ಮಾಸ್ಕೋ: ರಷ್ಯಾ ನಟಿಯೊಬ್ಬರು (Russian Actress) ಲೈವ್ ಶೋ (Live Show) ನೀಡುತ್ತಿರುವಾಗಲೇ ಉಕ್ರೇನ್ ಬಾಂಬ್ ದಾಳಿಯಲ್ಲಿ (Ukraine Bomb Attack) ಮೃತಪಟ್ಟಿದ್ದಾರೆ. ಉಕ್ರೇನ್‌ನಲ್ಲಿರುವ ರಷ್ಯಾ ಸೈನಿಕರಾಗಿ, ಉಕ್ರೇನ್‌ನ ರಷ್ಯಾದ ನಿಯಂತ್ರಿತ ಪ್ರದೇಶದಲ್ಲಿ ಅವರು ಪ್ರದರ್ಶನ ನೀಡುತ್ತಿದ್ದರು. 40 ವರ್ಷದ ನಟಿ ಪೋಲಿನಾ ಮೆನ್ಶಿಖ್ ಎಂದು ಗುರುತಿಸಲಾಗಿದೆ. ಡಾನ್ಬಾಸ್ ಪ್ರದೇಶದಲ್ಲಿರುವ ವೇದಿಕೆಯಲ್ಲಿ ಅವರು ಪ್ರದರ್ಶನ ನೀಡುತ್ತಿರುವಾಗಲೇ ಬಾಂಬ್ ದಾಳಿಗೆ ತುತ್ತಾದರು ಎಂದು ಅವರ ಥಿಯೇಟರ್ ಗ್ರೂಪ್ ಹೇಳಿದೆ. ನವೆಂಬರ್ 19ರಂದು ಈ ಪ್ರದೇಶದಲ್ಲಿ ಉಕ್ರೇನ್ ಬಾಂಬ್ ದಾಳಿ ನಡೆಸಿರುವುದನ್ನು ಉಕ್ರೇನ್ ಮತ್ತು ರಷ್ಯಾ ಸೇನೆಗಳು ಖಚಿತಪಡಿಸಿವೆ(Vrial Video).
ಡೊನೆಟ್ಸ್ಕ್ ಪ್ರದೇಶದ ಕುಮಾಚೋವೊ ಎಂದು ಕರೆಯಲಾಗುವ ಹಳ್ಳಿಯೊಂದರಲ್ಲಿ ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರವು ಹಿಮಾರ್ಸ್ ಕ್ಷಿಪಣಿಗಳಿಂದ ನಾಶವಾಗಿದೆ ಎಂದು ರಷ್ಯಾದ ಮಿಲಿಟರಿ ತನಿಖಾಧಿಕಾರಿಯೊಬ್ಬರು ಉಲ್ಲೇಖಿಸಿ ರಷ್ಯನ್ ಸರ್ಕಾರಿ ದೂರದರ್ಶನವು ವರದಿ ಮಾಡಿದೆ.
WATCH: moment Ukraine bombs Russian R&R in Donetsk killing Polina Menshikh #PolinaMenshikh pic.twitter.com/wWcuz5ljxv
— UpToDate (@UpToDateNewsSvc) November 23, 2023
ಕೆಲವು ಮೂಲಗಳ ಪ್ರಕಾರ, ಒಬ್ಬ ನಾಗರಿಕ ಈ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಸೇನೆಯ ಯಾವುದೇ ಸಾವು ನೋವು ಸಂಭವಿಸಿಲ್ಲ. ಹಾಗೆಯೇ, ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ರಷ್ಯಾದ ರಕ್ಷಣಾ ಸಚಿವಾಲಯವು, ದಾಳಿಯಿಂದ ಯಾವುದೇ ಸಾವುನೋವುಗಳ ಆಗಿರುವ ಬಗ್ಗೆ ತಿಳಿಸಿಲ್ಲ. ರಷ್ಯಾದ ಮಿಲಿಟರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿತ್ತು, ಈ ವೇಳೆ ರಷ್ಯಾದ 810ನೇ ಪ್ರತ್ಯೇಕ ನೌಕಾ ಪದಾತಿ ದಳವನ್ನು ಗುರಿಯಾಗಿಸಿಕೊಂಡು ನಮ ಪಡೆಗಳ ದಾಳಿ ನಡೆಸಿವೆ ಎಂದು ಉಕ್ರೇನ್ ಕಮಾಂಡರೊಬ್ಬರು ತಿಳಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಕಮಾಂಡರ್ ರಾಬರ್ಟ್ ಬ್ರೋವ್ಡಿ ಅವರು, 25ಕ್ಕೂ ಹೆಚ್ಚು ಜನರು ಸತ್ತಿದ್ದು, 100 ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ರಷ್ಯಾದ ಪರವಾದ ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಪರಿಶೀಲಿಸದ ವೀಡಿಯೊ ತುಣುಕಿನಲ್ಲಿ, ರಷ್ಯಾದ ಮಿಲಿಟರಿಯು ತಮ್ಮ ಕ್ಷಿಪಣಿ ಮತ್ತು ಫಿರಂಗಿ ಪಡೆಗಳನ್ನು ಆಚರಿಸುವ ದಿನದಂದು ಗಿಟಾರ್‌ನೊಂದಿಗೆ ವೇದಿಕೆಯಲ್ಲಿ ಮೆನ್ಶಿಖ್ ಹಾಡುವುದನ್ನು ಸೈನಿಕರು ವೀಕ್ಷಿಸುತ್ತಿರುವುದನ್ನು ಕಾಣಬಹುದು. ಹಾಡಿನ ಮಧ್ಯದಲ್ಲೇ ಹಠಾತ್ ಕಟ್ಟಡದ ಮೇಲೆ ಬಾಂಬ್ ದಾಳಿಯಗುತ್ತದೆ ಮತ್ತು ಕಿಟಕಿಗಳು ಮುರಿದು ಬೀಳುವ ಸದ್ದು ಹಾಗೂ ವಿದ್ಯುತ್ ದೀಪಗಳು ಆರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ರಷ್ಯ ಸೇನೆಯು, ಉಕ್ರೇನ್‌ನ 128ನೇ ಸಪರೇಟ್ ಮೌಂಟೇನ್ ಅಸ್ಸಾಲ್ಟ್ ಬ್ರಿಗೇಡ್ ಮೇಲೆ ಈ ತಿಂಗಳ ದಾಳಿ ಮಾಡಿತ್ತು ಮತ್ತು ಈ ದಾಳಿಯಲ್ಲಿ ಉಕ್ರೇನ್‌ನ 19 ಯೋಧರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಉಕ್ರೇನ್ ಕಮಾಂಡ್ ಬ್ರೋವ್ಡಿ ಅವರು, 128ಕ್ಕಾಗಿ ಸೇಡು ಎಂದು ಹೇಳಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಕೃಷಿ ಹೊಂಡಕ್ಕೆ ಬಿದ್ದಿದ್ದ ಮರಿಯಾನೆ ರಕ್ಷಿಸಿದ ಅರಣ್ಯ ಇಲಾಖೆ