ಪಿಎನ್​ಜಿ​ ಒಡೆದು ಹಾಕಿದ ಮಂಗಗಳು; ಹೆದರಿ ಮನೆಯಿಂದ ಹೊರಗೆ ಓಡಿದ ಜನರು! - Vistara News

ವೈರಲ್ ನ್ಯೂಸ್

ಪಿಎನ್​ಜಿ​ ಒಡೆದು ಹಾಕಿದ ಮಂಗಗಳು; ಹೆದರಿ ಮನೆಯಿಂದ ಹೊರಗೆ ಓಡಿದ ಜನರು!

ಕೋತಿಗಳು ತೋಟವನ್ನು ಹಾಳುಗೆಡುವುತ್ತವೆ. ಮನೆಯ ಹೆಂಚುಗಳನ್ನು ಒಡೆಯುತ್ತವೆ. ಅವು ಸೃಷ್ಟಿಸುವ ಅವಾಂತರಗಳು ಒಂದೆರಡಲ್ಲ. ಆದರೆ ಕಾನ್ಪುರದಲ್ಲಿ ಕೋತಿಗಳು ಅಪಾಯವನ್ನೇ ತಂದಿಟ್ಟಿದ್ದವು.

VISTARANEWS.COM


on

Monkeys break PNG Pipeline In Kanpur
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾನ್ಪುರದಲ್ಲಿ ಮಂಗಗಳು ಮಾಡಿದ ಅವಾಂತರದಿಂದ ಅಲ್ಲಿನ ಜನರೆಲ್ಲ ತಮ್ಮ ಮನೆಗಳಿಂದ ಹೊರಬಿದ್ದು ಓಡಿ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾನ್ಪುರದ ಚಾಮುಂಡಾ ಪಾರ್ಕ್​​ ಬಳಿಯ ಕಿದ್ವಾಯಿ ನಗರದ ವೈ ಬ್ಲಾಕ್​ನಲ್ಲಿ ಇದ್ದ ನೈಸರ್ಗಿಕ ಅನಿಲ ಪೈಪ್​ಲೈನ್​ (ಪೈಪ್ಡ್​ ನ್ಯಾಚುರಲ್​ ಗ್ಯಾಸ್​)ನ್ನು ಒಡೆದು ಹಾಕಿದ್ದೇ ಜನರ ಆತಂಕಕ್ಕೆ ಕಾರಣವಾಗಿತ್ತು.

ನೈಸರ್ಗಿಕ ಅನಿಲದ ಪೈಪ್​ಲೈನ್​ನ್ನು ಕೋತಿಗಳು ಒಡೆದು ಹಾಕುತ್ತಿದ್ದಂತೆ ಅನಿಲ ಸೋರಿಕೆ ಭಯದಿಂದ ಸ್ಥಳೀಯರೆಲ್ಲ ಮನೆಯಿಂದ ಹೊರಗೆ ಓಡಿಬಂದಿದ್ದರು. ಕೂಡಲೇ ಕಾನ್ಪುರದಲ್ಲಿರುವ ಕೇಂದ್ರ ಯುಪಿ ಗ್ಯಾಸ್​ ಲಿಮಿಟೆಡ್​ (CUGL)ಗೆ ಕಡೆ ಮಾಡಿ ವಿಷಯ ತಿಳಿಸಲಾಗಿತ್ತು. ಅವರು ಸ್ಥಳಕ್ಕೆ ಬಂದು, ಸುಮಾರು ಅರ್ಧಗಂಟೆ ಬಳಿಕ ಪೈಪ್​ಲೈನ್​ ಸರಿಪಡಿಸಿದ್ದಾರೆ.

ಇದನ್ನೂ ಓದಿ: ಕೋತಿ ಇದೆ ಎಚ್ಚರಿಕೆ! ನಮ್ಮ ಮೆಟ್ರೋದಲ್ಲಿ ಕಂಡು ಬಂತು ಹೊಸ ನೋಟಿಸ್‌ ಬೋರ್ಡ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

C K Nayudu Trophy: ಒಂದೇ ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದ ವಂಶಿ ಕೃಷ್ಣ; ವಿಡಿಯೊ ವೈರಲ್​

ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವಂಶಿ ಕೃಷ್ಣ ಸ್ಪಿನ್ನರ್ ದಮನ್‌ದೀಪ್ ಸಿಂಗ್(Damandeep Singh) ಅವರ ಒಂದು ಓವರ್​ನಲ್ಲಿ 6 ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

VISTARANEWS.COM


on

Vamshi Krishna hits six sixes
Koo

ಆಂಧ್ರಪ್ರದೇಶ: ಸಿ.ಕೆ.ನಾಯ್ಡು ಟ್ರೋಫಿಯಲ್ಲಿ(C K Nayudu Trophy) ಆಂಧ್ರ ತಂಡದ ಆಟಗಾರ ವಂಶಿ ಕೃಷ್ಣ(Vamshhi Krrishna) ಸತತ 6 ಎಸೆತಗಳಿಗೆ 6 ಸಿಕ್ಸರ್(six sixes in an over)​ ಬಾರಿಸಿ ಸುದ್ದಿಯಾಗಿದ್ದಾರೆ. ರೈಲ್ವೇಸ್(Andhra and Railways) ವಿರುದ್ಧದ ಪಂದ್ಯದಲ್ಲಿ ಅವರು ಈ ಪ್ರದರ್ಶನ ತೋರಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರವಿಶಾಸ್ತ್ರಿ (1985), ಯುವರಾಜ್ ಸಿಂಗ್ (2007) ಮತ್ತು ಋತುರಾಜ್ ಗಾಯಕ್ವಾಡ್ (2022) ಅವರು ಈ ಹಿಂದೆ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ಗಳನ್ನು ಬಾರಿಸಿದ್ದರು. ಇದೀಗ ಈ ಎಲೈಟ್​ ಕ್ಲಬ್​ಗೆ ವಂಶಿ ಕೃಷ್ಣ ಕೂಡ ಸೆರ್ಪಡೆಗೊಂಡಿದ್ದಾರೆ. ವಂಶಿ ಕೃಷ್ಣ ಅವರು ಸಿಕ್ಸ್​ ಸಿಕ್ಸರ್​ ಬಾರಿಸಿದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ವಂಶಿ ಕೃಷ್ಣ ಸ್ಪಿನ್ನರ್ ದಮನ್‌ದೀಪ್ ಸಿಂಗ್(Damandeep Singh) ಅವರ ಒಂದು ಓವರ್​ನಲ್ಲಿ 6 ಸಿಕ್ಸರ್​ಗಳನ್ನು ಬಾರಿಸಿದರು. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಅವರು 64 ಎಸೆತಗಳಲ್ಲಿ 110 ರನ್​ ಬಾರಿಸಿ ಗಮನಸೆಳೆದರು.

ಇದನ್ನೂ ಓದಿ Sachin Tendulkar: ಕೊಹ್ಲಿ ಪುತ್ರನಿಗೆ ಸಚಿನ್ ತೆಂಡೂಲ್ಕರ್​ ಇಟ್ಟಿದ್ದಾರೆ ಈ ಕ್ಯೂಟ್ ಹೆಸರು!

1985 ರ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ಪರ ಆಡಿದ ರವಿಶಾಸ್ತ್ರಿ ಬರೋಡಾ ವಿರುದ್ಧ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ಗಳನ್ನು ಬಾರಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಓವರ್​ಗೆ 6 ಸಿಕ್ಸರ್​ ಬಾರಿಸಿದ ಭಾರತೀಯ ದಾಖಲೆ ಯುವರಾಜ್​ ಸಿಂಗ್(yuvraj singh)​ ಹೆಸರಿನಲ್ಲಿದೆ. 2007ರಲ್ಲಿ ನಡೆದ ಚೊಚ್ಚಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ಸ್ಟುವರ್ಟ್ ಬ್ರಾಡ್ ಅವರ ಓವರ್​ಗೆ ಯುವಿ ಸತತ 6 ಸಿಕ್ಸರ್ ಬಾರಿಸಿದ್ದರು. ಅಚ್ಚರಿ ಎಂದರೆ ಈ ಸಿಕ್ಸರ್​ ಹೊಡೆತಗಳ ಕಾಮೆಂಟ್ರಿ ಮೂಲಕ ವರ್ಣನೆ ಮಾಡಿದ್ದು ರವಿಶಾಸ್ತ್ರಿಯವರೇ.

7 ಸಿಕ್ಸರ್​ ಬಾರಿಸಿದ್ದ ಗಾಯಕ್ವಾಡ್


ಋತುರಾಜ್ ಗಾಯಕ್ವಾಡ್ 2022ರಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಒಂದೇ ಓವರ್​ಗೆ 7 ಸಿಕ್ಸರ್​ ಚಚ್ಚಿದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗಾಯಕ್ವಾಡ್ ಶಿವ ಸಿಂಗ್ ಅವರ ಓವರ್​ನಲ್ಲಿ ಈ ಸಾಧನೆ ಮಾಡಿದ್ದರು. ಒಂದು ನೋ ಬಾಲ್ ಸಹಿತ ಶಿವ ಸಿಂಗ್ ಎಸೆದ ಏಳೂ ಎಸೆತಗಳನ್ನು ಋತುರಾಜ್ ಸಿಕ್ಸರ್ ಬಡಿದಟ್ಟಿದ್ದರು.

Continue Reading

ಕ್ರಿಕೆಟ್

Suryakumar Yadav: ರೋಲರ್​ನಲ್ಲಿ ಜಾಲಿ ರೈಡ್ ಮಾಡಿದ ಸೂರ್ಯಕುಮಾರ್​ ಯಾದವ್

ಎಡ ಪಾದದ ನೋವಿಗೆ ಸಿಲುಕಿ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(Suryakumar Yadav) ಸಂಪೂರ್ಣ ಚೇತರಿಕೆ ಕಂಡಿದ್ದು ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ತರಬೇತಿ ಆರಂಭಿಸಿದ್ದಾರೆ.

VISTARANEWS.COM


on

suryakumar yadav
Koo

ಬೆಂಗಳೂರು: ದಕ್ಷಿಣ ಆಫ್ರಿಕಾ ಟಿ20 ಸರಣಿಯ ಪ್ರವಾಸದ ವೇಳೆ ಎಡ ಪಾದದ ನೋವಿಗೆ ಸಿಲುಕಿ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(Suryakumar Yadav) ಈಗ ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಅವರು ಬೆಂಗಳೂರಿನ ಎನ್​ಸಿಎಯಲ್ಲಿ(NCA) ಫಿಟ್​ನೆಸ್​ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಅವರು ಪಿಚ್​ ರೋಲರ್​ನಲ್ಲಿ ಜಾಲಿ ರೈಡ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್​ಸಿಎ)ಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿರುವ ಸೂರ್ಯಕುಮಾರ್ ಯಾದವ್​ ಅವರು ಇಲ್ಲಿನ ಪಿಚ್​ ಕ್ಯೂರೆಟರ್​ ಜತೆಗೆ ರೋಲರ್​ನಲ್ಲಿ ಸಂಚಾರ ಮಾಡಿದ್ದಾರೆ. ಈ ವಿಡಿಯೊವನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ(suryakumar yadav instagram) ಹಂಚಿಕೊಂಡಿದ್ದು ಅಕ್ಷಯ್​ ಕುಮಾರ್​, ತ್ರಿಶಾ, ಜಾನಿಲಿವರ್‌ ನಟಿಸಿರುವ ಖಟ್ಟಾ ಮೀಠಾ ಚಿತ್ರದ ಡೈಲಾಗ್​ ಸೇರಿದ್ದಾರೆ. ಜತೆಗೆ ಇದೇ ಸಿನೆಮಾದಲ್ಲಿ ಬರುವ ಗಿರ್ಗರ್ಧನ್ ಘಾಟ್ ಕಾ ನಾಮ್ ತೋ ಸುನಾ ಹೈ ಹೋಗಾ!(ಗಿರ್ಗರ್ಧನ್ ಘಾಟ್ ಅವರ ಹೆಸರು ಹೇಳಿದ್ದೀಯಾ) ಎನ್ನುವ ಡೈಲಾಗ್​ ಅನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Suryakumar Yadav: ಸೂರ್ಯಕುಮಾರ್​ ಚೇತರಿಕೆಗೆ ಹಾರೈಸಿದ ಆಯುಷ್ಮಾನ್ ಖುರಾನ

ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್​ ಎಡ ಪಾದದ ನೋವಿಗೆ ಸಿಲುಕಿದ್ದರು. ಗಾಯದ ಬಳಿಕ ಸ್ಟಿಕ್​ನಲ್ಲಿ ನಡೆದಾಡುದ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. “ಗಾಯಗಳು ಎಂದಿಗೂ ವಿನೋದಮಯವಾಗಿರುವುದಿಲ್ಲ, ಆದರೆ ನಾನು ಅದನ್ನು ನನ್ನ ಹೆಜ್ಜೆಯಲ್ಲಿ ತೆಗೆದುಕೊಳ್ಳುತ್ತೇನೆ ಮತ್ತು ಯಾವುದೇ ಸಮಯದಲ್ಲಿ ಹಿಂತಿರುಗಿ, ಸಂಪೂರ್ಣವಾಗಿ ಫಿಟ್ ಆಗುತ್ತೇನೆ ಎಂದು ಭರವಸೆ ನೀಡುತ್ತೇನೆ! ಅಲ್ಲಿಯವರೆಗೆ, ನೀವೆಲ್ಲರೂ ರಜಾದಿನವನ್ನು ಆನಂದಿಸುತ್ತಿದ್ದೀರಿ ಮತ್ತು ಪ್ರತಿದಿನ ಸ್ವಲ್ಪ ಸಂತೋಷವನ್ನು ಕಂಡುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ” ಎಂದು ಸೂರ್ಯಕುಮಾರ್​ ಬರೆದುಕೊಂಡಿದ್ದರು.

ಫಿಟ್​ನೆಸ್​ ಅಭ್ಯಾಸ ನಿರತ ಸೂರ್ಯ

ಸದ್ಯ ಗುಣಮುಖರಾಗಿರುವ ಸೂರ್ಯಕುಮಾರ್​ ಅವರು ಮುಂದಿನ ತಿಂಗಳು ನಡೆಯುವ ಐಪಿಎಲ್​ ಟೂರ್ನಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡದ ಆಟಗಾರನಾಗಿದ್ದಾರೆ. ಈ ಬಾರಿ ಈ ತಂಡವನ್ನು ಹಾರ್ದಿಕ್​ ಪಾಂಡ್ಯ ಮುನ್ನಡೆಸಲಿದ್ದಾರೆ. ರೋಹಿತ್​ ಅವರನ್ನು ತಂಡದ ನಾಯಕತ್ವದಿಂದ ಕೈಬಿಟ್ಟದ್ದಕ್ಕೆ ಸೂರ್ಯಕುಮಾರ್​ ಅವರು ಒಡೆದು ಹೋದ ಹೃದಯದ ಎಮೊಜಿಯನ್ನು ಪೋಸ್ಟ್​ ಮಾಡಿ ಫ್ರಾಂಚೈಸಿ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದರು.

Continue Reading

ಕ್ರೀಡೆ

Akaay: ಕೊಹ್ಲಿಗೆ ಮಗ ಹುಟ್ಟಿದ್ದಕ್ಕೆ ಪಾಕಿಸ್ತಾನದಲ್ಲಿ ಸಿಹಿ ಹಂಚಿ ಸಂಭ್ರಮ; ವಿಡಿಯೊ ವೈರಲ್​

ಪಾಕಿಸ್ತಾನದಲ್ಲಿಯೂ(Virat Kohli’s Pakistan Fans) ಕೊಹ್ಲಿ ತಂದೆಯಾದ ಖುಷಿಯನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಡೊಯೊ ವೈರಲ್​ ಆಗಿದೆ.

VISTARANEWS.COM


on

Virat Kohli's Pakistan Fans
Koo

ಕರಾಚಿ: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್‌ ಕೊಹ್ಲಿ(Virat Kohli) ಎರಡನೇ ಮಗುವಿನ ತಂದೆಯಾಗಿದ್ದಾರೆ. ಪತ್ನಿ ಅನುಷ್ಕಾ ಶರ್ಮ(Anushka Sharma) ಫೆ. 15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸುದ್ದಿ ಕೇಳಿ ಕೊಹ್ಲಿ ಅಭಿಮಾನಿಗಳು ಬಹಳ ಸಂತಸಗೊಂಡಿದ್ದಾರೆ. ಮರಿ ಕಿಂಗ್​ ಕೊಹ್ಲಿ ಆಮಗನ ಎಂದು ಸಂಭ್ರಮಿಸಿದ್ದಾರೆ. ಅತ್ತ ಪಾಕಿಸ್ತಾನದಲ್ಲಿಯೂ(Virat Kohli’s Pakistan Fans) ಕೊಹ್ಲಿ ತಂದೆಯಾದ ಖುಷಿಯನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಡೊಯೊ ವೈರಲ್​ ಆಗಿದೆ.

ಪಾಕಿಸ್ತಾನದ ಕೊಹ್ಲಿ ಅಭಿಮಾನಿಗಳು ಸಿಹಿ ಹಂಚುವ ಮೂಲಕ ಅಕಾಯ್‌ ಕೂಡ ವಿರಾಟ್​ ಅವರಂತೇ ಗ್ರೇಟೆಸ್ಟ್​ ಕ್ರಿಕೆಟ್​ ಆಗಲಿ, ಭಾರತ ಕ್ರಿಕೆಟ್​ ತಂಡದಲ್ಲಿ ಮಿನುಗಲಿ ಎಂದು ಹಾರೈಸಿದ್ದಾರೆ. ಇದನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.

ವಿರಾಟ್​ ಅವರು ಗಂಡು ಮಗುವಿನ ತಂದೆಯಾದ ವಿಚಾರವನ್ನು ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸುವ ಮೂಲಕ ತಿಳಿಸಿದ್ದರು. “ತುಂಬು ಸಂತೋಷ ಮತ್ತು ಪ್ರೀತಿ ತುಂಬಿದ ಹೃದಯದಿಂದ ನಾವು ಫೆ. 15ರಂದು ನಮ್ಮ ಮಗ, ವಾಮಿಕಾಳ ಚಿಕ್ಕ ಪುಟ್ಟ ಸಹೋದರ ಅಕಾಯ್‌ನನ್ನು(Akaay) ಈ ಜಗತ್ತಿಗೆ ಸ್ವಾಗತಿಸಿದ್ದೇವೆ” ಎಂದು ತಿಳಿಸುತ್ತಿದ್ದೇವೆ ಎಂದು ಕೊಹ್ಲಿ ಪೋಸ್ಟ್‌ ಮಾಡಿದ್ದರು. ಫೆ. 15ರಂದೆ ಮಗ ಜನಿಸಿದ್ದರು ಕೂಡ ಈ ವಿಚಾರವನ್ನು ಇಷ್ಟು ತಡವಾಗಿ ಹೇಳಿದ್ದು ಯಾಕೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ಇದನ್ನೂ ಓದಿ Ind vs Eng : ನಾಲ್ಕನೇ ಟೆಸ್ಟ್​ಗೆ ಜಸ್​ಪ್ರಿತ್ ಬುಮ್ರಾ ಬಿಡುಗಡೆ ​, ರಾಹುಲ್ ಔಟ್​

ಅಕಾಯ್ ಪದದ ಅರ್ಥ ಏನು?


ಈ ಮಧ್ಯೆ ಅಕಾಯ್ ಹೆಸರು ಹಲವರ ಗಮನ ಸೆಳೆದಿದೆ. ಅನೇಕರು ಈ ವಿಶೇಷ ಹೆಸರಿನ ಅರ್ಥ ಹುಡುಕಲು ಆರಂಭಿಸಿದ್ದಾರೆ. ಇದು ‘ಕಾಯಾ’ ಎಂಬ ಹಿಂದಿ ಪದದಿಂದ ಬಂದಿದೆ. ಇದರರ್ಥ ‘ದೇಹ’. ಅಕಾಯ್ ಎಂದರೆ ತನ್ನ ಭೌತಿಕ ದೇಹಕ್ಕಿಂತ ಹೆಚ್ಚಿನದನ್ನು ಹೊಂದಿರುವವನು. ಇನ್ನು ಟರ್ಕಿಶ್ ಭಾಷೆಯಲ್ಲಿ ‘ಅಕಾಯ್’ ಎಂಬ ಪದದ ಅರ್ಥ ‘ಹೊಳೆಯುವ ಚಂದ್ರ’ (Shining moon). ಒಟ್ಟಿನಲ್ಲಿ ದಂಪತಿ ತಮ್ಮ ಮಗನಿಗೆ ವಿಶಿಷ್ಟ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೊಹ್ಲಿ-ಅನುಷ್ಕಾ ದಂಪತಿಗೆ ಮೊದಲ ಮಗು 2021ರಲ್ಲಿ ಜನಿಸಿತ್ತು. ಈ ಹೆಣ್ಣು ಮಗುವಿಗೆ ವಾಮಿಕಾ ಎಂದು ಹೆಸರಿಡಲಾಗಿದೆ.

ಅಕಾಯ್‌ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾನೆ. ವಿರಾಟ್‌ ಕೊಹ್ಲಿ ತಮಗೆ ಮಗು ಜನಿಸಿದ ಮಾಹಿತಿಯನ್ನು ಪೋಸ್ಟ್‌ ಮಾಡಿದ ಕೆಲವೇ ತಾಸುಗಳಲ್ಲಿ 50 ಲಕ್ಷ ಮಂದಿ ಲೈಕ್‌ ಬಟನ್‌ ಒತ್ತಿದ್ದರು. ಜತೆಗೆ ಸಿನಿಮಾ, ಕ್ರೀಡಾರಂಗದ ಸೆಲೆಬ್ರಿಟಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ನಟ ರಣವೀರ್‌ ಸಿಂಗ್‌, ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಮತ್ತಿತರರು ಅಭಿನಂದಿಸಿದ್ದಾರೆ. ಅಲ್ಲದೆ ಐಪಿಎಲ್‌ ತಂಡಗಳೂ ಶುಭ ಹಾರೈಸಿವೆ. ಕೊಹ್ಲಿಯ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತಿತರ ತಂಡಗಳು ವಿರುಷ್ಕಾ ದಂಪತಿಗೆ ಹಾರೈಸಿವೆ.

Continue Reading

ವೈರಲ್ ನ್ಯೂಸ್

Chit Chat with Siddaramaiah : ಒಮ್ಮೆಯಾದ್ರೂ ಧರ್ಮಪತ್ನಿಯನ್ನು ತೋರ್ಸಿ ಸರ್‌; ಸಿಎಂಗೆ ದುಂಬಾಲು ಬಿದ್ದ ಹೆಬ್ಬಾಳ್ಕರ್‌!

Chit Chat with Siddaramaiah : ಸಿಎಂ ಸಿದ್ದರಾಮಯ್ಯ ಅವರು ಯಾಕೆ ತಮ್ಮ ಪತ್ನಿಯನ್ನು ಎಲ್ಲೂ ಕರೆದುಕೊಂಡು ಹೋಗಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾ? ಈ ವರದಿ ಓದಿ. ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕೇಳಿದ ಇಂಟ್ರೆಸ್ಟಿಂಗ್‌ ಪ್ರಶ್ನೆಗಳು, ಉಳಿದವರ ಕೋರಸ್‌, ಸಿದ್ದರಾಮಯ್ಯ ಅವರ ಉತ್ತರಗಳನ್ನು ವಿಡಿಯೊ ಸಹಿತ ನೋಡಿ.

VISTARANEWS.COM


on

CM Siddaramaiah Lakshmi Hebbalakr
Koo

ಬೆಂಗಳೂರು: ನಿಮ್ಮ ಧರ್ಮಪತ್ನಿಯವರನ್ನು ಒಮ್ಮೆ ನೋಡಬೇಕು ಅಂತ ಆಸೆ ಸರ್‌, ಒಮ್ಮೆಯಾದರೂ ಅವರನ್ನು ತೋರ್ಸಿ ಸರ್‌, ಪರಿಚಯ ಮಾಡ್ಸಿ ಸರ್‌.. ಹೀಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ದುಂಬಾಲು ಬಿದ್ದಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar). ಆಗ ಅವರಿಗೆ ಸಾಥ್‌ ನೀಡಿದ್ದಾರೆ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmad Khan). ಅಮ್ಮನನ್ನು ನಂಗೂ ಒಮ್ಮೆ ನೋಡ್ಬೇಕು ಸರ್‌ ಅಂತ ಅವರೂ ಬೆನ್ನು ಬಿದ್ದರು.

ಈ ಘಟನಾವಳಿ ನಡೆದಿದ್ದು, ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿದ ದಿನ (ಫೆ. 16ರಂದು) ಮಧ್ಯಾಹ್ನದ ಬಳಿಕ ಆಯೋಜಿಸಲಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ನಡೆಸಿದ ಚಿಟ್‌ ಚಾಟ್‌ ವೇಳೆ (Chit chat with Siddaramaiah). ಈ ಚಿಟ್‌ ಚಾಟ್‌ನ್ನು ನಡೆಸಿಕೊಟ್ಟಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್‌.

CM Siddaramaiah Chit Chat With Siddaramaiah1

ಸಿಎಂ ಸಿದ್ದರಾಮಯ್ಯ ಅವರ ಅಪರ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಸಚಿವರಾದ ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್‌, ಜಮೀರ್‌ ಅಹ್ಮದ್‌ ಖಾನ್‌, ಪ್ರಿಯಾಂಕ್‌ ಖರ್ಗೆ, ಎಂ.ಸಿ. ಸುಧಾಕರ್‌, ಶಿವರಾಜ್‌ ತಂಗಡಗಿ ಮತ್ತಿತರರು ಬಜೆಟ್‌ ಮತ್ತು ಇತರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅಭಿವೃದ್ಧಿ, ಅರ್ಥ ಶಾಸ್ತ್ರ ಅರಿತಿರುವ ಜನನಾಯಕ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಬದುಕಿನ ಬಗ್ಗೆಯೂ ಲೋಕಾಭಿರಾಮ ಚರ್ಚೆಯೂ ನಡೆಯಿತು. ಆಗ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸಿದ್ದರಾಮಯ್ಯ ಅವರ ಖಾಸಗಿ ಬದುಕನ್ನು ಕೆಣಕಿದರು ಮತ್ತು ಇತರರು ತಮಾಷೆಯಾಗಿ ಕಾಲೆಳೆದರು.

CM-Siddaramaiah-Chit-Chat-With-Siddaramaiah

ಅಲ್ಲಿ ನಡೆದ ಸಂಭಾಷಣೆಯ ಸಾರ ಇಲ್ಲಿದೆ

ಲಕ್ಷ್ಮೀ ಹೆಬ್ಬಾಳ್ಕರ್‌: ನೀವು ನಿಮ್ಮ ಜೀವನದ ಬಹುಶಃ 80% ಭಾಗವನ್ನು ಸಮಾಜಕ್ಕಾಗಿ, ಸಾಮಾಜಿಕ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದವರು. ನೀವು ಯಾವತ್ತಾದರೂ ನಿಮ್ಮ ಫ್ಯಾಮಿಲಿ ಜತೆ ಕೂತ್ಕೊಂಡು ಎಂಜಾಯ್‌ ಮಾಡ್ತೀರಾ ಅಥವಾ ಬೆಳಗ್ಗೆ ಅತೀಕ್‌ ಸರ್‌ ಬರ್ತಾರೆ, ನಂತ್ರ ನಾವೆಲ್ಲ ಬಂದು ಕೂರ್ತೀವಿ.. ಬರೇ ಇದೇ ಜೀವನ ಆಗಿ ಹೋಯ್ತಾ? ಸ್ವಲ್ಪ ಫ್ಯಾಮಿಲಿಗೂ ಟೈಮ್‌ ಕೊಡ್ತೀರಾ ಸಾರ್‌ ನೀವು?

ಸಿದ್ದರಾಮಯ್ಯ: ಫ್ಯಾಮಿಲಿಗೆ ಟೈಮ್‌ ಕೊಟ್ಟಿರುವುದು ಭಾರಿ ಕಡಿಮೆ. ಯಾಕೆಂದರೆ ನಾವು ಸಾಮಾಜಿಕ ಜೀವನದಲ್ಲಿರುವಾಗ ಇಡೀ ಸಮಾಜ ನಮ್ಮ ಫ್ಯಾಮಿಲಿ. ಫ್ಯಾಮಿಲಿಗೆ ಸಮಯ ಕೊಡ್ಲೇಬಾರ್ದು ಅಂತೇನಲ್ಲ, ನಾನು ಹಾಗೆ ಹೇಳುವುದಿಲ್ಲ. ಆದರೆ, ಸಮಯ ಸಿಗುವುದಿಲ್ಲ. ಹಾಗಾಗಿ ಅಷ್ಟೆ. ಈ ಬಗ್ಗೆ ಲೋಹಿಯಾ ಅವರು ಒಂದು ಮಾತು ಹೇಳೋರು. ನೀವು ಒಳ್ಳೆಯ ಸಾರ್ವಜನಿಕ ವ್ಯಕ್ತಿ ಆಗಬೇಕು ಎಂದರೆ ಮದುವೆ ಆಗಬಾರದು ಅಂತ (ಎಲ್ಲರೂ ಗೊಳ್‌ ಎಂದು ನಗು)!

ಸಮಾಜಕ್ಕೆ ನಿಮ್ಮನ್ನು ನೀವು ಅರ್ಪಣೆ ಮಾಡಿಕೊಳ್ಳಬೇಕು ಎಂದರೆ ಮದುವೆ ಆಗಬಾರದು!

ಲಕ್ಷ್ಮೀ ಹೆಬ್ಬಾಳ್ಕರ್‌ (ಕೈಗಳನ್ನು ಚಾಚಿ ಬೇಡುವಂತೆ ನಟಿಸುತ್ತಾ): ಸರ್‌ ಒಮ್ಮೆಯಾದರೂ, ಒಮ್ಮೆಯಾದರೂ ನಿಮ್ಮ ಧರ್ಮಪತ್ನಿಯವರನ್ನು ನಮಗೆ ಪರಿಚಯ ಮಾಡಿಸಿ ಕೊಡಿ. ಒಮ್ಮೆ ಅವರನ್ನು ನೋಡಬೇಕು ಅನ್ನುವ ಅಭಿಲಾಷೆ ಇದೆ.

ಜಮೀರ್‌ ಅಹಮದ್‌ ಖಾನ್‌: ನಮಗೆ ಎಲ್ಲಾರ್ಗೂ ಸರ್‌!

ಲಕ್ಷ್ಮೀ ಹೆಬ್ಬಾಳ್ಕರ್‌: ನೀವು ಬಸವಣ್ಣನವರ ತತ್ವವನ್ನು ಪಾಲನೆ ಮಾಡ್ತೀರಾ.. ಕಾಯಕವೇ ಕೈಲಾಸ ಎನ್ನು ನಂಬಿಕೆ ಹೊಂದಿದ್ದೀರಾ.. ನಿಮ್ಮ ಧರ್ಮ ಪತ್ನಿಯವರ ಬಗ್ಗೆ ಕೇಳಿದ್ದೇನೆ, ಅವರು ತುಂಬಾ ದೈವ ಭಕ್ತರು ಅಂತ. ನಾವು ಅವರನ್ನು ನೋಡೇ ಇಲ್ಲ ಸರ್‌, ಒಮ್ಮೆಯಾದರೂ ಅವಕಾಶ ಮಾಡಿಕೊಡಿ ಸರ್‌.

ಡಾ. ಎಂ.ಸಿ ಸುಧಾಕರ್‌: ಸರ್‌ ನೀವ್ಯಾಕೆ ನಿಮ್ಮ ಹೋಮ್‌ ಮಿನಿಸ್ಟರನ್ನು ಗೃಹಬಂಧನದಲ್ಲಿ ಇಟ್ಟಿದ್ದೀರಾ? ಹೋಮ್‌ ಮಿನಿಸ್ಟರ್‌ ಶುಡ್‌ ಬಿ ಪವರ್‌ಫುಲ್‌. ನಮ್ಮ ಹೋಮ್‌ ಮಿನಿಸ್ಟರ್ಸ್‌ ಎಲ್ಲ.. (ಮಾತು ಕಟ್‌ ಆಗುತ್ತದೆ)

ಸಿದ್ದರಾಮಯ್ಯ: ಸ್ವಾತಂತ್ರ್ಯ ಕೊಟ್ಟಿದ್ದೀನಿ ಅವರಿಗೆ. ಎಲ್ಲಿಗೆ ಬೇಕಾದರೂ ಹೋಗ್ಲಿಕೆ.. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಬಾ ಅಂತ ಹೇಳಿದ್ದೆ. ಬರ್ಲೇ ಇಲ್ಲ.. ಏನ್ಮಾಡೋಕಾಗುತ್ತೆ?

ಲಕ್ಷ್ಮೀ ಹೆಬ್ಬಾಳ್ಕರ್‌: ನೀವು ಒತ್ತಾಯ ಮಾಡಿ ಕರೀಬೇಕು ಸರ್‌.

ಜಮೀರ್‌: ನೀವು ಕರೆದುಕೊಂಡು ಹೋಗಿ ಅಭ್ಯಾಸ ಮಾಡಿಸಿಲ್ಲ ಸರ್‌..

ಸಿದ್ದರಾಮಯ್ಯ : ಹೌದು.. ಮೊದಲಿನಿಂದಲೂ ಆ ಅಭ್ಯಾಸ ಮಾಡಿಸಿಲ್ಲ. ಯಾಕೆಂದರೆ ನಾನು 1977ರಲ್ಲಿ ಮದುವೆಯಾದೆ. ಮದುವೆಯಾದ ತಕ್ಷಣ ತಾಲೂಕು ಬೋರ್ಡ್‌ ಮೆಂಬರ್‌ ಆದೆ. ಹಾಗಾಗಿ ರಾಜಕೀಯಕ್ಕೆ ಹೆಚ್ಚು ಸಮಯ ಕೊಡುವುದು ಮೊದಲಿನಿಂದಲೂ ಬೆಳೆದುಕೊಂಡು ಬಂದಿದೆ. ನೋಡಿ ನಾನು ಅನೇಕ ಸಾರಿ ಲೇಟಾಗಿ ಮನೆಗೆ ಹೋಗ್ತೀನಿ.. ಹೋಗುವಷ್ಟು ಹೊತ್ತಿಗೆ ಮಲಗಿಕೊಂಡು ಬಿಟ್ಟಿರ್ತಾರೆ.
(ಈ ನಡುವೆ ಫ್ಯಾಮಿಲಿಗೆ ಸಮಯ ಕೊಡಲು ಆಗುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಅವರೂ ಹೇಳಿದರು)

ಡಿ.ಕೆ. ಶಿವಕುಮಾರ್‌: ಆಯ್ತು ಈಗ ಲಕ್ಷ್ಮೀ ಕೇಳ್ತಿದಾರೆ.. ಎಲ್ಲರನ್ನೂ ಒಂದು ಊಟಕ್ಕೆ ಕರೆಸಿ.. ಪರಿಚಯ ಮಾಡಿಕೊಡಿ..

ಜಮೀರ್‌ ಖಾನ್‌: ಪರಿಚಯ ಮಾಡಿಕೊಡಿ ಸರ್‌ ಒಮ್ಮೆ,.. ನಾವು ಅಮ್ಮಾವ್ರನ್ನು ನೋಡಬೇಕು ಅಂತ ತಾನೇ..

ಸಿದ್ದರಾಮಯ್ಯ: ಕೇಳಿ ನೋಡ್ತೀನಿ.. ಅಂತ ನಗು (ಎಲ್ಲರೂ ಜೋರಾಗಿ ನಗು)

Continue Reading
Advertisement
shishya sweekara Mahotsav in shri swarnavalli maha samsthana matha dharmasabhe
ಉತ್ತರ ಕನ್ನಡ6 mins ago

Sirsi News: ಅಪಕಾರ ಮಾಡಿದವರಿಗೂ ಉಪಕಾರ ಬಯಸುವ ಸದ್ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಿ: ಶ್ರೀವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ

Gurpatwant Singh Pannun
ಕ್ರೀಡೆ12 mins ago

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

Hello-minister-N-chaluvarayaswamy-in-vistara-news-2
ಕರ್ನಾಟಕ25 mins ago

Krishi Bhagya Scheme: 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಮರು ಜಾರಿ: ಎನ್. ಚಲುವರಾಯಸ್ವಾಮಿ

bike accident
ಪ್ರಮುಖ ಸುದ್ದಿ1 hour ago

Road Accident: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ; ಬಸ್-ಬೈಕ್ ಡಿಕ್ಕಿಯಾಗಿ ನಾಲ್ವರ ದುರ್ಮರಣ

vistara top ten
ಟಾಪ್ 10 ನ್ಯೂಸ್2 hours ago

VISTARA TOP 10 NEWS: ನಾಡಗೀತೆಯಲ್ಲೂ ಸರಕಾರ ಎಡವಟ್ಟು ಪಬ್ಲಿಕ್‌ ಪ್ಲೇಸಲ್ಲಿ ಸೇದಬಾರದು ಸಿಗರೇಟು.. ಮತ್ತು ಇತರ ಸುದ್ದಿಗಳು

Vamshi Krishna hits six sixes
ಕ್ರೀಡೆ2 hours ago

C K Nayudu Trophy: ಒಂದೇ ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದ ವಂಶಿ ಕೃಷ್ಣ; ವಿಡಿಯೊ ವೈರಲ್​

IT department has withdrawn 65 crore rupees from the Congress party accounts
ದೇಶ2 hours ago

Congress Party: ಕಾಂಗ್ರೆಸ್‌ ಖಾತೆಗಳಿಂದ 65 ಕೋಟಿ ರೂ. ವಿತ್‌ಡ್ರಾ ಮಾಡಿದ ಐಟಿ ಇಲಾಖೆ!

Minister Madhu Bangarappa inauguration by Beneficiaries convention of guarantee schemes in Soraba
ಶಿವಮೊಗ್ಗ2 hours ago

Shivamogga News: ಸೊರಬದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ

No water supply
ಬೆಂಗಳೂರು2 hours ago

No Water Supply: ಫೆ.27, 28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

Rahul Gandhi used Aishwarya Rai name to criticize Modi Says Sona Mohapatra
ದೇಶ2 hours ago

Sona Mohapatra: ಮೋದಿ ಟೀಕಿಸಲು ಐಶ್ವರ್ಯಾ ಹೆಸರು ಬಳಕೆ, ರಾಹುಲ್ ಗಾಂಧಿ ವಿರುದ್ಧ ಆಕ್ರೋಶ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 21 2024
ಭವಿಷ್ಯ18 hours ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ2 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ3 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ4 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ4 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ5 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

read your daily horoscope predictions for february 16 2024
ಭವಿಷ್ಯ6 days ago

Dina Bhavishya : ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ ಇಂದು ಈ ರಾಶಿಯವರಿಗೆ ಡಬಲ್‌ ಲಾಭ

Siddaramaiah
ರಾಜಕೀಯ6 days ago

Karnataka Budget Session 2024: ಬಿಜೆಪಿಯವರು ಗೂಂಡಾಗಳು ಎಂದ ಸಿಎಂ; ತೊಡೆ ತಟ್ಟಿದ್ದು ನಾವಾ – ನೀವಾ ಎಂದ ವಿಪಕ್ಷ!

ಟ್ರೆಂಡಿಂಗ್‌