Site icon Vistara News

Rahul Gandhi:‌ ವ್ಹೀಲ್‌ ಇರುವ ಬ್ಯಾಗ್ ತಲೆಮೇಲೆ ಹೊತ್ತು ತಿರುಗಿದ ರಾಹುಲ್‌ ಗಾಂಧಿ; ಭಾರಿ ಟ್ರೋಲ್

Rahul Gandhi

Rahul Gandhi lifts the luggage which has wheels in the dress of a coolie; BJP Taunts

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಭಾರತ್‌ ಜೋಡೋ ಯಾತ್ರೆ (Bharat Jodo Yatra) ವೇಳೆ ಜನ ಹೆಚ್ಚು ಪ್ರೀತಿ ತೋರಿಸಿದ ಬಳಿಕ ಹೆಚ್ಚು ಹೆಚ್ಚು ಜನರ ಜತೆ ಬೆರೆಯುತ್ತಿದ್ದಾರೆ. ರೈತರ ಜತೆಗೂಡಿ ಭತ್ತ ನಾಟಿ ಮಾಡುವುದು, ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳುವುದು ಸೇರಿ ಹಲವು ರೀತಿಯಲ್ಲಿ ಜನರ ಜತೆ ಕಾಲ ಕಳೆಯಲು ಇಷ್ಟಪಡುತ್ತಿದ್ದಾರೆ. ಇದೇ ರೀತಿ, ದೆಹಲಿಯ ಆನಂದ್‌ ವಿಹಾರ ರೈಲು ನಿಲ್ದಾಣಕ್ಕೆ ತೆರಳಿದ ರಾಹುಲ್‌ ಗಾಂಧಿ, ಬ್ಯಾಗ್‌ ಸೇರಿ ಹಲವು ಲಗೇಜ್‌ ಹೊರುವವರ (ಕೂಲಿಗಳು) ಜತೆ ಮಾತುಕತೆ ನಡೆಸಿದ್ದಾರೆ. ಆದರೆ, ಇದೇ ವೇಳೆ ರಾಹುಲ್‌ ಗಾಂಧಿ ಅವರು ಕೂಲಿಯವರ ಡ್ರೆಸ್‌, ಬ್ಯಾಡ್ಜ್‌ ಹಾಕಿಕೊಂಡು ವ್ಹೀಲ್‌ ಇರುವ ಟ್ರಾಲಿ ಬ್ಯಾಗ್‌ ಹೊತ್ತುಕೊಂಡು ತಿರುಗಾಡಿರುವ ವಿಡಿಯೊ (Viral Video) ವೈರಲ್‌ ಆಗಿದೆ.

ಹೌದು, ರಾಹುಲ್‌ ಗಾಂಧಿ ಅವರು ವ್ಹೀಲ್‌ ಇರುವ ಬ್ಯಾಗ್‌ಅನ್ನು ತಲೆಮೇಲೆ ಹೊತ್ತುಕೊಂಡು ತಿರುಗಾಡಿರುವುದು ಭಾರಿ ಟ್ರೋಲ್‌ ಆಗಿದೆ. ಬಿಜೆಪಿಯವರು ಕೂಡ ರಾಹುಲ್‌ ಗಾಂಧಿ ಅವರನ್ನು ಛೇಡಿಸಿದ್ದಾರೆ. ಜಗತ್ತಿನಲ್ಲಿ ವ್ಹೀಲ್‌ ಇರುವ ಬ್ಯಾಗ್‌ಅನ್ನು ಹೊರುವವರು ರಾಹುಲ್‌ ಗಾಂಧಿ ಮಾತ್ರ ಎಂದು ವ್ಯಂಗ್ಯ ಮಾಡಿದ್ದಾರೆ. ಆದರೆ, ಕೂಲಿಗಳಿಗೆ ಬೆಂಬಲ ಸೂಚಿಸುವ ದಿಸೆಯಲ್ಲಿ ರಾಹುಲ್‌ ಗಾಂಧಿ ಅವರು ಅವರ ಡ್ರೆಸ್‌ ಹಾಗೂ ಬ್ಯಾಡ್ಜ್‌ ಧರಿಸಿ, ಬ್ಯಾಗ್‌ ಹೊತ್ತು ತಿರುಗಾಡಿದ್ದಾರೆ.

ಬಿಜೆಪಿ ಟಾಂಟ್

ಕೆಲ ದಿನಗಳ ಹಿಂದಷ್ಟೇ ದೆಹಲಿಯ ಆನಂದ್‌ ವಿಹಾರ ರೈಲು ನಿಲ್ದಾಣದ ಕೂಲಿಗಳು ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗುವ ಕುರಿತು ಇಂಗಿತ ವ್ಯಕ್ತಪಡಿಸಿದ್ದರು. ಹಾಗಾಗಿ, ರಾಹುಲ್‌ ಗಾಂಧಿ ಅವರು ರೈಲು ನಿಲ್ದಾಣಕ್ಕೆ ತೆರಳಿ ಬ್ಯಾಗ್‌ ಹೊರುವವರ ಜತೆ ಮಾತುಕತೆ ನಡೆಸುವ ಜತೆಗೆ ಅವರ ಸಮಸ್ಯೆಗಳನ್ನು ಆಲಿಸಿದರು. ‌ಇನ್ನು ರಾಹುಲ್‌ ಗಾಂಧಿ ಅವರು ಬ್ಯಾಗ್‌ ಹೊರುವವರ ಜತೆ ಬೆರೆತಿದ್ದು, ಅವರ ಸಮಸ್ಯೆ ಆಲಿಸಿದ ರೀತಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.

ವೈರಲ್‌ ಆದ ವಿಡಿಯೊ

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ! ಸಂಸತ್ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಕೆಲ ತಿಂಗಳ ಹಿಂದಷ್ಟೇ ರಾಹುಲ್‌ ಗಾಂಧಿ ಅವರು ದೆಹಲಿಯ ಕಾಜೋಲ್‌ಬಾಗ್‌ನಲ್ಲಿರುವ ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿದ್ದರು. ಅಲ್ಲಿನ ಕೆಲಸಗಾರರು ಹೇಗೆ ಬೈಕ್‌ ರಿಪೇರಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದರು. “ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿ, ನಾನೂ ವ್ರೆಂಚ್‌ಗಳನ್ನು ತಿರುಗಿಸಿದೆ. ಅವರಿಂದ ಬೈಕ್‌ ರಿಪೇರಿ ಮಾಡುವುದನ್ನು ಕಲಿತೆ. ಬೈಕ್‌ ರಿಪೇರಿ ಮಾಡುವ ಇಂತಹ ಕೈಗಳೇ ಭಾರತವನ್ನು ನಿರ್ಮಿಸಿವೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಾನು ಮತ್ತೆ ಭಾರತ್‌ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದೇನೆ” ಎಂದು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದರು. ಇನ್ನು ಕೆಲ ದಿನಗಳ ಹಿಂದೆ ರಾಹುಲ್‌ ಗಾಂಧಿ ಅವರು ಗದ್ದೆಗೆ ಇಳಿದು, ಭತ್ತ ನಾಟಿ ಮಾಡಿದ್ದರು.

Exit mobile version