ಬೆಂಗಳೂರು: ಬಿಗ್ ಬಾಸ್ ಸೀಸನ್ 10 ಮುಗಿದು ಇಷ್ಟು ದಿನವಾದರೂ ಅದರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇನ್ನು ವಿಶೇಷ ಅಂದರೆ ಡ್ರೋನ್ ಪ್ರತಾಪ್ (Drone Prathap) ಮಾತ್ರ ಸಖತ್ ಸುದ್ದಿಯಲ್ಲಿಯೇ ಇರುತ್ತಾರೆ. ಡ್ರೋನ್ ಪ್ರತಾಪ್ ಹೋದೆಲೆಲ್ಲ ಜನವೋ ಜನ. ಆದರೀಗ ಅಭಿಮಾನಿಯೊಬ್ಬರ ಆಸೆಯಂತೆ ಆಟೋ ಚಾಲಕನಾಗಿದ್ದಾರೆ. ಅಭಿಮಾನಿಯ ಆಟೋ ಓಡಿಸಿದ ಡ್ರೋನ್ ಪ್ರತಾಪ್ ಎಲ್ಲಾ ಆಟೋ ಚಾಲಕರಿಗೂ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸಿದ್ದಾರೆ. ಇದೀಗ ಈ ಫೋಟೊ, ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡ್ರೋನ್ ಪ್ರತಾಪ್ ವಿಡಿಯೋಗೆ ಅಭಿಮಾನಿಯೊಬ್ಬರು ʻನಮ್ಮನೆ ದೇವ್ರು ಬಾಸ್ ನೀವು’ ಎಂದು ಕಮೆಂಟ್ ಮಾಡಿದ್ದು, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ, ಜೈ ಪ್ರತಾಪ್’ ಎಂದು ಕಮೆಂಟ್ ಮಾಡಿದ್ದಾರೆ. `ಪ್ರತಾಪ್ ನೀವು ತುಂಬಾ ಕ್ಯೂಟ್ ಆಗಿದಿರಾ. ನೀವು ಎಲ್ಲರಿಗು ಒಳ್ಳೆಯದನ್ನೇ ಬಯಸುತ್ತೀರಾ. ನೀವು ನೂರು ಕಾಲ ಸಂತೋಷವಾಗಿ ಖುಷಿ ಯಾಗಿರಬೇಕುʼʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಈ ಹಿಂದೆ ಡ್ರೋನ್ ಪ್ರತಾಪ್ ತಮ್ಮ ಊರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ನೆಟ್ಕಲ್ ಗ್ರಾಮದ ಮನೆಯಲ್ಲಿ ತಂದೆ ಜೊತೆ ಸೇರಿ ರಾಗಿ ಮುದ್ದೆ ತಯಾರಿಸಿದ್ದರು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.
ಎಲ್ರು ಎಣ್ಣೆ ಪಾರ್ಟಿ ಮಾಡ್ತಾ ಇದ್ರೆ ನಮ್ಮ ʻಪ್ರತುʼ ಹಾಗಲ್ಲ
ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ (Drone Prathap) ಅವರಿಗೆ ಬಿಗ್ ಬಾಸ್ ಕಡೆಯಿಂದ 10 ಲಕ್ಷ ರೂಪಾಯಿ ಹಾಗೂ ಒಂದು ಬೌನ್ಸ್ ಬೈಕ್ ಸಿಕ್ಕಿದೆ. ಪ್ರತಾಪ್‌ಗೆ ಬಿದ್ದ ವೋಟ್ಗಳ ಸಂಖ್ಯೆ ಕೋಟಿಗಳಲ್ಲಿದೆ. ಅವರ ಫ್ಯಾನ್ಸ್ ಕ್ರೇಜ್ ಕಮ್ಮಿ ಏನಿಲ್ಲ. ಈಮ ಮುಂಚೆ ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು ಪ್ರತಾಪ್. ಚಾಮರಾಜನಗರದ ಹನೂರು ತಾಲೂಕಿನಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ಪ್ರತಾಪ್ ತೆರಳಿ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಅವರು, ಅನ್ನ ಪ್ರಸಾದವನ್ನು ಬರಿಯ ನೆಲದ ಮೇಲೆ ತಿಂದು ಹರಕೆ ತೀರಿಸಿದ್ದರು.
ಇದನ್ನೂ ಓದಿ: Drone Prathap: ಎಲ್ರು ಎಣ್ಣೆ ಪಾರ್ಟಿ ಮಾಡ್ತಾ ಇದ್ರೆ ನಮ್ಮ ʻಪ್ರತುʼ ಹಾಗಲ್ಲ; ಹೊಗಳಿದ ಫ್ಯಾನ್ಸ್!
ಆಟೋ ಓಡಿಸಿದ ಪ್ರತಾಪ್
ಪ್ರತಾಪ್ ಮನೆಗೆ ಬರುವ ಮುಂಚೆ ನೆಗೆಟಿವ್ ಇಮೇಜ್ ಇದ್ದಿತ್ತು. ಇದೀಗ ಡ್ರೋನ್ ಪ್ರತಾಪ್ ಬಗ್ಗೆ ಈಗ ಜನರಲ್ಲಿ ಪಾಸಿಟಿವ್ ಇಮೇಜ್ ಮೂಡಿದೆ. ಲೈವ್ ಆಡಿಯನ್ಸ್‌ನಿಂದ ಕಡಿಮೆ ವೋಟ್ ಪಡೆದು ‘ಅಸಮರ್ಥರು’ ಎಂಬ ಹಣೆಪಟ್ಟಿಯೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು ಪ್ರತಾಪ್. ಆರಂಭದ ದಿನಗಳಲ್ಲಿ ಪ್ರತಿ ವಿಷಯಕ್ಕೂ ಕಣ್ಣೀರಿಡುತ್ತಿದ್ದರು ಪ್ರತಾಪ್. ಇದೀಗ ರನ್ನರ್ ಅಪ್ ಆಗಿ ಜನರ ಮುಂದೆ ನಿಂತಿದ್ದಾರೆ.