Site icon Vistara News

Sexual Assault: ಐಸ್‌ಕ್ರೀಂ ಕೊಳ್ಳಲು ಬಂದ ಬಾಲಕಿಯ ಗುಪ್ತಾಂಗ ಮುಟ್ಟಿ ದೌರ್ಜನ್ಯ; ಮೊಹಮ್ಮದ್ ಖಾನ್ ಬಂಧನ

Sexual Assault

ಭೋಪಾಲ್: ಐಸ್‌ಕ್ರೀಂ ಮಾರಾಟಗಾರನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ (Sexual Assault) ನೀಡಿದ ಘಟನೆ ಮಧ್ಯಪ್ರದೇಶದ (madhyapradesh) ಭೋಪಾಲ್‌ನಲ್ಲಿ (bhopal) ನಡೆದಿದ್ದು, ಇದರ ವಿಡಿಯೋ (video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎರಡು ವಾರಗಳ ಹಿಂದೆ ನಡೆದ ಘಟನೆ ಇದಾಗಿದೆ. ಐಸ್ ಕ್ರೀಮ್ ಮಾರಾಟಗಾರ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಕೆಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಸ್ ಕ್ರೀಮ್ ಮಾರಾಟಗಾರ ಮೊಹಮ್ಮದ್ ಖಾಲಿದ್ ಖಾನ್ (52) ಎಂಬಾತನನ್ನು ಬಂಧಿಸಲಾಗಿದೆ.

ಪ್ಯಾರೆ ಎಂದು ಕರೆಯಲ್ಪಡುವ ಮೊಹಮ್ಮದ್ ಖಾಲಿದ್ ಖಾನ್ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ನಿವಾಸಿ. ಜಹಾಂಗೀರಾಬಾದ್‌ನಲ್ಲಿ ರಾತ್ರಿ ವ್ಯಕ್ತಿಯೊಬ್ಬ ತನ್ನ ಬಾಲ್ಕನಿಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ.

ಖಾಲಿದ್ 11 ವರ್ಷದ ಬಾಲಕಿಯ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದ್ದು, ಬಾಲಕಿ ಐಸ್‌ಕ್ರೀಂ ಕಾರ್ಟ್‌ನಲ್ಲಿ ಐಸ್‌ಕ್ರೀಂ ಆಯ್ಕೆ ಮಾಡಿಕೊಳ್ಳುತ್ತಿದ್ದಳು. ಆರೋಪಿಯು ಬಾಲಕಿಯನ್ನು ಹಿಡಿದಿದ್ದು, ಆಕೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಬಾಲಕಿ ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಸ್ವಲ್ಪ ಸಮಯದ ಅನಂತರ ಹುಡುಗಿಗೆ ಐಸ್ ಕ್ರೀಂ ಅನ್ನು ಹಸ್ತಾಂತರಿಸುತ್ತಾನೆ. ಈ ವಿಡಿಯೋವನ್ನು ರಮೇಶ್ ಸಾಹು ಎಂಬಾತ ರೆಕಾರ್ಡ್ ಮಾಡಿದ್ದು, ಅದನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದಾನೆ. ಇದು ಸಾಕಷ್ಟು ವೈರಲ್ ಆಗಿದೆ.

ಸಂತ್ರಸ್ತೆಯ ತಾಯಿ ತನ್ನ ಮಗಳನ್ನು ಆಕೆಯ ಬಟ್ಟೆ ಮತ್ತು ವಿಡಿಯೋದಲ್ಲಿ ಸ್ವಲ್ಪ ಗೋಚರಿಸುವ ಮುಖದ ಭಾಗದಿಂದ ಗುರುತಿಸಿದ್ದಾರೆ. ಅನಂತರ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ಘಟನೆ ವರದಿಯಾಗಿದೆ.

ಜೂನ್ 28ರಂದು ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ತಾಯಿ ಎರಡು ದಿನಗಳ ಅನಂತರ ವಿಡಿಯೋವನ್ನು ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆರೋಪಿ ತನ್ನ ಊರಿಗೆ ಪರಾರಿಯಾಗಿದ್ದ ಆರೋಪಿಯನ್ನು ಆತನ ಗ್ರಾಮವಾದ ಕಲ್ಪಿಯಿಂದ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Viral Video: ಬೆಂಗಳೂರಿನ ಹೋಟೆಲ್‌ನಲ್ಲಿ ಫ್ಯಾನ್‌ ಬದಲು ಪುರಾತನ ಕಾಲದ ಬೀಸಣಿಕೆ! ವಿಡಿಯೊ ನೋಡಿ

ಅಪ್ರಾಪ್ತ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಪೋಲಿಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ರಮೇಶ್ ಸಾಹು ಅವರನ್ನೂ ಬಂಧಿಸಿದ್ದಾರೆ ಎನ್ನಲಾಗಿದೆ.

Exit mobile version