ಕಾನ್ಪುರದಲ್ಲಿ ಮಂಗಗಳು ಮಾಡಿದ ಅವಾಂತರದಿಂದ ಅಲ್ಲಿನ ಜನರೆಲ್ಲ ತಮ್ಮ ಮನೆಗಳಿಂದ ಹೊರಬಿದ್ದು ಓಡಿ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾನ್ಪುರದ ಚಾಮುಂಡಾ ಪಾರ್ಕ್ ಬಳಿಯ ಕಿದ್ವಾಯಿ ನಗರದ ವೈ ಬ್ಲಾಕ್ನಲ್ಲಿ ಇದ್ದ ನೈಸರ್ಗಿಕ ಅನಿಲ ಪೈಪ್ಲೈನ್ (ಪೈಪ್ಡ್ ನ್ಯಾಚುರಲ್ ಗ್ಯಾಸ್)ನ್ನು ಒಡೆದು ಹಾಕಿದ್ದೇ ಜನರ ಆತಂಕಕ್ಕೆ ಕಾರಣವಾಗಿತ್ತು.
ನೈಸರ್ಗಿಕ ಅನಿಲದ ಪೈಪ್ಲೈನ್ನ್ನು ಕೋತಿಗಳು ಒಡೆದು ಹಾಕುತ್ತಿದ್ದಂತೆ ಅನಿಲ ಸೋರಿಕೆ ಭಯದಿಂದ ಸ್ಥಳೀಯರೆಲ್ಲ ಮನೆಯಿಂದ ಹೊರಗೆ ಓಡಿಬಂದಿದ್ದರು. ಕೂಡಲೇ ಕಾನ್ಪುರದಲ್ಲಿರುವ ಕೇಂದ್ರ ಯುಪಿ ಗ್ಯಾಸ್ ಲಿಮಿಟೆಡ್ (CUGL)ಗೆ ಕಡೆ ಮಾಡಿ ವಿಷಯ ತಿಳಿಸಲಾಗಿತ್ತು. ಅವರು ಸ್ಥಳಕ್ಕೆ ಬಂದು, ಸುಮಾರು ಅರ್ಧಗಂಟೆ ಬಳಿಕ ಪೈಪ್ಲೈನ್ ಸರಿಪಡಿಸಿದ್ದಾರೆ.
ಇದನ್ನೂ ಓದಿ: ಕೋತಿ ಇದೆ ಎಚ್ಚರಿಕೆ! ನಮ್ಮ ಮೆಟ್ರೋದಲ್ಲಿ ಕಂಡು ಬಂತು ಹೊಸ ನೋಟಿಸ್ ಬೋರ್ಡ್!