Site icon Vistara News

Viral Video : ವಂದೇ ಭಾರತ್‌ ರೈಲಿನ ಶೌಚಾಲಯದಲ್ಲಿ ಬೀಡಿಯ ಹೊಗೆ; ನಿಂತೇ ಹೋಯ್ತು ರೈಲು!

Passenger smokes bidi inside Vande Bharat Express toilet

ನವದೆಹಲಿ: ವಂದೇ ಭಾರತ್‌ ರೈಲುಗಳು ಹಳಿಗಿಳಿದು ಪ್ರಯಾಣ ಆರಂಭಿಸಿವೆ. ಎಲ್ಲೆಡೆ ಈ ರೈಲಿನ ಸುರಕ್ಷತೆ ಮತ್ತು ಸೌಲಭ್ಯಗಳ ಬಗ್ಗೆ ಭಾರೀ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹೀಗಿರುವಾಗ ವ್ಯಕ್ತಿಯೊಬ್ಬ ಟಿಕೆಟ್‌ ಅನ್ನೂ ಪಡೆಯದೆ ವಂದೇ ಭಾರತ್‌ ರೈಲನ್ನು ಹತ್ತಿ, ಅದರ ಶೌಚಾಲಯದೊಳಗೆ ಕೂತು ಬೀಡಿ ಸೇದಿದ್ದಾನೆ. ಇದರಿಂದಾಗಿ ರೈಲಿನ ಫೈರ್‌ ಅಲಾರಾಂ ಹೊಡೆದುಕೊಂಡಿದ್ದು, ರೈಲನ್ನು ನಿಲ್ಲಿಸುವ ಸ್ಥಿತಿ ಬಂದೊದಗಿದೆ. ಈ ದೃಶ್ಯದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ (Viral Video) ಆಗಿವೆ.

ವಂದೇ ಭಾರತ್‌ ರೈಲು ತಿರುಪತಿಯಿಂದ ಸಿಕಂದರಾಬಾದ್‌ಗೆ ಪ್ರಯಾಣ ಮಾಡುತ್ತಿತ್ತು. ಪ್ರಯಾಣಿಕರೆಲ್ಲರೂ ರೈಲಿನಲ್ಲಿ ಕುಳಿತುಕೊಂಡು ತಮ್ಮ ತಮ್ಮ ಆಲೋಚನೆಗಳಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ವ್ಯಕ್ತಿಯೊಬ್ಬ ರೈಲಿನ ಟಿಕೆಟ್‌ ಅನ್ನೂ ಪಡೆಯದೆ ವಂದೇ ಭಾರತ್‌ ರೈಲನ್ನು ಹತ್ತಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆತ, ರೈಲಿನ ಶೌಚಾಲಯದೊಳಗೆ ತೆರಳಿ ಅಲ್ಲಿ ಬೀಡಿಯನ್ನು ಹಚ್ಚಿಕೊಂಡು ಸೇದಲಾರಂಭಿಸಿದ್ದಾನೆ.

ಇದನ್ನೂ ಓದಿ: Viral News : ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ತಾಯಿ!
ಬೀಡಿಯ ಹೊಗೆ ಹೊರಬೀಳುತ್ತಿದ್ದಂತೆಯೇ ರೈಲಿನಲ್ಲಿದ್ದ ಫೈರ್‌ ಅಲರಾಂ ಕೂಗಿಕೊಳ್ಳಲಾರಂಭಿಸಿದೆ. ಇದರಿಂದಾಗಿ ರೈಲಿನ ಚಾಲಕರು ರೈಲನ್ನು ನಿಲ್ಲಿಸುವಂತಾಗಿದೆ. ಗಾಬರಿ ಬಿದ್ದ ಪ್ರಯಾಣಿಕರು ರೈಲಿನಿಂದ ತಮ್ಮ ಲಗೇಜುಗಳನ್ನು ತೆಗೆದುಕೊಂಡು ಕೆಳಕ್ಕೆ ಇಳಿಯಲಾರಂಭಿಸಿದ್ದಾರೆ.


ಈ ಘಟನೆಯಾಗುತ್ತಿದ್ದಂತೆಯೇ ರೈಲ್ವೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಬೀಡಿ ಸೇದಿದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರೈಲಿನಲ್ಲಿ ಫೈರ್‌ ಅಲಾರಾಂ ಹೊಡೆದುಕೊಂಡಿದ್ದು ಮತ್ತು ಪೊಲೀಸರು ಬೀಡಿ ಸೇದಿದ ವ್ಯಕ್ತಿಯನ್ನು ಹಿಡಿದುಕೊಂಡು ಆತನಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಿರುವ ವಿಡಿಯೊಗಳನ್ನು ಅಲ್ಲಿದ್ದ ಕೆಲವು ಪ್ರಯಾಣಿಕರು ಚಿತ್ರಿಸಿಕೊಂಡಿದ್ದಾರೆ. ಆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ವಿಡಿಯೊಗಳು ಭಾರೀ ಜನರಿಂದ ವೀಕ್ಷಣೆಯಾಗುತ್ತಿದ್ದು, ವೈರಲ್‌ ಆಗಲಾರಂಭಿಸಿವೆ.

ಇದನ್ನೂ ಓದಿ: Viral News : ಕಚೇರಿಯಲ್ಲೇ ಟ್ರೈನಿ ಐಪಿಎಸ್‌ ಅಧಿಕಾರಿಯನ್ನು ಮದುವೆಯಾದ ಐಎಎಸ್‌ ಅಧಿಕಾರಿ!
ಮಾಮೂಲಿ ರೈಲಿನಲ್ಲಿ ಈ ರೀತಿ ಜನರು ಟಿಕೆಟ್‌ ಇಲ್ಲದೆ ಪ್ರಯಾಣಿಸುವುದು, ಶೌಚಾಲಯದಲ್ಲಿ ಕುಳಿತು ಬೀಡಿ ಸೇದುವುದು, ಸಿಗರೇಟ್‌ ಸೇದುವುದು ಮಾಮೂಲಿಯಾಗಿಬಿಟ್ಟಿದೆ. ಇದು ಕೂಡ ಅದೇ ರೀತಿಯ ರೈಲು ಎಂದುಕೊಂಡು ಆತ ರೈಲು ಹತ್ತಿ ಬೀಡಿ ಸೇದಿದ್ದಾನೆ ಎಂದು ಜನರು ಈ ಘಟನೆಯ ಬಗ್ಗೆ ಮಾತನಾಡಿಕೊಳ್ಳಲಾರಂಭಿಸಿದ್ದಾರೆ. ಹಾಗೆಯೇ ರೈಲಿನಲ್ಲಿ ಹೆಚ್ಚಿರುವ ಸುರಕ್ಷತೆಯ ಬಗ್ಗೆಯೂ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ರೀತಿ ರೈಲಿನಲ್ಲಿ ಶಿಸ್ತಿಲ್ಲದೆ ವರ್ತಿಸುವವರ ಬಗ್ಗೆ ಜನರು ಅಸಮಾಧಾನವನ್ನು ಹೊರಹಾಕಲಾರಂಭಿಸಿದ್ದಾರೆ. ಹಾಗೆಯೇ ರೈಲಿನಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆಯೂ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾರಂಭಿಸಿದ್ದಾರೆ.

Exit mobile version