Viral News : ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ತಾಯಿ! Vistara News

ವೈರಲ್ ನ್ಯೂಸ್

Viral News : ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ತಾಯಿ!

ತಾಯಿಯೊಬ್ಬಳು ತನ್ನ ಮಗ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

VISTARANEWS.COM


on

mother suicide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್‌: ಮಕ್ಕಳು ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲವೆಂದಾದರೆ ಮಕ್ಕಳಿಗೆ ಬೈಯುವ, ಹೊಡೆಯುವ ಪೋಷಕರನ್ನು ನೀವು ನೋಡಿರುತ್ತೀರಿ. ಇಲ್ಲವೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಿಕೊಂಡು ಕೂರುವವರನ್ನೂ ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ತಾಯಿ ತನ್ನ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ (Viral News) ಚರ್ಚೆ ನಡೆಯುತ್ತಿದೆ.

ಹೈದರಾಬಾದ್‌ನ ಗುಜುಲರಾಮ್‌ನ ಬಾಲಾಜಿ ನಗರ ಎನ್‌ಕ್ಲೇವ್‌ನಲ್ಲಿ ವಾಸವಿದ್ದ 41 ವರ್ಷದ ಪುಷ್ಪ ಜ್ಯೋತಿ ಹೆಸರಿನ ಮಹಿಳೆಗೆ ಇಬ್ಬರು ಗಂಡು ಮಕ್ಕಳು. ಆಕೆಯ ಪತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರೆ ಆಕೆ ಮನೆಯನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದಳು. ಆಕೆಯ ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ಇತ್ತೀಚೆಗೆ ಚಾರ್ಟರ್ಡ್‌ ಅಕೌಂಟೆನ್ಸಿ (ಸಿಎ) ಪರೀಕ್ಷೆಯನ್ನು ಬರೆದಿದ್ದ. ಆದರೆ ಆತನ ದುರಾದೃಷ್ಟವೆನ್ನುವಂತೆ ಆತ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ. ಇದರಿಂದಾಗಿ ಆತ ಬೇಸರಗೊಂಡಿದ್ದಾನೆ. ಆದರೆ ಆತನಿಗಿಂತ ಹೆಚ್ಚಾಗಿ ಬೇಸರಗೊಂಡ ತಾಯಿ ಪುಷ್ಪ ಜ್ಯೋತಿ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಮಗನ ಭವಿಷ್ಯದ ಬಗ್ಗೆ ಚಿಂತೆಗೆ ಬಿದ್ದ ಆಕೆ ಬುಧವಾರದಂದು ಮನೆಯಲ್ಲಿನ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Viral News : ಕಚೇರಿಯಲ್ಲೇ ಟ್ರೈನಿ ಐಪಿಎಸ್‌ ಅಧಿಕಾರಿಯನ್ನು ಮದುವೆಯಾದ ಐಎಎಸ್‌ ಅಧಿಕಾರಿ!
ಈ ವಿಚಾರ ಪೊಲೀಸರಿಗೆ ತಿಳಿದುಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆತ್ಮಹತ್ಯೆ ಸ್ಥಳಕ್ಕೆ ಬಂದ ಪೊಲೀಸರು ಪುಷ್ಪ ಜ್ಯೋತಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಆತ್ಮಹತ್ಯೆ ವಿಚಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪುಷ್ಪ ಜ್ಯೋತಿ ಅವರ ಆತ್ಮಹತ್ಯೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೀಡಾಗುತ್ತಿದೆ. ಮಕ್ಕಳಿಗೆ ಧೈರ್ಯ ಹೇಳಬೇಕಾದ ಪೋಷಕರೇ ಇಷ್ಟು ದುರ್ಬಲ ಮನಸ್ಥಿತಿಯನ್ನಿಟ್ಟುಕೊಂಡರೆ ಕಷ್ಟ ಎನ್ನುವ ಬಗ್ಗೆ ನೆಟ್ಟಿಗರು ಮಾತನಾಡುತ್ತಿದ್ದಾರೆ. ಸಿಎ ಪರೀಕ್ಷೆ ಕಬ್ಬಿಣದ ಕಡಲೆಯಿದ್ದಂತೆ. ಅದನ್ನು ಒಂದೇ ಪ್ರಯತ್ನದಲ್ಲಿ ಪಾಸ್‌ ಮಾಡುವುದು ಕಷ್ಟ ಸಾಧ್ಯ. ಅಷ್ಟೂ ಅರಿತುಕೊಳ್ಳದ ತಾಯಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು ಎಂದು ಜನರು ಹೇಳುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

ಮೆಲೋನಿ+ಮೋದಿ=ಮೆಲೋಡಿ; ಇಟಲಿ ಪ್ರಧಾನಿ ಸೆಲ್ಫಿ ‘ಜಸ್ಟ್ ಲುಕ್ಕಿಂಗ್‌ ಲೈಕ್‌ ಎ ವಾವ್’!

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಸೆಲ್ಫಿಯನ್ನು ಪೋಸ್ಟ್‌ ಮಾಡಿದ್ದಾರೆ. ಜನ ಜಸ್ಟ್‌ ಲುಕ್ಕಿಂಗ್‌ ಲೈಕ್‌ ಎ ವಾವ್‌ ಎಂದು ಪ್ರತಿಕ್ರಿಯಿಸಿದ್ದಾರೆ. ಫೋಟೊ ಕೂಡ ಭಾರಿ ವೈರಲ್‌ ಆಗಿದೆ.

VISTARANEWS.COM


on

Narendra Modi Giorgia Melone
Koo

ದುಬೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರ ಸ್ನೇಹದ ಬಗ್ಗೆ ಜಗತ್ತಿಗೇ ಗೊತ್ತಿದೆ. ಭಾರತದಲ್ಲಂತೂ ನರೇಂದ್ರ ಮೋದಿ (Narendra Modi) ಹಾಗೂ ಜಾರ್ಜಿಯಾ ಮೆಲೋನಿ ಅವರ ಅಸಂಖ್ಯಾತ ಟ್ರೋಲ್‌ಗಳು, ವಿಡಿಯೊಗಳು, ಹಾಡುಗಳು, ಮೀಮ್‌ಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈಗ ಜಾರ್ಜಿಯಾ ಮೆಲೋನಿ ಅವರೇ ನರೇಂದ್ರ ಮೋದಿ ಜತೆ ಸೆಲ್ಫಿ ತೆಗೆಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಫೋಟೊ ಈಗ ವೈರಲ್‌ (Viral News) ಆಗಿದ್ದು, ಜನ “ಜಸ್ಟ್‌ ಲುಕ್ಕಿಂಗ್‌ ಲೈ ಎ ವಾವ್”‌ ಎಂದು ಪ್ರತಿಕ್ರಿಯಿಸಿದ್ದಾರೆ.

ಯುಎಇ ದೇಶದ ರಾಜಧಾನಿ ದುಬೈನಲ್ಲಿ ನಡೆದ 28ನೇ ಕಾನ್ಫರೆನ್ಸ್‌ ಆಫ್‌ ದಿ ಪಾರ್ಟೀಸ್‌ (COP28) ಶೃಂಗಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರ ಜತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. “ಸಿಒಪಿ28 ಸಭೆಯಲ್ಲಿ ಆತ್ಮೀಯ ಸ್ನೇಹಿತರು” ಎಂದು ಒಕ್ಕಣೆ ಬರೆದಿದ್ದಾರೆ. ಅಷ್ಟೇ ಅಲ್ಲ, ಮೆಲೋನಿ+ಮೋದಿ= ಮೆಲೋಡಿ ಎಂಬ ಅರ್ಥ ಬರುವ ಕಾರಣ ಮೆಲೋಡಿ ಎಂಬ ಹ್ಯಾಶ್‌ ಟ್ಯಾಗ್‌ ಬಳಸಿದ್ದಾರೆ. ಈ ಫೋಟೊ ಭಾರಿ ವೈರಲ್‌ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Giorgia Meloni On Modi: ವಿಶ್ವ ನಾಯಕರಲ್ಲೇ ಮೋದಿ ಹೆಚ್ಚು ಪ್ರೀತಿಪಾತ್ರರು, ಇಟಲಿ ಪ್ರಧಾನಿ ಮೆಲೋನಿ ಮೆಚ್ಚುಗೆ

“ಜಸ್ಟ್‌ ಲುಕ್ಕಿಂಗ್‌ ಲೈಕ್‌ ಎ ವಾವ್”‌ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸುವ ಮೂಲಕ ಇತ್ತೀಚಿನ ಟ್ರೆಂಡ್‌ ಫಾಲೋ ಮಾಡಿದ್ದಾರೆ. “ಈ ಒಂದು ಫೋಟೊ ಎಲ್ಲ ವೈರಲ್‌ ರೆಕಾರ್ಡ್‌ಗಳನ್ನೂ ಮೀರಿಸುತ್ತದೆ” ಎಂದು ಮತ್ತೊಬ್ಬರು ಹೇಳಿದ್ದಾರೆ. “ಮೋದಿ ಹಾಗೂ ಮೆಲೋಡಿ ಜೋಡಿ ಚೆನ್ನಾಗಿದೆ” ಎಂದು ಇನ್ನೊಬ್ಬರು ಕಿಚಾಯಿಸಿದ್ದಾರೆ. ಹಾಗೆಯೇ ಸಾವಿರಾರು ಮೀಮ್‌ಗಳು, ಟ್ರೋಲ್‌ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ

ಜಾರ್ಜಿಯಾ ಮೆಲೋನಿ ಅವರು ಇದಕ್ಕೂ ಮೊದಲು ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿದೇಶ

Medical Miracle: ಈ ಅಜ್ಜಿ 50 ವರ್ಷದಿಂದ ಬರೀ ಕೋಲ್ಡ್‌ ಡ್ರಿಂಕ್ಸ್‌ ಕುಡಿದೇ ಬದುಕ್ತಿದ್ದಾರೆ!

Medical Miracle: ವಿಯೆಟ್ನಾಂನ ವೃದ್ಧೆಯೊಬ್ಬರು 50 ವರ್ಷಗಳಿಂದ ಕೇವಲ ತಂಪು ಪಾನೀಯ, ನೀರು ಕುಡಿದೇ ಜೀವಿಸುತ್ತಿದ್ದಾರೆ. ಇದಕ್ಕಿರುವ ಕಾರಣ ಇಲ್ಲಿದೆ.

VISTARANEWS.COM


on

water drinking
Koo

ವಿಯೆಟ್ನಾಂ: ಉತ್ತಮ ಆರೋಗ್ಯಕ್ಕೆ ಸರಿಯಾದ, ಪೋಷಕಾಂಶಯುಕ್ತ ಆಹಾರ ಮುಖ್ಯ ಎನ್ನುತ್ತದೆ ವೈದ್ಯ ಲೋಕ. ಅದಕ್ಕಾಗಿ ದ್ರವ ರೂಪದ ಆಹಾರದ ಜತೆಗೆ ಘನ ಆಹಾರವನ್ನೂ ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಆದರೆ ವೈದ್ಯಲೋಕವನ್ನೇ ಅಚ್ಚರಿಗೆ ದೂಡಿ ಇಲ್ಲೊಬ್ಬರು ಸುಮಾರು 50 ವರ್ಷಗಳಿಂದ ಕೇವಲ ನೀರು ಮತ್ತು ತಂಪು ಪಾನೀಯ (Cold drinks) ಕುಡಿದೇ ಬದುಕುತ್ತಿದ್ದಾರೆ. ಅದೂ ಅವರು ಈ 75ರ ಇಳಿವಯಸ್ಸಿನಲ್ಲೂ ಆರೋಗ್ಯವಂತರಾಗಿದ್ದಾರೆ ಎನ್ನುವುದು ವಿಶೇಷ (Medical Miracle). ಯಾರು ಈ ವೃದ್ಧೆ? ಏನಿವರ ಹಿನ್ನೆಲೆ ಎನ್ನುವುದರ ವಿವರ ಇಲ್ಲಿದೆ.

ವಿಯಟ್ನಾಂನ ಬುಯಿ ಲೋಯಿ ಎಂಬ 75ರ ಹರೆಯದ ಅಜ್ಜಿಯೇ ವೈದ್ಯ ಲೋಕಕ್ಕೆ ಸವಾಲಾಗಿರುವವರು. ಅವರಿಗೆ ಯಾವುದೇ ಘನ ಆಹಾರ ತಿನ್ನಬೇಕೆಂದು ಅನಿಸುವುದೇ ಇಲ್ಲವಂತೆ. ಬರೀ ನೀರು, ಸಕ್ಕರೆಯಂಶವಿರುವ ತಂಪು ಪಾನೀಯವಷ್ಟೇ ಅವರ ಆಹಾರ.

ಕಾರಣವೇನು?

ಬುಯಿ ಲೋಯಿ ಅವರ ಈ ವಿಚಿತ್ರ ವರ್ತನೆಯ ಹಿಂದೆ ಬಲವಾದ ಕಾರಣವಿದೆ. ಆಗ ಬುಯಿ ಲೋಯಿ ಅವರಿಗೆ ಸುಮಾರು 25 ವರ್ಷವಾಗಿತ್ತು. 50 ವರ್ಷಗಳ ಹಿಂದೆ ಅವರು ಹಾಗೂ ಮತ್ತೊಬ್ಬ ಮಹಿಳೆ ಗಾಯವಾದ ಸೈನಿಕರಿಗೆ ಚಿಕಿತ್ಸೆ ನೀಡಲು ಬೆಟ್ಟ ಹತ್ತುತ್ತಿದ್ದರು. ಆಗ ಸಿಡಿಲು ಬಡಿದು ಬುಯಿ ಲೋಯಿ ಪ್ರಜ್ಞೆ ತಪ್ಪಿತ್ತು. ಕೆಲವು ಸಮಯದ ಬಳಿಕ ಎಚ್ಚರವಾದ ಮೇಲೆ ಗೆಳತಿ ಜ್ಯೂಸ್ ಕುಡಿಸಿದ್ದರು. ಆ ಬಳಿಕ ಬುಯಿ ಲೋಯಿ ಅವರ ಜೀವನ ಶೈಲಿಯೇ ಬದಲಾಯಿತು. ನಂತರ ಅವರಿಗೆ ಯಾವುದೇ ಘನ ಆಹಾರ ತಿನ್ನಲು ಅಷ್ಟು ಇಷ್ಟವಾಗುತ್ತಿರಲಿಲ್ಲವಂತೆ. ಸ್ವಲ್ಪ ಸಮಯ ಹಣ್ಣು, ಮತ್ತಿತರ ಆಹಾರ ಸೇವಿಸಿದರು. ಆದರೆ 1970ರಿಂದ ಹಣ್ಣು ಹಾಗೂ ಇತರ ಘನ ಆಹಾರ ಸೇವಿಸುವುದನ್ನು ಸಹ ಸಂಪೂರ್ಣ ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೀಗ ಅವರ ಮನೆಯ ಫ್ರಿಡ್ಜ್‌ ತುಂಬಾ ಬರೀ ನೀರು ಹಾಗೂ ಜ್ಯೂಸ್‌ಗಳಿವೆ. ಅದರಲ್ಲೂ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಡಯಟ್‌ನಿಂದಾಗಿ ಹೆರಿಗೆಯಾದಾಗ ಮಕ್ಕಳಿಗೆ ಹಾಲುಣಿಸಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ. ಸದ್ಯ ಈ ಬಗ್ಗೆ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೇವಲ ದ್ರವ ಆಹಾರದಿಂದಲೇ ಆರೋಗ್ಯವಾಗಿರುವುದು ಹೇಗೆ ಎನ್ನುವುದು ಬಹು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಇದನ್ನೂ ಓದಿ: Viral video : ಶಾಲೆಗೆ ಹೊರಟಿದ್ದ ಟೀಚರ್‌ ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್‌

ಕೇವಲ ಬೆಲ್ಲ, ಹಾಲು, ನೀರು ಸೇವಿಸುವ ಬಾಲಕಿ

ಇದೇ ಮಾದರಿಯ ಘಟನೆಯೊಂದು ಇತ್ತೀಚೆಗೆ ನಮ್ಮ ರಾಜ್ಯದಲ್ಲೂ ವರದಿಯಾಗಿತ್ತು. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯ ರೇಣುಕಮ್ಮ ಎಂಬ ಬಾಲಕಿ 14 ವರ್ಷಗಳಿಂದ ಕೇವಲ ಬೆಲ್ಲ, ಹಾಲು ಹಾಗೂ ನೀರು ಸೇವಿಸುತ್ತಿದ್ದಾಳೆ. ಮನೆಯಲ್ಲಿ ಅವಳ ತಂದೆ-ತಾಯಿ, ಸಹೋದರರು ಹಾಗೂ ಸಹಪಾಠಿಗಳು ಎಷ್ಟೇ ಒತ್ತಾಯ ಮಾಡಿದರೂ ಊಟ ಮಾತ್ರ ಮಾಡೋದಿಲ್ಲ. ಊಟ ಮಾಡಿದರೆ ವಾಂತಿ ಆಗುತ್ತದೆಯಂತೆ. ಹೀಗಾಗಿ ಈ 14 ವರ್ಷದ ಬಾಲಕಿ ರೇಣುಕಮ್ಮ ಹುಟ್ಟಿದಾಗಿನಿಂದಲೂ ಕೇವಲ ಬೆಲ್ಲ, ಹಾಲು ಮಾತ್ರ ಸೇವಿಸುತ್ತಾ ಬಂದಿದ್ದಾಳೆ. ವೈದ್ಯರು ತಪಾಸಣೆ ಮಾಡಿದ್ದರೂ ಪರಿಹಾರ ಹುಡುಕುವುದು ಸಾಧ್ಯವಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ಚಲಿಸುವ ರೈಲೇ ಈ ಜೋಡಿಗೆ ಮದುವೆ ಮಂಟಪ; ವಿಶಿಷ್ಟ ವಿವಾಹದ ವಿಡಿಯೊ ಇಲ್ಲಿದೆ

Viral Video: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಶಿಷ್ಟ ವಿವಾಹ ಶೈಲಿಗೆ ಇದು ಹೊಸ ಸೇರ್ಪಡೆ. ಚಲಿಸುತ್ತಿರುವ ರೈಲಿನಲ್ಲಿ ಜೋಡಿಯೊಂದು ಮದುವೆಯಾಗಿದೆ.

VISTARANEWS.COM


on

train marriage
Koo

ಬೆಂಗಳೂರು: ಕಾಲದ ಜತೆಗೆ ಜೀವನ ಶೈಲಿಯೂ ಬದಲಾಗುತ್ತಿದೆ. ಆಹಾರ ಪದ್ಧತಿ, ಉಡುಗೆ ತೊಡುಗೆ ಮಾತ್ರವಲ್ಲ ಆಚರಣೆಗಳಲ್ಲಿಯೂ ಬದಲಾವಣೆ ಕಂಡು ಬರುತ್ತಿದೆ. ಇದೀಗ ಬದಲಾವಣೆಯ ಗಾಳಿ ಮದುವೆ ಪದ್ಧತಿ ಮೇಲೂ ಬೀಸಲಾರಂಭಿಸಿದೆ. ಸಾಂಪ್ರದಾಯಿಕ ಮಂಟಪದಲ್ಲಿ ವಿವಾಹವಾಗುವ ಬದಲು ಬೆಟ್ಟದ ಮೇಲೆ, ಗಾಳಿಯಲ್ಲಿ, ನೀರಿನಾಳದಲ್ಲಿ ಹೀಗೆ ಬೇರೆ ಬೇರೆ ವಿಧಾನಗಳಲ್ಲಿ ಸಪ್ತಪದಿ ತುಳಿಯುವವರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೋಡಿಯೊಂದು ಚಲಿಸುತ್ತಿರುವ ರೈಲಿನಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸದ್ಯ ಈ ವಿಡಿಯೊ ವೈರಲ್‌ (Viral Vieo) ಆಗಿದೆ.

ವಿಡಿಯೊದಲ್ಲಿ ಏನಿದೆ?

ಈ ವಿಡಿಯೊದಲ್ಲಿ ಜೋಡಿಯೊಂದು ರೈಲಿನಲ್ಲಿ ಹೂಮಾಲೆಗಳನ್ನು ವಿನಿಮಯ ಮಾಡಿಕೊಳ್ಳುವುದು ಕಂಡು ಬಂದಿದೆ. ರೈಲಿನ ಬೋಗಿಯೊಂದನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಯುವಕ ಮೊದಲು ಯುವತಿಯ ಹಣೆಗೆ ಸಿಂಧೂರ ಹಚ್ಚುತ್ತಾನೆ. ಹೂಮಾಲೆಗಳ ವಿನಿಮಯದ ನಂತರ ಭಾವುಕ ವಧು ವರನನ್ನು ಅಪ್ಪಿಕೊಳ್ಳುತ್ತಾಳೆ. ಬಳಿಕ ಸುತ್ತಲಿದ್ದವರ ಹರ್ಷೋದ್ಗಾರದ ನಡುವೆ ಆ ಯುವಕ ಅವಳ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟುತ್ತಾನೆ. ಅಸನ್ಸೋಲ್-ಜಸಿದಿಹ್ ರೈಲು ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ ಎಂದು ಕೆಲವು ವರದಿಗಳು ತಿಳಿಸಿದೆ. ಅದಾಗ್ಯೂ ಯಾವ ರೈಲು ಎನ್ನುವುದರ ಬಗ್ಗೆ ಖಚಿತತೆ ಇಲ್ಲ.

ನೆಟ್ಟಿಗರು ಏನಂದ್ರ?

ಸಹಜವಾಗಿಯೇ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಸ್ಮರಣೀಯ ಮದುವೆಗೆ ಅಲಂಕಾರಿಕ ಹೋಟೆಲ್‌, ಸಭಾಂಗಣಗಳು ಅಥವಾ ಅಥವಾ ಔತಣಕೂಟವೇ ಆಗಬೇಕೆಂದಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಹಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ʼʼವಿವಿಧೋದ್ದೇಶದ ಭಾರತೀಯ ರೈಲ್ವೆ” ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು “ಬಜೆಟ್ ಸೀಮಿತವಾಗಿದ್ದಿರಬೇಕು. ಇಲ್ಲದಿದ್ದರೆ ಅವರು ವಿಮಾನದಲ್ಲಿ ವಿವಾಹವಾಗುತ್ತಿದ್ದರುʼʼ ಎಂದು ಊಹಿಸಿದ್ದಾರೆ.

ಈ ಎಲ್ಲ ತಮಷೆಯ ನಡುವೆ ನೆಟ್ಟಿಗರೊಬ್ಬರು ಗಂಭೀರ ಪ್ರಶ್ನೆಯೊಂದನ್ನು ಎತ್ತಿದ್ದಾರೆ. “ಮದುವೆಯಾಗುವುದು ಹೀಗೆ ತುಂಬ ಸುಲಭವಾಗಿರುವಾಗ ವಿಚ್ಛೇದನವನ್ನು ಏಕೆ ನೋವಿನ ಪ್ರಕ್ರಿಯೆಯನ್ನಾಗಿ ಮಾಡಬೇಕು? ಜೋಡಿಯೊಂದು ಚಲಿಸುವ ರೈಲಿನಲ್ಲಿ ಮದುವೆಯಾಗಬಹುದಾಗಿದ್ದರೆ ವಿಚ್ಛೇದನಕ್ಕಾಗಿ ನ್ಯಾಯಾಲಯವನ್ನು ಏಕೆ ಸಂಪರ್ಕಿಸಬೇಕು? ವಿಚ್ಛೇದನವನ್ನು ಮದುವೆಯಷ್ಟೇ ಸುಲಭಗೊಳಿಸಿʼʼ ಎಂದು ಸಲಹೆ ನೀಡಿದ್ದಾರೆ. ಹಲವರು ಇದಕ್ಕೆ ಪರ-ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ವಿವಾಹ ಹಲವು ಚರ್ಚೆಯನ್ನು ಹುಟ್ಟು ಹಾಕಿದ್ದಂತೂ ಸತ್ಯ.

ಸರಳವಾಗಿ ಹಸೆಮಣೆಗೇರಿದ ಪೂಜಾ ಗಾಂಧಿ

ಈ ಮಧ್ಯೆ ನವೆಂಬರ್‌ 29ರಂದು ನಟಿ, ʼಮಳೆ ಹುಡುಗಿʼ ಪೂಜಾ ಗಾಂಧಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿ ಪ್ರಕಾರ ವಿವಾಹಿತರಾಗಿದ್ದು ಗಮನ ಸೆಳೆದಿದೆ. ಆಡಂಬರದ ಮದುವೆಗಳ ಭರಾಟೆ ನಡುವೆ ಅವರು ಸರಳವಾಗಿ ಉದ್ಯಮಿ ವಿಜಯ್ ಘೋರ್ಪಡೆ ಅವರ ಕೈ ಹಿಡಿದಿದ್ದು ಮೆಚ್ಚುಗೆ ಗಳಿಸಿದೆ. ತನ್ನ ಕನ್ನಡ ಪ್ರೇಮದಿಂದ ಈಗಾಗಲೇ ಹಲವರ ಮನಸ್ಸು ಕದ್ದಿದ್ದ ಪೂಜಾ ಗಾಂಧಿ ಮದುವೆಯಲ್ಲಿಯೂ ಸರಳತೆ ಮೆರೆದಿದ್ದು ಮಾದರಿ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Viral News: ಗೂಗಲ್‌ ಉದ್ಯೋಗ ತೊರೆದು ಉಬರ್‌ ಚಾಲಕನಾದ; ಇದರ ಹಿಂದಿದೆ ಅಚ್ಚರಿಯ ಕಾರಣ

ಆಸ್ಪತ್ರೆಯಲ್ಲೇ ಮದುವೆಯಾದ ಜೋಡಿ

ಇದರ ಜತೆಗೆ ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಜೋಡಿಯೊಂದು ಆಸ್ಪತ್ರೆಯಲ್ಲೇ ಮದುವೆಯಾದ ವಿಡಿಯೊ ವೈರಲ್‌ ಆಗಿತ್ತು. ವಿವಾಹ ನಿಶ್ಚಯವಾಗಿದ್ದ ವರನಿಗೆ ಡೆಂಗ್ಯೂ ಕಾಣಿಸಿಕೊಂಡಿತ್ತು. ಹೀಗಾಗಿ ಆತ ಆಸ್ಪತ್ರೆಗೆ ದಾಖಲಾಗಿದ್ದ. ಮೊದಲೇ ನಿಗದಿ ಪಡಿಸಿದ ದಿನದಂದೇ ವಿವಾಹ ನೆರವೇರಿಸಲು ವಧು-ವರರ ಕುಟುಂಬದವರು ತೀರ್ಮಾನಿಸಿದ್ದರು. ಅದರಂತೆ ವರ ದಾಖಲಾಗಿರುವ ಕೋಣೆಯನ್ನೇ ಮಂಟಪದಂತೆ ಶೃಂಗರಿಸಿ ಅಲ್ಲೇ ಮದುವೆ ನೆರವೇರಿಸಿದ್ದರು. ಸದ್ಯ ಈ ವಿಚಾರವೂ ಗಮನ ಸೆಳೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ದೇಶ

ಶಿಕ್ಷಕನನ್ನು ಕಿಡ್ನ್ಯಾಪ್ ಮಾಡಿ, ತನ್ನ ಪುತ್ರಿ ಜತೆ ಮದ್ವೆ ಮಾಡಿಸಿದ ಕಿಡ್ನ್ಯಾಪರ್! ಏನಿದು ಪಕಡ್ವಾ ವಿವಾಹ?

Pakadwa Vivah: ಇತ್ತೀಚೆಗಷ್ಟೇ ಬಿಹಾರ ಲೋಕಸೇವಾ ಆಯೋಗ ಪರೀಕ್ಷೆ ಪಾಸು ಮಾಡಿ ಶಿಕ್ಷಕನಾಗಿದ್ದ ವ್ಯಕ್ತಿಯನ್ನು ಅಪಹರಿಸಿದ್ದು ಮಾತ್ರವಲ್ಲದೇ ಆತನಿಗೆ ಬಲವಂತವಾಗಿ ಅಪಹರಣಕಾರನ ಮಗಳ ಜತೆ ಮದುವೆ ಮಾಡಿಸಲಾಗಿದೆ.

VISTARANEWS.COM


on

Pakadwa Vivah in bihar, teacher kidnapped and forced to marry kidnapper's daughter
Koo

ಪಟನಾ: ಬಿಹಾರದಲ್ಲಿ (Bihar) ಮತ್ತೊಂದು ಪಕಡ್ವಾ ವಿವಾಹ (Pakadwa Vivah) ಬೆಳಕಿಗೆ ಬಂದಿದೆ. ಸರ್ಕಾರಿ ಶಿಕ್ಷಕನಾಗಲು ಇತ್ತೀಚೆಗಷ್ಟೇ ಬಿಹಾರ ಲೋಕಸೇವಾ ಆಯೋಗ ಪರೀಕ್ಷೆಯನ್ನು ಪಾಸು ಮಾಡಿದ್ದ ಗೌತಮ್ ಕುಮಾರ್ (Teacher Gautam Kumar) ಎಂಬಾತನನ್ನು ನಾಲ್ಕಾರು ಜನರಿದ್ದ ತಂಡವು ಅಪಹರಿಸಿಕೊಂಡು ಹೋಗಿದೆ(Teacher Abducted). ಅಲ್ಲದೇ, ಅಪಹರಣಕಾರರ ತಂಡದ ಪೈಕಿ ಒಬ್ಬನ ಮಗಳನ್ನು, ಗನ್‌ಪಾಯಿಂಟ್‌ನಲ್ಲಿ ಈ ಶಿಕ್ಷಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ವರದಿಯಾಗಿದೆ(Forcibly Marriage). ಅಪಹರಣ ಮಾಡಿದ 24 ಗಂಟೆಯಲ್ಲೇ ಈ ಮದುವೆ ನಡೆದಿದೆ! ಬಿಹಾರದಲ್ಲಿ ಇತ್ತೀಚಿನ ಕೆಲವು ದಶಕಗಳಿಂದ ಈ ಮಾದರಿಯ ‘ಪಕಡ್ವಾ ವಿವಾಹ’ಗಳು ಆಗಾಗ ವರದಿಯಾಗುತ್ತಲೇ ಇವೆ.

ಅವಿವಾಹಿತನಿಂದ ಯಾವುದೇ ಯೋಜನೆ ಇಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡುವ ಗೌತಮ್‌ ಕುಮಾರ್ ಪಯಣವು ಸಾಕಷ್ಟು ತಿರುವುಗಳನ್ನು ಕಂಡಿದೆ. ಬಿಹಾರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವ ಈ ಪಕಡ್ವಾ ವಿವಾಹಕ್ಕೆ ಗೌತಮ್ ಕುಮಾರ್ ಮದುವೆ ಹೊಸ ಸೇರ್ಪಡೆಯಾಗಿದೆ. ಪಕಡ್ವಾ ವಿವಾಹ ಅಥವಾ ವರನ ಅಪಹರಣ ಪದ್ಧತಿಯಲ್ಲಿ, ವರನನ್ನು ಅಪಹರಿಸಿ ಬಲವಂತವಾಗಿ ಆತನಿಗೆ ಮದುವೆ ಮಾಡಿಸುತ್ತಾರೆ.

ಪೊಲೀಸರ ಪ್ರಕಾರ, ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಈ ಅಪಹರಣ ನಡೆದಿದ್ದು, ಪಟೇಪುರ್‌ನ ರೇಪುರಾದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದಲ್ಲಿ ಗೌತಮ್ ಕುಮಾರ್ ಅವರು ಹೊಸದಾಗಿ ಶಿಕ್ಷಕರಾಗಿ ನೇಮಕಗೊಂಡಿದ್ದರು. ಕಾಣೆಯಾದ ಶಿಕ್ಷಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು, ಕುಮಾರ್ ಅವರ ಕುಟುಂಬವು ಬುಧವಾರ ರಾತ್ರಿ ರಸ್ತೆಯನ್ನು ತಡೆದು ಪ್ರತಿಭಟಿಸಿತು.

ಕುಮಾರ್ ಕುಟುಂಬವು ರಾಜೇಶ್ ರಾಯ್ ಎಂಬ ವ್ಯಕ್ತಿಯ ಮೇಲೆ ಆರೋಪ ಹೊರಿಸಿದೆ. ರಾಯ್ ಕುಟಂಬದ ಸದಸ್ಯರು, ಗೌತಮ್ ಕುಮಾರನನ್ನು ಅಪಹರಿಸಿ, ಬಲವಂತವಾಗಿ ತಮ್ಮ ಮಗಳು ಚಾಂದನಿಯೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೂ ಮೊದಲು ಈ ವಿವಾಹ ಪ್ರಸ್ತಾಪವನ್ನು ಗೌತಮ್ ಕುಮಾರ್ ಒಪ್ಪಿಕೊಂಡಿರಲಿಲ್ಲ. ಆಗ ಜಗಳ ಕೂಡ ನಡೆದಿತ್ತು. ಗೌತಮ್ ಮೇಲೆ ಹಲ್ಲೆ ಕೂಡ ಆಗಿತ್ತು. ಅಲ್ಲದೇ, ನವಡಾ ಸೇನಾಧಿಕಾರಿ ಮತ್ತು ಲಖಿಸರಾಯ್ ಮಹಿಳೆಯ ನಡುವಿನ ಹತ್ತು ವರ್ಷಗಳ ಬಲವಂತದ ಮದುವೆಯನ್ನು ರದ್ದುಗೊಳಿಸಿದ ಇತ್ತೀಚಿನ ಪಾಟ್ನಾ ಹೈಕೋರ್ಟ್ ತೀರ್ಪನ್ನು ಕುಮಾರ್ ಅವರು ಪ್ರಸ್ತಾಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಹರಣ ಮತ್ತು ಬಲವಂತದ ಮದುವೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ ತನಿಖೆಯನ್ನೂ ಕೈಗೊಳ್ಳಲಾಗತ್ತಿದೆ. ಅಪಹರಣಕಾರರ ವಿರುದ್ಧ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದಲ್ಲಿ ಇತ್ತೀಚಿನ ದಿನಗಳಲ್ಲಿ ಪಕಡವಾ ವಿವಾಹಗಳು ಹೆಚ್ಚುತ್ತಿವೆ. ಕಳೆದ ವರ್ಷ ಇಂಥದ್ದೇ ಘಟನೆ ನಡೆದಿತ್ತು. ಅನಾರೋಗ್ಯಪೀಡಿತ ಪ್ರಾಣಿಯ ಚಿಕಿತ್ಸೆ ಪಶುವೈದ್ಯರನ್ನು ಕರೆಯಿಸಿಕೊಂಡು ಬಳಿಕ ಅವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಅಲ್ಲದೇ, ಬಲವಂತವಾಗಿ ಆತನಿಗೆ ಮದುವೆ ಮಾಡಿಸಲಾಗಿತ್ತು. ಈ ಘಟನೆ ಬೇಗುಸರಾಯ್‌ನಲ್ಲಿ ನಡೆದಿತ್ತು.

ಕೆಲವು ವರ್ಷಗಳ ಹಿಂದೆ ಬಿಹಾರದಲ್ಲಿ ಎಂಜಿನಿಯರ್‌ಗೆ ಸಂಬಂಧಿಸಿದ ಇಂತಹುದೇ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಬೊಕಾರೊ ಸ್ಟೀಲ್ ಪ್ಲಾಂಟ್‌ನಲ್ಲಿ ಜೂನಿಯರ್ ಮ್ಯಾನೇಜರ್ ಆಗಿದ್ದ 29 ವರ್ಷದ ವಿನೋದ್ ಕುಮಾರ್ ಎಂಬಾತನನ್ನು ಥಳಿಸಿ, ಪಾಟ್ನಾದ ಪಂಡರಕ್ ಪ್ರದೇಶದಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿತ್ತು. ಈಗ ಮತ್ತೆ ಅಂಥದ್ದೇ ಪ್ರಕರಣವು ನಡೆದಿದೆ.

ಈ ಸುದ್ದಿಯನ್ನೂ ಓದಿ: Kidnap Case : ಪೋಷಕರ ಕಿಡ್ನ್ಯಾಪ್‌ ಕೇಸ್‌ ಸುಖಾಂತ್ಯ; ಗಂಡನ ಮನೆ ಸೇರಿದ ನವವಿವಾಹಿತೆ

Continue Reading
Advertisement
Dina Bhavihsya
ಪ್ರಮುಖ ಸುದ್ದಿ12 mins ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Sphoorti Salu
ಸುವಚನ42 mins ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Assembly Election Results 2023
Live News6 hours ago

Election Results 2023 Live: 4 ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; ಇಲ್ಲಿದೆ ಕ್ಷಣಕ್ಷಣದ ಅಪ್‌ಡೇಟ್ಸ್

Kapil Sharma And Sunil Grover
ಕಿರುತೆರೆ/ಒಟಿಟಿ6 hours ago

Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

women seriously injured
ಕರ್ನಾಟಕ6 hours ago

Kalaburagi News: ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಮೂವರು ಮಹಿಳೆಯರಿಗೆ ಗಂಭೀರ ಗಾಯ

Bangalore Bulls
ಕ್ರೀಡೆ6 hours ago

Pro Kabaddi : ಗುಜರಾತ್​ ತಂಡಕ್ಕೆ ಸೆಡ್ಡು ಹೊಡೆಯುವುದೇ ಬುಲ್ಸ್​

Heart Attack
ಆರೋಗ್ಯ6 hours ago

Heart Attack: ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

Pro Kabaddi Day 1
ಕ್ರೀಡೆ6 hours ago

Pro Kabaddi: ಮೊದಲ ದಿನ ಗುಜರಾತ್​, ಮುಂಬಾ ತಂಡಕ್ಕೆ ಗೆಲುವು

States economy
ಕರ್ನಾಟಕ7 hours ago

ರಾಜ್ಯದ ಆರ್ಥಿಕತೆ ವೃದ್ಧಿಸಲು ವಾರ್ಷಿಕ 1.4 ಲಕ್ಷ ಕೋಟಿ ಹೂಡಿಕೆಯ ಗುರಿ ನಿಗದಿ

JP Nadda And BY Vijayendra
ಕರ್ನಾಟಕ7 hours ago

BY Vijayendra: ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ನಡ್ಡಾ ಭೇಟಿಯಾದ ವಿಜಯೇಂದ್ರ; ಏನೇನು ಚರ್ಚೆ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Dina Bhavihsya
ಪ್ರಮುಖ ಸುದ್ದಿ12 mins ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ13 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ5 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

ಟ್ರೆಂಡಿಂಗ್‌