Site icon Vistara News

Viral News : ಮಹಾರಾಷ್ಟ್ರದ ಶಾಲೆಯಾದರೂ ಕನ್ನಡದಲ್ಲಿಯೇ ವರ್ಗಾವಣೆ ಪತ್ರ ಬರೆದ ಶಿಕ್ಷಕ! ಎಲ್ಲೆಡೆ ವೈರಲ್‌

teacher writes tc in kannada

#image_title

ಬೆಳಗಾವಿ: ಕರ್ನಾಟಕದಲ್ಲಿದ್ದುಕೊಂಡೇ ಕನ್ನಡ ಮಾತನಾಡುವುದಕ್ಕೆ ಹಲವರು ತಿಣಕಾಡುತ್ತಾರೆ. ಆದರೆ ಈ ಶಿಕ್ಷಕ ಹಾಗಲ್ಲ. ಮಹಾರಾಷ್ಟ್ರದ ಶಾಲೆಯೊಂದರ ಮುಖ್ಯ ಶಿಕ್ಷಕನಾದರೂ ಕನ್ನಡದಲ್ಲಿಯೇ ವಿದ್ಯಾರ್ಥಿಯ ವರ್ಗಾವಣೆ ಪತ್ರ ತುಂಬಿರುವ ಈ ಶಿಕ್ಷಕನ ಬಗ್ಗೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಚರ್ಚೆ(Viral News) ನಡೆಯುತ್ತಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಟ್ ತಾಲೂಕಿನ ಗುಗವಾಡ್ ಗ್ರಾಮದ ಜಿಲ್ಲಾ ಪಂಚಾಯತ್ ಕನ್ನಡ ಪ್ರಾಥಮಿಕ ಶಾಲೆಯಿಂದ ವರ್ಗಾವಣೆ ಪತ್ರ ನೀಡಲಾಗಿದೆ ಎಂದು ಹೇಳಲಾಗಿದೆ. ಮಹಾರಾಷ್ಟ್ರದ ಶಾಲೆಯಾಗಿರುವುದರಿಂದ ಸಾಮಾನ್ಯವಾಗಿ ಮರಾಠಿಯಲ್ಲೇ ವರ್ಗಾವಣೆ ಪತ್ರದ ವಿವರಗಳಿವೆ. ಆದರೆ ಅದರಲ್ಲಿ ಮುಖ್ಯ ಶಿಕ್ಷಕರು ಕನ್ನಡದಲ್ಲಿಯೇ ಮಾಹಿತಿ ತುಂಬಿದ್ದಾರೆ. ಹಾಗೆಯೇ ರಾಜ್ಯದ ವಿವರ ಕೇಳಿದ್ದಲ್ಲಿ ಅವರು ಕರ್ನಾಟಕ ಎಂದೇ ನಮೂದಿಸಿದ್ದು, ಅದು ಅನೇಕ ಚರ್ಚೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: Viral News: ಚಿಕನ್ ತಿನ್ನಲ್ಲ, ಮಟನ್ ಮುಟ್ಟಲ್ಲ,‌ ರೊಟ್ಟಿಯಂತೂ ತಟ್ಟಂಗಿಲ್ಲ; ಮಳೆಗಾಗಿ ಊರೇ ಬಂದ್‌!
ಮಹಾಜನ್ ಸಮಿತಿ ವರದಿ ಪ್ರಕಾರ ಮಹಾರಾಷ್ಟ್ರದ ಜಟ್ ಮತ್ತು ಅಕ್ಕಲಕೋಟ್ ತಾಲೂಕಿನ ನೂರಾರು ಹಳ್ಳಿಗಳು ಕರ್ನಾಟಕದಲ್ಲಿ ವಿಲೀನಗೊಳ್ಳಲಿವೆ. ಕೆಲವು ತಿಂಗಳ ಹಿಂದೆ, ಜಟ್ ತಾಲೂಕಿನ ಹಲವಾರು ಗ್ರಾಮ ಪಂಚಾಯಿತಿಗಳು ಕರ್ನಾಟಕಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿ ನಿರ್ಣಯಗಳನ್ನು ಅಂಗೀಕರಿಸಿದ್ದವು.


ಈ ಬಗ್ಗೆ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, “ಮಹಾರಾಷ್ಟ್ರದ ಶಾಲೆಯೊಂದು ಕನ್ನಡ ಭಾಷೆಯಲ್ಲಿಯೇ ಶಾಲಾ ಟಿಸಿ ನೀಡಿರುವುದು ಜತ್ತ ತಾಲೂಕಿನ ಜನತೆ ಕರ್ನಾಟಕದಲ್ಲಿ ವಿಲೀನವಾಗಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.


”ಈ ಶಾಲೆಗಳು ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ಗೋವಾ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲೂ ಇಂತಹ ಘಟನೆಗಳು ನಡೆದಿವೆ. ಸಿದ್ದರಾಮಯ್ಯ ಅವರು ಈ ವಿಷಯಗಳನ್ನು ಆದ್ಯತೆ ಮೇಲೆ ಪರಿಗಣಿಸಬೇಕು,” ಎಂದರು.

Exit mobile version