಸ್ & ಸಿಸ್ಟರ್ಸ್ ಪರವಾಗಿ ವಿನಂತಿಸುತ್ತೇವೆ.
ಪ್ರಮುಖ ಸುದ್ದಿ
New Country: ಕೇವಲ 15 ಲಕ್ಷ ರೂ.ನಲ್ಲಿ ರೆಡಿ ಆಯ್ತು ಹೊಸ ದೇಶ, ಹೆಸರು ಸ್ಲೋಜಾಮ್‌ಸ್ತಾನ!
New Country: ಅಮೆರಿಕದ ಪ್ರವಾಸಿಗ ತನ್ನದೇ ಆದ ಸ್ವಂತ ರಾಷ್ಟ್ರ ನಿರ್ಮಾಣ ಮಾಡಿದ್ದಾನೆ. ಅದು ಕೇವಲ ಹದಿನೈದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನಷ್ಟೇ.
ನವದೆಹಲಿ: ರೇಪ್ ಆರೋಪ ಹೊತ್ತು ದೇಶ ಪಲಾಯನ ಮಾಡಿದ ನಿತ್ಯಾನಂದ ಸ್ವಾಮಿ ಈಕ್ವೆಡಾರ್ ಕರಾವಳಿಯಲ್ಲಿ ಕೈಲಾಸ ಎಂಬ ತನ್ನದೇ ಆದ ಸ್ವಂತ ದೇಶ ನಿರ್ಮಾಣ ಮಾಡಿದ್ದು ಭಾರತೀಯರಿಗೆ ಗೊತ್ತೇ ಇರುತ್ತದೆ. ಅದೇ ರೀತಿ, ಅಮೆರಿಕ ವ್ಯಕ್ತಿಯೊಬ್ಬ ಸ್ವಂತ ದೇಶವನ್ನು (New Country) ಸೃಷ್ಟಿಸಿಕೊಂಡಿದ್ದಾನೆ. ವೃತ್ತಿಯಿಂದ ಡಿಜೆ ಆಗಿರುವ ಆರ್ ಡಬ್ ವಿಲಿಯಮ್ಸ್(R Dub Williams), ತಮ್ಮ ಪ್ರದರ್ಶನಕ್ಕೆ ಸ್ಲೋ ಜಾಮ್ಸ್ ಎಂದು ಹೆಸರಿಟ್ಟಿದ್ದಾರೆ. ಈಗ ಅದೇ ಹೆಸರನ್ನು ತಮ್ಮ ದೇಶಕ್ಕೆ ಇಟ್ಟಿದ್ದಾರೆ(Viral News). ಅಂದರೆ, ವಿಲಿಯಮ್ಸ್ ಅವರ ದೇಶದ ಹೆಸರು ಸ್ಲೋಜಾಮ್‌ಸ್ತಾನ (Slowjamastan).
ಸಿಎನ್ಎನ್ ಟ್ರಾವೆಲ್ಲರ್ ಜತೆ ಮಾತನಾಡಿರುವ ವಿಲಿಯಮ್ಸ್, ನನಗೆ ಪ್ರವಾಸ ಮಾಡಲು ಈಗ ದೇಶಗಳೇ ಉಳಿದಿಲ್ಲ. ಹಾಗಾಗಿ, ನನ್ನದೇ ಆದ ಸ್ವಂತ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ವಿಶ್ವಸಂಸ್ಥೆ ಗುರುತಿಸಿರುವ 193 ರಾಷ್ಟ್ರಗಳ ಪೈಕಿ 192 ರಾಷ್ಟ್ರಗಳನ್ನು ಈ ಮಿಲಿಯಮ್ಸ್ ಭೇಟಿ ನೀಡಿದ್ದಾರೆ. ತಮ್ಮ ಈ ಪ್ರವಾಸದ ಪಟ್ಟಿಯಲ್ಲಿ ತುರ್ಕಮೇನಿಸ್ತಾನ ಕೊನೆಯ ರಾಷ್ಟ್ರವಾಗಿದ್ದು, ಶೀಘ್ರವೇ ಆ ರಾಷ್ಟ್ರಕ್ಕೂ ಅವರ ಭೇಟಿ ನೀಡಲಿದ್ದಾರೆ. ಈ ಕಾರಣಕ್ಕಾಗಿಯೇ ಅವರು 194ನೇ ರಾಷ್ಟ್ರವಾಗಿ ತಮ್ಮದೇ ಸ್ವಂತ ದೇಶವನ್ನು ನಿರ್ಮಾಣ ಮಾಡಿದ್ದಾರೆಂದು ಸಿಎನ್ಎನ್ ವರದಿ ಮಾಡಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಮರಳುಗಾಡಿನಲ್ಲಿ 11.07 ಎಕರೆ ಭೂಮಿಯನ್ನು ಖರೀದಿಸಿ ವಿಲಿಯಮ್ಸ್ ಅದಕ್ಕೆ ತಾವು ನಡೆಸಿಕೊಡುವ ಶೋ ಹೆಸರನ್ನೇ ಇಟ್ಟಿದ್ದಾರೆ. ಸ್ಲೋಜಾಮ್‌ಸ್ತಾನ್ ಸುಲ್ತಾನ್ ಆಗಿರುವ ವಿಲಿಯಮ್ಸ್, 2021 ಡಿಸೆಂಬರ್ 1ರಂದ ಅಮೆರಿಕದಿಂದ ಪ್ರತ್ಯೇಕಗೊಂಡ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದಾರೆ. ದುಬ್ಲಾಂಡಿಯಾ, ಸ್ಲೋಜಾಮ್‌ಸ್ತಾನ್ ರಾಷ್ಟ್ರದ ರಾಜಧಾನಿಯಾಗಿದೆ. ಅಲ್ಲಿಂದಲೇ ಲೈವ್ ಮೂಲಕ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: Swami Nithyananda: ʼಕೈಲಾಸʼದಿಂದ ವಿಶ್ವಸಂಸ್ಥೆಗೆ ಬಂದ ನಿತ್ಯಾನಂದನ ಪ್ರತಿನಿಧಿ ಯಾರೀಕೆ?
ಈ ಹೊಸ ರಾಷ್ಟ್ರವು ತನ್ನದೇ ಪಾಸ್‌ಪೋರ್ಟ್, ಸ್ವಂತ ಧ್ವಜ, ಸ್ವಂತ ಕರೆನ್ಸ್, ರಾಷ್ಟ್ರಗೀತೆ ಸೇರಿದಂತೆ ಸಾರ್ವಭೌಮ ರಾಷ್ಟ್ರಕ್ಕಿರುವ ಎಲ್ಲ ಸಂಗತಿಗಳನ್ನು ಒಳಗೊಂಡಿದೆ. ಸಿಎನ್ಎನ್ ಟ್ರಾವಲರ್ ವರದಿಯ ಪ್ರಕಾರ, ಸದ್ಯ 500 ನೋಂದಾಯಿತ ನಾಗರಿಕರಿದ್ದರು, ನೋಂದಣಿಗೆ ಇನ್ನೂ 4500 ಜನರು ಕಾಯ್ದು ಕುಳಿತಿದ್ದಾರೆ. ಅಂದ ಹಾಗೆ, ಹೊಸ ದೇಶ ನಿರ್ಮಾಣಕ್ಕೆ ವಿಲಿಯಮ್ಸ್ ಕೇವಲ 15 ಲಕ್ಷ ವೆಚ್ಚವಾಗಿದೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಉಡುಪಿ
Viral News: ಶಾಲೆಗೆ ನೀರು ಪೂರೈಸಲು ಹೊರಟಿದ್ದ ಟ್ಯಾಂಕರ್ ವಾಪಸ್; ನೀರು ಕೊಡ್ಬೇಡ ಎಂದು ಗ್ರಾಪಂ ಅಧ್ಯಕ್ಷ ಅವಾಜ್
Govt School: ಶಾಲಾ ಮಕ್ಕಳಿಗೆ ಕುಡಿಯಲು ನೀರು ಕೊಡಿ (Drinking Water) ಎಂದು ಶಿಕ್ಷಕರು ಕೇಳಿದರೆ, ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು, ಶಾಲೆಗೆ ನೀರು ಕೊಡಬೇಡ ವಾಪಸ್ಸು ಬಾ ಎಂದು ಟ್ಯಾಂಕರ್ ಚಾಲಕನನ್ನು ವಾಪಸ್ ಕರೆಸಿಕೊಂಡಿದ್ದಾರೆ. ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು ಆಡಿಯೋ ವೈರಲ್ ಆಗಿದೆ.
ಉಡುಪಿ: ಇಲ್ಲಿನ ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರ ವರ್ತನೆಗೆ ಪಂಚಾಯತ್ ಸದಸ್ಯರು ಕಿಡಿಕಾರಿ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಕುಡಿಯಲು ನೀರಿಲ್ಲ ಎಂದು ಶಿಕ್ಷಕರು ಪತ್ರವೊಂದನ್ನು ಬರೆದಿದ್ದರು. ಹೀಗಾಗಿ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಶಾಲೆಗೆ ನೀರಿನ ಟ್ಯಾಂಕರ್ ಅನ್ನು ಕಳಿಸಿದ್ದರು. ಆದರೆ ಪಂಚಾಯತ್ ಅಧ್ಯಕ್ಷ, ಟ್ಯಾಂಕರ್ ಚಾಲಕನಿಗೆ ಅವಾಜ್ ಹಾಕಿ ನೀರು ಕೊಡಬೇಡ ಬಾ ಎಂದು ವಾಪಸ್ ಕರೆಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಆಡಿಯೊವೊಂದು ಬಹಿರಂಗಗೊಂಡಿದ್ದು, ವೈರಲ್ (Viral news) ಆಗಿದೆ.
ಟ್ಯಾಂಕರ್ ಚಾಲಕನ ತರಾಟೆ ತೆಗೆದುಕೊಂಡ ಪಂಚಾಯತ್ ಸದಸ್ಯ
ಶಾಲೆಗೆ ನೀರು ತಲುಪಿಸದ ಹಿನ್ನೆಲೆಯಲ್ಲಿ ಚಾಲಕನಿಗೆ ಫೋನ್ ಮೂಲಕ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ತರಾಟೆ ತೆಗೆದುಕೊಂಡಿದ್ದಾರೆ. ಶಾಲೆಗೆ ಯಾಕೆ ನೀರು ಪೂರೈಸಿಲ್ಲ ಎಂದು ಪಂಚಾಯತ್ ಸದಸ್ಯ ಕೇಳಿದಾಗ, ಅಧ್ಯಕ್ಷರು ಶಾಲೆಗೆ ನೀರು ಬಿಟ್ಟರೆ ಬಿಲ್ ಮಾಡುವುದಿಲ್ಲ ಎಂದಿದ್ದಾರೆ. ಹೀಗಿರುವಾಗ ನಾನೇನು ಮಾಡಲಿ ಸರ್ ಎಂದು ಅಸಹಾಯಕತೆ ತೋರಿದ್ದಾನೆ. ಚಾಲಕ ಹಾಗೂ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ನಡುವಿನ ಸಂಭಾಷಣೆಯ ಆಡಿಯೊ ವೈರಲ್ ಆಗಿದೆ.
ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಪಂಚಾಯತ್ ಸದಸ್ಯ
ವಂಡ್ಸೆ ವ್ಯಾಪ್ತಿಗೆ ಬರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಇತ್ತೀಚೆಗೆ ಶಾಲೆಯಲ್ಲಿ ನೀರಿನ ಅಭಾವ ಉಂಟಾಗಿದೆ. ಹೀಗಾಗಿ ಶಾಲೆಯ ಶಿಕ್ಷಕರು ಶಾಲೆಗೆ ನೀರು ಬೇಕೆಂದು ಗ್ರಾಮ ಪಂಚಾಯತ್‌ಗೆ ಪತ್ರವೊಂದನ್ನು ಬರೆದಿದ್ದರು.
ಶಿಕ್ಷಕರ ಲಿಖಿತ ಪತ್ರಕ್ಕೆ ಸ್ಪಂದಿಸಿದ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಪಂಚಾಯತ್ ವತಿಯಿಂದ ಕಳೆದ ಜೂ 7ರಂದು ಮಧ್ಯಾಹ್ನ 12:30ರ ಸುಮಾರಿಗೆ ಶಾಲೆಗೆ ನೀರಿನ ಟ್ಯಾಂಕರ್ ಕಳುಹಿಸಿದ್ದರು. ಆದರೆ, ಪಂಚಾಯತ್ ಅಧ್ಯಕ್ಷ ಟ್ಯಾಂಕರ್ ಚಾಲಕನಿಗೆ ಫೋನ್ ಮಾಡಿ ʻನೀರು ಕೊಡಬೇಡ ವಾಪಸ್ ಬಾʼ ಎಂದು ತಿಳಿಸಿದ್ದರಂತೆ.
ಹೀಗಾಗಿ ಚಾಲಕ ಶಾಲಾ ಆವರಣದಲ್ಲೇ 2,750 ಲೀಟರ್ ಬ್ಯಾರಲ್ ಇರಿಸಿ ವಾಪಸ್ ಆಗಿದ್ದಾನೆ. ಬಳಿಕ ಜೂನ್ 8ರ ಬೆಳಗ್ಗೆ ಪುನಃ ಪಂಚಾಯತ್ ಅಧ್ಯಕ್ಷ, ಟ್ಯಾಂಕರ್ ಚಾಲಕನನ್ನು ಕರೆಸಿ, ಶಾಲೆಗೆ ನೀರು ಕೊಡುವುದು ಬೇಡ, ನೀರು ಕೊಟ್ಟಲ್ಲಿ ನೀರಿನ ಬಿಲ್ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Road Accident: ಅಪಘಾತದಲ್ಲಿ ಮೈಸೂರು ಬಿಜೆಪಿ ಮುಖಂಡ ಮರಣ; ಶಿವಮೊಗ್ಗ, ಕೊಡಗಿನಲ್ಲೂ ಹಾರಿಹೋಯ್ತು ಪ್ರಾಣ
ಹೀಗಾಗಿ ಪಂಚಾಯತ್ ಅಧ್ಯಕ್ಷರ ಬೇಜವಾಬ್ದಾರಿಗೆ ಬೇಸತ್ತಿರುವ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಪಂಚಾಯತ್ ಅಧ್ಯಕ್ಷರು ಶಾಲೆಗೆ ನೀರು ಬಿಡದಂತೆ ಪಿಡಿಒ ಮತ್ತು ನೀರಿನ ಚಾಲಕನಿಗೆ ಧ್ಕಮಿ ಹಾಕಿದ್ದಾರೆ. ಹೀಗಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜತೆಗೆ ಹರಸಾಹಸ ಪಟ್ಟು ಶಾಲೆಗೆ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema23 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema21 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema21 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ17 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema24 hours ago
Sara Ali Khan: ಶುಭ್ಮನ್ ಗಿಲ್ ಜತೆ ಡೇಟಿಂಗ್, ಕೂನೆಗೂ ಉತ್ತರ ಕೊಟ್ಟರಾ ಸಾರಾ
-
ಪ್ರಮುಖ ಸುದ್ದಿ22 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಪ್ರಮುಖ ಸುದ್ದಿ23 hours ago
Textbook Revision: ಬುದ್ಧಿಜೀವಿ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ!: ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಸಚಿವ ಬಿ.ಸಿ. ನಾಗೇಶ್